ಕ್ಯಾನ್ಸರ್‌ಗೆ ಹೊಸ ಔಷಧವೊಂದನ್ನು ಕಂಡುಹಿಡಿಯಲಾಗಿದ್ದು, ಇದು ಶೇಕಡ ನೂರರಷ್ಟು ಪರಿಣಾಮಕಾರಿ ಎಂದು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೆಂಪರ್ಲಿ ದೋಸ್ಟರಲಿಮ್ಬ್-ಜಿಎಕ್ಸ್ಎಲ್ ವೈ ಎಂಬ ಹೆಸರಿನ ಕ್ಯಾನ್ಸರ್ ಗುಣಪಡಿಸುವ ಔಷಧ ಗುದನಾಳದ ಕ್ಯಾನ್ಸರ್ ಹೊಂದಿದ್ದ 42 ರೋಗಿಗಳಿಗೆ ಪರೀಕ್ಷಿಸಲಾಗಿದ್ದು, ಎಲ್ಲರ ಕ್ಯಾನ್ಸರ್ ಗಡ್ಡೆಗಳನ್ನು ಅದು ಯಶಸ್ವಿಯಾಗಿ ತೆಗೆದುಹಾಕಿದೆ ಎಂದು ಹೇಳಿದ್ದಾರೆ. ಎರಡನೇ ಹಂತದಲ್ಲಿ ಈ ಔಷಧ ಪ್ರಯೋಗ ಯಶಸ್ವಿಯಾಗಿದ್ದು, ಔಷಧವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
Ad
ಗುದನಾಳದ ಕ್ಯಾನ್ಸರ್ ಅನ್ನು ಕೊಲೊರೆಕ್ಟಲ್ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಎರಡನೇ ಹಂತದ ಔಷಧ ಪ್ರಯೋಗದ ಬಳಿಕ ಮೊದಲ 24 ರೋಗಿಗಳಲ್ಲಿ ಉತ್ತಮ ಚೇತರಿಕೆ ಕಂಡು ಬಂದಿದೆ. ಸುಮಾರು ಎರಡು ವರ್ಷದ ಬಳಿಕ ಅವರಲ್ಲಿ ಯಾವುದೇ ಕ್ಯಾನ್ಸರ್ ಲಕ್ಷಣಗಳು ಕಂಡು ಬಂದಿಲ್ಲ.
Ad
Ad