Ad

ಮೊಳಕೆ ಬಂದ ಆಲೂಗಡ್ಡೆಯಲ್ಲಿ ವಿಷಕಾರಕ ಉತ್ಪತ್ತಿ: ಆರೋಗ್ಯಕ್ಕೆ ಉತ್ತಮವಲ್ಲ?

ಮೊಳಕೆ ಬಂದ ಆಲೂಗಡ್ಡೆ ಒಳ್ಳೆಯದಲ್ಲ. ಆಲೂಗಡ್ಡೆಗೆ ಮೊಳಕೆ ಬಂದಾಗ ಅದರಲ್ಲಿ ಗ್ಲೈಕೋಲ್ಕಲಾಯ್ಡ್ಸ್‌ ಎಂಬ ವಿಷಕಾರಕ ಉತ್ಪತ್ತಿಯಾಗುವ ಕಾರಣ ಇದು ಒಳ್ಳೆಯದಲ್ಲ. ಅಲ್ಲದೆ, ಆಲೂಗಡ್ಡೆಯ ಹಸಿರು ಭಾಗಗಳಲ್ಲಿ, ಕಣ್ಣಿನಲ್ಲಿ ಹಾಗೂ ಮೊಳಕೆಯಲ್ಲಿ ಈ ವಿಷಕಾರಕಗಳಿರುವ ಸಂಭವ ಹೆಚ್ಚು ಎನ್ನಲಾಗುತ್ತದೆ.

300x250 2

ಗ್ಲೈಕೋಲ್ಕಲಾಯ್ಡ್ಸ್‌ ಮನುಷ್ಯರ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲವಾದ್ದರಿಂದ ಇವುಗಳ ಸೇವನೆ ಒಳ್ಳೆಯದಲ್ಲ. ಇದರಿಂದ ಕರುಳಿನ ಆರೋಗ್ಯಕ್ಕೆ ಸಮಸ್ಯೆಯಾಗಬಹುದು. ತಲೆಸುತ್ತು, ವಾಂತಿ, ಹೊಟ್ಟೆ ನೋವು, ತಲೆನೋವು ಇತ್ಯಾದಿಗಳೂ ಬರಬಹುದು.

ಇದು ಅತಿಯಾದರೆ ಕೆಲವೊಮ್ಮೆ ಪ್ರಾಣಕ್ಕೂ ಅಪಾಯ ಬರಬಹುದು ಎನ್ನಲಾಗುತ್ತದೆ. ಇಂತಹ ಪ್ರತಿಕ್ರಿಯೆ ಎಲ್ಲರ ದೇಹದ ಮೇಲೂ ಆಗುವುದಿಲ್ಲ. ಕೆಲವರಿಗೆ ಅಪರೂಪಕ್ಕೆ ಇಂತಹ ಆರೋಗ್ಯ ಸಮಸ್ಯೆ ಬರಬಹುದು. ಗ್ಲೈಕೋಲ್ಕಲಾಯ್ಡ್ಸ್‌ ಅಂಶ ಆಲೂಗಡ್ಡೆಯಲ್ಲಿ ಹೆಚ್ಚಾದರೆ ಅದಕ್ಕೊಂದು ಕಹಿ ರುಚಿ ಬರುತ್ತದೆ. ಇದು ತಿನ್ನಲು ರುಚಿಯೂ ಆಗಿರುವುದಿಲ್ಲ.

ಆಲೂಗಡ್ಡೆ ಮೊಳಕೆ ಬರುವ ಸಂದರ್ಭದಲ್ಲಿ ಆಲೂಗಡ್ಡೆಯ ಪೋಷಕಾಂಶದಲ್ಲಿ ಕೊಂಚ ಇಳಿಕೆಯಾಗುತ್ತದೆ. ಮೊಳಕೆ ಪ್ರಕ್ರಿಯೆ ಪೋಷಕಾಂಶಗಳನ್ನು ಬಳಸುವುದರಿಂದ ಹೀಗಾಗುತ್ತದೆ. ಗ್ಲೈಕೋಲ್ಕಲಾಯ್ಡ್ಸ್‌ ಪ್ರಮಾಣ ಹೆಚ್ಚಿರುವುದು ಆಲೂಗಡ್ಡೆಯ ಕಣ್ಣುಗಳಲ್ಲಿ, ಮೊಳಕೆಯಲ್ಲಿ ಹಾಗೂ ಎಲೆಗಳಲ್ಲಿ. ಹಾಗಾಗಿ, ಆಲೂಗಡ್ಡೆಯಿಂದ ಈ ಭಾಗಗಳನ್ನು ಕತ್ತರಿಸಿ ತೆಗೆದು ಉಳಿದ ಭಾಗವನ್ನು ಬಳಸಬಹುದು. ಅಂತಹ ಸಂದರ್ಭದಲ್ಲಿ ಸಿಪ್ಪೆಯನ್ನೂ ತೆಗೆದೇ ಬಳಸುವುದು ಒಳ್ಳೆಯದು.

Ad
Ad
Nk Channel Final 21 09 2023
Ad