Ad

ಏನಿದು ಮೆದುಳು ತಿನ್ನುವ ಅಮೀಬಾ? ಇದರಿಂದ ನಮಗೂ ಅಪಾಯ ಇದೆಯೆ?

ಮೆದುಳು ತಿನ್ನುವ ಅಮೀಬಾ ಹೆಚ್ಚಾಗಿ ಯಾರಿಗು ಇದರ ಅರಿವು ಕಡಿಮೆ ಏಕೆಂದರೆ ಈವರೆಗೆ ಅಷ್ಟಾಗಿ ಸುದ್ದಿ ಮಾಡದ ಕಾರಣ. ಆದರೆ ಇತ್ತಿಚಿನ ಕೆಲವು ದಿನಗಳಿಂದ ಕೇರಳದಲ್ಲಿ ಈ ಕಾಯಿಲೆ ಬಗ್ಗೆ ಕೇಳಿ ಬರುತ್ತಿದೆ.

ಮೆದುಳು ತಿನ್ನುವ ಅಮೀಬಾ ಹೆಚ್ಚಾಗಿ ಯಾರಿಗು ಇದರ ಅರಿವು ಕಡಿಮೆ ಏಕೆಂದರೆ ಈವರೆಗೆ ಅಷ್ಟಾಗಿ ಸುದ್ದಿ ಮಾಡದ ಕಾರಣ. ಆದರೆ ಇತ್ತಿಚಿನ ಕೆಲವು ದಿನಗಳಿಂದ ಕೇರಳದಲ್ಲಿ ಈ ಕಾಯಿಲೆ ಬಗ್ಗೆ ಕೇಳಿ ಬರುತ್ತಿದೆ.ಕಳೆದ ಮೂರು ತಿಂಗಳಲ್ಲಿ ಈ ಅಮೀಬಾಕ್ಕೆ ಮೂವರು ಬಲಿಯಾಗಿದ್ದಾರೆ. ನೀರಿನಲ್ಲಿರುವ ಇದು ಮೂಗಿನ ಮೂಲಕ ದೇಹ ಪ್ರವೇಶಿಸಿದರೆ ೯೭ರಷ್ಟು ಪ್ರತಿಶತ ಉಳಿಯುವ ಸಾಧ್ಯತೆಯಿಲ್ಲ ಎನ್ನುವುದು ತೀವ್ರ ಕಳವಳದ ಸಂಗತಿ. ಇಂಥ ಅಪಾಯಕಾರಿ ಸೂಕ್ಷ್ಮಾಣುವಿನ ಬಗ್ಗೆ, ಅದು ಹರಡುವ ರೀತಿ ಮತ್ತು ಪ್ರತಿಬಂಧಕ ಕ್ರಮಗಳ ಬಗ್ಗೆ ಇಲ್ಲಿದೆ ವಿವರಗಳು.

Ad
300x250 2

ಅಮೀಬಿಕ್‌ ಮೆನಿಂಜೈಟಿಸ್ ಎಂದೂ ಕರೆಯಲಾಗುವ ಈ ಸ್ಥಿತಿಗೆ ಮುಖ್ಯ ಕಾರಣ ನಗ್ಲೇರಿಯ ಫೌಲೇರಿ ಎಂಬ ಏಕಕೋಶ ಜೀವಿ. ಕಲುಷಿತ ನೀರಿನಲ್ಲಿ ವಾಸಿಸುವ ಈ ಸೂಕ್ಷ್ಮಾಣು ನದಿ, ಹೊಳೆ, ಕೊಳ, ಬಾವಿ, ಕೆರೆಯಂಥ ಯಾವುದೇ ರೀತಿಯ ನೀರಿನಲ್ಲಿ ಇರಬಹುದು. ಒದ್ದೆ ಮಣ್ಣು ಮತ್ತು ನೀರಿನ ಪೈಪುಗಳಲ್ಲಿದ್ದರೂ ಅಚ್ಚರಿಯಿಲ್ಲ. ಇದಕ್ಕೆ ಬದುಕುವುದಕ್ಕೆ ಯಾವುದೇ ನಿಶ್ಚಿತವಾದ ಆಶ್ರಯ ಬೇಕಿಲ್ಲ, ವಾತಾವರಣದಲ್ಲಿ ಹಲವೆಡೆ ಕಾಣಬಹುದು.

ವಾತಾವರಣ ಬೆಚ್ಚಗಿದ್ದಾಗ, ನೀರು ಸಹ ಬೆಚ್ಚಗಿದ್ದಾಗ ಈ ಅಮೀಬಾ ಚುರುಕಾಗುತ್ತವೆ. ಇವು ಸಾಮಾನ್ಯವಾಗಿ ನದೀತಳದ ಮಣ್ಣಿನಲ್ಲಿ ಹುದುಗಿರುತ್ತವೆ. ಡೈವಿಂಗ್‌, ಈಜು ಅಥವಾ ನೀರನ್ನು ಕದಡುವ ಯಾವುದಾದರೂ ಚಟುವಟಿಕೆಯಿಂದ ಇವು ಮೇಲ್ಮೈಗೆ ತಲುಪುತ್ತವೆ. ಅಲ್ಲಿಂದ ಮೂಗಿನ ಮೂಲಕ ದೇಹ ಪ್ರವೇಶಿಸಿ, ಮೆದುಳಿಗೆ ಲಗ್ಗೆ ಇಡುತ್ತವೆ. ಬಿಸಿ ನೀರಿನಲ್ಲೂ ಇವು ಇರಬಲ್ಲವು. ಆದರೆ ಅಂಥ ಕಲುಷಿತ ನೀರನ್ನು ನುಂಗಿದರೆ ಈ ಸಮಸ್ಯೆ ಆಗಲಿಕ್ಕಿಲ್ಲ, ಮೂಗಿಗೆ ಹೋದರೆ ಮಾತ್ರ ಉಳಿಗಾಲವಿಲ್ಲ. ವಯಸ್ಕರಿಗಿಂತಲೂ ಮಕ್ಕಳಿಗೆ ಈ ಸೋಂಕು ಬಲುಬೇಗ ತಾಗುತ್ತಿದೆ.

ಲಕ್ಷಣಗಳೇನು?
ತೀವ್ರ ಜ್ವರ, ಅತೀವ ತಲೆನೋವು, ವಾಂತಿ ಅಥವಾ ಹೊಟ್ಟೆ ತೊಳೆಸುವುದು, ನಡುಕ, ಕುತ್ತಿಗೆ ಗಡುಸಾಗುವುದು, ಬೆಳಕು ನೋಡಲು ಕಷ್ಟ, ಗೊಂದಲ, ಕೋಮಾ… ಒಮ್ಮೆ ಈ ಅಮೀಬಾ ಮೂಗು ಪ್ರವೇಶಿಸಿದ ಮೇಲೆ, ಲಕ್ಷಣಗಳು ಕಾಣುವುದಕ್ಕೆ 2-15 ದಿನಗಳವರೆಗೆ ತೆಗೆದುಕೊಳ್ಳಬಹುದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡಿದ ದಾಖಲೆಯೂ ಇಲ್ಲ. ಇದು ಮೂಗಿನ ಮೂಲಕವೇ ಪ್ರವೇಶಿಸಬೇಕು. ಒಮ್ಮೆ ಲಕ್ಷಣಗಳು ಕಾಣಿಸಿದ ಮೇಲೆ 7-10 ದಿನಗಳ ಒಳಗೆ ಸೋಂಕಿತರು ಮರಣಿಸಿದ ಪ್ರಕರಣಗಳೇ ಹೆಚ್ಚು. ಇದರಿಂದ ಚೇತರಿಸಿಕೊಂಡವರು ಅತಿ ವಿರಳ.

ತಡೆಗಟ್ಟಬಹುದೇ?
ಒಮ್ಮೆ ಸೋಂಕು ಬಂದ ಮೇಲೆ ಹೆಚ್ಚೇನೂ ಮಾಡಲಾಗದು. ಇದಕ್ಕೆ ಲಸಿಕೆಯೂ ಲಭ್ಯವಿಲ್ಲ. ಆದರೆ ಬಾರದಂತೆ ಕೆಲವು ಎಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು-
ನೀರಿನಲ್ಲಿ ಈಜುವಾಗ ಎಚ್ಚರಿಕೆ ವಹಿಸಿ. ಈಜುಕೊಳಕ್ಕೆ ಹೋಗುವುದಾದರೆ, ಸರಿಯಾಗಿ ಕ್ಲೋರಿನ್‌ ಹಾಕಿ ನೀರನ್ನು ಸೋಂಕು ರಹಿತ ಮಾಡಿದ ಕೊಳಗಳನ್ನೇ ಉಪಯೋಗಿಸಿ. ನೀರು ಬೆಚ್ಚಗಿದ್ದಷ್ಟೂ ಈ ರೋಗಾಣು ಸಕ್ರಿಯವಾಗಿರುತ್ತದೆ.
ಕೆರೆ ನದಿಗಳಲ್ಲಿ ಈಜುವಾಗ ತಳಭಾಗದ ಮಣ್ಣು ಕದಡದಿರಿ. ರಾಡಿ ನೀರು ಮೇಲೆ ಬಂದಂತೆ ಇಂಥ ಅಪಾಯಗಳು ಹೆಚ್ಚುತ್ತವೆ.
ನೈಸರ್ಗಿಕ ನೀರಿನ ತಾಣಗಳಲ್ಲಿ ಮೇಲಿಂದ ಡೈವ್‌ ಮಾಡಬೇಡಿ. ಇದರಿಂದಲೂ ಸಮಸ್ಯೆಗಳು ಕಾಡಬಹುದು.
ನೇತಿಯಂಥ ಕ್ರಿಯೆಗಳನ್ನು ಮಾಡುವಾಗ ಮಾಮೂಲಿ ನಲ್ಲಿ ನೀರನ್ನು ಮೂಗಿಗೆ ಹಾಕದಿರಿ. ಇದಕ್ಕಾಗಿ ಶುದ್ಧೀಕರಿಸಿದ ಸ್ವಚ್ಛ ನೀರನ್ನೇ ಬಳಸಿ. ಕುದಿಸಿ ಆರಿಸಿದ ನೀರು ಬಳಸುವುದು ಕ್ಷೇಮ.

Ad
Ad
Nk Channel Final 21 09 2023
Ad