ಸೀಬೆಕಾಯಿ ಎಲೆ ಹಲವು ಕಾಯಿಲೆಗಳಿಗೆ ರಾಮಬಾಣವಾಗಿದೆ. ಸೀಬೆಕಾಯಿ ಎಲೆ ಮಧುಮೇಹಕ್ಕೆ ರಾಮಬಾಣವಾಗಿದೆ. ರಕ್ತದಲ್ಲಿನ ಸಕ್ಕರೆಯಂಶ ನಿಯಂತ್ರಿಸಲು ಸಹಕಾರಿಯಾಗಿದೆ.
ಸೀಬೆಕಾಯಿ ಎಲೆಯ ಜ್ಯೂಸ್ ಕುಡಿದಾಗ ರಕ್ತದಲ್ಲಿರುವ ಹೆಚ್ಚಿನ ಸಕ್ಕರೆಯಂಶ ಕಡಿಮೆ ಮಾಡುವುದು. ಇದನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ತುಂಬಾನೇ ಒಳ್ಳೆಯದು. ಈ ಸೀಬೆಕಾಯಿ ಎಲೆಯ ಜ್ಯೂಸ್ ಕುಡಿಯುವುದರಿಂದ ಸುಸ್ತು, ವಿಪರೀತ ಹಸಿವು ಕಡಿಮೆಯಾಗುವುದು.
ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಬೇಧಿ ತಡೆಗಟ್ಟಲು ಈ ಸೊಪ್ಪಿನ ರಸ ತುಂಬಾ ಒಳ್ಳೆಯದು,ಅದರಲ್ಲಿಯೂ ಮಕ್ಕಳಿಗೆ ತುಂಬಾನೇ ಪ್ರಯೋಜನಕಾರಿ. ಬೇಧಿ ಉಂಟಾದಾಗ ಇದರ ರಸ ಹಿಂಡಿ ಒಂದು ಚಮಚ ರಸ ಕುಡಿಸಿ, ಈ ರೀತಿ ಮಾಡಿದರೆ ಬೇಧಿ ತಕ್ಷಣ ನಿಯಂತ್ರಣಕ್ಕೆ ಬರುತ್ತದೆ.
ಅಜೀರ್ಣ ಸಮಸ್ಯೆ ಇರುವವರಿಗೆ ಸೀಬೆಕಾಯಿ ರಸ ಅತ್ಯುತ್ತಮವಾದ ಮನೆಮದ್ದಾಗಿದೆ, ಅಜೀರ್ಣ ಸಮಸ್ಯೆ ಇರುವವರು 3-4 ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ ಕುಡಿದರೆ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು.
ಸೀಬೆಕಾಯಿ ಎಲೆಯ ಜ್ಯೂಸ್ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೂಡ ತುಂಬಾನೇ ಸಹಕಾರಿಯಾಗಿದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುವುದು. ಸೀಬೆ ಕಾಯಿ ಎಲೆ ಸೋಂಕಾಣುಗಳ ವಿರುದ್ಧ ದೇಹ ಹೋರಾಡುವಂತೆ ಮಾಡುತ್ತದೆ, ಸೀಬೆಕಾಯಿ ಹಾಗೂ ಅದರ ಎಲೆಯಲ್ಲಿ ವಿಟಮಿನ್ ಸಿ ಇರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವುದು.
ತೂಕ ನಿಯಂತ್ರಣದಲ್ಲಿಡಬೇಕು ಅಥವಾ ಮೈ ತೂಕ ಕಳೆದುಕೊಳ್ಳಬೇಕು ಎಂದು ಬಸುವವರು ಸೀಬೆಕಾಯಿ ಎಲೆಯ ಜ್ಯೂಸ್ ಕುಡಿದರೆ ಉತ್ತಮ ಪ್ರಯೋಜನ ಪಡೆಯಬಹುದು. ಈ ಜ್ಯೂಸ್ ಚಯಪಚಯ ಕ್ರಿಯೆ ಉತ್ತಮವಾಗಿ ನಡೆಯುವಂತೆ ಮಾಡುತ್ತದೆ, ಮೈ ತೂಕ ನಿಯಂತ್ರಣಲ್ಲಿಡುವಲ್ಲಿ ಚಯಪಚಯ ಕ್ರಿಯೆ ತುಂಬಾನೇ ಅವಶ್ಯಕವಾಗಿದೆ. ತೂಕ ಇಳಿಕೆಯ ಡಯಟ್ ಮಾಡುವವರು ಸೀಬೆಕಾಯಿ ಎಲೆಯ ಜ್ಯೂಸ್ ಜೊತೆಗೆ ತಮ್ಮ ಆಹಾರಕ್ರಮದಲ್ಲಿಸೀಬೆಕಾಯಿ ಸೇರಿಸಿದರೆ ಒಳ್ಳೆಯದು.
ಮೈ ತೂಕ ನಿಯಂತ್ರಿಸಲು ಬರಿಜ್ಯೂಸ್ ಕುಡಿದರೆ ಸಾಕಾಗಲ್ಲ, ಜೊತೆಗೆ ನೀವು ವರ್ಕೌಟ್ ಮಾಡಬೇಕು, ಅಲ್ಲದೆ ಆರೋಗ್ಯಕರ ಆಹಾರಶೈಲಿಯತ್ತ ಕಡಿಮೆ ಮಾಡಬೇಕು. ವ್ಯಾಯಾಮ, ಆಹಾರಕ್ರಮ ಜೊತೆಗೆ ಈ ಜ್ಯೂಸ್ ತುಂಬಾ ಪ್ರಯೋಜನಕಾರಿಯಾಗಿದೆ. ಸೀಬೆಕಾಯಿ ಎಲೆಯ ಜ್ಯೂಸ್ ತ್ವಚೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ಮೊಡವೆ ಕಡಿಮೆ ಮಾಡುತ್ತದೆ, ತ್ವಚೆಯನ್ನು ಬಿಗಿಗೊಳಿಸುತ್ತದೆ, ತ್ವಚೆ ಕೆಂಪಾಗುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ. ಅಲ್ಲದೆ ಮುಖ ಬೇಗ ಸುಕ್ಕಾಗುವುದನ್ನು ತಡೆಗಟ್ಟಲು ಸಹಕಾರಿ.