Ad

ಹೆಚ್ಚು ಟೊಮೆಟೊ ತಿನ್ನಬೇಡಿ; ಆರೋಗ್ಯದ ಮೇಲೆ ಅಡ್ಡ ಪರಿಣಾಮ!

ಟೊಮೆಟೊಗಳನ್ನು ತಿನ್ನುವುದರಿಂದ ದೇಹಕ್ಕೆ ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಲೈಕೋಪೀನ್ ನಂತಹ ಪೋಷಕಾಂಶಗಳು ಲಭಿಸುತ್ತದೆ.

ಟೊಮೆಟೊಗಳನ್ನು ತಿನ್ನುವುದರಿಂದ ದೇಹಕ್ಕೆ ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಲೈಕೋಪೀನ್ ನಂತಹ ಪೋಷಕಾಂಶಗಳು ಲಭಿಸುತ್ತದೆ. ಆದರೆ ಅತಿಯಾದರೆ ಅಮೃತವು ವಿಷವೆಂಬಂತೆ ಟೊಮೆಟೊದ ಅತಿಯಾದ ಸೇವನೆ ಆರೋಗ್ಯದ ಮೇಲೆ ಸಾಕಷ್ಟು ಅಡ್ಡ ಪರಿಣಾಮವನ್ನುಂಟು ಮಾಡಬಹುದು. ಕೆಲವು ಆರೋಗ್ಯ ಸಮಸ್ಯೆಗಳಿರುವವರು ಟೊಮೆಟೊ ಸೇವನೆಯಿಂದ ದೂರವಿರಬೇಕು.

ಟೊಮ್ಯಾಟೋ ನೈಸರ್ಗಿಕವಾಗಿ ಹೆಚ್ಚಿನ ಆಮ್ಲವನ್ನು ಹೊಂದಿರುತ್ತದೆ. ಈ ಕಾರಣದಿಂದಾಗಿ, ಇದು ಅಡುಗೆಯಲ್ಲಿ ಹುಳಿ ರುಚಿಯನ್ನು ನೀಡುತ್ತದೆ. ಹೆಚ್ಚು ಟೊಮೆಟೊ ತಿನ್ನುವುದರಿಂದ ಹೊಟ್ಟೆಯಲ್ಲಿ ಆಮ್ಲದ ಪ್ರಮಾಣವನ್ನು ಹೆಚ್ಚಿಸಬಹುದು ಮತ್ತು ಎದೆಯುರಿ, ವಾಯು ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ನೀವು ಈಗಾಗಲೇ ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದರೆ, ಟೊಮೆಟೊವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಉತ್ತಮ.

ಕಿಡ್ನಿ ಸಮಸ್ಯೆ ಇರುವವರು ಟೊಮೆಟೊ ತಿನ್ನುವುದನ್ನು ತಪ್ಪಿಸಬೇಕು. ಕಾರಣ ಟೊಮೆಟೊದಲ್ಲಿ ಆಕ್ಸಲೇಟ್ ಅಧಿಕವಾಗಿರುತ್ತದೆ. ದೇಹದಲ್ಲಿ ಹೆಚ್ಚುವರಿ ಶೇಖರಣೆ ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಕಿಡ್ನಿ ಮತ್ತು ಪಿತ್ತಕೋಶದ ಸಮಸ್ಯೆ ಇರುವವರು ವೈದ್ಯರ ಸಲಹೆಯಂತೆ ಟೊಮೆಟೊ ಸೇವಿಸಬೇಕು.

ಸಂಧಿವಾತದಂತಹ ಗಂಭೀರ ಸಮಸ್ಯೆ ಇರುವವರು ಟೊಮೆಟೊ ತಿನ್ನುವುದನ್ನು ತಪ್ಪಿಸಬೇಕು. ಇದರಲ್ಲಿರುವ ಹುಳಿಯು ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಉರಿಯೂತವನ್ನು ಉಂಟುಮಾಡುತ್ತದೆ. ಆದ್ದರಿಂದ, ನೀವು ಸಂಧಿವಾತ ಹೊಂದಿದ್ದರೆ ಟೊಮೆಟೊ ಸೇವನೆಯಿಂದ ದೂರವಿರಿ.

Ad
Ad
Nk Channel Final 21 09 2023