Bengaluru 21°C
Ad

ಬ್ರೇಕ್‌ಫಾಸ್ಟ್‌ನಲ್ಲಿ ಪ್ರೋಟೀನ್‌ ಇರಬೇಕು ಎಂದರೆ, ಈ ರೆಸಿಪಿಗಳನ್ನು ಒಮ್ಮೆ ಟ್ರೈ ಮಾಡಿ

ಸಸ್ಯಾಹಾರಿಗಳ ಫೇವ್‌ರೇಟ್‌ ಆಹಾರಗಳಲ್ಲಿ ಒಂದು ಸೋಯಾಬೀನ್  ಈ ದ್ವಿದಳ ಧಾನ್ಯ ಎಷ್ಟು ರುಚಿಯಾಗಿರುತ್ತದೆ ಎಂದರೆ ಮಾಂಸಹಾರಿಗಳು ಸೋಯಾಬೀನ್‌‌, ಮಾಂಸದ ರುಚಿ ಕೊಡುತ್ತದೆ ಎಂದು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ.

ಸಸ್ಯಾಹಾರಿಗಳ ಫೇವ್‌ರೇಟ್‌ ಆಹಾರಗಳಲ್ಲಿ ಒಂದು ಸೋಯಾಬೀನ್  ಈ ದ್ವಿದಳ ಧಾನ್ಯ ಎಷ್ಟು ರುಚಿಯಾಗಿರುತ್ತದೆ ಎಂದರೆ ಮಾಂಸಹಾರಿಗಳು ಸೋಯಾಬೀನ್‌‌, ಮಾಂಸದ ರುಚಿ ಕೊಡುತ್ತದೆ ಎಂದು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ.

ಆರೋಗ್ಯ ಮತ್ತು ರುಚಿಯ ಮಿಶ್ರಣ ಈ ಸೋಯಾಬೀನ್

ಸೋಯಾಬೀನ್ ವಿವಿಧ ಜೀವಸತ್ವಗಳು, ಖನಿಜಗಳಿಂದ ಸಮೃದ್ಧವಾಗಿದೆ. ಅದರಲ್ಲೂ ಪ್ರೋಟೀನ್‌ ಅಂಶ ಇದರಲ್ಲಿ ಹೇರಳವಾಗಿದೆ. ಪೋಷಕಾಂಶಗಳ ಹೆಚ್ಚಿರುವ ಕಾರಣ ಆರೋಗ್ಯ ಪ್ರಯೋಜನಗಳು ಸಹ ಅಷ್ಟೇ ಪ್ರಮಾಣದಲ್ಲಿವೆ.

ಇದು ಚಯಾಪಚಯವನ್ನು ಹೆಚ್ಚಿಸುವುದು, ತೂಕ ನಷ್ಟಕ್ಕೆ ಸಹಾಯ ಮಾಡುವುದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುವುದು ಮತ್ತು ಮಧುಮೇಹವನ್ನು ನಿರ್ವಹಿಸುವಂತಹ ಬಹು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

ಕೊಲೆಸ್ಟ್ರಾಲ್ ಮುಕ್ತವಾಗಿರುವುದರಿಂದ, ಸೋಯಾಬೀನ್ ಅನ್ನು ಹೃದಯದ ಆರೋಗ್ಯಕ್ಕೆ ಸಹಕಾರಿಯಾದ ಆಹಾರವಾಗಿಯೂ ತಿನ್ನಬಹುದು. ಒಟ್ಟಿನಲ್ಲಿ ಈ ಎಲ್ಲಾ ಅಂಶಗಳು ಸೋಯಾಬೀನ್ ಅನ್ನು ಪೌಷ್ಟಿಕ ಮತ್ತು ಸಮತೋಲಿತ ಆಹಾರಕ್ಕೆ ಪರಿಪೂರ್ಣ ಸೇರ್ಪಡೆಯನ್ನಾಗಿ ಮಾಡುತ್ತದೆ.

ನೀವು ಸಹ ಈ ಆರೋಗ್ಯಕರ ಆಹಾರವನ್ನು ಊಟದಲ್ಲಿ ಸೇರಿಸಿಕೊಳ್ಳಲು ಬಯಸಿದರೆ ನಿಮ್ಮ ಊಟದ ತಟ್ಟೆಯಲ್ಲಿ ಯಾವುದಾದರೂ ಒಂದು ಸೋಯಾಬಿನ್‌ ಅಡುಗೆ ಇರುವಂತೆ ನೋಡಿಕೊಳ್ಳಿ.

