ಹೊರನಾಡ ಕನ್ನಡಿಗರು

” ಸಂಗೀತ ಸೌರಭ -2021″ ಪ್ರಯುಕ್ತ ” ಗಲ್ಫ್ ಗಾನ ಕೋಗಿಲೆ”

 ದುಬೈ : ಪ್ರಸಕ್ತ ಸಾಂಕ್ರಾಮಿಕ ರೋಗದಿಂದಾಗಿ ಮತ್ತು ವೇದಿಕೆಯಲ್ಲಿ ಕಾರ್ಯಕ್ರಮಗಳನ್ನು ನಡೆಸುವ ನಿರ್ಬಂಧಗಳ ನಡುವೆ, ಕನ್ನಡಿಗರು ದುಬೈ ಸಂಘವು “ಸಂಗೀತ ಸೌರಭ – ೨೦೨೧ ” ರ ಸಂದರ್ಭದಲ್ಲಿ “ಗಲ್ಫ್ ಗಾನ ಕೋಗಿಲೆ” ಎಂಬ ಹಾಡುವ ಸ್ಪರ್ಧೆಯನ್ನು ಮಕ್ಕಳಿಗಾಗಿ ನಡೆಸಲು ಒಂದು ವಿಶಿಷ್ಟವಾದ ಪ್ರಸ್ತಾಪವನ್ನು ತಂದಿತಲ್ಲದೆ ಅದನ್ನು ಇತರ GCC ಕರ್ನಾಟಕ ಸಂಘದ ಬೆಂಬಲದೊಂದಿಗೆ ದೊಡ್ಡ ಮಟ್ಟದಲ್ಲಿ ಯಶಸ್ಸನ್ನಾಗಿ ಮಾಡಲು ಹಲವು ಸಭೆಗಳನ್ನು ನಡೆಸಿ ಅಂತಿಮವಾಗಿ 2 ವಯೋಮಾನದ ( ಜೂನಿಯರ್ ಹಾಗು ಸೀನಿಯರ್) ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಲಾಗಿದೆ.

ಯುಎಇ, ಓಮನ್, ಬಹರೈನ್, ಕುವೈತ್ ಮತ್ತು ಕತಾರ್ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ GCC ದೇಶಗಳಾಗಿದ್ದು, ಕನ್ನಡಿಗರು ದುಬೈ ಯೊಂದಿಗೆ ಕೈ ಜೋಡಿಸಿ ಈ ವಿಶೇಷ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪಣತೊಟ್ಟಿದ್ದರುವುದು ಶ್ಲಾಘನೀಯವಾಗಿದೆ.

ಈ ಕಾರ್ಯಕ್ರಮವು ೧೧ ನೇ ಸೆಪ್ಟೆಂಬರ್ ೨೦೨೧ ರಿಂದ ಆರಂಭವಾಗಿ ( ಪ್ರತಿ ಶುಕ್ರವಾರ ಮತ್ತು ಶನಿವಾರ) ಹಲವು ಸುತ್ತಿನ ಸ್ಪರ್ಧೆಯ ( ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ಸ್) ಬಳಿಕ ಅಂತಿಮ ಸುತ್ತಿನ ಹಣಾಹಣಿಯು ೧೨ ನೇ ನವೆಂಬರ್ ೨೦೨೧ ರಂದು ಆಯೋಜಿಸಲಾಗಿರುವ ಕರ್ನಾಟಕ ರಾಜ್ಯೋತ್ಸವ’ ೨೦೨೧ ರಂದು ಅಂತಿಮಗೊಳ್ಳಲಿದೆ ಹಾಗೂ ಅಂತಿಮ ಸುತ್ತಿನ ವಿಜೇತರು “ಗಲ್ಫ್ ಗಾನ ಕೋಗಿಲೆ” ಬಿರುದಿನ ಜೊತೆಗೆ ಟ್ರೋಫಿ ಮತ್ತು ನಗದು ಪುರಸ್ಕಾರವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ ಮತ್ತು ರನ್ನರ್ ಅಪ್ ಪ್ರಶಸ್ತಿ, ಇನ್ನಿತರ ಪ್ರಶಸ್ತಿಗಳನ್ನು ನೀಡಲಾಗುತ್ತದೆ

