ಸ್ವಾತಿ ಮಂಗಳಾಗೆ ಮಿಸೆಸ್ ಬೆಸ್ಟ್ ಪರ್ಸನಾಲಿಟಿ ಪ್ರಶಸ್ತಿ

ದುಬೈ: ಮಿಸ್ಟರ್ ಮತ್ತು ಮಿಸಸ್ ಯುಎಇ ಇಂಟರ್‌ನ್ಯಾಶನಲ್ ಬ್ಯೂಟಿ ಪೇಜೆಂಟ್ ಸೀಸನ್-4 ರಲ್ಲಿ ಜೆಪ್ಪು ಮಂಗಳೂರಿನ ಸ್ವಾತಿ ಮಂಗಳಾ ಅವರು ಮಿಸೆಸ್ ಬೆಸ್ಟ್ ಪರ್ಸನಾಲಿಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. 2012ರಿಂದ ಅವರು ದುಬೈನಲ್ಲಿ ನೆಲೆಸಿದ್ದಾರೆ.

2023 ರ ಮಿಸ್ಟರ್‌ ಮತ್ತು ಮಿಸೆಸ್‌ ಯುಎಇ ಇಂಟರ್ನ್ಯಾಷನಲ್ ಅನ್ನು ಮೇ 7 ರಂದು ರಾಡಿಸನ್ ಬ್ಲೂ, ದುಬೈ ಕೆನಾಲ್ ವ್ಯೂ ಹೋಟೆಲ್ನಲ್ಲಿ ಆಯೋಜಿಸಲಾಗಿತ್ತು. ಒಟ್ಟು 31 ಸ್ಪರ್ಧಿಗಳಿದ್ದರು. 24 ರಿಂದ 37 ವರ್ಷದೊಳಗಿನ ಗೋಲ್ಡ್ ವರ್ಗದಲ್ಲಿ 11 ಮಂದಿ ಭಾಗವಹಿಸಿದ್ದರು. 38 ರಿಂದ 50 ರ ನಡುವಿನ ಪ್ಲಾಟಿನಮ್ ವರ್ಗದ 10 ಮಂದಿ ಭಾಗವಹಿಸಿದ್ದರು.

ಮಿಸ್ಟರ್ ಯುಎಇ ಇಂಟರ್ನ್ಯಾಷನಲ್ ವಿಭಾಗದಲ್ಲಿ 10 ಮಂದಿ ಪುರುಷರು ಭಾಗವಹಿಸಿದ್ದರು. 2006 ರಿಂದ ಯೋಗಾಭ್ಯಾಸ ಮಾಡುತ್ತಿರುವ ಸ್ವಾತಿ ಮಂಗಳಾ ಅವರು ಬೆಳಗ್ಗೆ ಟ್ಯಾಲೆಂಟ್ ಸುತ್ತಿನಲ್ಲಿ ಯೋಗ ಪ್ರದರ್ಶಿಸಿದರು. ಸಂಜೆ ರ್ಯಾಂಪ್ ವಾಕ್ ಮತ್ತು ಪ್ರಶ್ನಾವಳಿ ಸುತ್ತು ನಡೆಯಿತು. ಎಥ್ನಿಕ್ ರೌಂಡ್, ಕೋಆರ್ಡಿನೇಷನ್ ಸೆಟ್ ರೌಂಡ್, ವೆಸ್ಟರ್ನ್ ವೇರ್ ರೌಂಡ್ ಇತ್ತು. ಸ್ವಾತಿ ಚಿನ್ನದ ವಿಭಾಗದಲ್ಲಿ ‘ಮಿಸೆಸ್ ಬೆಸ್ಟ್ ಪರ್ಸನಾಲಿಟಿ’ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಆಕೆಗೆ ಪ್ರಸಿದ್ಧ ಟರ್ಕಿಶ್ ಬ್ರ್ಯಾಂಡ್ ಫ್ಲೋರ್‌ಮಾರ್‌ನಿಂದ ಪ್ರಮಾಣಪತ್ರ ಮತ್ತು ಗಿಫ್ಟ್ ಹ್ಯಾಂಪರ್ ನೀಡಲಾಯಿತು.

ಇದು ಯುಎಇ ಸರ್ಕಾರದ ಆಶ್ರಯದಲ್ಲಿ ಆಯೋಜಿಸಲಾದ ಮಿಸೆಸ್ ಯುಎಇ ಇಂಟರ್‌ನ್ಯಾಶನಲ್‌ನ 4 ನೇ ಸೀಸನ್ ಆಗಿದೆ. ಈ ಸೌಂದರ್ಯ ಸ್ಪರ್ಧೆಯು ಮಹಿಳೆಯರಲ್ಲಿ ಸೌಂದರ್ಯ, ಪ್ರತಿಭೆ ಮತ್ತು ಆತ್ಮವಿಶ್ವಾಸವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಲು ಪ್ರೋತ್ಸಾಹಿಸುವುದರ ಮೇಲೆ ಕೇಂದ್ರೀಕರಿಸಿದೆ.

