Bengaluru 23°C
Ad

ಸೆ. 20ರಿಂದ 4 ದಿನದಲ್ಲಿ 13 ಲಕ್ಷ ತಿರುಪತಿ ಲಡ್ಡು ಸೇಲ್!

ತಿರುಪತಿ ದೇವಸ್ಥಾನದಲ್ಲಿ ವಿತರಿಸುವ ಪ್ರಸಿದ್ಧ ಪ್ರಸಾದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಗುಣಮಟ್ಟವಿಲ್ಲದ ಪದಾರ್ಥಗಳ ಬಳಕೆ ವಿವಾದದ ನಡುವೆಯೂ ಲಡ್ಡು ಪ್ರಸಾದಕ್ಕೆ ಬೇಡಿಕೆ ಹೆಚ್ಚಾಗಿದೆ.

ನವದೆಹಲಿ: ತಿರುಪತಿ ದೇವಸ್ಥಾನದಲ್ಲಿ ವಿತರಿಸುವ ಪ್ರಸಿದ್ಧ ಪ್ರಸಾದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಗುಣಮಟ್ಟವಿಲ್ಲದ ಪದಾರ್ಥಗಳ ಬಳಕೆ ವಿವಾದದ ನಡುವೆಯೂ ಲಡ್ಡು ಪ್ರಸಾದಕ್ಕೆ ಬೇಡಿಕೆ ಹೆಚ್ಚಾಗಿದೆ.

ತಿರುಮಲ ತಿರುಪತಿ ದೇವಸ್ಥಾನ ಮಂಡಳಿಯ ಅಂಕಿಅಂಶಗಳ ಪ್ರಕಾರ, ಸೆ. 20-23 ರಿಂದ 13 ಲಕ್ಷಕ್ಕೂ ಹೆಚ್ಚು ಲಡ್ಡುಗಳು ಮಾರಾಟವಾಗಿವೆ. ಸೆ.19ರಂದು ಸಿಎಂ ಚಂದ್ರಬಾಬು ನಾಯ್ಡು ಅವರು ತಿರುಪತಿ ಲಡ್ಡು ಪ್ರಸಾದದಲ್ಲಿ ಕಲಬೆರಕೆ ಮಾಡಲಾಗಿದೆ ಎಂದು ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಲಡ್ಡು ಕಲಬೆರಕೆ ವಿವಾದದ ನಂತರ ಬಳಿಕ ದೇವಸ್ಥಾನದಲ್ಲಿ ಶುದ್ಧೀಕಾರ್ಯ ಮಾಡಲಾಗಿದ್ದು, ಸೆ. 20ರಿಂದ ಪ್ರತಿದಿನ 3 ಲಕ್ಷಕ್ಕೂ ಹೆಚ್ಚು ಲಡ್ಡುಗಳು ಮಾರಾಟವಾಗಿವೆ ಎಂದು ಟಿಟಿಡಿ ಹೇಳಿದೆ. ಟಿಡಿಪಿ ವಕ್ತಾರ ಆನಂ ವೆಂಕಟ ರಮಣ ರೆಡ್ಡಿ ಅವರು ಎನ್‌ಡಿಡಿಬಿ ಸಿಎಎಲ್‌ಎಫ್ ಎಂಬ ಖಾಸಗಿ ಪ್ರಯೋಗಾಲಯದ ವರದಿಯನ್ನು ಬಹಿರಂಗಪಡಿಸಿದ್ದರು.

 

Ad
Ad
Nk Channel Final 21 09 2023