ಬೋರಿವಲಿಯಲ್ಲಿ ರೋಹಿತ್ ಪೂಜಾರಿ ಡ್ಯಾನ್ಸ್ ಅಕಾಡಮಿ ವತಿಯಿಂದ “ಮಂಥನ್ 2023”

ಮುಂಬಯಿ : ಕಳೆದ ಹಲವಾರು ವರ್ಷಗಳಿಂದ ಬೋರಿವಲಿ ಪಶ್ಚಿಮದಲ್ಲಿ ಡಾನ್ಸ್ ತರಗತಿಯನ್ನು ನಡೆಸುತ್ತಾ ಸಾವಿರಾರು ಆಶಕ್ತರಿಗೆ “ರೋಹಿತ್ ಪೂಜಾರಿ ಡ್ಯಾನ್ಸ್ ಅಕಾಡಮಿ” ಮೂಲಕ ನೃತ್ಯ ಕಲಿಸುತ್ತಿರುವ ರೋಹಿತ್ ಪೂಜಾರಿ ಡ್ಯಾನ್ಸ್ ಅಕಾಡಮಿಯ 6 ನೇ ವಾರ್ಷಿಕ ಸಮಾರಂಭ “ಮಂಥನ್” ಮೇ. 28 ರಂದು ಬೋರಿವಲಿ ಪಶ್ಚಿಮದ ಪ್ರಭೊಧನ್ಕರ್ ಠಾಕ್ರೆ ಸಭಾಗೃಹದಲ್ಲಿ ನಡೆಯಿತು.

ಕಿರುತೆರೆಯಲ್ಲಿ ನೃತ್ಯ ಹಾಗೂ ಎ.ಬಿ.ಸಿ.ಡಿ. ಯಂತಹ ಚಲನಚಿತ್ರದಲ್ಲಿ ತನ್ನ ಪ್ರತಿಭೆಯನ್ನು ರೋಹಿತ್‌ ಪೂಜಾರಿ ಪ್ರದರ್ಶಿಸಿದ್ದು ಬಹುಮುಖ ಪ್ರತಿಭೆಯಾಗಿ ಹಲವರಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ. ರೋಹಿತ್ ಪೂಜಾರಿ ಹಾಗೂ ಅವರ ವಿದ್ಯಾರ್ಥಿಗಳು ಕೋವಿಡ್ ಮಹಾಮಾರಿ ಅಧಾರಿತ ನೂತನ ಶೈಲಿಯ ನೃತ್ಯ ಪ್ರದರ್ಶನ ನೀಡಿ ಸೇರಿದ ನೃತ್ಯಾಭಿಮಾನಿಗಳ ಗಮನ ಸೆಳೆದರು.

ಟಿ. ವಿ. ಪೂಜಾರಿಯವರ ಉಪಸ್ಥಿತಿಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ಸುರೇಂದ್ರ ಪೂಜಾರಿ, ಅತಿಥಿಗಳಾಗಿ ಸಮಾಜ ಸೇವಕಿ, ತುಳು ಸಂಘ ಬೋರಿವಲಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತಿಲೋತ್ತಮ ವೈದ್ಯ ಮತ್ತು ಸಮಾಜ ಸೇವಕಿ ಶೀತಲ್ ಮ್ಹಾತ್ರೆ ಉಪಸ್ಥಿತರಿದ್ದರು. ಈ ಸಂದರ್ಭ ಮಾತನಾಡಿದ ಗಣ್ಯರು ರೋಹಿತ್ ಪೂಜಾರಿ ಡ್ಯಾನ್ಸ್ ಅಕಾಡಮಿ ಯ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ಶುಭ ಹಾರೈಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಸ್ಥಳೀಯ ಶಾಸಕ ಸುನಿಲ್ ರಾಣೆ ಮಾತನಾಡಿ ರೋಹಿತ್ ಪೂಜಾರಿ ನೇತೃತ್ವದಲ್ಲಿ ನಡೆಯುತ್ತಿರುವ ಡ್ಯಾನ್ಸ್ ಅಕಾಡಮಿ ಗೆ ಶುಭ ಹಾರೈಸುತ್ತಾ ಮಂಥನ್ 2023 ನಲ್ಲಿ ಬಾಗವಹಿಸಿದ ಎಲ್ಲಾ ಕಲಾವಿದರಿಗೆ ಅಭಿನಂದನೆ ಸಲ್ಲಿಸಿದರು.

ನೃತ್ಯದಲ್ಲಿ ಪಾಲ್ಗೊಂಡ ಎಲ್ಲಾ ಕಲಾವಿದರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಹಾಗೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ರೋಹಿತ್ ಪೂಜಾರಿಯವರು ಧನ್ಯವಾದ ಸಮರ್ಪಿಸಿದರು.

 

Sneha Gowda

Recent Posts

ಸಂತ್ರಸ್ತೆ ಅಪಹರಣ ಕೇಸ್‌ : ಭವಾನಿ ರೇವಣ್ಣ ಸಂಬಂಧಿ ಬಂಧನ

ಈಗಾಗಲೇ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ದೇಶಾದ್ಯಂತ ಬಾರಿ ಸದ್ದು ಮಾಡುತ್ತಿದೆ. ಅಲ್ಲದೇ ಅವರ ತಂದೆ ಸಚಿವ ಹೆಚ್​ಡಿ…

6 mins ago

ಭಾರೀ ಮಳೆ: ಮಣ್ಣಿನ ಕುಸಿತದಿಂದ 37 ಮಂದಿ ಮೃತ್ಯು, 74 ಕ್ಕೂ ಹೆಚ್ಚು ಜನ ಕಾಣೆ

ಬ್ರೆಜಿಲ್‌ನ ದಕ್ಷಿಣ ರಾಜ್ಯ ರಿಯೊ ಗ್ರಾಂಡೆ ಡೊ ಸುಲ್‌ನಲ್ಲಿ ಭಾರೀ ಮಳೆ ಮತ್ತು ಮಣ್ಣಿನ ಕುಸಿತದಿಂದಾಗಿ 37 ಮಂದಿ ಸಾವಿಗೀಡಾಗಿದ್ದಾರೆ.…

17 mins ago

ಆಫ್ರಿಕಾದಲ್ಲಿ ಮಳೆಯಿಂದ ಬಾರಿ ಪ್ರವಾಹ : 350ಕ್ಕೂ ಹೆಚ್ಚು ಸಾವು, 90 ಜನರು ನಾಪತ್ತೆ

ಕೀನ್ಯಾ ಮತ್ತು ತಂಜಾನಿಯಾದಲ್ಲಿ ಕಳೆದ ಒಂದು ವಾರದಿಂದ ಸುರಿದ ಧಾರಕಾರ ಮಳೆಯಿಂದಾಗಿ ರಸ್ತೆಗಳೆಲ್ಲ ನದಿಯಂತಾಗಿವೆ. ಮನೆಯಲ್ಲಿ ನಗುಗ್ಗಿದ ನೀರು ಮನೆ…

33 mins ago

ರೆಸ್ಟೋರೆಂಟ್‌ನಲ್ಲಿ ಪತ್ನಿಯನ್ನು ಹೊಡೆದು ಕೊಂದ ಮಾಜಿ ಸಚಿವ : ವಿಡಿಯೋ ವೈರಲ್‌

ಕಜಕೀಸ್ತಾನದ  ಮಾಜಿ ಸಚಿವನೋರ್ವ ತನ್ನ ಪತ್ನಿಯನ್ನು ದಾರುಣವಾಗಿ ಥಳಿಸಿದ್ದು ಪರಿಣಾಮವಾಗಿ ಎಂಟು ಗಂಟೆಗಳಲ್ಲಿ ಆಕೆ ಕೊನೆಯುಸಿರೆಳೆದಿರುವ ದಾರುಣ ಘಟನೆ ನಡೆದಿದೆ.

48 mins ago

ಸಿಲಿಂಡರ್‌ ಬ್ಲಾಸ್ಟ್‌ನಿಂದ ಮನೆಯಲ್ಲಿ ಬೆಂಕಿ : 3 ವರ್ಷದ ಮಗು ಮೃತ್ಯು, 5 ಮಂದಿಗೆ ಗಾಯ

ಮನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ 3 ವರ್ಷದ ಮಗು ಮೃತಪಟ್ಟು ಐವರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಛತ್ರಪತಿ ಸಾಂಭಾಜಿನಗರದಲ್ಲಿ ನಡೆದಿದೆ…

54 mins ago

ಬೀದರ್‌ನ ’14 ಪರೀಕ್ಷಾ ಕೇಂದ್ರಗಳಲ್ಲಿ ‘ನೀಟ್‌’ ಪರೀಕ್ಷೆ

'ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್‌) ಜಿಲ್ಲೆಯ 14 ಪರೀಕ್ಷಾ ಕೇಂದ್ರಗಳಲ್ಲಿ ಮೇ 5ರಂದು ನಡೆಯಲಿದೆ' ಎಂದು ನೀಟ್‌ ಸಂಯೋಜಕ…

1 hour ago