Categories: ಯುಎಇ

ದುಬಾಯಿಯಲ್ಲಿ ಐ.ಪಿ.ಎಫ್. ಯು.ಎ.ಇ. ಅನಿವಾಸಿ ಕನ್ನಡಿಗರ ವೇದಿಕೆಯ ರಥ ಸಪ್ತಮಿ ಯೋಗ ಶಿಬಿರ ಸಮಾರೋಪ ಸಮಾರಂಭ

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಾರ್ಯೋನ್ಮುಖವಾಗಿರುವ ಇಂಡಿಯನ್ ಪೀಪಲ್ಸ್ ಫೋರಂ ನ ಆಶ್ರಯದಲ್ಲಿರುವ ಕರ್ನಾಟಕ ಕೌನ್ಸಿಲ್, ಅನಿವಾಸಿ ಕನ್ನಡಿಗರ ವೇದಿಕೆ ೨೦೨೨ ಫೆಬ್ರುವರಿ ೧೭ನೇ ತಾರೀಕಿನಿಂದ ೨೫ನೇ ತಾರೀಕಿನವರೆಗೆ ಹತ್ತು ದಿನಗಳ ಕಾಲ ಆಯೋಜಿಸಿದ್ದ ಉಚಿತ ಯೋಗ ತರಭೇತಿ ಶಿಬಿರ ಹಾಗೂ ೨೬ನೇ ತಾರೀಕಿನಂದು ರಥ ಸಪ್ತಮಿ ಯೋಗ ೧೦೮ ಸೂರ್ಯ ನಮಸ್ಕಾರಗಳು ಹಾಗೂ ಸಮಾರೋಪ ಸಮಾರಂಭ ದುಬಾಯಿ ಕರಾಮದಲ್ಲಿರುವ ಆಟ್ರಿಯಂ ಹೋಟೆಲ್ ಸಭಾಂಗಣದಲ್ಲಿ ಐ. ಪಿ. ಎಫ್ ಕೇಂದ್ರಿಯ ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆಯಿತು.

ಬೆಂಗಳೂರಿನಿAದ ಆಗಮಿಸಿದ್ದ ಯೋಗ ಗುರು, ಗುರುಮಾ ಡಾ ಭಾಗೀರಥಿ ಕನ್ನಡತಿ ಇವರು ಯೋಗ ಶಿಬಿರವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು. ಕೊನೆಯ ದಿನ ಬೆಳಿಗ್ಗೆ ೧೦ ಗಂಟೆಯಿAದ ಪ್ರಥಮ ಹಂತದಲ್ಲಿ ರಥ ಸಪ್ಥಮಿ ಯೋಗದ ೧೦೮ ಸೂರ್ಯ ನಮಸ್ಕಾರಗಳನ್ನು ಶಿಸ್ತುಬದ್ಧವಾಗಿ ನಡೆಸಲಾಯಿತು.

ಯೋಗ ಶಿಬಿರದ ಜವಬ್ಧಾರಿಯನ್ನು ವಹಿಸಿದ್ದ ಶ್ರೀ ನವೀನ್ ಭಾರದ್ವಜ್ ದ್ವಿತಿಯ ಹಂತದ ಸಮಾರೋಪ ಸಮಾರಂಭದ ಕಾರ್ಯಕ್ರಮ ನಿರೂಪಕರಾಗಿ ಸಭಾಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀಮತಿ ಮಾಧವೀ ಪ್ರಸಾದ್ ರವರ ಪ್ರಾರ್ಥನೆ, ಐ.ಪಿ.ಎಫ್. ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ಬಿ. ಕೆ. ಗಣೇಶ್ ರೈ ಯವರು ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು.

ಐ.ಪಿ.ಎಫ್. ನಡೆದುಬಂದ ಹಾದಿಯ ಸಾಕ್ಷ÷್ಯಚಿತ್ರ ಪ್ರದರ್ಶನ ವೀಕ್ಷಿಸಲಾಯಿತು. ಐ.ಪಿ.ಎಫ್. ಯು. ಎ. ಇ. ಉಪಾಧ್ಯಕ್ಷರಾದ ಶ್ರೀ ಸುಚೀತ್ ಕುಮಾರ್ ರವರು ಐ.ಪಿ.ಎಫ್. ಕಾರ್ಯಯೋಜನೆಗಳ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಿದರು. ಐ.ಪಿ.ಎಫ್. ಆಶ್ರಯದಲ್ಲಿ ಬಿಡುಗಡೆ ಗೊಳ್ಳುತ್ತಿರುವ “ದೃಷ್ಠಿ” ವಾರ್ತಾ ಸಂಚಿಕೆಯ ಬಗ್ಗೆ ಪೂರ್ಣ ವಿವರಗಳನ್ನು ಶ್ರೀ ಗಣೇಶ್ ರೈಯವರು ಸಭೆಯ ಮುಂದಿಟ್ಟರು.

ಐ.ಪಿ. ಎಫ್. ಕರ್ನಾಟಕ ಕೌನ್ಸಿಲ್, ಅನಿವಾಸಿ ಕನ್ನಡಿಗರ ವೇದಿಕೆ ಯ ಮುಖ್ಯ ಸಂಯೋಜಕರಾದ ಶ್ರೀ ಶಶಿಧರ್ ನಾಗರಾಜಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಐ.ಪಿ.ಎಫ್. ನ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ಮೋಹನ್ ನರಸಿಂಹಮೂರ್ತಿ, ಯೋಗ ಗುರು, ಗುರುಮಾ ಡಾ ಭಾಗೀರಥಿ ಕನ್ನಡತಿ, ಐ.ಪಿ.ಎಫ್. ಯು.ಎ.ಇ. ಉಪಾಧ್ಯಕ್ಷರಾದ ಶ್ರೀ ಸುಚೀತ್ ಕುಮಾರ್, ಐ.ಪಿ.ಎಫ್. ಯು.ಎ.ಇ. ಉಪ ಕಾರ್ಯದರ್ಶಿ ಶ್ರೀ ರಂಜೀತ್ ಕೊಡತ್ ಭಾಗಿಗಳಾಗಿದ್ದರು.

ಯೋಗ ಶಿಬಿರದ ಬಗ್ಗೆ ಶ್ರೀ ಮೋಹನ್ ನರಸಿಂಹ ಮೂರ್ತಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಸಭಾಧ್ಯಕ್ಷ ಸ್ಥಾನದಿಂದ ಶ್ರೀ ಶಶಿಧರ್ ನಾಗರಾಜಪ್ಪ ಅನಿವಾಸಿ ಕನ್ನಡಿಗರ ವೇದಿಕೆಯ ಧ್ಯೇಯೊದ್ಧೇಶಗಳನ್ನು ವಿವರಿಸಿದರು. ಶಿಬಿರದ ಬಗ್ಗೆ ತಮ್ಮ ಅನುಭವಗಳನ್ನು ಶ್ರೀ ಉಮಾಕಾಂತ್, ಶ್ರೀ ಗಿರೀಶ್ ಕಲ್ಕುಂಡ್, ಶ್ರೀಮತಿ ದೀಪಿಕಾ ಭಟ್ ಸಭೆಯಲ್ಲಿ ಹಂಚಿಕೊAಡರು.

ಯೋಗ ಗುರು, ಗುರುಮಾ ಡಾ ಭಾಗೀರಥಿ ಕನ್ನಡತಿ ಇವರನ್ನು ಐ.ಪಿ.ಎಫ್. ವತಿಯಿಂದ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಶ್ರೀ ನಾಗರಾಜ್ ರಾವ್ ಸನ್ಮಾನಿತರ ಬಗ್ಗೆ ಪೂರ್ಣ ಪರಿಚಯವನ್ನು ನೀಡಿದರು. ಸನ್ಮಾನ ಪ್ರಕ್ರಿಯೆಯಲ್ಲಿ ವೇದಿಕೆಯ ಮೇಲಿದ್ದ ಗಣ್ಯ ಅತಿಥಿಗಳು ಹಾಗೂ ಶ್ರೀ ಆನಂದ್ ಬೈಲೂರು, ಶ್ರೀಮತಿ ರೂಪಾ ಶಶಿಧರ್ ಮತ್ತು ಮಹಿಳಾ ಸದಸ್ಯರುಗಳು ಭಾಗವಹಿಸಿದ್ಧರು. ಸನ್ಮಾನಕ್ಕೆ ಉತ್ತರವಾಗಿ ಡಾ. ಭಾಗೀರಥಿ ಕನ್ನಡತಿಯವರು ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.

