Ad

ಕೆಎಂಸಿ ಆಸ್ಪತ್ರೆಯ ಹೊಸ ಮೈಲಿಗಲ್ಲು; ಮೊದಲ ಬಾರಿ ಟ್ರಾನ್ಸ್ಕ್ಯಾಥೆಟರ್ ಮಹಾಪಧಮನಿಯ ಕವಾಟ ಅಳವಡಿಕೆ ಯಶಸ್ವಿ

Hspital

ಮಂಗಳೂರು: ಮಂಗಳೂರಿನ ಅಂಬೇಡ್ಕರ್ ವೃತ್ತದಲ್ಲಿರುವ ಕಸ್ತೂರಬಾ ಮೆಡಿಕಲ್ ಕಾಲೇಜು-ಆಸ್ಪತ್ರೆ (ಕೆಎಂಸಿ ಆಸ್ಪತ್ರೆ) ಹೊಸ ಮೈಲಿಗಲ್ಲನ್ನು ಮುಟ್ಟಿದೆ. ಇದೇ ಮೊದಲ ಬಾರಿಗೆ ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ಕವಾಟ ಅಳವಡಿಕೆ (TAVI) ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣ ಗೊಳಿದೆ. ಈ ಮೂಲಕ ಹೃದಯದ ಆರೈಕೆ ಮತ್ತು ಚಿಕಿತ್ಸೆಯಲ್ಲಿ ಭರವಸೆ ಹೆಚ್ಚಿಸಿದೆ.  ಹಿರಿಯ ಹೃದ್ರೋಗ ತಜ್ಞ ಡಾ. ಪದ್ಮನಾಭ್ ಕಾಮತ್ ನೇತೃತ್ವದ ನುರಿತ ಹೃದ್ರೋಗ ತಜ್ಞರ ತಂಡವು, ಹೃದಯದ ಕವಾಟಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸಲೆಂದೇ ರೂಪುಗೊಳಿಸಿದ್ದ ಅತ್ಯುತ್ತಮ ವೈದ್ಯಕೀಯ ಕಾರ್ಯವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸಿದೆ.

Ad
300x250 2

ಏಯರ‍್ಟಿಕ್ ಸ್ಟೆನೋಸಿಸ್ ಎಂಬುದು ಮಹಾಪಧಮನಿಯ ಕವಾಟದ ದುಸ್ಥಿತಿಯಾಗಿದ್ದು, ಸಾಮಾನ್ಯವಾಗಿ 70 ರ‍್ಷಕ್ಕಿಂತ ಮೇಲ್ಪಟ್ಟ ರೋಗಿಗಳ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆಯು ಪದೇ ಪದೇ ಎದೆ ನೋವು ಮತ್ತು ತಲೆ ತಿರುಗುವಿಕೆಗೆ ಕಾರಣವಾಗುತ್ತದೆ. ಸಾಂಪ್ರದಾಯಿಕ ವಿಧಾನದ ಪ್ರಕಾರ ಈ ಸಮಸ್ಯೆಗೆ ಚಿಕಿತ್ಸೆ ಹೇಗಿರುತ್ತೆ ಅಂದರೆ, ಹೃದಯವನ್ನು ತೆರೆದು ಶಸ್ತ್ರಚಿಕಿತ್ಸೆಯ ಮೂಲಕ ಮಹಾಪಧಮನಿಯ ಕವಾಟವನ್ನು ಬದಲಿಸಬೇಕಾಗುತ್ತದೆ.
ಆದರೆ, ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ಕವಾಟ ಅಳವಡಿಕೆ ಅಥವಾ ಖಿಂಗಿI ಪ್ರಕ್ರಿಯೆಯು ರ‍್ಯಾಯ ಮರ‍್ಗವನ್ನು ನೀಡುತ್ತದೆ. ಈ ವಿಧಾನದಲ್ಲಿ ಹೃದಯವನ್ನು ಓಪನ್ ಮಾಡುವ ಬದಲು ತೊಡೆಸಂದು/ತೊಡೆಸಂದಿ ಭಾಗದಲ್ಲಿ ಸಣ್ಣದಾಗಿ ಕುಯ್ದು ಕವಾಟವನ್ನು ಬದಲಿಸಲಾಗುತ್ತದೆ.
Hspita

ಏಯರ‍್ಟಿಕ್ ಸ್ಟೆನೋಸಿಸ್ನಿಂದ ಬಳಲುತ್ತಿದ್ದ 73 ರ‍್ಷದ ರೋಗಿಯ ಮೇಲೆ ಕೆಎಂಸಿ ಆಸ್ಪತ್ರೆಯ ತಜ್ಞರ ತಂಡವು ಯಶಸ್ವಿಯಾಗಿ ಖಿಂಗಿI ಕರ‍್ಯವಿಧಾನವನ್ನು ನಡೆಸಿತು. ಕೇವಲ ಒಂದು ಗಂಟೆಯಲ್ಲಿ ಶಸ್ತ್ರಚಿಕಿತ್ಸೆಯು ಪರ‍್ಣಗೊಂಡಿತು. ಅಲ್ಲದೇ ರೋಗಿಯು ಬೇಗನೆ ಚೇತರಿಸಿಕೊಂಡರು. ಶಸ್ತ್ರಚಿಕಿತ್ಸೆಯ ಮರುದಿನವೇ ರೋಗಿಯು ನಡೆಯಲು ಆರಂಭಿಸಿದ್ದು, ಮೂರನೇ ದಿನ ಡಿಸ್ಚರ‍್ಜ್ ಮಾಡಲಾಯಿತು.

