News Karnataka Kannada
Sunday, April 14 2024
Cricket
ಯುಎಇ

ದುಬಾಯಿಯಲ್ಲಿ ಅದ್ಧೂರಿಯಾಗಿ ವಿಜೃಂಭಿಸಿದ 68ನೇ ಕರ್ನಾಟಕ ರಾಜ್ಯೋತ್ಸವ 2023

ಕರ್ನಾಟಕ ಸಂಘ ದುಬಾಯಿ ಆಶ್ರಯದಲ್ಲಿ ೬೮ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ ೨೬ ನವೆಂಬರ್ ೨೦೨೩ ರಂದು ಅಲ್ ನಾಸರ್ ಲೀಸರ್ ಲ್ಯಾಂಡ್ ಐಸ್ ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ಮಧ್ಯಾಹ್ನದ ನಂತರ ರಾತ್ರಿಯವರೆಗೂ ವಿಜೃಂಭಣೆಯಿಂದ ನಡೆಯಿತು.
Photo Credit : News Kannada

ಕರ್ನಾಟಕ ಸಂಘ ದುಬಾಯಿ ಆಶ್ರಯದಲ್ಲಿ 68ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ 26 ನವೆಂಬರ್ 2023 ರಂದು ಅಲ್ ನಾಸರ್ ಲೀಸರ್ ಲ್ಯಾಂಡ್ ಐಸ್ ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ಮಧ್ಯಾಹ್ನದ ನಂತರ ರಾತ್ರಿಯವರೆಗೂ ವಿಜೃಂಭಣೆಯಿಂದ ನಡೆಯಿತು. 1985ರಲ್ಲಿ ಸ್ಥಾಪನೆಯಾಗಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ದುಬಾಯಿ ಅತ್ಯಂತ ಹಿರಿಯ ಹಾಗೂ ಗೌರವದ ಸ್ಥಾನದಲ್ಲಿದೆ. ದುಬಾಯಿಯಲ್ಲಿ ಕಳೆದ ನಾಲ್ಕು ದಶಕಗಳಿಂದ ಕನ್ನಡ ಪರ ಸಾಂಸ್ಕೃತಿಕ ಚಟುವಟಿಕೆಗಳನ್ನು ಯಶಸ್ವಿಯಾಗಿ ಆಚರಿಸಿಕೊಂಡು ಬರುತಿದ್ದು, ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಕಾರ್ಯ ಯೋಜನೆಯನ್ನು ಹಾಕಿಕೊಂಡು ಯಶಸ್ವಿಯಾಗಿದೆ.

ಸಮಾರಂಭದ ವಿಶೇಷ ಆಕರ್ಷಣೆಯಾಗಿ ದಕ್ಷಿಣ ಭಾರತದ ಚಲನಚಿತ್ರ ರಂಗದ ಬಹುಭಾಷಾ ನಾಯಕಿ ಹಾಗೂ ಮಂಡ್ಯ ಲೋಕಸಭಾಕ್ಷೇತ್ರದ ಸಂಸದೆಯಾಗಿರುವ ಸುಮಲತಾ ಅಂಬರೀಶ್ ರವರನ್ನು ಕರ್ನಾಟಕ ಸಂಘ ದುಬಾಯಿಯ ಕಾರ್ಯಕಾರಿ ಸಮಿತಿಯ ಸರ್ವಸದಸ್ಯರು ಪೂರ್ಣ ಕುಂಭ ಕಳಸ ಹಾಗೂ ಕೇರಳದಚೆಂಡೆ ಹಾಗೂ ಮಂಗಳೂರಿನ ಬ್ಯಾಂಡ್ ವಾಧ್ಯದೊಂದಿಗೆ ಸಭಾಂಗಣಕ್ಕೆ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು.

ಅರಬ್ ಸಂಯುಕ್ತ ಸಂಸ್ಥಾನದ ಕರ್ನಾಟಕ ಪರ ಸಂಘಟನೆಯ ಅಧ್ಯಕ್ಷರು, ಗಣ್ಯಾತಿ ಗಣ್ಯರು, ಆಹ್ವಾನಿತ ಗೌರವಾನ್ವಿತ ಅತಿಥಿಗಳ ಸಮ್ಮುಖದಲ್ಲಿ ಮುಖ್ಯ ಅತಿಥಿ ಸುಮಾಲತಾ ಅಂಬರೀಶ್ ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಾಂಸ್ಕೃತಿಕ ವೇದಿಕೆಯಲ್ಲಿ ಚಿರಂತನಾ ನೃತ್ಯ ಅಕಾಡೆಮಿ, ಬೆಂಗಳೂರು, 60 ಕಲಾವಿದರ ತಂಡವರ ಆಕರ್ಷಕ ನೃತ್ಯ, ಟೀಮ್ ಶಿವಪ್ರಿಯ ತಂಡದ ಕರ್ನಾಟಕ ದರ್ಶನ ನೃತ್ಯ ರೂಪಕ ಕರ್ನಾಟಕದ ಶ್ರೀಮಂತಕಲೆಯ ಅನಾವರಣಸರ್ವರ ಮೆಚ್ಚುಗೆಗೆ ಪಾತ್ರವಾಯಿತು.

