ದುಬೈ: ತನ್ನ 10ನೇ ವರ್ಷದ “ಕನ್ನಡ ಕಲಿಕ ಪ್ರಾರಂಭೋತ್ಸವ” ತರಗತಿಗಳಿಗೆ ಚಾಲನೆ ನೀಡಿದ ಕನ್ನಡ ಪಾಠಶಾಲೆ

ದುಬೈ: ನವೆಂಬರ್‌ 4 ರಂದು ಕರ್ನಾಟಕದಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆಮಾಡಿತ್ತು. ಈ ಸಂದರ್ಭದಲ್ಲಿ ದುಬೈನಲ್ಲಿರುವ ಕನ್ನಡ ಪಾಠಶಾಲೆ ತನ್ನ 10ನೇ ವರ್ಷದ ಆನ್ ಲೈನ್ ತರಗತಿ”ಕನ್ನಡ ಕಲಿಕ ಪ್ರಾರಂಭೋತ್ಸವ” ಚಾಲನೆ ನೀಡಿದೆ. ನವೆಂಬರ್ 04ರ ಶನಿವಾರ ದಂದು ಶ್ರೀ. ಶಶಿಧರ್ನಾ ಗರಾಜಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಆನ್ ಲೈನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವರಾದ ಶ್ರಿಯುತ ಮಧು ಬಂಗಾರಪ್ಪ ಮತ್ತು ರಾಜ್ಯ ಸರ್ಕಾರದ NRI ಘಟಕದ ನೂತನ ಉಪಾಧ್ಯಕ್ಷೆ ಶ್ರೀಮತಿ . ಡಾ. ಆರತಿ ಕೃಷ್ಣ ಅವರು ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ , ಶಾಲೆಗೆ ಸರ್ಕಾರದಿಂದ ಯಾವುದೇ ಸಹಕಾರ ನೀಡಲು ಸಿದ್ಧವಿರುವುದಾಗಿ ಘೋಷಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮಿತ್ರರು ಸಂಘಟನೆಯ  ಆಧ್ಯಕ್ಷರಾದ ಸಿದ್ದಲಿಂಗೇಶ್ ರೇವಪ್ಪ ,ಕಾರ್ಯದರ್ಶಿ ಸುನೀಲ್ ಗವಾಸ್ಕರ್ , ಖಜಾಂಚಿ ನಾಗರಾಜ ರಾವ್, ಜಂಟಿ ಕಾರ್ಯದರ್ಶಿ ಶಿವಶರಣಪ್ಪ ಮೇಟಿ ಹಾಗು ಎಲ್ಲ ಪದಾಧಿಕಾರಿಗಳು ಮತ್ತು ಕನ್ನಡ ಪಾಠಶಾಲೆಯ ಪ್ರಧಾನ ಪೋಷಕರಾದ ಶ್ರೀಯುತ. ಪ್ರವೀಣ್ ಕುಮಾರ್ ಶೆಟ್ಟಿ , ಅಧ್ಯಕ್ಷರು, ಅನಿವಾಸಿ ಭಾರತೀಯ ಸಮಿತಿ , ಯುಎಇ ಮತ್ತು ಶ್ರೀಯುತ. ಮೋಹನ್ ನರಸಿಂಹ ಮೂರ್ತಿ , ಉಪಾಧ್ಯಕ್ಷರು , ಅನಿವಾಸಿ ಭಾರತೀಯ ಸಮಿತಿ, ಯುಎಇ ಅವರು ಪಾಲ್ಗೊಂಡಿದ್ದರು.

ಇನ್ನು  ಭಾರತೀಯ ಭಾಷಾ ತಂತ್ರಾಂಶ ಬುಧವಾರ, ನವಂಬರ್ 08, 2023 9 ವರ್ಷಗಳ ಹಿಂದೆ 2014ರಲ್ಲಿ 40 ಮಕ್ಕಳಿಗೆ ಉಚಿತವಾಗಿ ವಾರಾಂತ್ಯದಲ್ಲಿ ಕನ್ನಡ ಕಲಿಸಲು ಆರಂಭಗೊಂಡ ಈ ಶಾಲೆಗೆ ಈ ಬಾರಿ ಆನ್ ಲೈನ್ ತರಗತಿಗಳಿಗೆ ಪ್ರವೇಶ ಕೋರಿ 850 ಮಕ್ಕಳು ತಮ್ಮ ಹೆಸರು ದಾಖಲಿಸಿರುವುದು ವಿಶೇಷ. ದೂರದ ದುಬೈನಲ್ಲಿ ಕನ್ನಡ ಪಾಠಶಾಲೆ ಹೇಗಪ್ಪಾ ಅಂತೀರಾ? ಇಲ್ಲಿದೆ ನೋಡಿ ಈ ಪಾಠಶಾಲೆಯ ಪುಟ್ಟ ಪರಿಚಯ. . .

ಉದ್ಯೋಗ ಅರಸಿ , ದೂರದ ಅರಬ್ ಸಂಯುಕ್ತ ಸಂಸ್ಥಾನಕ್ಕೆ ಬಂದಿರುವ ಕನ್ನಡಿಗರ ಮಕ್ಕಳಿಗೆ ” ಮಾತೃಭಾಷಾ ಸಾಕ್ಷರತೆ ಪ್ರತಿಯೊಬ್ಬ ಕನ್ನಡ ಕಂದನ ಹಕ್ಕು ” ಎಂಬ ಘೋಷಣೆಯೊಂದಿಗೆ ಕನ್ನಡ ಮಿತ್ರರು ಎಂಬ ಸಂಘಟನೆ 2014ರಲ್ಲಿ 40 ಮಕ್ಕಳೊಂದಿಗೆ ಆರಂಭಿಸಿತು. ಈ ಶಾಲೆ ವಾರಾಂತ್ಯದಲ್ಲಿ ಮಾತ್ರ ಕನ್ನಡ ಕಲಿಸುವ ಮೂಲಕ ಎಲ್ಲ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಯಲು ಅನುವು ಮಾಡಿಕೊಡುತ್ತಿದೆ. ಇಲ್ಲಿ ಕನ್ನಡ ವರ್ಣಮಾಲೆಯಿಂದ ಪ್ರಾರಂಭವಾಗಿ, ಕನ್ನಡ ಪದ , ವಾಕ್ಯ ರಚನೆಯ ತನಕ ಪ್ರಾಥಮಿಕ , ಮಾಧ್ಯಮಿಕ , ಪ್ರೌಢ ಎಂಬ ವಿವಿಧ ತರಗತಿಗಳಲ್ಲಿ ಮಕ್ಕಳ ಕಲಿಕಾ ಮಟ್ಟಕ್ಕೆ ಅನುಗುಣವಾಗಿ ಕನ್ನಡ ಕಲಿಸಲಾಗುತ್ತದೆ. ಅರಬ್ಬರ ನಾಡಲ್ಲಿ ಕನ್ನಡ ಕಲಿಸುವ ಕನ್ನಡ ಮಿತ್ರರ ಆಸೆಗೆ ಜೊತೆಯಾಗಿ ತಮ್ಮ ವಾರದ ಒಂದು ರಜೆ ದಿನವನ್ನು ಉಚಿತವಾಗಿ ಕನ್ನಡ ಕಲಿಸಲು ಸಮಯವನ್ನು ಮೀಸಲಿಟ್ಟಿರುವ ನಮ್ಮ ಕನ್ನಡತಿಯರೆ ಇಲ್ಲಿನ ಶಿಕ್ಷಕೀಯರು ಎಂಬುದು ಹೆಮ್ಮೆಯ ವಿಚಾರ. ಇನ್ನು ಇಲ್ಲಿನ ಮಕ್ಕಳಿಗೂ ಈ ಶಾಲೆ ಅಚ್ಚು ಮೆಚ್ಚು. ಕೇವಲ ಕನ್ನಡ ಮಾತನಾಡಲು ಬರುತ್ತಿದ್ದ ಮಕ್ಕಳು ಇಂದು ಕನ್ನಡ ಓದಲು ಬರೆಯಲು ಶುರು ಮಾಡಿರುವುದೇ ನಮ್ಮ ಶಾಲೆಗೆ ಸಂದ ನಿಜವಾದ ಗೆಲುವು ಅನ್ನುತ್ತಾರೆ ಕನ್ನಡ ಮಿತ್ರರು ಸಂಘಟನೆಯ ಅಧ್ಯಕ್ಷರಾದ ಶ್ರೀ. ಶಶಿಧರ್ ನಾಗರಾಜಪ್ಪ. ಕಾರ್ಯಕ್ರಮದಲ್ಲಿ ನೆರೆದ ಎಲ್ಲರನ್ನೂ ಕನ್ನಡ ಮಿತ್ರರು ಸಂಘಟನೆಯ ಸಂಚಾಲಕರಾದ ಶ್ರೀ . ಗಿರೀಶ್ ಕಲ್ಕುಂದ್ ಸ್ವಾಗತಿಸಿದರು. ಪಾಠಶಾಲೆ ನಡೆದು ಬಂದ ದಾರಿಯನ್ನು ಮತ್ತೋರ್ವ ಸಂಚಾಲಕ ಶ್ರೀ. ಯುವರಾಜ್ ಮತ್ತು ಕನ್ನಡ ಮಿತ್ರರ ಇತರ ಚಟುವಟಿಕೆ ಕುರಿತು ಶ್ರೀ ಸಂತೋಷ್ ವಿವರಿಸಿದರು.

