ಮುಂಬೈ: ಇನ್ನು ಮುಂದೆ ಐಪಿಎಲ್ ಪಂದ್ಯದ ದಿನದಂದು ಮೈದಾನದ ಫೋಟೋ ಹಂಚಿಕೊಳ್ಳುವಂತಿಲ್ಲ ಎಂದು ಬಿಬಿಸಿಸಿಐ ಫ್ರಾಂಚೈಸಿಗಳಿಗೆ ಖಡಕ್ ಸೂಚನೆ ನೀಡಿದೆ ಎನ್ನಲಾಗಿದೆ. ಇಂದು ನಡೆಯುವ 32ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇದರ ಮಧ್ಯೆ ಪ್ರಸಾರ ಹಕ್ಕುಗಳ ಉಲ್ಲಂಘನೆಯಾಗದಿರಲಿ ಎನ್ನುವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.
ಬಿಸಿಸಿಐ ಸೂಚನೆ ಪ್ರಾಕಾರ, ಇನ್ನು ಮುಂದೆ ಐಪಿಎಲ್ನ ವೀಕ್ಷಕ ವಿವರಣೆಗಾರರು, ಆಟಗಾರರು, ಕಂಟೆಂಟ್ ತಂಡ ಮತ್ತು ಫ್ರಾಂಚೈಸಿಗಳು ಐಪಿಎಲ್ ಪಂದ್ಯಗಳು ನಡೆಯುವ ದಿನ ಮೈದಾನದ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುವಂತಿಲ್ಲ. ಈ ರೀತಿ ಹಂಚಿಕೊಂಡರೆ ಐಪಿಎಲ್ ಪ್ರಸಾರಕರಿಗೆ ಭಾರೀ ನಷ್ಟ ಸಂಭವಿಸಲಿದೆ ಎಂದು ತಿಳಿದುಬಂದಿದೆ.
Refreshed 💪
Refocused 🎯
Ready for Delhi Capitals! ⚡️#AavaDe | #GTKarshe | #TATAIPL2024 | #GTvDC pic.twitter.com/gJTEuhOojW— Gujarat Titans (@gujarat_titans) April 17, 2024