ಈ ವಿಶೇಷ ಕಾರ್ಯಕ್ರಮದ ಪ್ರಯುಕ್ತ ಕನ್ನಡಿಗರು ದುಬೈ ಹಾಗು GCC ಕನ್ನಡ ಸಂಘಟನೆಗಳ ಅನುಮೋದನೆಯೊಂದಿಗೆ ಕಾರ್ಯಕ್ರಮದ ಸಾಂಕೇತಿಕ ಉದ್ಘಾಟನೆಯನ್ನು ದಿನಾಂಕ ೧೦ ನೇ ಸೆಪ್ಟೆಂಬರ್ ೨೦೨೧ ರ ಗಣೇಶ ಚತುರ್ಥಿಯ ಶುಭದಿನದಂದು ಯಶಸ್ವಿಯಾಗಿ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯ ನಂತರ GCC ಪ್ರಾಂತ್ಯದ ಮಕ್ಕಳಿಂದ ದೇವರನಾಮ ಹಾಡಿಸಲಾಯಿತು ಮತ್ತು ಕಾರ್ಯಕ್ರಮಕ್ಕೆ ಭಾಗವಹಿಸಿದ್ದ ಎಲ್ಲರು ದೇವರ ಕೃಪೆಗೆ ಪಾತ್ರರಾದರು.

ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀ . ನಾಗೇಂದ್ರ ಪ್ರಸಾದ್ , ನಟ , ಖ್ಯಾತ ಸಂಗೀತ ಬರಹಗಾರ, ಡೈರೆಕ್ಟರ್ ,ಸಂಗೀತ ನಿರ್ಮಾಪಕರು ಉಪಸ್ಥಿತರಿದ್ದರು ಮತ್ತು ಮಕ್ಕಳಿಗೆ ಸಂಗೀತದ ಮಹತ್ವವನ್ನು ತಿಳಿಸಿ, ಸ್ಪೂರ್ತಿದಾಯಕ ಮಾತುಗಳನ್ನು ಹೇಳಿದರು ಮತ್ತು ಎಲ್ಲಾ ಮಕ್ಕಳಿಗೆ ಶುಭವನ್ನು ಕೋರಿದರು. ಇನ್ನೊಬರು ಮುಖ್ಯ ಅತಿಥಿಯಾಗಿ ಈ ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಾದ ಶ್ರೀ. ಮೊಹಮ್ಮದ್ ಮುಸ್ತಾಫ್ಹ ರವರು, ಮ್ಯಾನೇಜಿಂಗ್ ಡೈರೆಕ್ಟರ್ ಆಫ್ EMSQUARE ಮತ್ತು ಅವರ ಧರ್ಮಪತ್ನಿ ಶ್ರೀಮತಿ. ಅಸ್ಮಾ ಮುಸ್ತಾಫ್ಹ ರವರು ಉಪಸ್ಥಿತರಿದ್ದರು ಹಾಗು ಮಕ್ಕಳಿಗೆ ಹಿತವಚನಗಳ್ನು ಹೇಳಿ ಕಾರ್ಯಕ್ರಮದ ಯಶಸ್ವಿಗೆ ಹಾರೈಸಿದರು.

ಈ ಕಾರ್ಯಕ್ರಮದ ಮುಖ್ಯ ತೀರ್ಪುಗಾರರಾದ ಖ್ಯಾತ ಕನ್ನಡ ಸಿನಿಮಾ ಹಿನ್ನೆಲೆ ಗಾಯಕಿ ಶ್ರೀಮತಿ. ಮಾನಸ ಹೊಳ್ಳ ರವರು, ಮತ್ತಿಬ್ಬರು ತೀರ್ಪುಗಾರರಾಗಿ ಯುವ ಕನ್ನಡ ಸಿನಿಮಾ ಹಿನ್ನೆಲೆ ಗಾಯಕರುಗಳಾದ ಚಿನ್ಮಯ್ ಅತ್ರೆಯಸ್ ಮತ್ತು ಆಕಾಂಶ ಬಾದಾಮಿ ಅವರು ಉಪಸ್ಥಿತರಿದ್ದರು ಹಾಗು ಕಾರ್ಯಕ್ರಮದ ಪ್ರಾರಂಭದಿಂದ ಕೊನೆಯವರೆಗೂ ತೀರ್ಪುಗಾರರಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿ, ಸ್ಪರ್ಧಿಗಳಿಗೆ ಹಾರೈಸಿದರು.

ಈ ಕಾರ್ಯಕ್ರಮದ ಬೆನ್ನೆಲುಬಾಗಿ ಕನ್ನಡಿಗರು ದುಬೈ ಸಂಘದ ಶ್ರೀಮತಿ ಉಮಾ ವಿದ್ಯಾಧರ್ (ಅಧ್ಯಕ್ಷರು), , ಶ್ರೀ ಮಲ್ಲಿಕಾರ್ಜುನ ಗೌಡ (ಮಾಜಿ ಅಧ್ಯಕ್ಷರು), ಶ್ರೀ ವೀರೇಂದ್ರ ಬಾಬು (ಮಾಜಿ ಅಧ್ಯಕ್ಷರು), ಶ್ರೀ ಸದನ್ ದಾಸ್ (ಮಾಜಿ ಅಧ್ಯಕ್ಷರು), , ಶ್ರೀ ವಿನೀತ್ ರಾಜ್ (ಉಪಾಧ್ಯಕ್ಷರು), ಶ್ರೀ ಅರುಣ್ ಕುಮಾರ್ (ಸಾಂಸ್ಕ್ರತಿಕ ಕಾರ್ಯಕ್ರಮದ ಮುಖ್ಯ ಉಸ್ತುವಾರಿ), ಶ್ರೀ ದೀಪಕ್ ಸೋಮಶೇಖರ್ (ತಾಂತ್ರಿಕ ಮತ್ತು ಮಾಧ್ಯಮ ಸಲಹೆಗಾರ) ಶ್ರೀ. ಶ್ರೀನಿವಾಸ್ ಅರಸ್ (ಸಹ ತಾಂತ್ರಿಕ ಮತ್ತು ಮಾಧ್ಯಮ ಸಲಹೆಗಾರ) ಮತ್ತು ಶ್ರೀ ವೆಂಕಟರಮಣ ಕಾಮತ್ (ಕಾರ್ಯಕ್ರಮ ಸಮನ್ವಯಕಾರ) , GCC ಕನ್ನಡ ಸಂಘಟನೆಗಳ ನೇತೃತ್ವವಹಿಸಿರುವ ಶ್ರೀ ನಾಗೇಶ್ ರಾವ್ – ಅಧ್ಯಕ್ಷರು ಕರ್ನಾಟಕ ಸಂಘ ಕತಾರ್, ಶ್ರೀ ರೇವಣ ಸಿದ್ದಯ್ಯ ಹೊಂಬಾಳಿ – ಅಧ್ಯಕ್ಷರು ಕನ್ನಡ ಸಂಘ ಕುವೈಟ್, ಶ್ರೀ ಪ್ರದೀಪ್ ಶೆಟ್ಟಿ – ಅಧ್ಯಕ್ಷರು ಬಹ್ರೇನ್ ಕನ್ನಡ ಸಂಘ, ಶ್ರೀ ಪ್ರಸಾದ್ – ಕರ್ನಾಟಕ ವಿಂಗ್, ಐಎಸ್ಸಿ ಓಮನ್ , ಶ್ರೀ ಸರ್ವೋತ್ತಮ ಶೆಟ್ಟಿ – ಅಧ್ಯಕ್ಷರು, ಅಬುಧಾಬಿ ಕರ್ನಾಟಕ ಸಂಘ, ಶ್ರೀ ME ಮೊಳ್ಳೂರು – ಅಧ್ಯಕ್ಷರು, ಶಾರ್ಜಾ ಕರ್ನಾಟಕ ಸಂಘ ಮತ್ತು ಶ್ರೀ.ವಿಮಲ್ ಕುಮಾರ್ – ಅಲ್ಏನ್, ಕರ್ನಾಟಕ ಸಂಘ ರವರು ಉಪಸ್ಥಿತರಿದ್ದರು.

Raksha Deshpande

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

4 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

5 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

6 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

6 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

6 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

6 hours ago