Ad

ಕೂದಲು ತುಂಬಾ ಹೋಗಿದ್ಯಾ? ಚಿಂತೆಬೇಡ,ಈರುಳ್ಳಿ ರಸದಲ್ಲಿದೆ ಇದಕ್ಕೆ ಮದ್ದು!

ಕೂದಲು ಉದುರುವ ಸಮಸ್ಯೆಗೆ ಈರುಳ್ಳಿ ರಸ ಅತ್ಯುತ್ತಮ ಪರಿಹಾರ ಎಂದೆನಿಸಿದ್ದು, ಇದರಲ್ಲಿರುವ ಸಲ್ಫರ್ ಅಂಶವು ಕೂದಲು ಬೆಳವಣಿಗೆಗೆ ಸಹಕಾರಿಯಾಗಿದೆ. ಕೂದಲಿನ ಕಿರುಚೀಲಗಳಿಗೆ ರಕ್ತ ಸಂಚಾರವನ್ನೊದಗಿಸಲು ಈರುಳ್ಳಿ ರಸ ಸಹಕಾರಿಯಾಗಿದೆ.

ಕೂದಲು ಉದುರುವ ಸಮಸ್ಯೆಗೆ ಈರುಳ್ಳಿ ರಸ ಅತ್ಯುತ್ತಮ ಪರಿಹಾರ ಎಂದೆನಿಸಿದ್ದು, ಇದರಲ್ಲಿರುವ ಸಲ್ಫರ್ ಅಂಶವು ಕೂದಲು ಬೆಳವಣಿಗೆಗೆ ಸಹಕಾರಿಯಾಗಿದೆ. ಕೂದಲಿನ ಕಿರುಚೀಲಗಳಿಗೆ ರಕ್ತ ಸಂಚಾರವನ್ನೊದಗಿಸಲು ಈರುಳ್ಳಿ ರಸ ಸಹಕಾರಿಯಾಗಿದೆ. ಇದು ಕೊಲಾಜಿನ್ ಟಿಶ್ಯೂಗಳ ಉತ್ಪಾದನೆಯನ್ನು ವರ್ಧಿಸುತ್ತದೆ ಹಾಗೂ ಕೂದಲಿನ ಬೆಳವಣಿಗೆಯನ್ನು ಮಾಡುತ್ತದೆ. ಹಾಗಿದ್ದರೆ ಈರುಳ್ಳಿ ರಸ ತಯಾರಿಸುವುದು ಹೇಗೆ ಅದನ್ನು ಶೇಖರಿಸಿಡುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

Ad
300x250 2

ಬೇಕಾಗುವ ಸಾಮಾಗ್ರಿ

2-3 ದೊಡ್ಡ ಗಾತ್ರದ ಈರುಳ್ಳಿ
ಬ್ಲೆಂಡರ್
ಸ್ಟ್ರೇನರ್
ಪಾತ್ರೆ
ಸ್ಟೋರೇಜ್ ಮಾಡಲು ಸಣ್ಣ ಬಾಟಲಿಗಳು

ಹಂತಗಳು
ಬಿಳಿ ಹಾಗೂ ಹಳದಿ ಈರುಳ್ಳಿಯನ್ನು ನೀವು ಈರುಳ್ಳಿ ರಸ ತೆಗೆಯಲು ಬಳಸಬಹುದು. ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಇದರಿಂದ ಈರುಳ್ಳಿಯನ್ನು ಬ್ಲೆಂಡ್ ಮಾಡಲು ಸುಲಭವಾಗುತ್ತದೆ.

ಫುಡ್ ಪ್ರೊಸೆಸರ್ ಬ್ಲೆಂಡರ್ ಬಳಸಿಕೊಂಡು ಈರುಳ್ಳಿ ರಸ ತೆಗೆದುಕೊಳ್ಳಿ
ಪಾತ್ರೆಯ ಚೀಸ್ ಕ್ಲೋತ್ ಬಳಸಿ ಅದರ ಮೇಲೆ ಬ್ಲೆಂಡ್ ಮಾಡಿದ ಈರುಳ್ಳಿ ರಸ ಸುರಿದುಕೊಳ್ಳಿ. ನಂತರ ಬಟ್ಟೆಯನ್ನು ಹಿಂಡಿ ರಸವನ್ನು ಬೇರ್ಪಡಿಸಿಕೊಳ್ಳಿ.
ಸ್ಟ್ರೇನರ್ ಬಳಸಿಕೊಂಡು ಕೂಡ ನೀವು ಈರುಳ್ಳಿ ರಸವನ್ನು ಸೋಸಿಕೊಳ್ಳಬಹುದು.
ರಸವನ್ನೆಲ್ಲಾ ತೆಗೆದ ನಂತರ ಇದನ್ನು ಸ್ವಚ್ಛವಾದ ಬಾಟಲಿಗೆ ತೆಗೆದಿಡಿ. ನೀವು ಈ ರಸವನ್ನು ಯಾವಾಗ ಬೇಕಾದರೂ ಬಳಸಿಕೊಳ್ಳಬಹುದು.

ಈರುಳ್ಳಿ ರಸ ತಲೆಗೆ ಹಚ್ಚುವುದು ಹೇಗೆ?

ಈರುಳ್ಳಿ ರಸ ನಿಮ್ಮ ತ್ವಚೆಗೆ ಹಾನಿ ಮಾಡಿಕೊಳ್ಳುವುದಿಲ್ಲವೆಂಬುದನ್ನು ಖಚಿತಪಡಿಸಿಕೊಂಡು ಇದನ್ನು ಕೂದಲಿಗೆ ಹಚ್ಚಿ. ನಿಮ್ಮ ಮೊಣಕೈಗೆ ಸ್ವಲ್ಪ ಈರುಳ್ಳಿ ರಸ ಹಚ್ಚಿಕೊಂಡು 24 ಗಂಟೆ ಹಾಗೆಯೇ ಬಿಡಿ. ಯಾವುದೇ ತುರಿಕೆ, ನವೆ, ಊದಿಕೊಳ್ಳುವಿಕೆ ಉಂಟಾಗದಿದ್ದರೆ ರಸದಿಂದ ನಿಮಗೆ ಅಲರ್ಜಿ ಇಲ್ಲ ಎಂಬುದು ಖಾತ್ರಿಯಾಗುತ್ತದೆ. ಈರುಳ್ಳಿ ರಸವನ್ನು ಒಣಗಿರುವ ಕೂದಲಿಗೆ ಹಚ್ಚಿಕೊಳ್ಳಬೇಕು. ಇದರಿಂದ ನಿಮ್ಮ ಕೂದಲಿನ ನೆತ್ತಿ ರಸವನ್ನು ಚೆನ್ನಾಗಿ ಹೀರಿಕೊಳ್ಳುತ್ತದೆ.

ಕೂದಲನ್ನು ಚಿಕ್ಕ ಚಿಕ್ಕ ಭಾಗವನ್ನಾಗಿ ಮಾಡಿಕೊಂಡು ರಸವನ್ನು ಸಂಪೂರ್ಣ ಕೂದಲಿಗೆ ಹಚ್ಚಿಕೊಳ್ಳಿ.

ರಸವನ್ನು ಹಚ್ಚುವುದು ಹೇಗೆ?

ಹತ್ತಿಯ ಉಂಡೆಯ ಬಳಕೆ
ರಸಕ್ಕೆ ಹತ್ತಿಯುಂಡೆಯನ್ನು ಅದ್ದಿಕೊಳ್ಳಿ ಇದನ್ನು ನೆತ್ತಿಗೆ ನೇರವಾಗಿ ಹಚ್ಚಿ.

ಸ್ಪ್ರೇ ಬಾಟಲಿ ಬಳಕೆ
ಸ್ಪ್ರೇ ಬಾಟಲಿ ತೆಗೆದುಕೊಂಡು ಅದಕ್ಕೆ ಈರುಳ್ಳಿ ರಸ ತುಂಬಿಸಿಕೊಳ್ಳಿ. ನಂತರ ರಸವನ್ನು ಹಚ್ಚಿಕೊಂಡು ಚೆನ್ನಾಗಿ ಮಸಾಜ್ ಮಾಡಿ.

ಮಸಾಜ್ ಮಾಡುವುದು
ರಸ ಹಚ್ಚಿಕೊಂಡು 5-10 ನಿಮಷ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ಇದು ಕೂದಲಿಗೆ ಉತ್ತಮ ರಕ್ತ ಪ್ರಸರಣೆಯನ್ನೊದಗಿಸುತ್ತದೆ

30 ನಿಮಿಷ ಕಾಯಿರಿ
ಕೂದಲಿಗೆ ಈರುಳ್ಳಿ ರಸ ಹಚ್ಚಿ 30 ನಿಮಿಷ ಕಾಯಿರಿ. ಇನ್ನೂ ಉತ್ತಮ ಫಲಿತಾಂಶ ಬೇಕೆಂದರೆ ಒಂದು ಗಂಟೆ ಕೂದಲಿನಲ್ಲಿ ಹಾಗೆಯೇ ಬಿಡಬಹುದು. ಶವರ್ ಕ್ಯಾಪ್ ಬಳಸಿ ಕೂದಲನ್ನು ಮುಚ್ಚಿಕೊಳ್ಳಿ

Ad
Ad
Nk Channel Final 21 09 2023
Ad