ಬದನೆಕಾಯಿ ಮನುಷ್ಯನ ಆರೋಗ್ಯಕ್ಕೆ ಸಹಕಾರಿಯಾಗುವಂತಹ ಹಲವಾರು ಬಗೆಯ ವಿಟಮಿನ್ ಗಳು ಖನಿಜಾಂಶಗಳು ಮತ್ತು ನಾರಿನ ಅಂಶಗಳು ಯಥೇಚ್ಛವಾಗಿದ್ದು, ಕ್ಯಾಲೋರಿ ಅಂಶಗಳನ್ನು ಮಾತ್ರ ಕಡಿಮೆ ಹೊಂದಿವೆ. ಕೇವಲ ವಿಟಮಿನ್ ಅಂಶಗಳು ಮತ್ತು ಖನಿಜಾಂಶಗಳು ಅಷ್ಟೇ ಸೇರಿವೆ ಎಂದರೆ ಅದು ತಪ್ಪಾಗುತ್ತದೆ. ಆಂಟಿಆಕ್ಸಿಡೆಂಟ್ ಅಂಶಗಳು ಇತರ ತರಕಾರಿಗಳಿಗೆ ಹೋಲಿಸಿದರೆ ಬದನೆಕಾಯಿಗಳಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಸೇರಿವೆ. ಮನುಷ್ಯನಿಗೆ ಆಂಟಿಆಕ್ಸಿಡೆಂಟ್ ಅಂಶಗಳ ಅವಶ್ಯಕತೆ ಬಹಳಷ್ಟಿದೆ.
ಹಲವು ಬಗೆಯ ದೀರ್ಘಕಾಲದ ಮತ್ತು ಕೆಟ್ಟ ಕಾಯಿಲೆಗಳು ಎಂದು ಹೆಸರು ಪಡೆದ ಹೃದಯದ ಸಮಸ್ಯೆ ಮತ್ತು ಕ್ಯಾನ್ಸರ್ ನಂತಹ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುತ್ತದೆ. ಬದನೆಕಾಯಿ ಗಿಡಗಳಲ್ಲಿ ಆಂಥೋ ಸಯಾನಿನ್ ಎಂಬ ಅಂಶಗಳು ಸೇರಿದ್ದು, ಬದನೆಕಾಯಿಗಳ ಬೇರೆ ಬೇರೆ ಬಣ್ಣಗಳ ವಿಚಾರದಲ್ಲಿ ಇವುಗಳ ಪಾತ್ರ ಪ್ರಮುಖವಾಗಿರುತ್ತದೆ. ಅದರಲ್ಲೂ ನಸುನೀನ್ ಎಂಬ ಆಂಥೋ ಸಯಾನಿನ್ ಅಂಶ ಬಹಳಷ್ಟು ಪ್ರಯೋಜನಕಾರಿಯೆಂದು ತಿಳಿದುಬಂದಿದೆ.
ಬದನೆಕಾಯಿಗಳಲ್ಲಿರುವ ಆಂಟಿಆಕ್ಸಿಡೆಂಟ್ ಅಂಶಗಳು ಹೃದಯದ ಆರೋಗ್ಯಕ್ಕೆ ಬಹಳಷ್ಟು ಸಹಕಾರಿ ಆಗಿರುತ್ತವೆ. ಮನುಷ್ಯನ ಆರೋಗ್ಯಕ್ಕೆ ಮಾರಕ ಕಾಯಿಲೆ ಎನಿಸಿರುವ ಕ್ಯಾನ್ಸರ್ ಮಹಾಮಾರಿಯ ವಿರುದ್ಧ ಹೋರಾಡುವ ಗುಣ ಲಕ್ಷಣ ಬದನೆಕಾಯಿಯಲ್ಲಿದೆ ಎಂದರೆ ನೀವು ನಂಬಲೇಬೇಕು. ಉದಾಹರಣೆಗೆ ಬದನೆಕಾಯಿ ರೀತಿಯ ಗಿಡಗಳಲ್ಲಿ ಎಂಬ ಅಂಶ ಹೆಚ್ಚಾಗಿದೆ.
ಯಾರು ಬೇಕಾದರೂ ಬದನೆಕಾಯಿಗಳನ್ನು ಯಾವುದೇ ಅನುಮಾನವಿಲ್ಲದೆ ತಿನ್ನಬಹುದು ಬೇಯಿಸಿ ಹುರಿದು ಎಣ್ಣೆಯಲ್ಲಿ ಕರಿದು ಪಲ್ಯ ಸಾಂಬಾರ್ ಗಳಲ್ಲಿ ಸುಲಭವಾಗಿ ಉಪಯೋಗಿಸಬಹುದು. ಹೆಚ್ಚಿನ ಕ್ಯಾಲೋರಿ ಅಂಶಗಳು ಇರುವ ಆಹಾರಗಳ ಬದಲಾಗಿ ಬದನೆಕಾಯಿಗಳನ್ನು ತಿನ್ನುವ ಅಭ್ಯಾಸ ಬೆಳೆಸಿಕೊಳ್ಳಬಹುದು. ನಿಮ್ಮ ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೋರಿ ಅಂಶಗಳನ್ನು ಕಡಿಮೆ ಮಾಡಿ ನಾರಿನಂಶ ಮತ್ತು ಪೌಷ್ಟಿಕ ಸತ್ವಗಳನ್ನು ಹೆಚ್ಚು ಮಾಡಿಕೊಳ್ಳಲು ಬದನೆಕಾಯಿಗಳ ಸೇವನೆ ಮಾಡಬಹುದು.
ಹೆಚ್ಚಿನ ನಾರಿನ ಅಂಶ, ಕಡಿಮೆ ಕ್ಯಾಲೋರಿ ಅಂಶ, ಹೆಚ್ಚಿನ ಪೌಷ್ಟಿಕ ಸತ್ವಗಳು ಇದ್ದು ಮನುಷ್ಯನ ಹೃದಯದ ತೊಂದರೆ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವಂತಹ ಜೊತೆಗೆ ದೇಹದ ತೂಕ ತಗ್ಗಿಸುವಂತಹ ಯಾವುದಾದರೂ ಆಹಾರ ಪದಾರ್ಥವಿದ್ದರೆ ಅದು ಬದನೆಕಾಯಿ ಗಳು ಮಾತ್ರ. ಹಾಗಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ಬದನೆಕಾಯಿಗಳ ಪಾತ್ರ ಅತಿ ಮುಖ್ಯ ಎಂದರೆ ತಪ್ಪಾಗಲಾರದು.