ದೇವರ ಕೀರ್ತನೆಯಿಂದ ಭಗವಂತನ ಅನುಗ್ರಹ: ಶ್ರೀನಿವಾಸ ಸಾಫಲ್ಯ

ಮುಂಬಯಿ:  ಮಲಾಡ್ ಪೂರ್ವ, ಕುರಾರ್ ವಿಲೇಜ್ ನ,  ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿಯ ವತಿಯಿಂದ ಡಿ. 6 ರಂದು  ದೇವಸ್ಥಾನದ ವಠಾರದಲ್ಲಿ ದಿನಪೂರ್ತಿ ನಡೆದ ಅಖಂಡ ಹರಿನಾಮ ಸಂಕೀರ್ತನೆಯನ್ನು ಮುಂಜಾನೆ ಪ್ರಧಾನ ಅರ್ಚಕ ಹಾಗೂ ಪುರೋಹಿತರಾದ ರಾಘವೇಂದ್ರ ತುಂಗಾ ಭಟ್,  ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ಪಿ ಸಾಫಲ್ಯ ಉದ್ಘಾಟಿಸಿದರು.

ಸುಮಾರು ಹದಿಮೂರು ತಾಸು ನಡೆದ ಭಜನಾ ಕಾರ್ಯಕ್ರಮದಲ್ಲಿ ಶ್ರೀ ಶನೀಶ್ವರ ಭಜನಾ ಮಂಡಳಿ, ಕುರಾರ್ ವಿಲೇಜ್, ಮಲಾಡ್ ಸೇರಿ ನಗರದ ಹತ್ತು ಪ್ರಮುಖ ಭಜನಾ ಮಂಡಳಿಗಳು ಭಾಗವಹಿಸಿದ್ದು ಹಿರಿ, ಕಿರಿಯರು, ಪುರುಷರು ಹಾಗೂ ಮಹಿಳೆಯರು ಇದರಲ್ಲಿ ಭಕ್ತಿ ಪೂರ್ವಕವಾಗಿ ಪಾಲ್ಗೊಂಡಿದ್ದರು.

ಸಮಾರೋಪದ ನಂತರ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ಪಿ ಸಾಫಲ್ಯ, ಈ ಸಮಿತಿಯು ಕಳೆದ 42 ವರ್ಷಗಳಿಂದ ಮಹಾನಗರದಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಿದ್ದು ಯುವ ಪೀಳಿಗೆಯಲ್ಲಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಿಂತನೆಯನ್ನು ಉಳಿಸಿ ಬೆಳೆಸಲು ನಿರಂತರವಾಗಿ ಭಜನೆ, ಹರಿಕಥೆ, ಪ್ರವಚನ ಇತ್ಯಾದಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಂದು ಕೂಡಾ ಮುಂಜಾನೆಯಿಂದ ನಾವೆಲ್ಲರೂ ದೇವರ ಕೀರ್ತನೆ ಯೊಂದಿಗೆ ಭಗವಂತನನ್ನು ಸ್ಮರಿಸುತ್ತಿದ್ದು, ದೇವರ ಕೀರ್ತನೆಯಿಂದ ಎಲ್ಲರಿಗೂ ಶನಿ ದೇವರು, ಗಣಪತಿ ದೇವರು ಅನುಗ್ರಹಿಸಲಿ ಎಂದರು.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಿಲ್ಲವರ ಅಸೋಶಿಯೇಶನ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್ ಪೂಜಾರಿ, ಗಂಗಾವಲಿ ಸಹಕಾರಿ ಬ್ಯಾಂಕಿನ ನಿರ್ದೇಶಕ ಉದಯ ಮೊಗವೀರ ಮತ್ತು ಹೋಟೇಲು ಉದ್ಯಮಿ ಸುರೇಶ್ ಶೆಟ್ಟಿಯವರು ಆಗಮಿಸಿದ್ದು ಅವರನ್ನು ಗೌರವ  ಪ್ರಧಾನ ಕಾರ್ಯದರ್ಶಿ ಎಂ. ಡಿ. ಬಿಲ್ಲವ, ಉಪಾಧ್ಯಕ್ಷ ನಾರಾಯಣ ಎಸ್. ಶೆಟ್ಟಿ ಮತ್ತು ಕೋಶಾಧಿಕಾರಿ ಹರೀಶ್ ಜೆ ಸಾಲ್ಯಾನ್ ಶಾಲು ಹೊದಿಸಿ, ಪುಷ್ಪ ಗುಚ್ಚ ನೀಡಿ ಗೌರವಿಸಿದರು.  ಅಖಂಡ ಹರಿನಾಮ ಸಂಕೀರ್ತನೆ ಕಾರ್ಯವನ್ನು ನಿತ್ಯಪ್ರಕಾಶ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ನಡಿದಿದ್ದು ಅವರನ್ನು ಜೊತೆ ಕಾರ್ಯದರ್ಶಿ ಸಂತೋಷ್ ಎಸ್. ಪೂಜಾರಿ ಗೌರವಿಸಿದರು.

ಮಂಗಳಾರತಿ ಹಾಗೂ ಪ್ರಸಾದ ವಿತರಣೆಯೊಂದಿಗೆ ದಿನ ಪೂರ್ತಿ ಜರಗಿದ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಕುರಾರ್ ವಿಲೇಜ್  ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿಯ ಇತರ ಪದಾಧಿಕಾರಿಗಳಾದ  ವಿಶ್ವನಾಥ ಶೆಟ್ಟಿ ಪೇತ್ರಿ, ನಿತ್ಯಾನಂದ ಎಲ್ ಕೋಟ್ಯಾನ್, ದಿನೇಶ್ ಡಿ. ಕುಂಬ್ಳ, ಶಿವಾನಂದ ಎನ್ ದೇವಾಡಿಗ, ಸದಸ್ಯರುಗಳಾದ  ರಮಕೃಷ್ಣ ವಿ ಶೆಟ್ಟಿಯಾನ್,  ಹರೀಶ್ ಡಿ. ಕುಂದರ್, ಪ್ರಭಾಕರ ಬಿ ಶೆಟ್ಟಿ, ಸದಾನಂದ ಕೆ  ನಾಯಕ್, ಸಂತೋಷ್ ರಾವ್,  ಶ್ರೀಮತಿ ಶಾಲಿನಿ ಶೆಟ್ಟಿ, ಮಧುಸೂಧನ್ ಪಾಲನ್, ಸ್ನೇಹಲತಾ ನಾಯಕ್, ಯಶೋಧಾ ಕುಂಬ್ಳೆ, ಗಿರಿಜಾ ಮರಕಳ, ರಾಜಶ್ರೀ ಪೂಜಾರಿ, ಜಯಂತಿ ಸಾಲ್ಯಾನ್, ಅರ್ಚಕ ನಾರಾಯಣ ಭಟ್ ಸಲಹೆಗಾರರಾದ ಶ್ರೀಧರ ಆರ್ ಶೆಟ್ಟಿ ಮತ್ತು ಬಾಬು ಎನ್ ಚಂದನ್, ಮಹಿಳಾ ವಿಭಾಗದ ಪ್ರಮುಖರಾದ ಶೀತಲ್ ಎನ್ ಕೋಟ್ಯಾನ್, ಮಹಿಳಾ ವಿಭಾಗದ ಎಲ್ಲಾ ಸದಸ್ಯರು ಸಹಕರಿಸಿರುವರು.
ಚಿತ್ರ, ವರದಿ : ಈಶ್ವರ ಎಂ. ಐಲ್

             

 

Desk

Recent Posts

ಉರುಳಿಗೆ ಸಿಲುಕಿದ ಚಿರತೆಯನ್ನು ರಕ್ಷಿಸಿ ಕಾಡಿಗೆ ಬಿಟ್ಟ ಅರಣ್ಯ ಇಲಾಖೆ

ಉರುಳಿಗೆ ಸಿಲುಕಿ ನರಳುತ್ತಿದ್ದ ಚಿರತೆಯನ್ನು ರಕ್ಷಿಸಿ ಸುರಕ್ಷಿತವಾಗಿ ನಾಗರಹೊಳೆ ಅಭಯಾರಣ್ಯಕ್ಕೆ ಬಿಟ್ಟ ಘಟನೆ ಪಿರಿಯಾಪಟ್ಟಣ ತಾಲೂಕಿನ ಮಲ್ಲಿನಾಥಪುರ ಗ್ರಾಮದ ಅರಣ್ಯ ನಡು ತೋಪಿನಲ್ಲಿ ನಡೆದಿದೆ.

11 mins ago

ಮೋದಿ ಮತ್ತೆ ಪ್ರಧಾನಿಯಾದರೆ ಭಾರತ ವಿಶ್ವಗುರು: ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ

'ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ಭಾರತ ವಿಶ್ವಗುರು ಆಗಲಿದೆ' ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.

33 mins ago

ಪಾಕಿಸ್ತಾನಕ್ಕೆ ರಾಹುಲ್‌ ಗಾಂಧಿಯನ್ನು ಪ್ರಧಾನಿ ಸ್ಥಾನದಲ್ಲಿ ನೋಡುವ ಆಸೆ: ಮೋದಿ

ನೆರೆಯ ದೇಶ ಪಾಕಿಸ್ತಾನವು ಕಾಂಗ್ರೆಸ್‌ನ ಯುವರಾಜ ರಾಹುಲ್‌ ಗಾಂಧಿಯನ್ನು ಪ್ರಧಾನಿ ಗಾದಿಯ ಮೇಲೆ ನೋಡಲು ಬಯಸುತ್ತಿದೆ ಎಂದು ಮೋದಿ ಟೀಕಿಸಿದ್ದಾರೆ.

37 mins ago

ಪ್ರಧಾನಿ ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಪ್ರಧಾನಿ ಮೋದಿ ಸ್ಟೇಟ್ಸ್‌ ಮ್ಯಾನ್‌ (ರಾಜನೀತಿಜ್ಞ) ಅಲ್ಲ, ಅವರೊಬ್ಬ ಸೇಲ್ಸ್‌ಮ್ಯಾನ್‌ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ ಹರಿಪ್ರಸಾದ ಟೀಕಿಸಿದರು.

53 mins ago

ಅಶ್ಲೀಲ ವಿಡಿಯೋ ಹಂಚಿಕೆ: ಕ್ರಮಕ್ಕೆ ಒತ್ತಾಯ

ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಯರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟವರ ವಿರುದ್ದ ಕ್ರಮ ಜರುಗಿಸಬೇಕು ಎಂದು…

53 mins ago

ಕೈಮಗ್ಗಗಳ ಪುನಶ್ಚೇತನಕ್ಕೆ ವೈಯಕ್ತಿಕವಾಗಿ ಸಹಾಯ ನೀಡಲಾಗುವುದು: ಡಾ.ಲಗ್ನ ಗೌಡ

ರಾಮನಾಥಪುರ ಹೋಬಳಿಯ ಕೇರಳಾಪುರದ ಶ್ರೀ ರಾಮ ಕೈಮಗ್ಗ ನೇಕಾರರ ಉತ್ಪಾದನೆ ಮತ್ತು ಮಾರಾಟ ಸಹಕಾರ ಸಂಘಕ್ಕೆ ಶಾಸಕ ಎ.ಮಂಜು ರವರ…

1 hour ago