ಕೊರೋನಾದಿಂದ ಸ್ಥಗಿತಗೊಂಡಿದ್ದ ಐಪಿಎಲ್ ಟೂರ್ನಿಯ ಎರಡನೇ ಇನ್ನಿಂಗ್ಸ್ ಪ್ರಾರಂಭವಾಗಿದ್ದು, ಈ ವೇಳೆ ನಟ ಕಿಚ್ಚ ಸುದೀಪ್ ದಂಪತಿ ಖುದ್ದಾಗಿ ಸ್ಟೇಡಿಯಂಗೆ ಹಾಜರಾಗಿ ಪಂದ್ಯ ವೀಕ್ಷಿಸಿದ್ದಾರೆ. ಸೋಮವಾರ ಅಬುದಾಭಿಯಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೆಕೆಆರ್ ನಡುವಿನ ಐಪಿಎಲ್ ಪಂದ್ಯವನ್ನು ಸುದೀಪ್ ದಂಪತಿ ವೀಕ್ಷಿಸಿದ್ದಾರೆ.
ತಮ್ಮ ಸಿನಿಮಾ ಶೂಟಿಂಗ್ ಗಳ ನಡುವೆ ಫ್ರೀ ಮಾಡಿಕೊಂಡು ಕಿಚ್ಚ ಸುದೀಪ್ ದುಬೈ ಪ್ರಯಾಣ ಮಾಡಿದ್ದಾರೆ. ಈ ವೇಳೆ ಆರ್ ಸಿಬಿ ಹಾಗೂ ಕೆಕೆಆರ್ ಹಾಗೂ ಸಿಎಸ್ ಕೆ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯವನ್ನೂ ನೋಡಿ ಎಂಜಾಯ್ ಮಾಡಿದ್ದಾರೆ. ತಮ್ಮ ವಿಕ್ರಾಂತ್ ರೋಣಾ ಚಿತ್ರದ ಬಗ್ಗೆ ಸಿನಿಪ್ರಿಯರಿಗೆ ಮಾಹಿತಿ ನೀಡಿದ ಅವರು, ವಿಕ್ರಾಂತ್ ರೋಣಾ ಚಿತ್ರದ ಶೂಟಿಂಗ್ ಈಗಾಗಲೇ ಮುಗಿದಿದ್ದು, ದುಬೈ ನಿಂದ ವಾಪಾಸ್ ಆದ ಬಳಿಕ ಇತರೆ ಭಾಷೆಗಳ ಡಬ್ಬಿಂಗ್ ಕೆಲಸ ಪ್ರಾರಂಭಿಸುತ್ತೇನೆ.
ಚಿತ್ರಕ್ಕೆ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ತಿಳಿಸಿದ್ದಾರೆ. ಸದ್ಯ ಸುದೀಪ್ ರ ವಿಕ್ರಾಂತ್ ರೋಣಾ ಚಿತ್ರ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತೆರೆ ಮೇಲೆ ಬರಲಿದೆ.