ಮುಂಬೈನಲ್ಲಿ “ಓ.ಟಿ.ಟಿ. ಹಾಗೂ ಫಿಲ್ಮಿ ಜಗತ್ತಿನ ದುಷ್ಕರ್ಮಗಳು” ವಿಷಯದ ಕುರಿತು ಜನಜಾಗೃತಿ

ಮುಂಬೈ: ಅಶ್ಲೀಲತೆಯನ್ನು ಹರಡುವ ಮಾಧ್ಯಮಗಳ ವಿರುದ್ಧ ಕಠೋರ ಕಾನೂನು ಬರಬೇಕು, ಚಲನಚಿತ್ರದಲ್ಲಿನ ವಸ್ತ್ರಸಂಹಿತೆಯನ್ನೂ ನಿರ್ಧರಿಸಬೇಕು ಹಾಗೂ ಇದನ್ನು ಉಲ್ಲಂಘಿಸುವವರಿಗೆ ಶಿಕ್ಷೆಯಾಗಬೇಕು. ಸರಕಾರದೊಂದಿಗೆ ಸಾಮಾಜಿಕ ಮಟ್ಟದಲ್ಲಿ ಪಾಲಕ ಮಂಡಳಿ, ಯುವ ಮಂಡಳಿಯನ್ನು ನಿರ್ಮಿಸಿ ಈ ಅಂಶದ ಮೇಲೆ ಒಗ್ಗೂಡಿ ಕೆಲಸ ಮಾಡಬೇಕು. ಓ.ಟಿ.ಟಿ. ಪ್ಲ್ಯಾಟ್ಫಾರ್ಮ್ ನಲ್ಲಿರುವ ಲೈಂಗಿಕ, ವಿಕೃತ ಹಾಗೂ ಅನೈತಿಕ ಸಂಗತಿಗಳ ಪ್ರಚಾರವನ್ನು ತಡೆಯಲು ಕಠೋರ ಕಾನೂನು ರಚಿಸುವುದರೊಂದಿಗೆ `ಎಥಿಕ್ಸ್ ಕೋಡ್’ (ನೈತಿಕತೆಯ ಆಚಾರಸಂಹಿತೆ) ಜಾರಿಗೊಳಿಸಿರಿ. ವಿಶ್ವಗುರುವಾದ ಭಾರತದ ವೈಭವಶಾಲಿ ಸಂಸ್ಕೃತಿಯನ್ನು ಉಳಿಸಲು ಅಶ್ಲೀಲತೆಯ ಅಸುರನನ್ನು ನಾಶಮಾಡಬೇಕು, ಎಂದು ಸೇವ್ ಕಲ್ಚರ್ ಸೇವ್ ಭಾರತ ಫೌಂಡೇಶನ್ ನ ಸಂಸ್ಥಾಪಕರು ಹಾಗೂ ಮಾಜಿ ಕೇಂದ್ರೀಯ ಮಾಹಿತಿ ಆಯುಕ್ತರಾದ ಶ್ರೀ. ಉದಯ ಮಾಹುರಕರ ಇವರು ಕರೆ ನೀಡಿದರು.

ಇವರು ಫೆಬ್ರುವರಿ 25 ರಂದು ಮುಂಬೈನ ದಾದರನಲ್ಲಿ `ಓ.ಟಿ.ಟಿ. ಹಾಗೂ ಫಿಲ್ಮಿ ಜಗತ್ತಿನ ದುಷ್ಕರ್ಮಗಳು’ ಈ ವಿಷಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಜೆಮ್ಸ್ ಆಫ್ ಬಾಲಿವುಡ್ ನ ಸಹಸಂಸ್ಥಾಪಕರು ಹಾಗೂ ಪ್ರಖ್ಯಾತ ಪತ್ರಕರ್ತೆಯಾದ ಸ್ವಾತಿ ಗೋಯಲ ಶರ್ಮಾ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಉಪಸ್ಥಿತರಿದ್ದರು. ದಾದರ (ಪ)ನಲ್ಲಿರುವ ವೀರ ಸಾವರಕರ ಮಾರ್ಗದಲ್ಲಿರುವ ಸೂರ್ಯವಂಶಿ ಕ್ಷತ್ರೀಯ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಜೆಮ್ಸ್ ಆಫ್ ಬಾಲಿವುಡ್ ನ ಸಂಸ್ಥಾಪಕರಾದ ಸಂಜೀವ ನೇವರ, ಪ್ರಸಿದ್ಧ ನಟಿ ಭಾಷಾ ಸುಂಬಲಿಯವರು ವಿಡಿಯೋದ ಮೂಲಕ ಉಪಸ್ಥಿತ ಪ್ರೇಕ್ಷಕರೊಂದಿಗೆ ಸಂವಾದ ಸಾಧಿಸಿದರು. ಕಾರ್ಯಕ್ರಮಕ್ಕೆ ಗಣ್ಯರು ಹಾಗೂ ಜಾಗೃತ ನಾಗರೀಕರೊಂದಿಗೆ ವಿವಿಧ ಮಹಾವಿದ್ಯಾಲಯಗಳ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಉದಯ ಮಾಹುರಕರ ರವರು ಮುಂದುವರಿದು, ಇಂದು `ಓ.ಟಿ.ಟಿ. ಯ ಮೇಲೆ 800 ಆಪ್ ಗಳ ಮಾಧ್ಯಮದಿಂದ ಪ್ರತಿದಿನ 30 ಅಶ್ಲೀಲ ಚಲನಚಿತ್ರಗಳು ಮಕ್ಕಳ ಮೊಬೈಲ್ಗಳಲ್ಲಿ ಬರುತ್ತಿವೆ. ಇದು ದೇಹಶದ್ರೋಹಿ ಪ್ರವೃತ್ತಿಯಾಗಿದೆ. `ಅಶ್ಲೀಲ ಚಲನಚಿತ್ರಗಳು ಬಲಾತ್ಕಾರಗಳ ಮುಖ್ಯ ಕಾರಣವಾಗಿವೆ. ಬಲಾತ್ಕಾರದ ಅಪರಾಧದಲ್ಲಿನ ಶೇ. 80 ರಷ್ಟು ಆರೋಪಿಗಳು ಅಶ್ಲೀಲ ಚಿತ್ರವನ್ನು ನೋಡಿ ಉತ್ತೇಜಿತಗೊಂಡು ಬಲಾತ್ಕಾರ ಮಾಡಿರುವುದಾಗಿ ಹೇಳುತ್ತಾರೆ. ಆದುದರಿಂದ ಇದನ್ನು ತಡೆಯಲು ಅಶ್ಲೀಲ ಚಿತ್ರಗಳನ್ನು ತಯಾರಿಸುವವರ ಮೇಲೆ 4 ತಿಂಗಳುಗಳ ಒಳಗೆ ಖಟ್ಲೆಯನ್ನು ನಡೆಸಿ 10 ರಿಂದ 20 ವರ್ಷಗಳ ವರೆಗೆ ಶಿಕ್ಷೆಯಾಗುವುದು, 3 ವರ್ಷ ಜಾಮೀನು ಸಿಗದಿರುವಂತಹ ಕಾನೂನು ಬೇಕಿದೆ, ಎಂದು ಹೇಳಿದರು.

ಜೆಮ್ಸ್ ಆಫ್ ಬಾಲಿವುಡ್ ನ ಸಹಸಂಸ್ಥಾಪಕರು ಹಾಗೂ ಪ್ರಖ್ಯಾತ ಪತ್ರಕರ್ತೆಯಾದ ಸ್ವಾತಿ ಗೋಯಲ ಶರ್ಮಾರವರು ಮುಂದುವರಿದು, `ಓ.ಟಿ.ಟಿ ಫ್ಲ್ಯಾಟ್ಫಾರ್ಮ್ ನಲ್ಲಿ ಚಲನಚಿತ್ರಗಳು, ಹಾಗೂ ವೆಬ್ ಸೀರಿಸ್ ಗಳ ಮಾಧ್ಯಮದಿಂದ ಅಶ್ಲೀಲತೆ, ಹಿಂಸಾಚಾರವನ್ನು ಹರಡಲಾಗುತ್ತಿದೆ. ಹಿಂದಿ ಚಿತ್ರರಂಗದಲ್ಲಿನ ಹೆಚ್ಚಿನ ಹಿರಿಯ ಕಲಾವಿದರು ತಮ್ಮ ದೇವರು, ದೇಶ ಹಾಗೂ ಸಂಸ್ಕೃತಿಯನ್ನು ವರ್ಷಾನುವರ್ಷ ಅಪಮಾನ ಮಾಡಿ ಹೊಸ ಪೀಳಿಗೆಗಳ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಂಸ್ಕೃತಿದ್ರೋಹಿ ಹಿಂದಿ ಚಿತ್ರರಂಗಕ್ಕೆ ಬಲಿಯಾಗದೆ ಈ ಸ್ವಯಂಘೋಷಿತ ಸ್ಟಾರ್ ಗಳಿಗೆ ಅವರ ಜಾಗ ತೋರಿಸಬೇಕು. ಈ ಸುಳ್ಳು ಆದರ್ಶಗಳನ್ನು ತಮ್ಮ ಜೀವನದಿಂದ ಶಾಶ್ವತವಾಗಿ ತೆಗೆದು ಹಾಕಿರಿ ಆಗಲೇ ನಮ್ಮ ಕುಟುಂಬದ ಒಳಿತಾಗುತ್ತದೆ, ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಮಾತನಾಡುತ್ತ, `ಇಂದು ಕೇವಲ ಭಾರತದಲ್ಲಿ ಮಾತ್ರ ಆದರ್ಶ ಕುಟುಂಬ ವ್ಯವಸ್ಥೆಯು ಉಳಿದಿದೆ. ಆದರೆ ಇಲ್ಲಿಯೂ `ಲಿವ್ ಇನ್ ರಿಲೇಷನ್ಶಿಪ್’ ನ್ನು ತರಲಾಗಿದೆ. `ಲಿವ್ ಇನ್ ರಿಲೇಷನ್ಶಿಪ್’ ನ್ನು ಭಾರತಕ್ಕೆ ತರುವ ಕೆಲಸವನ್ನು ಹಿಂದಿ ಚಿತ್ರರಂಗವು ಮಾಡಿದೆ. ಹಿಂದಿ ಚಿತ್ರರಂಗದ ಅಯೋಗ್ಯ ಪದ್ಧತಿಗಳನ್ನು ಹಿಂದೂ ಜನಜಾಗೃತಿ ಸಮಿತಿಯು ಆಗಾಗ ವಿರೋಧಿಸಿದೆ. ಸಮಿತಿಯ ವಿರೋಧದಿಂದಾಗಿ `ಅಲ್ಟ್ ಬಾಲಾಜಿ’ಯಾ ಏಕ್ತಾ ಕಪೂರಳಿಗೆ ಕ್ಷಮೆ ಕೇಳಬೇಕಾಯಿತು. ಹಿಂದಿ ಚಿತ್ರರಂಗದಲ್ಲಿನ ಅಶ್ಲೀಲತೆಯ ವಿರುದ್ಧ ಉದಯ ಮಹುರಾಕಾರರವರು ಆರಂಭಿಸಿರುವ ಅಭಿಯಾನವು ಸ್ತುತ್ಯಾರ್ಹವಾಗಿದ್ದು ಮುಂಬರುವ ಕಾಲದಲ್ಲಿ ಅಶ್ಲೀಲತೆಯನ್ನು ತಡೆಯುವುದು ಸರಕಾರದ ಹೊಣೆಯೇ ಆಗಿದೆ, ಆದರೆ ನಮ್ಮ ಪ್ರತಿಯೊಬ್ಬರ ಕೈಯಲ್ಲಿರುವ ಮೊಬೈಲಿನಲ್ಲಿ ಬರುವ ಮಾಹಿತಿಯಲ್ಲಿ ಯಾವುದು ತೆಗೆದುಕೊಳ್ಳಬೇಕು ಮತ್ತು ತೆಗೆದುಕೊಳ್ಳಬಾರದು ಎಂಬುದನ್ನು ಮಾತ್ರ ನಾವೇ ನಿರ್ಧರಿಸಬೇಕಾಗುವುದು, ಎಂದು ಹೇಳಿದರು.

ಜೆಮ್ಸ್ ಆಫ್ ಬಾಲಿವುಡ್ ನ ಸಂಸ್ಥಾಪಕರಾದ ಸಂಜೀವ ನೇವರ ರವರು ಉಪಸ್ಥಿತರೊಂದಿಗೆ ವಿಡಿಯೋ ಮೂಲಕ ಸಂವಾದ ಸಾಧಿಸುತ್ತ, ಮನೋರಂಜನೆಯ ಮಾಧ್ಯಮದಿಂದ ಅಪರಾಧಾತ್ಮಕ ಕೃತಿ ಮಾಡಲು ಪ್ರವೃತ್ತಗೊಳಿಸುವ ಈ ಭಯೋತ್ಪಾದನೆಯು ಓ.ಟಿ.ಟಿ. ಪ್ಲ್ಯಾಟ್ಫಾರ್ಮ್ ನ ಮಾಧ್ಯಮದಿಂದ ಮನೆಮನೆಗಳಿಗೆ ತಲುಪಿದೆ. ಈ ಪ್ಲ್ಯಾಟ್ಫಾರ್ಮ್ ಗಳಲ್ಲಿ ಅಶ್ಲೀಲ ಚಿತ್ರಣದಲ್ಲಿರುವ ಕಲಾವಿದರು ಸುರಕ್ಷಿತವಾಗಿರುತ್ತಾರೆ. ಆದರೆ ಅದಕ್ಕೆ ಸಾಮಾನ್ಯ ಮನೆಗಳ ಚಿಕ್ಕ ಹುಡುಗಿಯರು ಬಲಿಯಾಗುತ್ತಾರೆ. ಓ.ಟಿ.ಟಿ. ಪ್ಲ್ಯಾಟ್ಫಾರ್ಮ್ ಸೆನ್ಸಾರ್ ಕಾನೂನಿನ ಅಡಿಯಲ್ಲಿ ಬಾರದಿರುವುದರಿಂದ ಹಿಂದಿ ಚಿತ್ರರಂಗವು ಇದರಲ್ಲಿ ಅಶ್ಲೀಲತೆ ಹಾಗೂ ವಿಕೃತಿಯನ್ನು ಹರಡುತ್ತಿದೆ, ಇದನ್ನು ತಡೆಯಬೇಕು, ಎಂದು ಹೇಳಿದರು.

ಹೀಗೆಯೇ `ದಿ ಕಾಶ್ಮೀರ ಫೈಲ್ಸ್’ ಚಲನಚಿತ್ರದಲ್ಲಿನ ಪ್ರಮುಖ ನಟಿಯಾದ ಭಾಷಾ ಸುಂಬಲಿಯವರು ವಿಡಿಯೋದ ಮೂಲಕ ಸಂವಾದ ಸಾಧಿಸುತ್ತ, ಭಾರತೀಯ ಹಿಂದಿ ಚಿತ್ರರಂಗದಲ್ಲಿನ ಚಲನಚಿತ್ರಗಳಲ್ಲಿನ, ಓ.ಟಿ.ಟಿ ಪ್ಲಾಟ್ಫಾರ್ಮ್ಸ್ ಗಳಲ್ಲಿ ತೋರಿಸಲಾಗುವ ವೆಬ್ ಸೀರೀಸ್ ಗಳಲ್ಲಿ ಅಶ್ಲೀಲ ಹಾಗೂ ವಿಕೃತ ದೃಶ್ಯಗಳಿಂದ ಇಂದಿನ ಯುವ ಪೀಳಿಗೆಯು ದೂಷಿತಗೊಂಡಿದೆ. ಇದರ ವಿರುದ್ಧ ಸಾಮಾನ್ಯ ಜನತೆಯನ್ನು ಜಾಗೃತಗೊಳಿಸುವ ಕಾರ್ಯವು ಇಂದು ಅವಶ್ಯಕವಾಗಿದೆ, ಎಂದು ಹೇಳಿದರು.

ಗಣ್ಯ ವಕ್ತಾರರ ಶುಭಹಸ್ತದಿಂದ ದೀಪಪ್ರಜ್ವಲನೆ ಮೂಲಕ ಕಾರ್ಯಕ್ರಮವು ಆರಂಭವಾಯಿತು.  ಆರಂಭದಲ್ಲಿ ಉಪಸ್ಥಿತರಿಗೆ `ಸಂಸ್ಕೃತಿ ಉಳಿಸಿ, ಭಾರತ ಉಳಿಸಿ’ ಹಾಗೆಯೆ `ಹಲಾಲ್ ಜಿಹಾದ್’ ಈ ವಿಷಯಗಳಲ್ಲಿನ ಧ್ವನಿಚಿತ್ರ ಮುದ್ರಿಕೆಯನ್ನು ಪ್ರೊಜೆಕ್ಟರ್ ಮೂಲಕ ತೋರಿಸಲಾಯಿತು. ವಕ್ತಾರರ ಮಾರ್ಗದರ್ಶನದ ನಂತರ ಉಪಸ್ಥಿತರು ಕೇಳಿದ ಪ್ರಶ್ನೆಗಳಿಗೆ ವಕ್ತಾರರು ಉತ್ತರ ನೀಡಿ ಅವರ ಸಂದೇಹ ನಿವಾರಣೆ ಮಾಡಿದರು. ಹಿಂದಿ ಚಲನಚಿತ್ರಗಳಿಂದ ತೋರಿಸಲಾಗುವ ಅಶ್ಲೀಲ ಹಾಗೂ ಅಯೋಗ್ಯ ದೃಶ್ಯಗಳ ವಿರುದ್ಧ ಕಾನೂನಾತ್ಮಕವಾಗಿ ಹೋರಾಡುವ ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ ರವರನ್ನು ಈ ಸಂದರ್ಭದಲ್ಲಿ ಸತ್ಕರಿಸಲಾಯಿತು. ಜೆಮ್ಸ್ ಆಫ್ ಬಾಲಿವುಡ್ ನ ವತಿಯಿಂದ ಪ್ರಕಾಶಿತವಾದ `ಓ.ಟಿ.ಟಿ ಆಕ್ಷೇಪಾರ್ಹ ಸಾಮಗ್ರಿ ಸಂಶೋಧನೆ’ ಎಂಬ ಹೆಸರಿನ  ವ್ಯಾಪಕ ಶ್ವೇತಪತ್ರಿಕೆಯನ್ನು ಹಾಗೂ ಸೇವ್ ಕಲ್ಚರ್ ಸೇವ್ ಭಾರತ ಫೌಂಡೇಶನ್ ನ 2023ರ ವಾರ್ಷಿಕ ವರದಿಯನ್ನು ಗಣ್ಯ ವಕ್ತಾರರ ಹಸ್ತಗಳಿಂದ ಪ್ರಕಾಶನ ಮಾಡಲಾಯಿತು. ಸಂಪೂರ್ಣ `ವಂದೇ ಮಾತರಂ’ನಿಂದ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

Ashitha S

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

31 mins ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

48 mins ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

1 hour ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

1 hour ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

3 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

3 hours ago