ಸೋಯಾಬೀನ್‌ನಲ್ಲಿ ಅನೇಕ ಸ್ವಾದಿಷ್ಟವಾದ ಖಾದ್ಯಗಳನ್ನು ತಯಾರಿಸಬಹುದು. ಹಾಗಿದ್ರೆ ಸರಿಯಾದ ಪ್ರಮಾಣದ ಪೋಷಣೆಯೊಂದಿಗೆ ದಿನವನ್ನು ಪ್ರಾರಂಭಿಸಲು ನಿಮಗೆ ಸಹಾಯ ಮಾಡುವ ಐದು ಸೋಯಾಬೀನ್ ಪಾಕವಿಧಾನಗಳನ್ನು ಕಲಿಸಿಕೊಡ್ತಿದ್ದೇವೆ ನೋಡಿ.

ಪ್ರೋಟೀನ್ ಭರಿತ ಬ್ರೇಕ್‌ಫಾಸ್ಟ್‌ಗಾಗಿ ಸೋಯಾಬೀನ್ ಪಾಕವಿಧಾನಗಳು

1. ಸೋಯಾಬೀನ್ ಉಪ್ಮಾ

ಈ ಸರಳ ಖಾದ್ಯವನ್ನು ಕೇವಲ 15 ನಿಮಿಷಗಳಲ್ಲಿ ತಯಾರಿಸಬಹುದು ಮತ್ತು ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ. ಶುಗರ್‌ ಇರುವಂತಹವರಿಗೆ ಇದು ಇನ್ನೂ ಬೆಸ್ಟ್‌ ಉಪಹಾರ ಆಯ್ಕೆಯಾಗಿದೆ.

ಇದನ್ನು ಮಾಡೋದು ಸಿಂಪಲ್‌ ಉಪ್ಪಿಟ್ಟು ಮಾಡಲು ರವಾ ಬದಲಿಗೆ ಸೋಯಾ ಕೀಮಾ ಬಳಸಿ ಉಪ್ಮಾ ಮಾಡಿ ಅಷ್ಟೇ

2. ಸೋಯಾ ಪೋಹಾ

ಅವಲಕ್ಕಿ ಪೌಷ್ಟಿಕಾಂಶದ ಭಕ್ಷ್ಯವಾಗಿದ್ದು, ಇದನ್ನು ಎಲ್ಲೆಡೆ ಸೇವಿಸಲಾಗುತ್ತದೆ. ಅವಲಕ್ಕಿಯನ್ನು ಈರುಳ್ಳಿ, ಟೊಮ್ಯಾಟೋ, ಕ್ಯಾರೆಟ್‌, ಕಡಲೆಬೀಜ ಇವನ್ನೆಲ್ಲಾ ಹಾಕಿ ಒಗ್ಗರಣೆ ಮಾಡಿ ತಯಾರಿಸಲಾಗುತ್ತದೆ. ಅವಲಕ್ಕಿಯನ್ನು ಹೀಗೆ ಬೇರೆ ಬೇರೆ ರೀತಿ ಮಾಡಲಾಗುತ್ತದೆ.

ಸೋಯಾ ಅವಲಕ್ಕಿ ಮಾಡಲು ಅವಲಕ್ಕಿ ಬದಲು ಸೋಯಾ ಕ್ರಂಬಲ್‌ ಅನ್ನು ಬಳಸಿ ಮಾಡಿದರೆ ರುಚಿಯಾದ ಸೋಯಾ ಪೋಹಾ ರೆಡಿ.

3. ಸೋಯಾ ಉತ್ತಪ್ಪಮ್

ಬೆಳಗಿನ ಉಪಾಹಾರದ ವಿಷಯಕ್ಕೆ ಬಂದರೆ, ಉಪ್ಪು, ಖಾರ ಹಾಕಿ ಮಾಡುವ ಈ ಪ್ಯಾನ್‌ಕೇಕ್‌ ರೀತಿ ಕಾಣುವ ಉತ್ತಪ್ಪಮ್‌ ರುಚಿ ಜೊತೆಗೆ ಆರೋಗ್ಯಕರವಾಗಿರುತ್ತದೆ. ಈ ಉತ್ತಪ್ಪಮ್‌ಗೆ ನೀವು ಸೋಯಾಬೀನ್‌ ಅನ್ನು ಸೇರಿಸುವ ಮೂಲಕ ರುಚಿಯನ್ನು ಮತ್ತಷ್ಟು ಡಬಲ್‌ ಮಾಡಬಹುದು.

ಸೋಯಾಬೀನ್‌ ಸೇರಿಸುವುದರಿಂದ ನಿಮ್ಮ ಬ್ರೇಕ್‌ಫಾಸ್ಟ್‌ ಕೂಡ ಆರೋಗ್ಯಕರವಾಗುತ್ತದೆ. ಸೋಯಾ ಫ್ಲೇಕ್ಸ್‌ ಅನ್ನು ಉದ್ದಿನಬೇಳೆ, ಕಡಲೆ ಬೇಳೆ, ಸಾಸಿವೆಗಳೊಂದಿಗೆ ಫ್ರೈ ಮಾಡಿ ಉತ್ತಪ್ಪಮ್‌ ಹಿಟ್ಟಿನೊಂದಿಗೆ ಸೇರಿಸುವ ಮೂಲಕ ನೀವಿದನ್ನು ಮಾಡಬಹುದು.

4. ಸೋಯಾ ಮತ್ತು ಓಟ್ಸ್ ಪ್ಯಾನ್‌ಕೇಕ್

ನೀವು ಮಾಡಿಕೊಳ್ಳುವ ಮಾಮೂಲಿ ಪ್ಯಾನ್‌ಕೇಕ್‌ಗೆ ಓಟ್ಸ್, ಸೋಯಾ ಹಿಟ್ಟನ್ನು ಸೇರಿಸುವ ಮೂಲಕ ಆರೋಗ್ಯಕರ ಪ್ಯಾನ್‌ಕೇಕ್ ಅನ್ನು ಮಾಡಿಕೊಳ್ಳಬಹುದು.

ಸೋಯಾ ಹಿಟ್ಟು, ಓಟ್ಸ್, ಮೆಣಸಿನಕಾಯಿಗಳು, ಕೊತ್ತಂಬರಿ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಎಲ್ಲಾ ಹಾಕಿಕೊಂಡು ಬ್ಯಾಟರ್‌ ಮಾಡಿಕೊಂಡು ಪುಟ್ಟ ಪುಟ್ಟ ಕೇಕ್‌ನಂತೆ ಕಾವಲಿಯಲ್ಲಿ ಹೊಯ್ದರೆ ರುಚಿಯಾದ ಸೋಯಾ ಮತ್ತು ಓಟ್ಸ್ ಪ್ಯಾನ್‌ಕೇಕ್ ರೆಡಿಯಾಗುತ್ತದೆ.

ಪ್ಯಾನ್‌ಕೇಕ್‌ ಅಂದರೆ ಸಿಹಿಯಾಗಿರುತ್ತದೆ, ಆದರೆ ಇದು ನಿಮಗೆ ಸ್ಪೈಸಿ ರುಚಿಯನ್ನು ನೀಡುತ್ತದೆ.

5.ಸೋಯಾ ಹಾಲು

ಸೋಯಾ ಲ್ಯಾಕ್ಟೋಸ್ ಮುಕ್ತವಾಗಿದೆ. ಆದ್ದರಿಂದ, ನೀವು ಲ್ಯಾಕ್ಟೋಸ್ ಅಲರ್ಜಿ ಹೊಂದಿದ್ದರೆ ಸೋಯಾ ಹಾಲು ಸಾಮಾನ್ಯ ಹಾಲಿಗೆ ಉತ್ತಮ ಪರ್ಯಾಯವಾಗಿದೆ.

ಈ ಸಸ್ಯಾಹಾರಿ ಆಯ್ಕೆಯು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ನಿಮ್ಮ ಬ್ರೇಕ್‌ಫಾಸ್ಟ್ ಶೇಕ್ಸ್ ಅಥವಾ ಸ್ಮೂಥಿಗಳಿಗೆ ಇದನ್ನು ಹಾಕಿಕೊಳ್ಳಬಹುದು.

 

Ad
Ad
Nk Channel Final 21 09 2023