ಸೀಬೆ ಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ಹಲವಾರು ರೀತಿಯ ಪ್ರಯೋಜನಗಳಿವೆ. ಸೀಬೆ ಹಣ್ಣನ್ನು ಬೀಜಸಹಿತ ನಾವು ತಿನ್ನಬೇಕಾಗುತ್ತದೆ. ಇದರಲ್ಲಿ ಅತಿಹೆಚ್ಚು ಕಬ್ಬಿಣಾಂಶ, ಅತಿಹೆಚ್ಚು ಕ್ಯಾಲ್ಸಿಯಂ, ವಿಟಮಿನ್ ಸಿ, ವಿಟ ಮಿನ್ ಇ ಪಾಸ್ಪರಸ್ ಮತ್ತು ವೀಟಾಕ್ಯಾರೊಟಿನ್ ನಂತಹ ಪೋಷಕಾಂಶ ಗಳನ್ನು ಸಮೃದ್ದವಾಗಿ ಈ ಹಣ್ಣು ಹೊಂದಿದೆ. ಹೀಗೆ ತಿನ್ನುವುದರಿಂದ ಈ ಹಣ್ಣಿನಲ್ಲಿ ಇಷ್ಟು ಪೋಷಕಾಂಶಗಳು ನಮ್ಮ ದೇಹಕ್ಕೆ ಸಿಗುತ್ತವೆ.
ಇದರಲ್ಲಿ ಅತಿ ಹೆಚ್ಚಾಗಿ ವಿಟಮಿನ್ ಸಿ ಇರುವುದ ರಿಂದ ನಮ್ಮ ರೋಗ ನಿರೋಧಕ ಶಕ್ತಿಯನ್ನು ಇದು ದುಪ್ಪಟ್ಟು ಮಾಡುತ್ತದೆ. ಭಾರತದಲ್ಲಿ ಹೆಚ್ಚಿನ ಕಡೆ ಬೆಳೆಯುವುದು ಮಾತ್ರವಲ್ಲದೆ ಇದು ಅಗ್ಗದ ಬೆಲೆಯಲ್ಲಿಯೂ ಸಿಗುವಂತಹ ಹಣ್ಣಾಗಿದೆ. ಈ ಹಣ್ಣಿನಲ್ಲಿ ಫೈಬರ್ ಅಂಶ ಹೇರಳವಾಗಿರುವುದರಿಂದ ಜೀರ್ಣಾಂಗದ ಸಮಸ್ಯೆಗಳಾದ ಮಲಬದ್ದತೆ, ಆಮ್ಲ ಪಿತ್ತದ ಸಮಸ್ಯೆ, ಗ್ಯಾಸ್ ಸಮಸ್ಯೆ ಇತ್ಯಾದಿಗಳನ್ನು ದೂರ ಮಾಡುವಂತಹ ಗುಣ ಇದರಲ್ಲಿದೆ.
ಈ ಹಣ್ಣಿನ ಮೇಲೆ ಹಲವಾರು ಸಂಶೋಧನೆಗಳು ನಡೆದಿದ್ದು ಇದು ಸ್ತನದ ಕ್ಯಾನ್ಸರ್, ಪುರುಷರ ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್, ಇತ್ಯಾದಿಗಳನ್ನು ತಡೆಯುವಂತ ಗುಣ ಈ ಹಣ್ಣಿನಲ್ಲಿದೆ. ಆದ್ದರಿಂದ ಈ ಹಣ್ಣನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ತೆಗೆದುಕೊಳ್ಳಬಹುದು. ವೀರ್ಯಾಣುವಿನ ಸಂಖ್ಯೆ ಕಾಪಾಡಿಕೊಳ್ಳಲು ಅಥವಾ ಇನ್ನಿತರ ದೌರ್ಬಲ್ಯಗಳಿದ್ದಲ್ಲಿ, ಇದನ್ನು ಸೇವಿಸಿದಲ್ಲಿ ಲೈಂಗಿಕಕ್ರಿಯೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ತಡೆಗಟ್ಟಲು ಸಹಾಯಕಾರಿ.
ಈ ಹಣ್ಣಿನಲ್ಲಿ ವಿಟಮಿನ್ ‘ಎ’ ಇರುವುದ ರಿಂದ, ಕಣ್ಣಿನ ದೃಷ್ಟಿಯಲ್ಲಿ ಸಮಸ್ಯೆ ಇದ್ದವರಿಗೂ ಸಹ ಇದು ಸಹಕಾರಿಯಾಗುತ್ತದೆ. ಶೀತ ಗುಣವನ್ನು ಹೊಂದಿರುವ ಈ ಹಣ್ಣು ಸಿಹಿಯಾಗಿದ್ದು ತಿನ್ನಲು ರುಚಿಕರವಾಗಿರುತ್ತದೆ. ಪಿತ್ತ ಶಾಮಕ ಗುಣವನ್ನು ಹೊಂದಿರುವ ಇದು, ಕಫವನ್ನು ಜಾಸ್ತಿ ಮಾಡುತ್ತದೆ. ಇದರಿಂದಾಗಿ ಅಸ್ತಮ ಸಮಸ್ಯೆ ಇರುವವರು, ಗಂಟಲುಬೇನೆ ಇರುವವರು, ಮೂಗಿನಲ್ಲಿ ಶೀತ ಸೋರುತ್ತಿದ್ದಲ್ಲಿ, ವಾಸಿಯಾಗುವ ವರೆಗೆ ಈ ಹಣ್ಣನ್ನು ಸೇವಿಸುವುದು ಸ್ವಲ್ಪ ಕಡಿಮೆ ಮಾಡುವುದು ಉತ್ತಮ.