ಬಂಟರ ಸಂಘ ಮುಂಬಯಿ ವಸಯಿ-ದಹಾಣು ಪ್ರಾದೇಶಿಕ ಸಮಿತಿಯ 13ನೇ ವಾರ್ಷಿಕ ಸ್ನೇಹ ಸಮ್ಮಿಲನ

ಮುಂಬಯಿ: 96 ವರ್ಷಗಳ ಇತಿಹಾಸವನ್ನು ಹೊಂದಿದ ಬಂಟರ ಸಂಘ ಮುಂಬಯಿಯ ಅಧಿಕಾರವನ್ನು ವಹಿಸಿಕೊಂಡ ಎಲ್ಲರೂ  ಸಂಘದ ಬೆಳವಣಿಗೆಗಾಗಿ ನಿರಂತರವಾಗಿ ದುಡಿದಿದ್ದಾರೆ. ಸಂಘವು ವಿವಿಧ ಯೋಜನೆಗಳನ್ನು ಕೈಗೊಂಡಿದ್ದು ಸಮಾಜ ಬಾಂಧವರು ಅದರ ಪ್ರಯೋಜನವನ್ನು ಪಡೆಯುತ್ತಿರುವರು. ಮುಂಬಯಿಯ ನಮ್ಮ ಸಂಘವು ಎಲ್ಲರ ಸಹಾಯದಿಂದ ಉನ್ನತ ಮಟ್ಟಕ್ಕೇರಿದ್ದು ಸಮಾಜ ಸೇವೆಯಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸುವಂತಾಗಿದೆ ಎಂದು ಬಂಟರ ಸಂಘದ ಅಧ್ಯಕ್ಷರಾದ  ಚಂದ್ರಹಾಸ. ಕೆ. ಶೆಟ್ಟಿ ಯವರು ತಿಳಿಸಿದರು.

ಬಂಟರ ಸಂಘ ಮುಂಬಯಿ ಯ ವಸಯಿ-ಡಹಾಣು ಪ್ರಾದೇಶಿಕ ಸಮಿತಿಯ 13ನೇವಾರ್ಷಿಕ ಸ್ನೇಹ ಸಮ್ಮಿಲನ  ಸಮಾರಂಭವು ಆ. 20ರಂದು ದಿ. ಕರ್ನಿರೆ ಶ್ರೀಧರ ಶೆಟ್ಟಿ ವೇದಿಕೆಯಲ್ಲಿ , ಪಾಲ್ಗರ್ ನ  ಫೆರ್ನ್ ಶೆಳ್ಟರ್ ರೆಸೋರ್ಟ್ ಧೇಖಲೆ ಇಲ್ಲಿ ಜರಗಿದ್ದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಚಂದ್ರಹಾಸ. ಕೆ. ಶೆಟ್ಟಿ ಯವರು ಸಂಘದ ಪೋವಾಯಿಯ ಶಿಕ್ಷಣ ಸಂಸ್ಥೆ ಮೂರನೇ ಸ್ಥಾನದಲ್ಲಿದೆ , ಹೋಟೇಲ್ ಮೆನೇಜ್ ಮೆಂಟ್ ಇನ್ಸ್ಟಿಟ್ಯೂಷನ್ ಮುಂಬಯಿಯಲ್ಲೇ ಮೂರನೆ ಸ್ಥಾನದಲ್ಲಿದೆ ಎನ್ನಲು ಅಭಿಮಾನವಾಗುತ್ತಿದೆ. ಬೋರಿವಲಿ ಶಿಕ್ಷಣ ಸಂಸ್ಥೆಯಲ್ಲಿ ಸುಮಾರು ಮೂರುವರೆ ಸಾವಿರ ಮಕ್ಕಳಿಗೆ ಕಲಿಯುವ ಅವಕಾಶವಿದೆ. ಈಗಾಗಲೇ ಮುಂದಿನ ವರ್ಷಕ್ಕೆ ಮಕ್ಕಳ ಪ್ರವೇಶವನ್ನು ಪ್ರಾರಂಭಿಸಲಾಗಿದೆ.

ಬಂಟ ಸಮಾಜ ಬಾಂಧವರು ಯಾವುದೇ ರೀತಿಯಲ್ಲಿ ಅಸಾಯಕರಾಗಬಾರದೆಂಬ ದೃಷ್ಟಿಯಿಂದ ವೃತ್ತಿಪರ ಸಾಲದಂತಹ ಹಲವಾರು ಯೋಜನೆಗಳನ್ನು ಬಂಟರ ಸಂಘ ವು ಹಮ್ಮಿಕೊಂಡಿದ್ದು ಸಹಾಯ ಪಡೆದ ನಮ್ಮವರು ಉನ್ನತ ಮಟ್ಟಕ್ಕೇರಿ ಬಂಟರ ಸಂಘ ಮುಂಬಯಿಗೆ ತಮ್ಮಿಂದಾದ ಸಹಾಯವನ್ನು ಮಾಡುತ್ತಿದ್ದಾರೆ. ಕಂಕಣ ಬಾಗ್ಯ, ಇದಲ್ಲದೆ ವೈದ್ಯಕೀಯ ನೆರವು, ವಿಧವಾ ಪಿಂಚಣಿ, ಶೈಕ್ಷಣಿಕ ಸಹಾಯ ಅಲ್ಲದೆ ಈ ಸಲ ಫ್ಯಾಮಿಲಿ ಅಡೋಪ್ಶನ್ ಮತ್ತು ಟೇಲೆಂಟ್ ಅಡೋಪ್ಶನ್ ಈ ಹೊಸ ಯೋಜನೆಯನ್ನು ಪ್ರಾರಂಭಿಸಿರುವೆವು.  ನಮ್ಮ ಸಮಾಜದ  ಗಣ್ಯರ, ದಾನಿಗಳ ಸಹಕಾರದಿಂದ ಸಂಘವು ಉನ್ನತ ಮಟ್ಟದ ಅಭಿವೃದ್ದಿಯನ್ನು ಕಾಣುತ್ತಿದ್ದು ಈ ಸಂಘದ ಅಧ್ಯಕ್ಷನಾಗಿರುವುದು ನನ್ನ ಸೌಭಾಗ್ಯ. ಬಂಟರ ಸಂಘ ಮುಂಬಯಿ ವಸಯಿ-ದಾಹಣು ಪ್ರಾದೇಶಿಕ ಸಮಿತಿಯು ಪರಿಸರದ ಸಮಾಜ ಬಾಂಧವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ ಇಂದಿನ ಕಾರ್ಯಕ್ರಮವನ್ನು ಬಹಳ ಅದ್ದೂರಿಯಿಂದ ನಡೆಸುತ್ತಿದ್ದು ಇಲ್ಲಿನ ಮಕ್ಕಳ ಪ್ರತಿಭೆ ಹಾಗೂ ಇಲ್ಲಿನ ಸಮಿತಿಯ ಎಲ್ಲಾ ಸದಸ್ಯರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತಿರುವೆನು ಎಂದರು.

ಬಂಟರ ಸಂಘದ ಅಧ್ಯಕ್ಷರಾದ  ಚಂದ್ರಹಾಸ. ಕೆ. ಶೆಟ್ಟಿ, ಮುಖ್ಯ ಅತಿಥಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಯವರು ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರೊಂದಿಗೆ ದೀಪ ಬೆಳಗಿಸಿ ಪಿಂಗಾರ ಅರಳಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆಯಿತ್ತರು. ವಿಜಯ ಶೆಟ್ಟಿ ಮೂಡುಬೆಳ್ಳೆ ಪ್ರಾರ್ಥನೆ ಮಾಡಿದರು. ವಸಯಿ-ದಹಾಣು ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷರಾದ  ಹರೀಶ್ ಪಾಂಡು ಶೆಟ್ಟಿವರು ಉಪಸ್ಥಿತರಿದ್ದ ಎಲ್ಲರನ್ನು ಅತ್ಮೀಯವಾಗಿ ಸ್ವಾಗತಿಸಿದರು.