ಶ್ರೀ ಶಶಿಧರ್ ಮುಂಡರಗಿಯವರ ವಂದನಾರ್ಪಣೆಯೊAದಿಗೆ ಸಭೆ ಮುಕ್ತಾಯವಾಯಿತು. ಸರ್ವರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

Sneha Gowda

Recent Posts

ಡಾಲರ್‌ ಮೌಲ್ಯದ ಚಿನ್ನ ದರೋಡೆ ಪ್ರಕರಣ: ಭಾರತೀಯ ಮೂಲದ ವ್ಯಕ್ತಿ ಬಂಧನ

ಕೆನಡಾದಲ್ಲಿ ಬಹುಕೋಟಿ ಡಾಲರ್‌ ಮೌಲ್ಯದ ಚಿನ್ನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ವ್ಯಕ್ತಿಯನ್ನು ಟೊರೊಂಟೋ ವಿಮಾನ ನಿಲ್ದಾಣದಲ್ಲಿ ಅರೆಸ್ಟ್‌…

10 mins ago

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ : ಆನ್‌ಲೈನ್‌ನಲ್ಲಿ ಹೀಗೆ ನೋಡಿ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) 12ನೇ ತರಗತಿ ಫಲಿತಾಂಶ ಇಂದು ಪ್ರಕಟವಾಗಿದೆ. ಈ ವರ್ಷದ ತೇರ್ಗಡೆ ಪ್ರಮಾಣ…

19 mins ago

ಪತ್ರಿಕಾ ವಿತರಕ ರೈಲಿಗೆ ಸಿಲುಕಿ ಆತ್ಮಹತ್ಯೆ

ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಬಸವನಪುರ ಗ್ರಾಮದ ಬಳಿ ನಡೆದಿದೆ.

33 mins ago

ಮಲೆ ಮಾದಪ್ಪನಿಗೆ ಬೆಳ್ಳಿ ಆರತಿ ತಟ್ಟೆ ನೀಡಿದ ದಾನಿ : ಹೇಗಿದೆ ಗೊತ್ತಾ?

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನಲ್ಲಿರುವ ಪವಾಡ ಪುರುಷ ಶ್ರೀ ಮಲೆ ಮಹದೇಶ್ವರನಿಗೆ ಬೆಂಗಳೂರಿನ ನಾಗಮಣಿ.ಎಂ ಮತ್ತು ಕುಟುಂಬ 01 ಕೆಜಿ…

42 mins ago

ಭಯಾನಕ ದೃಶ್ಯ : ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಬೆಂಕಿ ತಗುಲಿ 10 ಮಂದಿಗೆ ಗಾಯ

  ಬೈಕ್ ಸ್ಫೋಟಗೊಂಡು ಸುಮಾರು ಹತ್ತು ಮಂದಿ ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಈ ಭಯಾನಕ ಘಟನೆ…

58 mins ago

ಗುಂಡ್ಲುಪೇಟೆ ಪೊಲೀಸರಿಂದ ಕಾರ್ಯಾಚರಣೆ : ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ

ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಣೆ ಮಾಡುತ್ತಿದ್ದ ವೇಳೆ ಗುಂಡ್ಲುಪೇಟೆ ಪೊಲೀಸರು ದಾಳಿ 2 ಕೆ.ಜಿ‌ ಗಾಂಜಾ ಸಮೇತ ಇಬ್ಬರು ಆರೋಪಿಗಳನ್ನು…

1 hour ago