ದುಬೈ: ಯುಎಇ ಬಂಟ್ಸ್ ಸಂಘಟನೆಯ ಹಿರಿಯ ಶಕ್ತಿ, ಸಂಘಟಕ ದೇವೇಶ್ ಆಳ್ವ ಅವರು 30 ಡಿಸೆಂಬರ್ 2023 ರಂದು ನಿಧನರಾಗಿದ್ದಾರೆ. ಬಂಟ ಸಮುದಾಯದ ಸಂಘಟನೆಯ ಮೇರು ಶಕ್ತಿಯಾಗಿದ್ದ ಅವರು ಸಂಘಟನೆ, ಸಮುದಾಯದ ಕೆಲಸಗಳಿಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದು ಅವರ ಅಗಲಿಕೆ ತೀವ್ರ ದುಃಖ ತಂದಿದೆ ಎಂದು ಯುಎಇ ಬಂಟ್ಸ್ ಸಂಘಟನೆಯ ಸರ್ವೋತ್ತಮ ಶೆಟ್ಟಿ ಅಬುಧಾಬಿ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಆಳ್ವ ಸ್ಮರಣಾರ್ಥವಾಗಿ ಡಿ.30ರಂದು ಸಂಜೆ 4ರಿಂದ 5 ಗಂಟೆವರೆಗೆ ದುಬೈ ಸೋನಾಪುರ ಎಂಬಾಮಿಂಗ್ ಸೆಂಟರ್ ಶೆಡ್ ನಂ 6ರಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.