ಪ್ರಖ್ಯಾತ ಚಂದನವನದ ಚಲನಚಿತ್ರ ನಟರು, ಕಿರುತೆರೆಯ ಮಜಾ ಟಾಕೀಸ್ ನ ಖ್ಯಾತಿ ನವೀನ್ ಡಿ ಪಡಿಲ್, ಕರಾವಳಿ ಕರ್ನಾಟಕದ ಹಾಸ್ಯ ದಿಗ್ಗಜರುಗಳಾದದೀಪಕ್‌ರೈ, ದಿನೇಶ್ ರೈ ಕಡಬ, ದಿನೇಶ್ ಕೊಡಪದವು ಕಿರುತೆರೆ, ಯಕ್ಷಗಾನ, ಗಿಚ್ಚಿ ಗಿಲಿಗಿಲಿ ಪ್ರಖ್ಯಾತರು ಚಿಲ್ಲರ್ ಮಂಜು, ಚಂದ್ರಪ್ರಭ, ಕಾರ್ತಿಕ್, ಮತ್ತು ರಾಘವೇಂದ್ರ ಹಾಸ್ಯದ ಹೊನಲು ಹರಿಸಿದರು.

ಸಂಗೀತ ರಸ ಮಂಜರಿಯಲ್ಲಿ ಸುಮಧುರ ಕಂಠಸಿರಿಯ ಕನ್ನಡ ಕೋಗಿಲೆ ಖ್ಯಾತಗಾಯಕ ಸಂದೇಶ್ ನೀರುಮಾರ್ಗ, ನಾದೀರ ಬಾನು, ದುಬಾಯಿಯ ಗಾಯಕರಾದ ನವೀದ್ ಮಾಗುಂಡಿ ಸುಶ್ರಾವ್ಯ ಗೀತೆಗಳ ಮೂಲಕ ಜನಮನ ಗೆದ್ದರು. “ದುಬಾಯಿ ಕರ್ನಾಟಕರಾಜ್ಯೋತ್ಸವ ಪ್ರಶಸ್ತಿ 2023” ರಕ್ತದಾನ ಶಿಬಿರಗಳರುವಾರಿ ಬಾಲಕೃಷ್ಣ ಸಾಲಿಯಾನ್ ಎರ್ಮಾಳ್ ರವರಿಗೆ ಪ್ರಧಾನಿಸಲಾಯಿತು.

ಮುಖ್ಯ ಅತಿಥಿ ಸುಮಲತಾ ಅಂಬರೀಶ್ ರವರನ್ನುಸನ್ಮಾನಿ ಗೌರವಿಸಲಾಯಿತು. ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರದಲ್ಲಿ ಹೆಣ್ಣು ಹುಲಿಗಳ ತಂಡದ ಹುಲಿವೇಷ ನೃತ್ಯ ಹಾಗೂ ಇನ್ನಿತರ ತಂಡದವರ ನೃತ್ಯ ವೈವಿಧ್ಯ ಸರ್ವರ ಗಮನ ಸೆಳೆಯಿತು.

