News Karnataka Kannada
Saturday, April 27 2024
ಹೊರನಾಡ ಕನ್ನಡಿಗರು

ತುಳು ಸಂಘ ಬೋರಿವಲಿಯ 13ನೇ ವಾರ್ಷಿಕೋತ್ಸವ, ಸಾಂಸ್ಕೃತಿಕ ವೈಭವ, ಸನ್ಮಾನ

Mum
Photo Credit : NewsKarnataka

ಮುಂಬೈ:  ಮಹಾನಗರದಲ್ಲಿ ತುಳು ಸಂಘಟನೆಗಳು ಇನ್ನೂ ಇರಬಹುದು. ಹೊಸ ಸಂಘಟನೆಯು  ಹುಟ್ಟುವುದರಿಂದ ಯಾವುದೇ ಮಾರಕವಿಲ್ಲ. ಎಲ್ಲರಲ್ಲೂ ವಿವಿಧ ರೀತಿಯ ಪ್ರತಿಭೆಗಳಿದೆ. ಹೊಸ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಅವಕಾಶ ನೀಡಲು ಇಂತಹ ಸಂಘಟನೆಗಳು ಸಹಕಾರಿಯಾಗುತ್ತಿದೆ. ಈ ನಿಟ್ಟಿನಲ್ಲಿ ಸುಮಾರು ಹದಿಮೂರು ವರ್ಷಗಳ ಹಿಂದೆ ಜಾತಿ ಬೇದವಿಲ್ಲದೆ ಬೋರಿವಲಿ ಪರಿಸರದಲ್ಲಿ ನೆಲೆಸಿದ ಕರಾವಳಿಯ ತುಳು ಕನ್ನಡಿಗರನ್ನು ಒಗ್ಗೂಡಿಸಿ ಸಾಂಸ್ಕೃತಿಕ ವೈಭವ ದಂತಹ ಕಾರ್ಯಕ್ರಮವನ್ನು ನಡೆಸಿ ನಾಡಿನ ಬಾಷೆ ಸಂಸ್ಕೃತಿಯನ್ನು ಉಳಿಸಲು ತುಳು ಸಂಘಬೋರಿವಲಿಯ ಸ್ಥಾಪನೆಯಾಯಿತು ಎಂದು ತುಳು ಸಂಘಬೋರಿವಲಿಯ ಗೌರವ ಅಧ್ಯಕ್ಷ ಡಾ. ವಿರಾರ್ ಶಂಕರ್ ಬಿ. ಶೆಟ್ಟಿ ತಿಳಿಸಿದರು.
A

ತುಳು ಸಂಘಬೊರಿವಲಿಯ 13ನೇ  ವಾರ್ಷಿಕೋತ್ಸವ  ಸಮಾರಂಭವು ಮಾ. 2ರಂದು ಗ್ಯಾನ್ ಸಾಗರ್ ಅಂಪಿ ಥೀಯೇಟರ್ಬೋರಿವಲಿ ಸಂಸ್ಕೃತಿ ಕೇಂದ್ರಬೋರಿವಲಿ (ಪ.) ಮುಂಬಯಿ ಇಲ್ಲಿ  ಜರಗಿದ್ದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ  ಅವರು ನಮ್ಮ ಸಂಸ್ಕೃತಿ ಉಳಿಯಲು ಇಂತಹ ಸಂಘ ಸಂಸ್ಥೆಗಳು ಕಾರಣ. ಸಂಘದ ಮಹಿಳಾ ಸದಸ್ಯರು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದುಮಹಿಳೆಯರು ಕ್ರೀಯಾಶೀಲವಾಗಿರುವ ಸಂಘಟನೆಗೆ ಉತ್ತಮ ಭವಿಷ್ಯವಿದೆ. ಸಂಘ ಸಂಸ್ಥೆಗಳು ಉತ್ತಮ ಕೆಲಸ ಮಾಡಿದಲ್ಲಿ ಅದಕ್ಕೆ ದಾನ ರೂಪದಲ್ಲಿ ಸಹಕರಿಸುವವರು ಅನೇಕರಿದ್ದಾರೆ. ಈ ಸಂಘವನ್ನು ನಾವೆಲ್ಲರೂ ಸೇರಿ ಇನ್ನೂ ಬೆಳೆಸೋಣ ಎಂದರು.
As

