News Karnataka Kannada
Sunday, April 21 2024
Cricket
ಯುಎಇ

“ಲಲಿತೋಪಖ್ಯಾನ”ದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ

Uae
Photo Credit : News Kannada

ದುಬಾಯಿ : ಯಕ್ಷಗಾನ ಅಭ್ಯಾಸ ತರಗತಿ ದುಬಾಯಿ ಪ್ರಸ್ತುತ ಪಡಿಸುವ, ದುಬಾಯಿ ಯಕ್ಷೋತ್ಸವ 2022 ರ ಸಲುವಾಗಿ ತರಗತಿಯ ವಿದ್ಯಾರ್ಥಿಗಳು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಹಮ್ಮಿಕೊಂಡ ಕನ್ನಡ ಪೌರಾಣಿಕ ಯಕ್ಷಗಾನ “ಲಲಿತೋಪಖ್ಯಾನ” ದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ, ಮೇ1ರಂದು , ಫಾರ್ಚೂನ್ ಗ್ರೂಪ್ ನ ದುಬೈ ಗ್ರಾಂಡ್ ಹೋಟೇಲ್ ನಲ್ಲಿ ಅರಬ್ ನಾಡಿನ ಪ್ರತಿಷ್ಟಿತ ಉದ್ಯೋಗಪತಿಗಳು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ, ಅದ್ದೂರಿಯಾಗಿ ನೆರವೇರಿತು.

ತರಗತಿಯ ಪ್ರಾರ್ಥನೆ, ಊರಿನಿಂದ ಬಂದ ಹಿರಿಯ ದಂಪತಿಗಳ ಮತ್ತು ಸೇರಿದ ಗಣ್ಯರಿಂದ ದೀಪ ಪ್ರಜ್ವಲನಾ ವಿಧಿಗಳಿಂದ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಗಣ್ಯರಿಗೆ ಸ್ವಾಗತ ಕೋರಿದ ಅಭ್ಯಾಸ ತರಗತಿಯ ಸಂಚಾಲಕರಾದ, ಕೊಟ್ಟಿಂಜ ದಿನೇಶ ಶೆಟ್ಟಿಯವರು ಪ್ರಾಸ್ತಾವಿಕ ಮಾತುಗಳ ಮೂಲಕ ತರಗತಿಯ ಧ್ಯೇಯೋಧ್ಧೇಶಗಳ ಜೊತೆಗೆ ಕಾರ್ಯಕ್ರಮದ ಸ್ಥೂಲ ನೋಟವನ್ನು ಅತಿಥಿಗಳ ಮುಂದಿರಿಸಿದರೆ, ತರಗತಿಯ ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿಯವರು ಕಾರ್ಯಕ್ರಮಕ್ಕೆ ಅತಿಥಿ ಕಲಾವಿದರಾಗಿ ಬರುವ, ಭಾಗವತರಾಗಿ ಶ್ರೀಯುತ ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಮತ್ತು ಶ್ರೀಮತಿ ಅಮೃತ ಕೌಶಿಕ್ ರಾವ್, ಮತ್ತು ಚೆಂಡೆ-ಮದ್ದಳೆಯಲ್ಲಿ ಕಾಣಿಸಿಕೊಳ್ಳಲಿರುವ ಶ್ರೀಯುತ ಕೌಶಿಕ್ ರಾವ್ ಪುತ್ತಿಗೆ, ಶ್ರಿಯುತ ಸವಿನಯ ನೆಲ್ಲಿತೀರ್ಥ, ಪ್ರಖ್ಯಾತ ಸ್ತ್ರೀವೇಷಧಾರಿ ದೀಪಕ್ ರಾವ್ ಪೇಜಾವರ, ಪ್ರಸಾಧನ –ವೇಷಭೂಷಣ ಕಲಾವಿದರಾಗಿ ಶ್ರಿಯುತ ಗಂಗಾಧರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಮತ್ತು ನಿತಿನ್ ಕುಂಪಲರ ವಿವರವನ್ನು ಸಭೆಯಲ್ಲಿ ತಿಳಿಸಿದರು.

ಅಭ್ಯಾಗತರಾಗಿ ಭಾಗವಹಿಸಿದ ಗಣ್ಯಾತಿಗಣ್ಯರು ಕಾರ್ಯಕ್ರಮದ ಕುರಿತಾಗಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ, ಸಂಘಟಕರನ್ನು ಅಭಿನಂದಿಸುವ ಜೊತೆಗೆ ಕಾರ್ಯಕ್ರಮಕ್ಕೆ ತಮ್ಮ ಬೆಂಬಲವನ್ನು ಪ್ರಕಟಿಸುವ ಜೊತೆಗೆ, ಅರಬನಾಡಿನಲ್ಲಿರುವ ಎಲ್ಲಾ ಕನ್ನಡದ – ತುಳುವಿನ ಯಕ್ಷಗಾನ ಅಭಿಮಾನಿಗಳು, ಕಲಾಭಿಮಾನಿಗಳು ಈ ಕಾರ್ಯಕ್ರಮಕ್ಕೆ ತಮ್ಮ ಎಲ್ಲಾ ಯಥಾಸಾಧ್ಯ ಬೆಂಬಲವನ್ನು ನೀಡಬೇಕೆಂದು ಕರೆಕೊಡುವ ಜೊತೆಗೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಆಶೀರ್ವಚನ ಮಾಡಿದ ಪುತ್ತಿಗೆ ರಾಘವೇಂದ್ರದ ಮಠದ ಟ್ರಸ್ಟಿ, ವೀನಸ್ ಗ್ರೂಪ್ ಆಫ್ ಹೋಟೇಲ್ಸ್ ನ ಮಾಲಕರಾದ ಶ್ರೀಯುತ ವಾಸುದೇವ ಭಟ್ ಪುತ್ತಿಗೆ ಕಾರ್ಯಕ್ರಮಕ್ಕೆ ಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು.

ಅರಬ ನಾಡಿನ ಬಹುತೇಕ ಕಾರ್ಯಕ್ರಮಗಳಲ್ಲಿ ತಮ್ಮ ಯೋಗದಾನ ನೀಡುವ ತಮ್ಮ ತಮ್ಮ ಕಮ್ಯೂನಿಟಿಗಳ ಮುಖಂಡರಾಗಿಯೂ ಗುರುತಿಸಿಕೊಂಡ ಗಣ್ಯರಾದ, ನಮ್ಮದೇ ನಾಡಿನ ಕಲೆಯನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ ಎಂಬ ನೆಲೆಯಲ್ಲಿ, ತಮ್ಮ ಕಮ್ಯೂನಿಟಿ ಸದಸ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಕರೆತರುವ ಭರವಸೆಯನ್ನೂ ನೀಡಿದರು. ಉದ್ಯಮಿ, ಅಬುದಾಭಿ ಕರ್ನಾಟಕ ಸಂಘದ ಅಧ್ಯಕ್ಷರೂ , ಬಂಟ ಸಮುದಾಯದ ನೇತಾರರೂ ಆದ ಸರ್ವೋತ್ತಮ ಶೆಟ್ಟಿಯವರು, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಎಲ್ಲ ಗಣ್ಯರ ಮತ್ತು ಯಕ್ಷಗಾನಾಭಿಮಾನಿಗಳ ಬೆಂಬಲ ದೊರೆತರೆ ಆರ್ಥಿಕವಾಗಿ ಮತ್ತು ತುಂಬಿದ ಸಭಾಂಗಣದಲ್ಲಿ ಕಾರ್ಯಕ್ರಮ ಯಶಸ್ವಿಯಾಗುವುದು ನಿಸ್ಸಂಶಯ ಎಂಬ ಭರವಸೆ ವ್ಯಕ್ತಪಡಿಸಿ, ಕಾರ್ಯಕ್ರಮಕ್ಕೆ ಶುಭಕೋರಿದರು. ಲಲಿತೋಪಖ್ಯಾನ –ಯಕ್ಷಗಾನ ಆಖ್ಯಾನದ ಆಮಂತ್ರಣ ಪತ್ರ- ಪ್ರವೇಶ ಪತ್ರ ಅನಾವರಣದ ಜೊತೆ ಯಕ್ಷಗಾನ ಅಭ್ಯಾಸ ತರಗತಿಯ ಕ್ರೀಡಾ ಸಂಸ್ಥೆ ಯಕ್ಷಯೋಧಾಸ್ ನ ಟೀಶರ್ಟ್ ಕೂಡ ಬಿಡುಗಡೆಗೊಳಿಸಲಾಯಿತು.