ನೆರೆದ ಎಲ್ಲರಿಗೂ ಸಂಘಟನೆಯ ಮಾಧ್ಯಮ ಸಂಚಾಲಕ ಶ್ರೀ. ಬಾನುಕುಮಾರ್ ವಂದನಾರ್ಪಣೆ ಸಲ್ಲಿಸಿದರು. ಒಟ್ಟಿನಲ್ಲಿ ವಾರಾಂತ್ಯ ಬಂದರೆ ಮಕ್ಕಳ ಜೊತೆ ಹೊರಗೆ ಹೋಗಲು ಯೋಚಿಸುವ ಈ ದಿನಗಳಲ್ಲಿ, ತಮ್ಮ ಮಕ್ಕಳಿಗೆ ನಮ್ಮ ಮಾತೃ ಭಾಷೆ ಕನ್ನಡ ಕಲಿಸುವ ಮೂಲಕ ದುಬೈನ ಕನ್ನಡ ಪಾಠ ಶಾಲೆ, ಅಲ್ಲಿನ. ಪೋಷಕರು ಎಲ್ಲರಿಗೂ ಮಾದರಿಯಾಗಿರುವುದಂತು ನಿಜ.

Ashitha S

Recent Posts

ಮುದ್ದಾದ ಮಗುವಿನ ತಾಯಿಯಾದ ಯಾಮಿ ಗೌತಮ್; ಕಂದನಿಗೆ ಇಟ್ಟ ಹೆಸರೇನು ಗೊತ್ತಾ?

ಸ್ಯಾಂಡಲ್​ವುಡ್​ ನಟ ಗಣೇಶ್​​ ಅಭಿನಯದ ಉಲ್ಲಾಸ ಉತ್ಸಾಹ ನಟಿ ಯಾಮಿ ಗೌತಮ್​​ ಅವರು ಮೇ 10 ರಂದು ಗಂಡು ಮಗುವಿಗೆ…

14 mins ago

ಇರಾನ್​​ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊಹಮ್ಮದ್ ಮೊಖ್ಬರ್

ಇರಾನ್ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಭಾನುವಾರ ಪತನಗೊಂಡಿದ್ದು, ಇಬ್ರಾಹಿಂ ರೈಸಿ ಸಜೀವದಹನವಾಗಿದ್ದಾರೆ. ಹೀಗಾಗಿ ಇದೀಗ ಇಬ್ರಾಹಿಂ ರೈಸಿ ಸಾವಿನ ನಂತರ…

1 hour ago

ವಾಯುಭಾರ ಕುಸಿತ: ದ.ಕನ್ನಡಕ್ಕೆ ಎರಡು ದಿನ ಆರೆಂಜ್ ಅಲರ್ಟ್ ಘೋಷಣೆ

ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸಮುದ್ರ ತೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸಮುದ್ರಕ್ಕಿಳಿಯದಂತೆ ಮಂಗಳೂರಿನ ಮೀನುಗಾರರಿಗೆ…

1 hour ago

ಸುರಿಯುವ ಮಳೆಯಲ್ಲೇ ದೈವ ನರ್ತನ; ಗಮನ ಸೆಳೆದ ರವಿ ಪಡ್ಡಮ್ ಅವರ ಗಗ್ಗರಸೇವೆ

ಸುರಿಯುವ ಮಳೆಯನ್ನು ಲೆಕ್ಕಿಸದೆ ದೈವಾರಾಧನೆಯ ಶ್ರದ್ಧೆ ವ್ಯಕ್ತಪಡಿಸಿರುವ ವಿಡಿಯೋ ಒಂದು ಸದ್ಯ ವೈರಲ್ ಆಗುತ್ತಿದೆ. ಉಡುಪಿ ಜಿಲ್ಲೆಯ ಅಲೆವೂರಿನಲ್ಲಿ ಬಬ್ಬು…

1 hour ago

ಹೆಸ್ಕಾಂ ಲೈನ್ ಮೆನ್ ಕಾಂಟ್ರ್ಯಾಕ್ಟರ್‌ ನಿರ್ಲಕ್ಷ್ಯಕ್ಕೆ ಯುವಕ ಬಲಿ

ಏಕಾಏಕಿ ವಿದ್ಯುತ್ ಪ್ರವೇಶಿಸಿದ ಪರಿಣಾಮ ಹಾಗೂ ಹೆಸ್ಕಾಂ ಲೈನ್ ಮೆನ್ , ಕಾಂಟ್ರ್ಯಾಕ್ಟರ್‌ ನಿರ್ಲಕ್ಷ್ಯದಿಂದ ಯುವಕನೋರ್ವ ಸಾವನ್ನಪ್ಪಿದ ಘಟನೆ ಧಾರವಾಡ…

1 hour ago

ಪ್ರೀತಿಸಿದ ಹುಡುಗಿ ಆತ್ಮಹತ್ಯೆಗೈದ ಬೆನ್ನಲ್ಲೇ ಹುಡುಗನೂ ಆತ್ಮಹತ್ಯೆ

ಪ್ರೀತಿಸಿದ ಹುಡುಗಿ ಆತ್ಮಹತ್ಯೆಗೈದ ಬೆನ್ನಲ್ಲೇ ಹುಡುಗನೂ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಅತಿಕಾರಿಬೆಟ್ಟು ನಿವಾಸಿ 20 ವರ್ಷದ ಕಾರ್ತಿಕ್ ಪೂಜಾರಿ…

2 hours ago