ಕೆಎಂಸಿ ಆಸ್ಪತ್ರೆಗೆ ಹೆಮ್ಮೆ ತರುವ ಈ ಸಾಧನೆಯನ್ನು ಮಾಡಿದ್ದಕ್ಕೆ ಡಾ.ಪದ್ಮನಾಭ್ ಕಾಮತ್ ಮತ್ತು ತಂಡದವರು ಸಂತೋಷ ವ್ಯಕ್ತಪಡಿಸಿದ್ದಾರೆ. “ಈ ಪ್ರಕ್ರಿಯೆಯು ನಮ್ಮ ಹೃದಯದ ಆರೈಕೆಯ ಸಾರ‍್ಥ್ಯದಲ್ಲಿ ಪ್ರಮುಖ ಪ್ರಗತಿಯನ್ನು ಪ್ರತಿನಿಧಿಸುತ್ತದೆ ಮತ್ತು ಮಹಾಪಧಮನಿಯ ಸ್ಟೆನೋಸಿಸ್ನಿಂದ ಬಳಲುತ್ತಿರುವ ರೋಗಿಗಳಿಗೆ ಹೊಸ ಭರವಸೆಯನ್ನು ನೀಡುತ್ತದೆ” ಎಂದು ಡಾ. ಕಾಮತ್ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರಿನ ಅಂಬೇಡ್ಕರ್ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕರ‍್ಯನರ‍್ವಹಣಾಧಿಕಾರಿ ಶ್ರೀ ಸಗೀರ್ ಸಿದ್ದಿಕಿ ಅವರು, “TAVI ಒಂದು ಸವಾಲಿನ ಕರ‍್ಯವಿಧಾನವಾಗಿದ್ದು, ಇಡೀ ತಜ್ಞರ ತಂಡದ ಪ್ರಯತ್ನದ ಅಗತ್ಯವಿರುತ್ತದೆ” ಎಂದು ತಿಳಿಸಿದರು.
New Project

“ಕೆಎಂಸಿ ಆಸ್ಪತ್ರೆಯಲ್ಲಿ ನಮ್ಮ ಸಮಗ್ರ ಹೃದಯ ಆರೈಕೆ ತಂಡವು ನಾಲ್ವರು ಹೃದ್ರೋಗ ತಜ್ಞರು, ಓವ್ ಕರ‍್ಡಿಯಾಕ್ ಎಲೆಕ್ಟ್ರೋಫಿಸಿಯಾಲಜಿಸ್ಟ್, ಮೂವರು ಹೃದಯ ಶಸ್ತ್ರಚಿಕಿತ್ಸಕರನ್ನು ಒಳಗೊಂಡಿದೆ. 2 ಕ್ಯಾಥೆಟೆರೈಸೇಶನ್ ಲ್ಯಾಬ್, ಕರ‍್ಡಿಯಾಕ್ ಆಪರೇಷನ್ ಥಿಯೇಟರ್ ಮತ್ತು ಕರ‍್ಡಿಯಾಕ್ ಐಸಿಯುಗಳನ್ನು ಒಳಗೊಂಡಿದೆ. ತಜ್ಞರು ಮತ್ತು ಹಿರಿಯ ಸಹಾಯಕ ಸಿಬ್ಬಂದಿ, ಅಖಿ ಸ್ಕ್ಯಾನ್ನಿಂದ ಹಿಡಿದು ಅಂತಿಮ ಕರ‍್ಯವಿಧಾನದವರೆಗೆ ನಿಖರವಾದ ಪ್ಲಾನಿಂಗ್ ಮಾಡಿ ಅದನ್ನು ಎಕ್ಸಿಕ್ಯೂಟ್ ಮಾಡಿದ್ದಾರೆ. ಈ ಹಿಂದೆ ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ಕವಾಟ ಅಳವಡಿಕೆಗಾಗಿ ರೋಗಿಗಳು ಬೆಂಗಳೂರಿನಂತಹ ನಗರಗಳಿಗೆ ಹೋಗಬೇಕಾಗಿತ್ತು. ಮಂಗಳೂರಿನಲ್ಲಿ ಈ ಸುಧಾರಿತ ಕರ‍್ಯವಿಧಾನವನ್ನು ನೀಡುತ್ತಿರುವುದಕ್ಕೆ ನಮಗೆ ಹೆಮ್ಮೆಯೆನಿಸುತ್ತದೆ. ಇದು ನಮ್ಮ ಹೃದಯ ಆರೈಕೆ ಸೇವೆಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ರೋಗಿಗಳ ಫಲಿತಾಂಶಗಳನ್ನು ಸುಧಾರಿಸುತ್ತದೆ. ಈ ಸಾಧನೆಯು ರೋಗಿಗಳಿಗೆ ಉನ್ನತ ಗುಣಮಟ್ಟದ ಆರೈಕೆಯನ್ನು ಒದಗಿಸುವ ನಮ್ಮ ಬದ್ಧತೆಯನ್ನು ಒತ್ತಿಹೇಳುತ್ತದೆ” ಎಂದು ಸಗೀರ್ ಸಿದ್ದಿಕಿ ಹೇಳಿದ್ದಾರೆ.

Ad
Ad
Nk Channel Final 21 09 2023
Ad