ವೇದಿಕೆಯಲ್ಲಿ ನೆರೆದಿದ್ದ ಗಣ್ಯರು ಕಾರ್ಯಕ್ರಮಕ್ಕೆ ಶುಭಾಶಯವನ್ನು ಕೋರಿದರು, ಮುಖ್ಯವಾಗಿ ಪ್ರವೀಣ್ ಶೆಟ್ಟಿ ವಕ್ವಾಡಿ, KNRI ಅಧ್ಯಕ್ಷರು, ಉದ್ಯಮಿ- ಫಾರ್ಚೂನ್ ಗ್ರೂಪ್ ನ ದುಬೈ ಗ್ರಾಂಡ್ ಹೋಟೇಲ್ ನ ಹರೀಶ್ ಶೇರಿಗಾರ್. ಉದ್ಯಮಿ, ತುಳು ಮತ್ತು ಕನ್ನಡ ಚಿತ್ರ ನಿರ್ಮಾಪಕರು. ವಾಸು ಭಟ್ ಪುತ್ತಿಗೆ, ಉದ್ಯಮಿ- venus group of hotels. ಹರೀಶ್ ಬಂಗೇರ – ಉದ್ಯಮಿ, ಕನ್ನಡ ಚಿತ್ರ ನಿರ್ಮಾಪಕರು ಗುಣಶೀಲ್ ಶೆಟ್ಟಿ – ಉದ್ಯಮಿ, Ace cranes. ಸತೀಶ್ ಪೂಜಾರಿ, ನಿಕಟ ಪೂರ್ವ ಅಧ್ಯಕ್ಷರು ಕರ್ನಾಟಕ ಸಂಘ ಹಾಗೂ ಬಿಲ್ಲವಾಸ್ ದುಬೈ. ಶಶಿಧರ್ ನಾಗರಾಜಪ್ಪ, ಅಧ್ಯಕ್ಷರು ಕನ್ನಡ ಪಾಠ ಶಾಲೆ ದುಬೈ. ಮನೋಹರ್ ತೊನ್ಸೆ, ಸಾಹಿತಿ ಹಾಗೂ ಅಧ್ಯಕ್ಷರು ಬಿಲ್ಲವ ಬಳಗ ಅಬುಧಾಬಿ. ಬಿ ಕೆ ಗಣೇಶ್ ರೈ ಕಲಾ ನಿರ್ದೇಶಕರು, ಲೇಖಕರು ಸುಂದರ್ ಶೆಟ್ಟಿ, ಮಾಲಕರು ನಿಹಾಲ್ ರೆಸ್ಟೋರೆಂಟ್ ಅಬುಧಾಬಿ. ರಘುರಾಮ್ ಶೆಟ್ಟಿಗಾರ್, ಅಧ್ಯಕ್ಷರು ಪದ್ಮಶಾಲಿ ಸಮುದಾಯ. ಸುಜಾತ್ ಶೆಟ್ಟಿ, ಉದ್ಯಮಿ ಗಂತೂತ್ ಬಿಲ್ಡಿಂಗ್ ಮೆಟಿರಿಯಲ್ಸ್ . ದಯಾನಂದ್ ಹೆಬ್ಬಾರ್, ಬ್ರಾಹ್ಮಣ ಸಮಾಜ ದುಬೈ.  ಶೋಧನ್ ಪ್ರಸಾದ್. ಸಂಘಟಕರು, ನಿರ್ಮಾಪಕರು ತುಳು ಚಿತ್ರರಂಗ. ಆನಂದ್ ಬೈಲೂರು. ನಿಕಟಪೂರ್ವ ಅಧ್ಯಕ್ಷರು, ಕರ್ನಾಟಕ ಸಂಘ ಶಾರ್ಜಾ. ಪ್ರೇಮ್ ಜಿತ್ ಅಧ್ಯಕ್ಷರು, ತುಳು ಪಾತೆರ್ಗ ತುಳು ಒರಿಪಾಗ ದುಬೈ ಗಮ್ಮತ್ ಕಲಾವಿದರ ಅಧ್ಯಕ್ಷರಾದ ರಾಜೇಶ್ ಕುತ್ತಾರ್ ಕಾರ್ಯಕ್ರಮ ನಿರ್ವಹಿಸಿದರೆ, ತರಗತಿಯ ಹಿರಿಯ ಕಲಾವಿದರಾದ ಗಿರೀಶ್ ನಾರಾಯಣ್ ಅವರು ಧನ್ಯವಾದ ಸಮರ್ಪಿಸಿದರು. ಸಭೆಗೆ ಪ್ರೀತಿಯಿಂದ ಆಗಮಿಸಿದ ಕಲಾಭಿಮಾನಿಗಳೂ – ಹೆತ್ತವರೆಲ್ಲ –ಅತಿಥಿಗಳ ಜೊತೆ ಉಪಹಾರ- ಭೋಜನ ಸ್ವೀಕರಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪತ್ರ ಖರೀದಿಸಿ, ಕಾರ್ಯಕ್ರಮಕ್ಕೆ ಶ್ಲಾಘನೆ-ಬೆಂಬಲವನ್ನು ಘೋಷಿಸುವ ಮೂಲಕ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು