ಮುಂಬಯಿ: ಡಾ.ಸೈಯ್ಯದ್ ನಝೀರ್‌ಗೆ ದಾದಾ ಸಾಹೇಬ್ ಪಾಲ್ಕೆಯ ಶಿವಾಜಿ ಮಹಾರಾಜ್ ಪ್ರಶಸ್ತಿ

ಮುಂಬಯಿ: ಪುತ್ತೂರು ನಿವಾಸಿ, ಮಂಗಳೂರು  ಉದ್ಯಮಿ, ಒಳನಾಡು ಮೀನುಗಾರಿಕೆ, ಮೂನು ತಳಿ ಅಭಿವೃದ್ಧಿಯಲ್ಲಿ ಅಂತರಾಷ್ಟ್ರೀಯ ತಜ್ಞ, ಸುಗಂಧ ಮತ್ತು ಸುಗಂಧ ದ್ರವ್ಯಗಳ ಸಲಹೆಗಾರ ಹಾಗೂ ಹರ್ಮಲ್ ಬಖೂರ್ ವಿಜ್ಞಾನಿ ಡಾ| ಎಂ.ಸೈಯ್ಯದ್ ನಝೀರ್ ಅವರಿಗೆ ಇತ್ತೀಚೆಗೆ ದಿಲ್ಲಿಯಲ್ಲಿ ದಾದಾ ಸಾಹೇಬ್ ಫಾಲ್ಕೆ ಐಕಾನ್ ಅವಾರ್ಡ್ ಫಿಲ್ಮ್ ಆರ್ಗನೈಜೇಶನ್ ಈ ಬಾರಿಯ ಛತ್ರಪತಿ ಶಿವಾಜಿ ಮಹಾರಾಜ್ ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ.

ನವದೆಹಲಿಯ ಲೋಧಿ ರಸ್ತೆಯ  ಚಿನ್ಮಯ ಮಿಷನ್ ಸಭಾಗೃಹದಲ್ಲಿ ಆಯೋಜಿಸಲಾದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ| ನಝೀರ್ ಅವರಿಗೆ ಕೇಂದ್ರ ಸಚಿವರು, ಸಂಸದರು ಹಾಗೂ ಇತರ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನಿಸಲಾಯಿತು. ಸಮಾರಂಭದಲ್ಲಿ ಕೇಂದ್ರ ಸಚಿವ ರಾಮದಾಸ ಅಠವಳೆ, ರಾಮೇಶ್ವರ ತೆಲಿ, ಫಗ್ಗನ್ ಸಿಂಗ್ ಕುಲಸ್ತೆ, ಕೈಲಾಸ್ ಚೌಧರಿ, ಜಮ್ಮು ಕಾಶ್ಮೀರ ವಕ್ಫ್ ಬೋರ್ಡ್ ಅಧ್ಯಕ್ಷ ಡಾ. ದರಕ್ಷಣ್ ಅಂದ್ರಾಬಿ. ಸಂಸದರಾದ ಎಸ್.ಪಿ ಸಿಂಗ್ ಬಗೇಲ್, ಸುನಿತಾ ರಾಜ್‌ಹನ್ಸ್, ಅರ್ಜುನ್‌ಲಾಲ್ ಮೀನಾ, ಚಂದ್ರ ಪ್ರಕಾಶ್ ಜೋಶಿ, ಗಿರೀಶ್‌ಚಂದ್ರ, ಪ್ರಿನ್ಸ್ ರಾಜ್, ಸುನಿಲ್ ಗಾಯಕ್ವಾಡ್, ಬಾಲಿವುಡ್ ನಟ ಆದಿಲ್ ಖಾನ್ ದುರಾನಿ ಸಹಿತ ಇತರರು ಉಪಸ್ಥಿತರಿದ್ದರು.

ಬಾಲಿವುಡ್, ಕ್ರೀಡೆ, ಸಮಾಜಸೇವೆ, ಮಾನವ ಕಲ್ಯಾಣ,  ಪತ್ರಿಕೋದ್ಯಮ, ಮಹಿಳಾ ಸಬಲೀಕರಣ, ಆರೋಗ್ಯ, ಪರಿಸರ ಇತ್ಯಾದಿ ವಿಭಾಗಗಳಲ್ಲಿ ಈ ಪ್ರಶಸ್ತಿ ಸಂಘಟಿಸಲಾಗಿದೆ. ಡಾ| ಎಂ.ಎಸ್ ನಝೀರ್ ಅವರು ಜೇಮ್ಸ್ ಗೇಟ್ ಜ್ಯುವೆಲ್ಲರ್ಸ್(ಆಸ್ಟ್ರೋಜೆಮ್) ಮತ್ತು ಅಲ್ ಖಿಝಾರ್ ಪರ್ಫೂಮ್ ಬ್ರಾಂಡ್‌ನ ಮಾಲಕರಾಗಿದ್ದಾರೆ. ಕಳೆದ 45 ವರ್ಷಗಳಿಂದ ಪರಿಸರ, ಘನತ್ಯಾಜ್ಯ, ಮೀನುಗಾರಿಕೆ, ಬೋಟಿಂಗ್, ಪ್ಲಾಸ್ಟಿಕ್ ಮುಕ್ತ ಪರಿಸರ, ಮರಗಳು ಮತ್ತು ನೀರಿನ ಕಾಳಜಿ ವಹಿಸಿ, 100ಕ್ಕೂ ಹೆಚ್ಚು ಕೆರೆ ಕೊಳಗಳನ್ನು  ಸ್ವಚ್ಛಗೊಳಿಸಿದ್ದಾರೆ. ಇವರ ಬಹುಮುಖ ಸೇವೆ ಪರಿಗಣಿಸಿ ಪ್ರಶಸ್ತಿಗೆ ಪರಿಗಣಿಸಲಾಗಿದೆ.

Ashika S

Recent Posts

ಕೇಜ್ರಿವಾಲ್‌ಗೆ ಷರತ್ತು ವಿಧಿಸಿ ಜಾಮೀನು ನೀಡಿದ ಸುಪ್ರೀಂಕೋರ್ಟ್‌

ಮದ್ಯ ನೀತಿ ಪ್ರಕರಣದಲ್ಲಿ ಜೈಲು ಸೇರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್‌ ಮಧ್ಯಂತ ಜಾಮೀನು ನೀಡಿದ್ದು, ಕೆಲವು ಷರತ್ತುಗಳನ್ನು ಸಹ…

10 mins ago

ಅಶ್ಲೀಲ‌ ವಿಡಿಯೋ ಕೇಸ್: ಮೂಡಿಗೆರೆಯಲ್ಲಿ ಪ್ರಜ್ವಲ್ ಬಂಧನ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಗರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಪೊಲೀಸರು ಪ್ರಜ್ವಲ್ ನನ್ನು ಬಂಧಿಸಿದ್ದಾರೆ.

37 mins ago

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿಯ ಶವ ಪತ್ತೆ

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿ ಪ್ರಕಾಶ್‌ ಶವವಾಗಿ ಪತ್ತೆಯಾಗಿದ್ದಾನೆ.

45 mins ago

ದಾಭೋಲ್ಕರ ಹತ್ಯೆ ಕೇಸ್ ನಲ್ಲಿ ಸನಾತನ ಸಂಸ್ಥೆಯ ನಿರಪರಾಧಿತನ ಸಾಬೀತು; ಸನಾತನ ಸಂಸ್ಥೆ ಸಂತಸ

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ವಿಶೇಷ ನ್ಯಾಯಾಲಯ ಇಂದು ಇಬ್ಬರು ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿ…

46 mins ago

ಕೊಲ್ಲೂರು ಪುಣ್ಯ ನದಿಗಳ ಮಾಲಿನ್ಯ: ಅರ್ಜಿ ವಿಚಾರಣೆಗೆ ಹಸಿರು ಪೀಠ ಅಂಗೀಕಾರ

ದಕ್ಷಿಣ ಭಾರತದ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೊಲ್ಲೂರಿನ ಪುಣ್ಯ ನದಿಗಳನ್ನು ಮಾಲಿನ್ಯಗೊಳಿಸುತ್ತಿರುವ, ಪರಿಸರ ನಾಶಗೊಳಿಸುತ್ತಿರುವ ಹಾಗೂ ಸರ್ಕಾರಿ ಭೂಮಿಗಳ ಅತಿಕ್ರಮಣದ…

1 hour ago

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್; ಪ್ರಮುಖ ಆರೋಪಿ ಬಂಧನಕ್ಕೆ ಪತ್ನಿ ನೂತನ ಸಂತಸ

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮುಸ್ತಫಾ ಪೈಚಾರನ್ನ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದು, ಮುಸ್ತಫಾ…

1 hour ago