Categories: ಮುಂಬೈ

ಮುಂಬಯಿ: ಮಾಂಡ್ ಸೊಭಾಣ್‌ನಿಂದ 251ನೇ ತಿಂಗಳ ಕೊಂಕಣಿ ಸಂಗೀತ ಮಂಜರಿ ಕಾರ್ಯಕ್ರಮ

ಮುಂಬಯಿ (ಆರ್‌ಬಿಐ), ನ.7: ಕಾರ್ವಾಲ್ ಮನೆತನ ಮತ್ತು ಮಾಂಡ್ ಸೊಭಾಣ್ ಜಂಟಿಯಾಗಿ ನೀಡುವ 18ನೇ ಕಲಾಕಾರ್ ಪುರಸ್ಕಾರ ಪ್ರದಾನ ಮತ್ತು 251ನೇ ತಿಂಗಳ ವೇದಿಕೆ ಕಾರ್ಯಕ್ರಮ ಕಳೆದ ಭಾನುವಾರ ಮಂಗಳೂರು ಶಕ್ತಿನಗರದಲ್ಲಿನ ಕಲಾಂಗಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿದ್ದ ನೆಲ್ಸನ್ ರಾಡ್ರಿಕ್ಸ್ ಅವರು ಶಾಲು, ಫಲಪುಷ್ಪ, ಉರ್ಮಾಲ್ (ಕೊಂಕಣಿಯ ಸಾಂಪ್ರದಾಯಿಕ ಪೇಟ), ಸ್ಮರಣಿಕೆ, ಸನ್ಮಾನ ಪತ್ರ ಹಾಗೂ ರೂ 50,000/- ಚೆಕ್‌ನೊಂದಿಗೆ `ಕಲಾಕಾರ್ ಪುರಸ್ಕಾರ’ ಪ್ರದಾನಿಸಿ ಯೊಡ್ಲಿಂಗ್‌ಕಿಂಗ್ ಮೆಲ್ವಿನ್ ಪೆರಿಸ್ ಇವರನ್ನು ಸನ್ಮಾನಿಸಿ ಅಭಿನಂದಿಸಿದರು. ಮೆಲ್ವಿನ್ ಸನ್ಮಾನ ಸ್ವೀಕರಿಸಿ ಮಾತನಾಡಿ ತನ್ನ ಗಾನಪಯಣದಲ್ಲಿ ಸಹಕರಿಸಿದವರನ್ನು ನೆನೆದು ವಂದಿಸಿದರು.

ಡಾ| ಪ್ರತಾಪ್ ನಾಯ್ಕ್ ಇವರು ಈ ವರ್ಷ ತನ್ನ ಕುಟುಂಬವು ಪುರಸ್ಕಾರದ ಮೊತ್ತವನ್ನು ದ್ವಿಗುಣಗೊಳಿಸಿದ ಬಗ್ಗೆ ಘೋಷಿಸಿದರು. ಮತ್ತು ನಾಡಿನ ದೊಡ್ಡ ಮನೆತನದವರು ಕಲಾವಿದರನ್ನು ಪ್ರೋತ್ಸಾಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕೈ ಜೋಡಿಸಲು ಕರೆ ನೀಡಿದರು.

ವೇದಿಕೆಯಲ್ಲಿ ಗುರಿಕಾರ ಎರಿಕ್ ಒಝೇರಿಯೊ, ಅಧ್ಯಕ್ಷ ಲುವಿ ಪಿಂಟೊ, ಉಪಾಧ್ಯಕ್ಷೆ ಐರಿನ್ ರೆಬೆಲ್ಲೊ, ಉಪಸ್ಥಿತರಿದ್ದರು. ಕಾರ್ಯದರ್ಶಿ ಕಿಶೋರ್ ಫೆರ್ನಾಂಡಿಸ್ ಸನ್ಮಾನ ಪತ್ರ ವಾಚಿಸಿದರು. ಅರುಣ್ ರಾಜ್ ರಾಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.

ನಂತರ 251ನೇ ತಿಂಗಳ ವೇದಿಕೆ ಸರಣಿಯ ಕಾರ್ಯಕ್ರಮವಾಗಿಸಿ ಗೋವಾದ ಸ್ವರಶ್ರೀ ತಂಡದಿಂದ ಗೀತ್ ಗೊಂಯ್ಚಾ ಅಸ್ಮಿತಾಯೆಚೆಂ ಸಂಗೀತ ಮಂಜರಿ ಪ್ರಸ್ತುತ ಪಡಿಸಿತು. ರಮಾನಂದ ರಾಯ್ಕರ್ ನಿರ್ದೇಶನದಲ್ಲಿ ಸೋನಾಲಿ ಪೆಡ್ನೆಕರ್, ಸಂದೇಶ್ ಕುಂಡಾಯ್ಕರ್, ದೀಪ್ತೀ ಕುಂಡಾಯ್ಕರ್, ಯೋಗಿತಾ ವೆರ್ಣೆಕರ್, ಶೈಲೆಶ್ ಸಾಲ್ಗಾಂವ್ಕರ್, ಶಯನಿ ಸಾಲ್ಗಾಂವ್ಕರ್, ಪ್ರಮೋದ್ ಸುರ್ಲೆಕರ್, ಮಂಗೇಶ್ ಶೆಟ್ಯೆ, ರಾಜು ಪರಬ್, ನವ್ಸೊ ನಾಯಕ್, ಅತುಲ್ ಪರಬ್, ಧಿಗೇಶ್ ಆಂಗ್ಲೊ, ಜಿತೇಂದ್ರ ತಾಂಡೆಲ್, ಸಾಯ್ರಾಜ್ ಕೇರ್ಕರ್, ಆದಿ ವೆರ್ಣೆಕರ್, ಗೌರಿಶ್ ವೆರ್ಣೆಕರ್ ಇವರು ಕಾರ್ಯಕ್ರಮ ನೀಡಿದರು.

Gayathri SG

Recent Posts

ಹಾಸನ ವಿಡಿಯೋ ಪ್ರಕರಣ: ಸುಳ್ಳು ದೂರಿನ ಒತ್ತಡ

ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಸಂಸದ ಪ್ರಜ್ವಲ್ ರೇವಣ್ಣ ನಾಪತ್ತೆಯಾಗಿದ್ದಾರೆ. ಶಾಸಕ ರೇವಣ್ಣ ಜೈಲು ಶಿಕ್ಷೆಗೆ ಗುರಿಗಾಗಿದ್ದಾರೆ. ಈ…

1 min ago

ಮದುವೆ ರದ್ದು, ಕೋಪದಿಂದ ಅಪ್ರಾಪ್ತ ಬಾಲಕಿಯ ರುಂಡ ಕತ್ತರಿಸಿ ಕೊಲೆ ಮಾಡಿದ ಪ್ರೇಮಿ

ಮದುವೆ ಕ್ಯಾನ್ಸಲ್ ಆದ ಕೋಪಕ್ಕೆ ಬಾಲಕಿಯನ್ನು ಎಳೆದೊಯ್ದು ರುಂಡ ಕತ್ತರಿಸಿ ಕೊಲೆ ಮಾಡಿದ ಘಟನೆ ಕೊಡಗಿನ ಸೋಮವಾರಪೇಟೆಯ ಸುರ್ಲಬ್ಬಿಯಲ್ಲಿ ನಡೆದಿದೆ.

17 mins ago

ಅಕ್ಷಯ ತೃತೀಯದಂದು ಲಕ್ಷ್ಮಿ ಮತ್ತು ಕುಬೇರನಿಗೆ ವಿಶೇಷ ಪೂಜೆ

ಅಕ್ಷಯ ತೃತೀಯವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಂದಿನ ದಿನ ಭರವಸೆ, ಸಂತೋಷ,…

42 mins ago

ಅಕ್ಷಯ ತೃತೀಯ ದಿನದಂದು ಚಿನ್ನ, ಬೆಳ್ಳಿ ದರ ಪಟ್ಟಿ ಹೀಗಿದೆ!

ಇಂದು ಅಕ್ಷಯ ತೃತೀಯ ದಿನವಾಗಿದ್ದು, ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಸತತ ಏರಿಕೆಯ ಬಳಿಕ ಎರಡು ದಿನ ಸತತ ಬೆಲೆ…

1 hour ago

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

9 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

9 hours ago