ಪರಿಸರದ ಪ್ರಸಿದ್ಧ ಉದ್ಯಮಿ, ಕೊಡುಗೈ ದಾನಿ, ಅನ್ನದಾತ, ಜನರ ಕಷ್ಟಗಳಿಗೆ ಸ್ಪಂದಿಸುವ ಉತ್ತಮ ಸಂಘಟಕ ಶಶಿಧರ. ಕೆ. ಶೆಟ್ಟಿ ಇನ್ನಂಜೆ, ಯವರನ್ನು ಉತ್ತಮ ಸಂಘಟಕ ಬಿರುದು ನೀಡಿ ಸನ್ಮಾನಿಸಲಾಯಿತು. ಪತ್ನಿ ಶಶಿಕಲಾ ಶಶಿಧರ ಶೆಟ್ಟಿ ಮತ್ತು ಪುತ್ರಿ ಸೃಷ್ಟಿ ಶಶಿಧರ ಶೆಟ್ಟಿ ಯವರೂ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು. ಅಲ್ಲದೆ ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷ ಪದ್ಮನಾಭ. ಎಸ್. ಪಯ್ಯಡೆ ,  ವಸಯಿ ದಹಾಣು ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಧ್ಯಕ್ಷರಾದ ಜಯಂತ್ ಆರ್ ಪಕ್ಕಳ ಮತ್ತು ರೂಪಾ ಪಕ್ಕಳ ದಂಪತಿ, ಸಮಾಜ ಸೇವಕ ಆನಂದ ಶೆಟ್ಟಿ ಮತ್ತು ನಿಖಿತಾ ಶೆಟ್ಟಿ ದಂಪತಿ ಪುತ್ರ ನಿವಾಸ್ ಶೆಟ್ಟಿ (ಪರಮೌಂಟ್ ಹೆಲ್ತ್ ಸರ್ವಿಸ್ ) ಮಸನ್ಮಾನಿತರಾದ ಸಮಿತಿಯ ಉತ್ತಮ ಕಾರ್ಯಕರ್ತ ನವೀನ್ ಶೆಟ್ಟಿ ಪಳ್ಳಿ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಪತ್ರವನ್ನು ಪ್ರವೀಣ್ ಶೆಟ್ಟಿ ಕಣಂಜಾರ್ ಮತ್ತು ವಿಜಯ ಪಿ ಶೆಟ್ಟಿ ಕುತ್ತೆತ್ತೂರು ವಾಚಿಸಿದರು.
ಕಾರ್ಯದರ್ಶಿ ಜಗನಾಥ್ ಡಿ ಶೆಟ್ಟಿ ಪಳ್ಳಿಯವರು ಸಮಿತಿಯ ಕಾರ್ಯಚಟುವಟಿಕೆಗಳ ಬಗ್ಗೆ, ಕೋರೋನಾ ಸಂಧರ್ಭದಲ್ಲಿ ಸಮಿತಿಯು ಮಾಡಿದ ಸೇವೆ ಬಗ್ಗೆ ಮಾಹಿತಿಯಿತ್ತರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಷಾ ಶ್ರೀಧರ ಶೆಟ್ಟಿಯವರು ಮಹಿಳಾ ವಿಭಾಗದ ಚಟುವಟಿಕೆಗಳ ಮಾಹಿತಿಯಿತ್ತರು.
ಗೌರವ ಅತಿಥಿಯಾಗಿ ಶ್ರೀಮತಿ ರಜನಿ ಗೋವಿಂದ ಶೆಟ್ಟಿ, (ಮೇಯರ್ ಸಿಲ್ವಸಾ ಮುನ್ಸಿ ಪಾಲ್ಟಿ ಕಾರ್ಪೋರೇಶನ್ ) ಆಗಮಿಸಲಿರುವರು, ಅತಿಥಿ ಗಳಾದ ತೋನ್ಸೆ ಆನಂದ ಶೆಟ್ಟಿ(ಡೈರೆಕ್ಟರ್ ಒರ್ಗನಿಕ್ ಇಂಡಸ್ಟ್ರಿಸ್ ಲಿಮಿಟೆಡ್ ), ಕರ್ನಿರೆ ವಿಶ್ವನಾಥ ಶೆಟ್ಟಿ(ಉಪಾಧ್ಯಕ್ಷರು ಜಾಗತಿಕ ಬಂಟರ ಸಂಘಗಳ ಒಕ್ಕೂಟ) ಶಶಿಧರ ಶೆಟ್ಟಿ ಬರೋಡ (ಡೈರೆಕ್ಟರ್ ಶಶಿ ಕ್ಯಾಟರಿಂಗ್ ಸರ್ವಿಸ್ ಪ್ರವೇಟ್ ಲಿಮಿಟೆಡ್ ), ಡಾ.  ಪಿ. ವಿ. ಶೆಟ್ಟಿ, (ಕಾರ್ಯಧ್ಯಕ್ಷರು ಬೋರಿವಲಿ ಎಜುಕೇಶನ್ ಸಮಿತಿ ಬಂಟ್ಸ್ ಸಂಘ ಮುಂಬಯಿ),  ಉಳ್ತುರು ಮೋಹನ್ ದಾಸ್ ಶೆಟ್ಟಿ (ಕಾರ್ಯಧ್ಯಕ್ಷರು ಮಾತೃ ಭೂಮಿ ಕ್ರೆಡಿಟ್ ಕೋ. ಓಪರ್ ಸೊಸೈಟಿ ಲಿಮಿಟೆಡ್ ),  ಪ್ರವೀಣ್ ಭೋಜ ಶೆಟ್ಟಿ (ಕಾರ್ಯದರ್ಶಿಮಾತ್ರ ಭೂಮಿ ಕ್ರೆಡಿಟ್ ಕೋ. ಓಪರ್ ಸೊಸೈಟಿ ಲಿಮಿಟೆಡ್ ),  ರವಿಕಾಂತ್ ಶೆಟ್ಟಿ ಅಂಕಳೇಶ್ವರ್, (ಡೈರೆಕ್ಟರ್ ಹಿಟಚ್ ಎಲೆಕ್ಟ್ರಿಫಿಕೇಶನ್ ಪ್ರವೇಟ್ ಲಿಮಿಟೆಡ್ ), ಅಜಿತ್ ಶೆಟ್ಟಿ ಅಂಕಲೇಶ್ವರ್ (ಡೈರೆಕ್ಟರ್ ಮಾತಾಶ್ರೀ ಹೋಸ್ಪಿಲಿಟಲಿ ಸರ್ವಿಸ್ ),  ಆಶಾ ಮನೋಹರ್ ಹೆಗ್ಡೆ(ಮಾಜಿ ಕಾರ್ಯಧ್ಯಕ್ಷೆ ಮಹಿಳಾ ವಿಭಾಗ ಬಂಟರ ಸಂಘ ಮುಂಬಯಿ)  ಬಂಟರ ಸಂಘದ ಉಪಾಧ್ಯಕ್ಷರಾದ  ರತ್ನಾಕರ ಶೆಟ್ಟಿ ಮುಂಡ್ಕೂರು, ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ಹರೀಶ್ ಡಿ. ಶೆಟ್ಟಿ, ಜೊತೆ ಕಾರ್ಯದರ್ಶಿ  ಇಂದ್ರಾಳಿ ದಿವಾಕರ ಶೆಟ್ಟಿ, ಜೊತೆ ಕೋಶಾಧಿಕಾರಿ ಮುಂಡಪ್ಪ ಎಸ್. ಪಯ್ಯಡೆ, ಪಶ್ಚಿಮ ವಲಯ ಪ್ರಾದೇಶಿಕ ಸಮಿತಿಯ ಸಮನ್ವಯಕರಾದ ಶಶಿಧರ ಕೆ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ಉಮಾ ಕೃಷ್ಣ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಾಗರ್ ಡಿ. ಶೆಟ್ಟಿ ಸನ್ಮಾನಿತರಾದ ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷ ಪದ್ಮನಾಭ. ಎಸ್. ಪಯ್ಯಡೆ ,  ವಸಯಿ ದಹಾಣು ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಧ್ಯಕ್ಷರಾದ ಜಯಂತ್ ಆರ್ ಪಕ್ಕಳ, ಸಮಾಜ ಸೇವಕ ಆನಂದ ಶೆಟ್ಟಿ (ಪರಮೌಂಟ್ ಹೆಲ್ತ್ ಸರ್ವಿಸ್ ) ಮತ್ತು ಸಮಿತಿಯ ಉತ್ತಮ ಕಾರ್ಯಕರ್ತ ನವೀನ್ ಶೆಟ್ಟಿ ಪಳ್ಳಿ , ಪ್ರಾದೇಶಿಕ ಸಮಿತಿಯ ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ಗುರ್ಮೆ ಹರೀಶ್ ಶೆಟ್ಟಿ, ಸಂಚಾಲಕ ರಘುರಾಮ ರೈ, ಉಪ ಕಾರ್ಯಾಧ್ಯಕ್ಷರುಗಳಾದ ಪ್ರವೀಣ್ ಶೆಟ್ಟಿ ಕಣಂಜಾರ್ ಮತ್ತು ಮಂಜುನಾಥ ಎನ್ ಶೆಟ್ಟಿ ಕೊಡ್ಲಾಡಿ,  ಕಾರ್ಯದರ್ಶಿ ಜಗನಾಥ್ ಡಿ ಶೆಟ್ಟಿ ಪಳ್ಳಿ, ಕೋಶಾಧಿಕಾರಿ ವಿಜಯ. ಎಮ್ ಶೆಟ್ಟಿ, ಜೊತೆ ಕಾರ್ಯದರ್ಶಿ ನಾರಾಯಣ ಶೆಟ್ಟಿ, ಜೊತೆ ಕೋಶಾಧಿಕಾರಿ ರತೀಶ್ ಶೆಟ್ಟಿ ವಸಯಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಉಷಾ ಶ್ರೀಧರ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ,  ಕಾರ್ಯಕ್ರಮ ಸಮಿತಿಯ  ಕಾರ್ಯಧ್ಯಕ್ಷ ಸುಪ್ರೀತ್ ಶೆಟ್ಟಿ ನೀರೆ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷೆ ಜಯಾ ಅಶೋಕ್ ಶೆಟ್ಟಿ, ಸದಸ್ಯತನ ನೋಂದಣಿಯ ಕಾರ್ಯಧ್ಯಕ್ಷ ನವೀನ್ ಶೆಟ್ಟಿ ಪಳ್ಳಿ, ಕ್ರೀಡಾ ಸಮಿತಿಯ ಕಾರ್ಯಧ್ಯಕ್ಷ  ಅರುಣ್ ಶೆಟ್ಟಿ, ವಿವಾಹ ನೋಂದಣಿ ಸಮಿತಿಯ ಕಾರ್ಯಧ್ಯಕ್ಷ  ತಾರನಾಥ ಶೆಟ್ಟಿ, ಕೇಟರಿಂಗ್ ಸಮಿತಿಯ ಕಾರ್ಯಧ್ಯಕ್ಷ  ದಯಾನಂದ ಬಿ ಶೆಟ್ಟಿ, ಅರೊಗ್ಯ ಸಮಿತಿಯ ಕಾರ್ಯಧ್ಯಕ್ಷ  ಸಾಯಿನಾಥ್ ಶೆಟ್ಟಿ, ಮಾಹಿತಿ ಮತ್ತು ತಂತ್ರಜ್ನಾನ ಸಮಿತಿಯ ಕಾರ್ಯಧ್ಯಕ್ಷ  ಆಶಿಶ್ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಸಮಿತಿಯ ಕಾರ್ಯಧ್ಯಕ್ಷ  ವಿಜಯ ಪಿ ಶೆಟ್ಟಿ ಕುತ್ತೆತ್ತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಂಬಯಿ ಬಂಟರ ಸಂಘ ಯುವ ವಿಭಾಗ ಆಯೋಜಿಸಿದ ಆಕಾಂಕ್ಷ ಕಾರ್ಯಕ್ರಮ ದಲ್ಲಿ. ಪ್ರಾದೇಶಿಕ ಸಮಿತಿಯ ಯುವ ವಿಭಾಗದ ಸದಸ್ಯರು ಭಾಗವಹಿಸಿ ಸಂಸ್ಥೆಗೆ ಹಲವು ಪ್ರಶಸ್ತಿ ಗಳನ್ನು ತಂದ ಮನಿಷಾ ವಸಂತ್ ಶೆಟ್ಟಿ, ಪ್ರಥ್ವಿರಾಜ್ ಶ್ರೀಧರ್ ಶೆಟ್ಟಿ ಇವರ ಅನುಪಸ್ಥಿತಿಯಲ್ಲಿ ಇವರ ತಾಯಿ ಉಷಾ ಶ್ರೀಧರ ಶೆಟ್ಟಿ, ಶ್ವೇತಾ ಜಗನಾಥ್ ಶೆಟ್ಟಿ ಮತ್ತು ಶ್ರಾವ್ಯ ಸತೀಶ್ ಶೆಟ್ಟಿ ಇವರನ್ನು ಗೌರವಿಸಲಾಯಿತು. ಬಂಟರ ಸಂಘ ಮುಂಬಯಿ ಇದರ ಮುಖವಾಣಿ, ಬಂಟರವಾಣಿ ಆಯೋಜಿಸಿದ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಸಂಸ್ಥೆಗೆ ಪ್ರಶಸ್ತಿ ತಂದ ಸಂಸ್ಥೆಯ ಚಿಣ್ಣರಾದ ಅವಿಷ್ ವಿಜಯ್ ಶೆಟ್ಟಿ , ಸಾನ್ವಿ ಸಂತೋಷ್ ಶೆಟ್ಟಿ , ಆರಾವ್ ರವೀಂದ್ರ ಶೆಟ್ಟಿ, ಅನಿಶ್ ಸತೀಶ್ ಶೆಟ್ಟಿ ಅಂಷ್ ರಮೇಶ್ ಶೆಟ್ಟಿ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಗೈದ ಸಮಿತಿಯ ಸದಸ್ಯರ ಮಕ್ಕಳಿಗೆ ಕರ್ನಿರೆ ಶ್ರೀಧರ್ ಶೆಟ್ಟಿ ಯವರ ಸ್ಮರಣರ್ಥಕವಾಗಿ ಅವರ ಧರ್ಮಪತ್ನಿ ಉಷಾ ಶ್ರೀಧರ್ ಶೆಟ್ಟಿ ಯವರ ಮೂಲಕ ಸಾಧನೆ ಗೈದ ಮಕ್ಕಳನ್ನು ಗೌರವಿಸಲಾಯಿತು. C. A. ಯಲ್ಲಿ ಉತ್ತಮ ಅಂಕದೊಂದಿಗೆ ಪಾಸ್ ಆದ ಸಾಯಿರಾಜ್ ಬಾಲಕೃಷ್ಣ ಶೆಟ್ಟಿ ಮತ್ತು IT ಶಿಕ್ಷಣದಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿ ಸಾಥ್ವಿಕ್ ಪ್ರಕಾಶ್ ಶೆಟ್ಟಿ ಗೌರವಿಸಲಾಯಿತು. ಡಾ. ಪಿ. ವಿ. ಶೆಟ್ಟಿಯವರು ಈ ಸಂದರ್ಭದಲ್ಲಿ ಸಹಾಯ ಹಸ್ತ ನೀಡಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿ ವಸಯಿ-ದಾಹಣು ಪ್ರಾದೇಶಿಕ ಸಮಿತಿಯ 13ನೇ ವಾರ್ಷಿಕ ಸ್ನೇಹ ಸಮ್ಮಿಲನ ಸಮಾರಂಭವು ದಿ. ಕರ್ನಿರೆ ಶ್ರೀಧರ ಶೆಟ್ಟಿ ವೇದಿಕೆಯಲ್ಲಿ ನಡೆಯುತ್ತಿದೆ. ಇವತ್ತಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಭೆಗಳನ್ನು ನೋಡಿದಾಗ ಬಹಳ ಸಂತೋಷವಾಗುತ್ತಿದೆ. ಪ್ರತಿಯೊಂದು ಕಾರ್ಯಕ್ರಮವು ತುಳು ನಾಡಿನ ಸಂಸ್ಕೃತಿಯನ್ನು ಅಧಾರವಾಗಿಟ್ಟುಕೊಂಡಿದೆ. ಈ ಪರಿಸರದಲ್ಲಿ ಬಹಳ ಸಂಖ್ಯೆಯಲ್ಲಿ ಜನ ಸೇರಿದ್ದು ಅಭಿನಂದನೀಯ. ಅಕ್ಟೋಬರ 28 ಮತ್ತು 29ಕ್ಕೆ ಉಡುಪಿ ಅಜ್ಜರಕಾಡಿನಲ್ಲಿ ಕ್ರೀಡಾ ಕೂಟ ಮತ್ತು ವಿಶ್ವ ಭಂಟರ ಸಮ್ಮಿಲನ ನಡೆಯಲಿದ್ದು ಎಲ್ಲರೂ ಆ ಸಮಾರಂಭದಲ್ಲಿ ಬಾಗವಹಿಸಬೇಕು. ನಮ್ಮ ಎಷ್ಟೇ ಸಂಘಟನೆ ಇರಲಿ ನಾವೆಲ್ಲರೂ ಬಂಟರು ಎಂಬ ಉದ್ದೇಶ ಮತ್ತು ಅಭಿಮಾನ ನಮ್ಮಲ್ಲಿರಲಿ ಎಂದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿ ಮಾತನಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇವತ್ತಿನ ವೇದಿಕೆಗೆ ನನ್ನ ಸಹೋದರನ ಹೆಸರಿಟ್ಟು ಅವರನ್ನು ನೆನಪಿಸಿಕೊಂಡಿದ್ದೀರಿ. ಕೃತಜ್ನತೆಗಳು. ಐಕಳ ಹರೀಶ್ ಶೆಟ್ಟಿಯವರೊಂದಿಗೆ ನಾವು ಈ ಪ್ರಾದೇಶಿಕ ಸಮಿತಿಯನ್ನು ಸ್ಥಾಪಿಸಿದಾಗ ವಸಯಿ ಪರಿಸರದ ಜನರು ಸಂತೋಷ ವ್ಯಕ್ತಿಪಡಿಸಿದ್ದು, ಈಗ ಬಹಳ ಪ್ರಗತಿಯಾಗಿದೆ. ಮಹಿಳಾ ವಿಭಾಗದವರನ್ನು ಈ ಸಂದರ್ಭದಲ್ಲಿ ಅಭಿನಂದಿಸಬೇಕಾಗಿದೆ. ಇಲ್ಲಿನ ನಮ್ಮ ಸಮಾಜದ ಬಡ ಮಕ್ಕಳಿಗೆ ಪ್ರಯೋಜನ ಕಾರಿಯಾಗಲು ವಸಯಿ – ಡಹಾಣು ಪರಿಸರದಲ್ಲಿ ನಮ್ಮ ಸಂಘದ ಶಿಕ್ಷಣ ಸಂಸ್ಥೆ ಸ್ಥಾಪನೆಯಾಗಲಿ ಎಂದರು.

ಇನ್ನು ಮೇಯರ್ ಸಿಲ್ವಸಾ ಮುನ್ಸಿ ಪಾಲ್ಟಿ ಕಾರ್ಪೋರೇಶನ್ ಇದರ ಶ್ರೀಮತಿ ರಜನಿ ಗೋವಿಂದ ಶೆಟ್ಟಿ ಮಾತನಾಡಿ, ಇಂದು ನನ್ನ ಪಾಲಿಗೆ ಶುಭ ದಿನ. ನಮ್ಮ ಸಮಾಜದ ಅನೇಕ ಬಾಂಧವರನ್ನು ಇಲ್ಲಿ ಕಂಡಿದ್ದು ಮಿನಿ ಮಂಗಳೂರಿನಂತೆ ಅನುಭವ ವಾಗುತ್ತಿದೆ. ಇಲ್ಲಿನ ಮಹಿಳೆಯರು ನನ್ನ ಮೇಲೆ ತೋರಿಸಿದ ಪ್ರೀತಿಗೆ ಅಭಾರಿಯಾಗಿದ್ದೇನೆ. ನಮ್ಮ ಜಾತಿ ಬಾಂಧವರು ಇಂದು ಎಲ್ಲಾ ಕ್ಷೇತ್ರದಲ್ಲಿದ್ದು ತುಳುವರು ಮುಖ್ಯವಾಗಿ ಬಂಟರು ಎಲ್ಲಿ ಹೋದರೂ ಸಕ್ಕರೆಯಂತೆ ಎಲ್ಲರೊಂದಿಗೆ ಬೆರೆಯುತ್ತಾರೆ. ಮಕ್ಕಳ ಪ್ರತಿಭೆಯನ್ನು ನೋಡಿದಾಗ ಅವರಲ್ಲಿ ನಮ್ಮ ನಾಡಿನ ಕಲೆಯನ್ನು ಉಳಿಸುವ ಎಲ್ಲಾ ಗುಣಗಳು ಎತ್ತಿ ತೋರುತ್ತದೆ. ನನ್ನ ರಾಜಕೀಯ ಬೆಳವಣಿಗೆಗೆ ನನ್ನ ಪತಿ ಕಾರಣ. ನನ್ನ ಪತಿ ಸಿಲ್ವಾಸ ಪರಿಸರದಲ್ಲಿ ನನ್ನ ಪತಿ ಜನಪ್ರಿಯರಾಗಿದ್ದು ಅವರಿಂದಾಗಿ ನಾನು ರಾಜಕೀಯದಲ್ಲಿ ಉನ್ನತ ಮಟ್ಟಕ್ಕೇರಿದ್ದೇನೆ ಎಂದರು.

ಬೋರಿವಲಿ ಎಜುಕೇಶನ್ ಸಮಿತಿ ಬಂಟ್ಸ್ ಸಂಘ ಇದರ ಕಾರ್ಯಧ್ಯಕ್ಷರಾದ ಡಾ. ಪಿ. ವಿ. ಶೆಟ್ಟಿ ಮಾತನಾಡಿ, ಬೋರಿವಲಿ ಶಿಕ್ಷಣ ಸಂಸ್ಥೆಯ ಕೆಲಸ ಮುಗಿದ ಕೂಡಲೇ ವಸಯಿ-ದಾಹಣು ಪರಿಸರದಲ್ಲಿ ಬಂಟರ ಸಂಘ ಮುಂಬಯಿ ಯ ನೂತನ ಶಿಕ್ಷಣ ಸಂಸ್ಥೆ ಸ್ಥಾಪನೆ ಬಗ್ಗೆ ಪ್ರಯತ್ನಿಸೋಣ. ಅದಕ್ಕಾಗಿ ಈಗಲೇ ಸೂಕ್ತ ಜಾಗವನ್ನು ಮೊದಲೇ ಪಡಕೊಳ್ಳ ಬೇಕಾಗಿದೆ ಎಂದರು.

ಮಾತ್ರ ಭೂಮಿ ಕ್ರೆಡಿಟ್ ಕೋ. ಓಪರ್ ಸೊಸೈಟಿ ಲಿಮಿಟೆಡ್ ಇದರ ಪ್ರವೀಣ್ ಭೋಜ ಶೆಟ್ಟಿ ಮಾತನಾಡಿ, ಹಿರಿಯರು ಸ್ಥಾಪಿಸಿದ ಸಂಸ್ಥೆ ನೂರು ವರ್ಷಗಳನ್ನು ಸಮೀಪಿಸುತ್ತಿದ್ದು ಹಿರಿಯರ ಕೊಡುಗೆ ಯನ್ನು ಮರೆಯುವಂತಿಲ್ಲ. ನಮ್ಮ ಸಮಾಜದ ಮಕ್ಕಳು ಶಿಕ್ಷಣದಲ್ಲಿ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ನಮ್ಮ ಶಿಕ್ಷಣ ಸಂಸ್ಥೆಗಳು ಉತ್ತಮ ಕೆಲಸವನ್ನು ಮಾಡುತ್ತಿದೆ. ಹಲವಾರು ಯೋಜನೆಗಳನ್ನು ನಮ್ಮ ಸಂಘವು ಹಮ್ಮಿಕೊಂಡಿದ್ದು ಕೆಲವು ಕೋಟಿ ರೂಪಾಯನ್ನು ನಮ್ಮ ಸಮಾಜ ಬಾಂಧವರಿಗಾಗಿ ಸಂಘ ಪ್ರತೀ ವರ್ಷ ಖರ್ಚು ಮಾಡುತ್ತಿದ್ದು ಇದರ ಪ್ರಯೋಜನವನ್ನು ಪಡೆಯಬೇಕು ಎಂದರು.

 

Ashitha S

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

7 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

7 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

7 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

7 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

9 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

9 hours ago