 ತುಳು ಸಂಘಬೋರಿವಲಿಯ ಅಧ್ಯಕ್ಷರಾದ ಕರುಣಾಕರ ಎಂ. ಶೆಟ್ಟಿಯವರು ಅತಿಥಿಗಳನ್ನು ಹಾಗೂ ಸೇರಿದ ಎಲ್ಲಾ ತುಳು ಅಭಿಮಾನಿಗಳನ್ನು ಸ್ವಾಗತಿಸುತ್ತಾ ಸಂಘದ ಮಾಜಿ ಅಧ್ಯಕ್ಷರುಗಳಾದ ವಾಸು ಪುತ್ರನ್ ಮತ್ತು ಪ್ರಕಾಶ್ ಶೆಟ್ಟಿ ಪೇಟೆಮನೆ ಇವರ ನೇತೃತ್ವದಲ್ಲಿ ಹಿಂದೆಯೂ ತುಳು ಸಂಘವು ಪರಿಸರದ ವಿವಿಧ ಸಮುದಾಯದ ತುಳು ಕನ್ನಡ ಬಾಂಧವರನ್ನು ಸೇರಿಸಿ ತುಳು ಬಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಿದ್ದು ಇದನ್ನು ನಾವು ಮುಂದುವರಿಸುತ್ತಿದ್ದೇವೆ.  ವಿರಾರ್ ಶಂಕರ್ ಶೆಟ್ಟಿಸಂಸದರಾದ ಗೋಪಾಲ್ ಶೆಟ್ಟಿಪ್ರದೀಪ್ ಶೆಟ್ಟಿ ಮೊದಲಾದ ಗಣ್ಯರ ಮಾರ್ಗದರ್ಶನ ತುಳು ಸಂಘಬೋರಿವಲಿ ಗೆ ನಿರಂತರವಾಗಿದೆ ಎಂದರು.
New Project

 ಗಣ್ಯರಿಂದ ದೀಪ ಬೆಳಗಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸರಸ್ವತಿ ರಾವ್ ಪ್ರಾರ್ಥನೆ ಮಾಡಿದರು.

New Project (1)

ಮುಖ್ಯ ಅತಿಥಿ ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿಯವರು ಮಾತನಾಡುತ್ತಾ ತುಳು ಸಂಘಬೋರಿವಲಿ ಯ 13ನೇ ವಾರ್ಷಿಕೋತ್ಸವ ಸಮಾರಂಭಕ್ಕೆ ನನಗೆ ಮುಖ್ಯ ಅತಿಥಿಯ ಸ್ಥಾನ ನೀಡಿ ಗೌರವಿಸಿದ್ದಾರೆ. ತುಳುವತು  ದೊಡ್ಡ ಮನಸ್ಸನ್ನು ಹೊಂದಿದವರು. ಮಹಿಳೆಯರಿಗೆ ಎಲ್ಲಿ  ಸ್ಥಾನ ಮಾನ ನೀಡುತ್ತಾರೋ ಅಲ್ಲಿ ದೇವರು ನೆಲೆಸುತ್ತಾರಂತೆ. ಮಹಿಳೆಯರಿಗೆ ಯಾವಾಗಲೂ ಸ್ಥಾನ ಮಾನ ಇರಲಿ.  ಸಂಘದಲ್ಲಿ ಉತ್ತಮ ಕೆಲಸಗಳು ನಡೆಯುತ್ತಿದೆ. ದಾನ ಮಾಡುವ ಕೈ ಶ್ರೇಷ್ಠ. ಜಾತಿ ಬೇದವಿಲ್ಲದೆ ನಿಸ್ವಾರ್ಥ ಸೇವೆ ಮಾಡುವುದೇ ದೇವರ ಕೆಲಸ. ಅದು ತುಳುವರ ಮನಸ್ಸು ಎಂದರು.
Q

ಗೌರವ ಅತಿಥಿ ಉದ್ಯಮಿ ಹಾಗೂ ಕನ್ನಡ ಸಂಘ ಸೂರತ್ ಇದರ ಮಾಜಿ ಅದ್ಯಕ್ಷ ರಾಧಾಕೃಷ್ಣ ಶೆಟ್ಟಿ,  ಯವರು ಮಾತನಾಡುತ್ತಾ ತುಳು ಬಾಷೆ  ಹಾಗು ತುಳು ಜನರು ಎಂದರೆ ನನಗೆ ಬಹಳ ಪ್ರೀತಿ. ತುಳು ಜನರನ್ನು ಎಷ್ಟೂ ಹೊಗಳಿದರೂ ಕಡೀಮೆ. ತುಳುವರು ಶ್ರಮ ಜೀವಿಗಳು. ಎಲ್ಲಾ ಕ್ಷೇತ್ರಗಳಲ್ಲಿ ನಾವಿದ್ದು ನಮ್ಮವರು ಸಾಧಕರು. ಪ್ರಯತ್ನ ಮಾಡಿದಲ್ಲಿ ಯಾವುದೂ ಅಸಾಧ್ಯವಲ್ಲ. ನಮ್ಮ ನಾಡು ಇಂದು ಬಹಳ ಅಭಿವೃದ್ದಿಯಾಗಿರುದಕ್ಕೆ ಶೈಕ್ಷಣಿಕ ವಾಗಿ ನಮ್ಮವರು ಶ್ರೀಮಂತರಾಗಿರುವುದೂ ಕಾರಣ. ತುಳು ನಾಡಿನ ಮಣ್ಣಿನಲ್ಲಿ ವಿಶೇಷತೆಯಿದೆ. ಪಾಲಕರು ಮಕ್ಕಳೊಂದಿಗೆ ಹೆಚ್ಚಿನ ಕಾಲ ಕಳೆಯುತ್ತಾ ನಮ್ಮ ಸಂಸ್ಕೃತಿಯನ್ನು ಅವರಿಗೂ ತಿಳಿಸುವಂತಾಗಬೇಕು ಎಂದರು.
New Project (2)

ಇನ್ನೋರ್ವ ಗೌರವ ಅತಿಥಿ ಭಾರತ್ ಬ್ಯಾಂಕ್ ನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಮಾತನಾಡುತ್ತಾ ಸಂಘಟನೆಯು ಸ್ಥಾಪನೆಯಾಗುವಾಗ ಕೆಲವು ಉದ್ದೇಶಗಳನ್ನು ಹೊಂದಿರುತ್ತದೆ. ತುಳು ನಾಡಿನ ಜನರು ಒಂದಾಗಿ ತುಳು ನಾಡಿನ ಸಂಸ್ಕಾರವನ್ನು ಉಳಿಸಿ ಬೆಳೆಸಲು ತುಳು ಸಂಘ ಸಂಸ್ಥೆಗಳ ಅಗತ್ಯವಿದೆ. ಹಿರಿಯರು ಸಂಸ್ಕಾರವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಪಾಲ್ಗೊಳ್ಳು ವಂತೆ ಕಿರಿಯರನ್ನು ಇಂತಹ ಸಮಾರಂಭಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದಲ್ಲಿ ಮುಂದೆ ತುಳು ನಾಡಿನ ಸಂಸ್ಕೃತಿ ಸಂಸ್ಕಾರ ಖಂಡಿತವಾಗಿಯೂ ಉಳಿಯುತ್ತದೆ ಎಂದರು.

A (1)

ಸಾಂಸ್ಕೃತಿಕ ಕಾರ್ಯಮದ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಸಕಿ ಮನೀಶಾ ಚೌದರಿ  ಸಮಾರಂಭಕ್ಕೆ ಶುಭ ಕೋರಿದರು.

ಬೋರಿವಲಿ ಪಶ್ಚಿಮ ಜಯರಾಜ್ ನಗರದ ಮಹಿಷ ಮರ್ಧಿನಿ ದೇವಸ್ಥಾನದ ಆಡಳಿತ ಟ್ರಷ್ಟಿ ಪ್ರದೀಪ್ ಸಿ. ಶೆಟ್ಟಿ ಮತ್ತು ತುಳು-ಕನ್ನಡ ಸಾಹಿತಿಕವಿ ಸೀಮಂತೂರು ಚಂದ್ರಹಾಸ ಸುವರ್ಣ  ದಂಪತಿಯನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರು ಸನ್ಮಾನಿಸಿದರು. ಅಲ್ಲದೆ ಕಳೆದ ಮೂರು ವರ್ಷಗಳಿಂದ ಸಂಘದ ಅಧ್ಯಕ್ಷರಾಗಿ ಸೇವೆ ಮಾಡುತ್ತಿರುವ ಕರುಣಾಕರ ಎಂ. ಶೆಟ್ಟಿ ದಂಪತಿಯನ್ನು  ಗಣ್ಯರು ಗೌರವಿಸಿದರು. ಸನ್ಮಾನಿತರನ್ನು ಪ್ರವೀಣ್ ಅರ್. ಶೆಟ್ಟಿ ಮತ್ತು ಪೇಟೆಮನೆ ಪ್ರಕಾಶ್ ಶೆಟ್ಟಿ ಪರಿಚಯಿಸಿದ್ದುಅತಿಥಿಗಳನ್ನು ಲಕ್ಷ್ಮೀ ದೇವಾಡಿಗನ್ಯಾ. ರಾಘವ ಎಂ.ಮತ್ತು ಕೃಷ್ಣರಾಜ್ ಸುವರ್ಣ ಪರಿಚಯಿಸಿದರು.

New Project (4)

ಬಂಟರ ಸಂಘ ಮುಂಬಯಿಯ ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಪ್ರೇಮನಾಥ ಶೆಟ್ಟಿ ಕೊಂಡಾಡಿ,  ಮಾಜಿ ಕಾರ್ಯಾಧ್ಯಕ್ಷ ನಿಟ್ಟೆ ಎಂ. ಜಿ. ಶೆಟ್ಟಿಮಹಿಳಾ ವಿಭಾಗದ ನಿಕಟ ಪೂರ್ವ ಕಾರ್ಯಾಧ್ಯಕ್ಷೆ ಶೈಲಜಾ ಅಮರನಾಥ್ ಶೆಟ್ಟಿಡಾ. ಪಿ. ವಿ. ಶೆಟ್ಟಿಮುಂಡಪ್ಪ ಪಯ್ಯಡೆ,  ಉಷಾ ಗೋಪಾಲ್ ಶೆಟ್ಟಿ,  ರತಿ ಶಂಕರ್ ಶೆಟ್ಟಿಡಾ. ಹರೀಶ್ ಶೆಟ್ಟಿಡಾ. ಸತೀಶ್ ಶೆಟ್ಟಿಭಾರತ್ ಭ್ಯಾಂಕಿನ ನಿರ್ದೇಶಕರಾದ ಭಾಸ್ಕರ ಸಾಲ್ಯಾನ್ ಮಾಜಿ ನಿರ್ದೇಶಕ ಪ್ರೇಮನಾಥ ಕೋಟ್ಯಾನ್ಹರೀಶ್ ಪೂಜಾರಿಪ್ರಭಾಕರ ಶೆಟ್ಟಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
New Project (6)

 ಅಭಿನಯ ಮಂಟಪದ ಕಲಾವಿದರಿಂದಕರುಣಾಕರ ಕೆ. ಕಾಪು ನಿರ್ದೇಶನದ ಕಲ್ಕುಡ – ಕಲ್ಲುರ್ಟಿತುಳು ನಾಟಕಕುಣಿತ ಭಜನೆ,  ಸಂಘದ ಸದಸ್ಯರಿಂದ,  ಮಕ್ಕಳಿಂದ ನೃತ್ಯ ಹಾಗೂ ರಜಿತ್ ಸುವರ್ಣ ಬಳಗದವರಿಂದ ಕವಾಲಿ ಕಾರ್ಯಕ್ರಮಗಳು ತುಳು ಕನ್ನಡಿಗರಿಂದ ತುಂಬಿದ ಸಭಾಂಗಣದಲ್ಲಿ ನಡೆಯಿತು.

A (2)

ವೇದಿಕೆಯಲ್ಲಿ ಮುಖ್ಯ ಅತಿಥಿ ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿಗೌರವ ಅತಿಥಿಗಳಾದ ಕನ್ನಡ ಸಂಘ ಸೂರತ್ ನ ಮಾಜಿ ಅದ್ಯಕ್ಷಉದ್ಯಮಿ ರಾಧಾಕೃಷ್ಣ ಶೆಟ್ಟಿಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ,  ತುಳು ಸಂಘಬೋರಿವಲಿ ಯ ಉಪಾಧ್ಯಕ್ಷ ಹರೀಶ್ ಮೈಂದನ್ಪ್ರಧಾನ ಕಾರ್ಯದರ್ಶಿ ರಜಿತ್ ಸುವರ್ಣ,  ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತಿಲೋತ್ತಮ ವೈದ್ಯಉಪ ಕಾರ್ಯಾಧ್ಯಕ್ಷೆ ಶೋಭಾ ಎಸ್. ಶೆಟ್ಟಿ,  ಕಾರ್ಯದರ್ಶಿ ಲಕ್ಷ್ಮಿ ದೇವಾಡಿಗಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆಕುಸುಮ ಬಿ. ಶೆಟ್ಟಿಉಪಕಾರ್ಯಾಧ್ಯಕ್ಷೆ ಕಸ್ತೂರಿ ಎಸ್. ಶೆಟ್ಟಿಕಾರ್ಯದರ್ಶಿ ಸುನಂದ ಶೆಟ್ಟಿಯುವ ವಿಭಾಗದ ಕಾರ್ಯಾಧ್ಯಕ್ಷ  ಪ್ರವೀಣ್ ಅರ್. ಶೆಟ್ಟಿಸದಸ್ಯತನ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷೆ ಜಯಂತಿ ಶೆಟ್ಟಿ ಉಪಸ್ಥಿತರಿದ್ದರು.

New Project (3)

 ಸಾಂಸ್ಕೃತಿಕ ಕಾರ್ಯಕ್ರಮವನ್ನು ನ್ಯಾ. ರಾಘವ ಎಂ.ನಿರೂಪಿಸಿದ್ದುಸಭಾ ಕಾರ್ಯಕ್ರಮವನ್ನು ಸಚಿನ್ ಪೂಜಾರಿ ಮತ್ತು ಯುವ ವಿಭಾಗದ ಕಾರ್ಯಾಧ್ಯಕ್ಷ  ಪ್ರವೀಣ್ ಅರ್. ಶೆಟ್ಟಿ ನಿರ್ವಹಿಸಿದರು. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು