Ad

ಇನ್ನೂ ಕಣ್ಣಿಗೆ ಕನ್ನಡಕ ಬೇಕಿಲ್ಲ ಈ ಡ್ರಾಪ್ಸ್​ ಸಾಕು

ಸನಿಹದಲ್ಲಿರುವ ವಸ್ತು ಗಳನ್ನು ಸರಿಯಾಗಿ ನೋಡಲು ಸಾಧ್ಯವಾಗುತ್ತಿಲ್ಲವೇ , ಚಿಂತೆ ಬಿಡಿ ಇನ್ನೇನು ಸದ್ಯದಲ್ಲೇ ಕನ್ನಡಕಗಳ ಮೇಲಿನ ಅವಲಂಬನೆ ಕಡಿಮೆ ಮಾಡುವ ಐ ಡ್ರಾಪ್ಸ್ ಮಾರುಕಟ್ಟೆಗೆ ಶೀಘ್ರ ಪ್ರವೇಶಿಸಲಿದೆ.

ಸನಿಹದಲ್ಲಿರುವ ವಸ್ತು ಗಳನ್ನು ಸರಿಯಾಗಿ ನೋಡಲು ಸಾಧ್ಯವಾಗುತ್ತಿಲ್ಲವೇ , ಚಿಂತೆ ಬಿಡಿ ಇನ್ನೇನು ಸದ್ಯದಲ್ಲೇ ಕನ್ನಡಕಗಳ ಮೇಲಿನ ಅವಲಂಬನೆ ಕಡಿಮೆ ಮಾಡುವ ಐ ಡ್ರಾಪ್ಸ್ ಮಾರುಕಟ್ಟೆಗೆ ಶೀಘ್ರ ಪ್ರವೇಶಿಸಲಿದೆ.

ಮುಂಬಯಿಯಲ್ಲಿ ನೆಲೆ ಹೊಂದಿರುವ ಎಂಟೋಡ್‌ ಫಾರ್ಮಾಸ್ಯೂಟಿ ಕಲ್ಸ್‌ ಎಂಬ ಕಂಪೆನಿ “ಪ್ರಸ್‌ವು’ ಎಂಬ ಕಣ್ಣಿನ ಹನಿ (ಐ ಡ್ರಾಪ್ಸ್‌) ಸಿದ್ಧಪಡಿಸಿದೆ. ಇದು ಕಣ್ಣಿನ ಪಾಪೆಯ ಗಾತ್ರವನ್ನು ತಗ್ಗಿಸಿ, ವಸ್ತುಗಳು ಸ್ಪಷ್ಟವಾಗಿ ಗೋಚರಿಸುವಂತೆ ಮಾಡುತ್ತದೆ. ಇದನ್ನು ಬಳಸಿದರೆ ಮುಂದಿನ 6 ತಾಸುಗಳ ಕಾಲ ಸನಿಹದಲ್ಲಿರುವ ವಸ್ತುಗಳನ್ನು ಸ್ಪಷ್ಟವಾಗಿ ನೋಡಬಹುದು. ಮೊದಲ ಹನಿ ಹಾಕಿ 3ರಿಂದ 6 ತಾಸುಗಳ ಒಳೊಳಗೆ ಇನ್ನೊಂದು ಹನಿ ಹಾಕಿದರೆ ಈ ನೋಟದ ಅವಧಿ ಇನ್ನಷ್ಟು ದೀರ್ಘ‌ವಾಗಲಿದೆ ಎಂದು ಎಂಟೋಡ್‌ ಫಾರ್ಮಾ ಕಂಪೆನಿಯ ಸಿಇಒ ನಿಖೀಲ್‌ ಕೆ. ಮಸೂರ್ಕರ್‌ ಹೇಳಿದ್ದಾರೆ.

ಭಾರತೀಯರ ಮೇಲೂ ಪರೀಕ್ಷೆ
ಈಗಾಗಲೇ ಇಂತಹ ಔಷಧಗಳು ವಿದೇಶ ಗಳಲ್ಲಿ ಲಭ್ಯವಿವೆ. ಆದರೆ ಅವನ್ನು ಭಾರತೀಯ ಕಣ್ಣುಗಳಿಗೆ ಹಾಕಿ ಪರಿಶೀಲನೆ ನಡೆಸಿರಲಿಲ್ಲ. ಈ ಔಷಧವನ್ನು ಭಾರತೀಯ ಕಣ್ಣುಗಳಿಗೆ 2 ವರ್ಷ ಹಾಕಿ ಪರಿಶೀಲಿಸಲಾಗಿದೆ. ಒಟ್ಟು 10 ಸ್ಥಳಗಳಲ್ಲಿ 250 ಮಂದಿಯ ಮೇಲೆ ಇದರ ಪರೀಕ್ಷೆ ನಡೆಸಲಾಗಿದೆ. ಇದಕ್ಕೆ ಔಷಧ ನಿಯಂತ್ರಣ ಸಂಸ್ಥೆ ಅನುಮತಿಯನ್ನೂ ನೀಡಿದೆ.

350 ರೂ.ಗಳಿಗೆ ಲಭ್ಯ
ಈ ವರ್ಷದ ಅಕ್ಟೋಬರ್‌ ಮೊದಲ ವಾರ ದಿಂದ ಭಾರತೀಯ ಫಾರ್ಮಸಿಗಳಲ್ಲಿ ಐ ಡ್ರಾಪ್‌ ಸಿಗಲಿದೆ. 40ರಿಂದ 55 ವಯೋಮಿತಿಯವರು ಇದನ್ನು ಬಳಸಬಹುದು. ಇದಕ್ಕೆ 350 ರೂ.ಗಳನ್ನು ನಿಗದಿಪಡಿಸಲಾಗಿದೆ. ಆದರೆ ನೋಂದಾಯಿತ ವೈದ್ಯರ ಸೂಚನೆಯ ಮೇರೆಗೆ ಮಾತ್ರ ಇದನ್ನು ಖರೀದಿಸಬಹುದು ಎಂದೂ ಮಸೂರ್ಕರ್‌ ತಿಳಿಸಿದ್ದಾರೆ.

Ad
Ad
Nk Channel Final 21 09 2023