ಮಿಸ್ಟರ್ ಅಂಡ್ ಮಿಸೆಸ್ ಯುಎಇ ಇಂಟರ್‌ನ್ಯಾಶನಲ್ 2023 ಬ್ಯೂಟಿ ಪೇಜೆಂಟ್‌ನಲ್ಲಿ ಮಿಸೆಸ್ ಬೆಸ್ಟ್ ಪರ್ಸನಾಲಿಟಿ ಪ್ರಶಸ್ತಿ ಶಾಶ್ವತವಾಗಿ ನೆನಪಿನಲ್ಲಿರಲಿದೆ ಎಂದು ಹೇಳಿದರು.

ಸ್ವಾತಿ ಮಂಗಳಾ ಅವರು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಕ್ಲಿನಿಕಲ್ ಮತ್ತು ಕೌನ್ಸೆಲಿಂಗ್ ಸೈಕಾಲಜಿಯಲ್ಲಿ ಎಂಎಸ್ಸಿ ಅಭ್ಯಾಸ ಮಾಡಿದ್ದಾರೆ. ದುಬೈನಲ್ಲಿ ಪ್ರಾಪರ್ಟಿ ಡೆವಲಪ್‌ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಪತಿ ಇಎನ್‌ ಬಿಡಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದು, ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.

Gayathri SG

Recent Posts

ಬಿಜೆಪಿ ಸುಳ್ಳು ಇನ್ನು ನಡೆಯಲ್ಲ: ಲಕ್ಷ್ಮಣ ಸವದಿ ವಾಗ್ದಾಳಿ

ಮೋದಿ ಮತ್ತವರ ಬಳಗ ಮತ್ತು ಬಿಜೆಪಿಯವರ ಸುಳ್ಳುಗಳನ್ನು ಜನ ಅರಿತಿದ್ದು, ಈ ಸಲ ಸರಿಯಾಗಿ ಪಾಠ ಕಲಿಸಲಿದ್ದಾರೆ ಎಂದು ಮಾಜಿ…

30 mins ago

ಗ್ಯಾರಂಟಿಗಳು ಕಾಂಗ್ರೆಸ್ ಹಾಗು ಖಂಡ್ರೆ ಗೆಲುವಿಗೆ ಶ್ರೀರಕ್ಷೆ

ಜನಸಾಮಾನ್ಯರಿಗೆ ಆಸರೆಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳು ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್…

40 mins ago

ಅಶ್ಲೀಲ ವಿಡಿಯೋ ಪ್ರಕರಣ: ಹೆಚ್​ಡಿ ರೇವಣ್ಣ ಬಂಧನ

ಅಶ್ಲೀಲ ವಿಡಿಯೋ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣರನ್ನು ವಿಶೇಷ ತನಿಖಾ ದಳದ  ಅಧಿಕಾರಿಗಳು…

51 mins ago

ಅನ್ಯದೇಶಿಗರಿಗೆ ಭಾರತ ಮುಕ್ತವಾಗಿಲ್ಲ ಎಂದ ಬೈಡನ್‌ಗೆ ಉತ್ತರಿಸಿದ ಜೈಶಂಕರ್‌

ಭಾರತ ಸೇರಿದಂತೆ ಹಲವು ದೇಶಗಳು ಅನ್ಯದೇಶಿಗರಿಗೆ ತೆರೆದುಕೊಂಡಿಲ್ಲ ಎಂದ ಅಮೇರಿಕಾ ಅಧ್ಯಕ್ಷ ಜೋ ಬೈಡನ್‌ರ ಹೇಳಿಕೆಗೆ ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ…

51 mins ago

ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ಪ್ರಚಾರ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಭಾಗಿ

ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನೋದ್‌ ಅಸೂಟಿ ಅವರ ಪರವಾಗಿ ಕುಂದಗೋಳದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಬೃಹತ್ ಬಹಿರಂಗ ಪ್ರಚಾರ…

1 hour ago

ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಮೇಲೆ ಬರಲಿದೆ ಬಯೋಪಿಕ್

ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅಣ್ಣಾಮಲೈ  ಅವರು ಬಿಜೆಪಿ ಸೇರ್ಪಡೆ ಆಗಿ ರಾಜಕೀಯಕ್ಕೆ ಕಾಲಿಟ್ಟರು. ಈಗ  ಕೊಯಿಮತ್ತೂರು ಕ್ಷೇತ್ರದಿಂದ ಬಿಜೆಪಿ…

1 hour ago