ಕರ್ನಾಟಕ ಸಾಂಸ್ಕೃತಿಕ ವೈಭವದ ಸ್ಥಭ್ಧ ಚಿತ್ರಗಳ ಮೆರವಣಿಗೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಪಾಲ್ಗೊಂಡಿದ್ದು ಆಕರ್ಷವಾಗಿತ್ತು. ಕಳೆದ ಮೂರು ದಶಕಗಳಿಂದ ಯು.ಎ.ಇ. ಯಲ್ಲಿ ಕರ್ನಾಟಕ ಸಾಂಸ್ಕೃತಿಕವಾಗಿ ವೈಭವಿಕರಣಕ್ಕೆ ಗಣ್ಯಾತಿ ಗಣ್ಯರು, ಹಿತೈಷಿಗಳು, ಪೋಷಕರು ಸದಾ ಬೆಂಬಲ ನೀಡುತ್ತಾ ಬಂದಿರುವವ ಫ್ರ್ಯಾಂಕ್ ಫೆರ್ನಾಂಡಿಸ್, ಇಬ್ರಾಹಿಂ ಗಡಿಯಾರ್, ನಾಗರಾಜ್ ರಾವ್ ಉಡುಪಿ, ಮಾರ್ಟಿನ್ ಜೆ ಅರಾನಾ, ಡಾ, ಬಿ. ಕೆ. ಯೂಸುಫ್, ಪ್ರವೀಣ್ ಕುಮಾರ್ ಶೆಟ್ಟಿ, ಜೋಸೆಫ್ ಮಥಾಯಸ್, ರಾಮಚಂದ್ರ ಹೆಗ್ಡೆ, ಮೈಕಲ್‌ಡಿಸೋಜಾ, ಝಫ್ರುಲ್ಲ ಖಾನ್ ಮಂಡ್ಯ, ಗುಣಶೀಲ್ ಶೆಟ್ಟಿ,ಹರೀಶ್ ಶೇರಿಗಾರ್,ಹರಿಪ್ರಸಾದ್, ಡಾ. ಮೊಹಿದ್ದೀನ್ ತುಂಬೆ, ಜೇಮ್ಸ್ ಮೆಂಡೋನ್ಸಾ, ದಿನೇಶ್ ದೇವಾಡಿಗ, ಈಶ್ವರ್ ದಾಸ್ ಶೆಟ್ಟಿ, ಸಂತೋಷ್‌ಪೂಜಾರಿ, ವಾಸುದೇವ ಭಟ್ ಹಾಗೂ ಇನ್ನಿತರ ಹಲವಾರು ಸಹಹೃದಯಿಗಳು.

ಪ್ರಖ್ಯಾತ ಚಂದನವನದ ನಟಿ ಅಂಕಿತಾ ಅಮರ್ ಕಾರ್ಯಕ್ರಮ ನಿರೂಪಣೆಯಲ್ಲಿ ಸಮಸ್ಥ ಅನಿವಾಸಿ ಕನ್ನಡಿಗರ ಮನಗೆದ್ದರು. ಕರ್ನಾಟಕ ಸಂಘ ದುಬಾಯಿಯ ಅಧ್ಯಕ್ಷರು ಶಶಿಧರ್ ನಾಗರಾಜಪ್ಪ ಮತ್ತು ಪೋಷಕರುಗಳಾದ ಡಾ. ಬಿ. ಕೆ. ಯೂಸುಫ್, ಹರೀಶ್ ಬಂಗೇರಾ, ರೊನಾಲ್ಡ್ ಮಾರ್ಟಿಸ್, ಸಲಹೆಗಾರರಾದ  ಜಯಂತ್ ಶೆಟ್ಟಿ, ಉಪಾಧ್ಯಕ್ಷರು  ದಯಾ ಕಿರೊಡಿಯನ್, ಪ್ರಧಾನ ಕಾರ್ಯದರ್ಶಿ ಮನೋಹರ್ ಹೆಗ್ಡೆ, ಸಹ ಕಾರ್ಯದರ್ಶಿ ಮಲ್ಲಿಕಾರ್ಜುನಗೌಡ, ಖಜಾಂಚಿ ನಾಗರಾಜರಾವ್ ಉಡುಪಿ ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಹರೀಶ್ ಕೋಡಿ, ಸಿದ್ದಲಿಂಗ ಬಿ.ಆರ್. ಯುವರಾಜ್ ದೇವಾಡಿಗ, ಸುನಿಲ್ ಗವಾಸ್ಕರ್, ಲಾರೆನ್ಸ್ ನಜರೆತ್, ಪೀಟರ್ ಜಾಯ್ಸನ್ ಮತ್ತು  ಮಮತಾ ಸೆಂದಿಲ್, ರಾಧಿಕಾ ಸತೀಶ್, ವಿನುತ, ಬೃಂದಾ ಅಶ್ವತ್ ಇವರ ಸಂಪೂರ್ಣ ಸಹಕಾರದಿಂದ ಮತ್ತು ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿ ಕನ್ನಡಿಗರು ಆಗಮಿಸಿದ್ದು ದಾಖಲೆಯನ್ನು ಸೃಷ್ಟಿಸಿದೆ. ಕಾರ್ಯಕ್ರಮದ ಅಂತಿಮ ಘಟ್ಟದಲ್ಲಿ ಸರ್ವರಿಗೂ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಪ್ರಮುಖ ಪ್ರಾಯೋಜಕರು ನವನಾಮಿ ಗ್ರೂಪ್ ಮತ್ತು ಇನ್ನಿತರ ಪ್ರಾಯೋಜಕರು ಹಾಗೂ ಮಾಧ್ಯಮದವರನ್ನು ಗೌರವಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು