News Karnataka Kannada
Monday, April 22 2024
Cricket
ಹೊರನಾಡ ಕನ್ನಡಿಗರು

ಸರ್ವ ಧರ್ಮ ಸಮನ್ವಯಕ್ಕೆ ಸಾಕ್ಷಿಯಾದ ಕರ್ನಾಟಕ ಸಂಘ ಶಾರ್ಜಾ ಇಫಾರ್‌ ಕೂಟ

Kannadigas'
Photo Credit : News Kannada

ಕಳೆದ ಸುಮಾರು 20 ವರ್ಷಗಳಿಂದ ಕೊಲ್ಲಿ ರಾಷ್ಟ್ರಗಳಲ್ಲಿ ವಾಸಿಸುವ ಅನಿವಾಸಿ ಕನ್ನಡಿಗರಲ್ಲಿ ಅತೀ ಜನಪ್ರಿಯವಾದ ಕನ್ನಡ ಪರ ಸೇವಾ ಸಂಸ್ಥೆ, UAE ಯ ಕರ್ನಾಟಕ ಸಂಘ ಶಾರ್ಜಾ ವತಿಯಿಂದ ಇತ್ತೀಚಿಗೆ ದುಬೈ ಯ ಹೋಟೆಲ್ ವಾರ್ಚ್ನ್ ಪ್ರಾಜಾ ದ ಸಭಾಂಗಣದಲ್ಲಿ ಪವಿತ್ರ ಇಪ್ತಾರ್ ಕೂಟವನ್ನು ಏರ್ಪಡಿಡಲಾಯಿತು. ಸಂಸ್ಥೆಯ ನಾಯಕರು, ಗೌರವ ಸಲಹೆಗಾರರು, ಪದಾಧಿಕಾರಿಗಳು, ಸದಾಸರು ಮತ್ತು ಹಿತೈಷಿಗಳನ್ನೊಳಗೊಂಡ ಈ ಇನ್ಸಾರ್ ಕಾರ್ಯಕ್ರಮವು ಭಾವೈಕ್ಯತೆ, ಸಹೋದರತೆ ಮತ್ತು ಸರ್ವ ಧರ್ಮ ಸಮನ್ಯತೆಯನ್ನು ಪ್ರೇರೇಪಿಸುವ ಯಶಸ್ವೀ ಕಾರ್ಯಕ್ರಮವಾಗಿ ಮೂಡಿ ಬಂತು.

ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಂ.ಈ.ಮೂಳೂರು ರವರ ಅಧ್ಯಕ್ಷತೆಯಲ್ಲಿ ನಡೆದ ಈ ಇಫಾರ್‌ ಕಾರ್ಯಕ್ರಮದಲ್ಲಿ ಸಂಸ್ಥೆಯ ಪುಧಾನ್ ಗೌರವ ಸಲಹೆಗಾರರೂ, KNRI ಇದರ ಅಧ್ಯಕ್ಷರೂ, ಫಾರ್ಚೂನ್ ಗ್ರೂಪ್ ಆ ಹೋಟೆಲ್ಸ್ ಇದರ ಮಾಲಕರೂ ಹಾಗೂ ಜನ ಪ್ರಿಯ ಸಮಾಜ ಸೇವಕರೂ ಆದ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ಯವರು ವಿಶೇಷ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಂಸ್ಥೆಯ ಪೋಷಕ ರಾದ ಶ್ರೀ ಮಾರ್ಕ್ ಡೆನಿಸ್, ಉಪಾಧ್ಯಕ್ಷರಾದ ಶ್ರೀ ನೋಯಲ್ ಅಲೌಡಾ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ ಶೆಟ್ಟಿ ಗೌರವ ಸಲಹೆಗಾರರುಗಳಾದ ಶ್ರೀ ಗಣೇಶ್ ರ. ಶ್ರೀ ಸತೀಶ್ ಪೂಜಾರಿ, ಶ್ರೀ ಆನಂದ್ ಬೈಲೂರ್, ಶ್ರೀ ಅಬ್ರಾರ್ ಅಹ್ಮದ್, ಶ್ರೀ ಅಬ್ದುಲ್ ರಾಝಕ್ ದೀವಾ, ಶ್ರೀ ಜೀವನ್ ಕುಕ್ಕಾನ್ ಹಾಗೂ ಇಂನಿತಾರ ಸದಸ್ಯರು ಮತ್ತು ಹಿತೈಸಿಗಳು ಭಾಗವಹಿಸಿದ್ದರು.

ಇಫ್ತಾರ್ ಆದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಎಂ ಈ ಮೂಳೂರು ರವರು ಸೇರಿದ ಎಲ್ಲರಿಗೂ ಶುಭ ಕೋರುತ್ತಾ, ರಂಜಾನ್ ಉಪವಾಸದ ಮಹತ್ವ ಮತ್ತು ಉದ್ದೇಶವನ್ನು ಹೇಳುತ್ತಾ, ರಂಜಾನ್ ಉಪವಾಸ ಎಂದರೆ ಕೇವಲ ಆಹಾರ ನೀರು ತ್ಯಜಿಸುವುದು ಮಾತ್ರವಲ್ಲ ಅದರ ಜೊತೆಗೆ ಮನಸ್ಸು ದೇಹವನ್ನು ಶುದ್ಧಿಯಾಗಿರಿಸಿ ಕೆಟ್ಟ ಯೋಚನೆಗಳು, ಕೆಟ್ಟ ಕರ್ಮಗಳಿಂದ ದೂರವಿದ್ದು ಬಡ ಬಗ್ಗರಿಗೆ ದಾನ ಧರ್ಮ ಮಾಡಿ ನೈಜ ಮಾನವೀಯತೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ರಂಜಾನ್ ಉಪವಾಸ ಪರಿಪೂರ್ಣವೂ ದೇವರಿಗೆ ಸ್ವೀಕಾರಾರ್ಹವೂ ಆಗುವುದಕ್ಕೆ ಸಾಧ್ಯ ಎಂದರು. ಸಂಸ್ಥೆಯ ಏಳಿಗೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ಕರೆ ನೀಡಿದರು.

ಸಂಸ್ಥೆಯ ಪಧಾನ ಗೌರವ ಸಲಹೆಗಾರರಾದ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ಯವರು ತಮ್ಮ ದಿಕ್ಕೂ ಚಿ ಭಾಷಣದಲ್ಲಿ ರಂಜಾನ್ ತಿಂಗಳಿನ ಉಪವಾಸದ ಪಾವಿತ್ರತೆ ಮತ್ತು ಸಮರ್ಪಣಾ ಭಾವವನ್ನು ಉಲ್ಲೇಖಿಸುತ್ತಾ ಸರ್ವರಿಗೆ ರಂಜಯನ್ ಶುಭಾಶಯವನ್ನು ಕೋರಿದರು. ಕರ್ನಾಟಕ ಸಂಘ ಶಾರ್ಜಾದ ಬಗ್ಗೆ ಮನ ತುಂಬಿ ಮಾತಾಡುತ್ತಾ ಈ ಸಂಸ್ಥೆಯ ಅನನ್ಯವಾದ ಕಾರ್ಯ ವೈಖರಿ, ಈ ಸಂಸ್ಥೆಯಲ್ಲಿ ಕಂಡು ಬರುವಂತಹ ಭಾವೈಕ್ಯತೆ ಮತ್ತು ಪ್ರೀತಿಯನ್ನು ಉಲ್ಲೇಖಿಸುತ್ತಾ ತಮ್ಮ ಮೆಚ್ಚಿಗೆಯನ್ನು ವ್ಯಕ್ತ ಪಡಿಸಿದರು.

ಹಾಗೂ ಈ ಸಂಸ್ಥೆಗೆ ಈ ಮೊದಲಿನಂತೆ ಇನ್ನು ಮುಂದಕ್ಕೂ ತಾನು ಸಹಾಯ ಸಹಕಾರವನ್ನು ನೀಡುವುದಾಗಿ ಭರವಸೆ ಇತ್ತರು.

ಪೋಷಕರಾದ ಶ್ರೀ ಮಾರ್ಕ್ ಡೆನಿಸ್ ರವರು ನಮ್ಮ ಸಂಸ್ಥೆಯು ನಿಜಾರ್ಥದಲ್ಲಿ ಒಂದು ಕುಟುಂಬ ಡಾಂಟೆ ಇದು ನಮ್ಮ ನಮ್ಮೊಳಗಿರುವ ಈ ಪ್ರೀತಿ ಮತ್ತು ಐಕ್ಯತೆ ಯಾವತ್ತೂ ಇರಲಿ ಎಂದು ಹಾರೈಸಿದರು.

ಉಪಾಧ್ಯಕ್ಷರಾದ ಶ್ರೀ ನಾವಲ್ ಅಡಾ ರವರು ತಮ್ಮ ಉಸ್ತುವಾರಿಯಲ್ಲಿ ನಡೆದ KSS ಸ್ಪೋರ್ಟ್ಸ್ ಮೀಟ್ 2022 ಬಗ್ಗೆ ವಿವರಣೆ ನೀಡುತ್ತಾ ಅದ್ಭುತವಾಗಿ, ಶಿಸ್ತುಭದ್ರವಾಗಿ ಮತ್ತು ಅದ್ದೂರಿಯಾಗಿ ನಡೆದ ಸ್ಪೋರ್ಟ್ಸ್ ಮೀಟ್ ಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.

ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಶೆಟ್ಟಿ ಯವರು ಸ್ಪೋರ್ಟ್ಸ್ ಮೀಟ್ ನ ಸಂಪೂರ್ಣ ಯಶಸ್ಸಿನ ಹಿಂದೆ ಸಂಸ್ಥೆಯೂಯ ರೂವಾರಿಗಳ ಕಾರ್ಯ ಕ್ಷಮತೆ ಮತ್ತು ನಿಸ್ವಾರ್ಥ ಸೇವೆಯ ಶಕ್ತಿ ಇದೆ ಎಂದು ಹೇಳಿದರು. ಕೋಶಾಧಿಕಾರಿ ಶ್ರೀ ಅಬ್ರಾರ ಅಹ್ಮದ್ ಲೆಕ್ಕ ಪತ್ರ ವನ್ನು ಮಂಡಿಸಿದರು.

ಶ್ರೀ ಗಣೇಶ್ ರೈಯವರು ಸ್ಪೋರ್ಟ್ಸ್ ಮೀಟ್ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸುತ್ತಾ, ಬಹಳ ವ್ಯವಸ್ಥಿತವಾಗಿ ನಡೆದ ಆ ಕಾರ್ಯಕ್ರಮದ ಹಿಂದ ಶ್ರೀ ನಾವಲ್ ಅಡಾ ರವರ ಕಾರ್ಯತತ್ಪರತೆ ಮತ್ತು ಕಠಿಣ ಶ್ರಮದ ಶಕ್ತಿ ಇದೆ ಎಂದು ಹೇಳುತ್ತಾ ನಾವೆಲ್ ಅಡಾರನ್ನು ಮನಸಾರ ಅಭಿನಂದಿಸಿದರು.

ಶ್ರೀ ಸತೀಶ್ ಪೂಜಾರಿ, ಆನಂದ್ ಬೈಲೂರ್ ಹಾಗೂ ಶ್ರೀ ಅಬ್ದುಲ್ ರಜಾಕ್ ದೀವಾ ಸಂಸ್ಥೆಯ ಬಗ್ಗೆ ತಮ್ಮ ಮೆಚ್ಚುಗೆ, ತಿಪ್ತಿ ವ್ಯಕ್ತ ಪಡಿಸುತ್ತಾ ಶುಭ ಹಾರೈಸಿದರು. ಶ್ರೀ ಜೀವನ್ ಕುಕ್ಯಾನ್ ರವರು ಧನ್ಯವಾದ ಸಮರ್ಪಣೆ ಗೈದರು. ಭೋಜನದ ನಂತರ ಕಾರ್ಯಕ್ರಮವು ಕೊನೆ ಗೊಂಡಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು