Bengaluru 27°C
Ad

ಲಿಚಿ ಹಣ್ಣು ತಿನ್ನುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು ಗೊತ್ತಾ?

ಲಿಚಿ ಹಣ್ಣಿನ ಹೊರಮೈ ಒರಟಾದರೂ, ಸಿಪ್ಪೆ ಸುಲಿದರೆ ಮೆದುವಾದ ರಸಭರಿತ ರುಚಿಯಾದ ಹಣ್ಣಿದೆ. ಕೇವಲ ರುಚಿಯಲ್ಲಷ್ಟೇ ಅಲ್ಲ, ಪೋಷಕಾಂಶಗಳ ವಿಚಾರದಲ್ಲೂ ಈ ಹಣ್ಣು ಯಾವುದಕ್ಕೂ ಕಡಿಮೆಯಿಲ್ಲ.

ಲಿಚಿ ಹಣ್ಣಿನ ಹೊರಮೈ ಒರಟಾದರೂ, ಸಿಪ್ಪೆ ಸುಲಿದರೆ ಮೆದುವಾದ ರಸಭರಿತ ರುಚಿಯಾದ ಹಣ್ಣಿದೆ. ಕೇವಲ ರುಚಿಯಲ್ಲಷ್ಟೇ ಅಲ್ಲ, ಪೋಷಕಾಂಶಗಳ ವಿಚಾರದಲ್ಲೂ ಈ ಹಣ್ಣು ಯಾವುದಕ್ಕೂ ಕಡಿಮೆಯಿಲ್ಲ.

ವಿಟಮಿನ್‌ ಸಿ, ವಿಟಮಿನ್‌ ಡಿ, ಮೆಗ್ನೀಶಿಯಂ, ರೈಬೋ ಫ್ಲೇವಿನ್‌, ತಾಮ್ರ, ಪಾಸ್ಪರಸ್‌, ಹಾಗೂ ಭರಪೂರ ನೀರಿನಂಶವನ್ನು ಹೊಂದಿರುವ ಈ ಹಣ್ಣು ಬೇಸಿಗೆಗೆ ಹೇಳಿ ಮಾಡಿಸಿದ ಹಣ್ಣು.

ಲಿಚಿಯಲ್ಲಿ ಸಾಕಷ್ಟು ನಾರಿನಂಶವಿದೆ. ಈ ನಾರಿನಂಶವಿರುವುದರಿಂದ ಬಹಳ ಹೊತ್ತು ಹೊಟ್ಟೆ ತುಂಬಿದ ಅನುಭವವಿರುತ್ತದೆ. ಸಂತೃಪ್ತಿಯ ಭಾವನೆ ಇರುವುದರಿಂದ ಆಗಾಗ ಏನಾದರೂ ತಿನ್ನಬೇಕೆಂಬ ಬಯಕೆ ಆಗುವುದಿಲ್ಲ. ಇದರಲ್ಲಿ ಅತಿಯಾದ ನೀರಿನಂಶವಿರುವುದರಿಂದ ತೂಕ ಇಳಿಸಲೂ ಕೂಡಾ ಇದು ನೆರವಾಗುತ್ತದೆ.

ಸೌಂದರ್ಯಕ್ಕೂ ಈ ಹಣ್ಣಿನಿಂದ ಅತ್ಯುತ್ತಮ ಲಾಭವಿದೆ. ಇದರಲ್ಲಿ ವಿಟಮಿನ್‌ ಸಿ ಹೇರಳವಾಗಿ ಇರುವುದರಿಂದ ಚರ್ಮದ ಆರೋಗ್ಯಕ್ಕೆ ಇದು ಒಳ್ಳೆಯದು. ಚರ್ಮ ಸುಕ್ಕಾಗುವುದನ್ನೂ ಇದು ತಡೆಯುತ್ತದೆ.

ಹೇರಳವಾಗಿ ಆಂಟಿ ಆಕ್ಸಿಡೆಂಟ್‌ ಇದರಲ್ಲಿ ಇರುವುದರಿಂದ ಆಕ್ಸಿಡೇಟಿವ್‌ ಒತ್ತಡವನ್ನು ಇದು ಕಡಿಮೆ ಮಾಡುತ್ತದೆ. ಲಿಚಿ ಹಣ್ಣುಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಲ್ಲಿರುವ ವಿಟಮಿನ್‌ ಸಿ ರೋಗ ನಿರೋಧಕತೆಗೆ ಅತ್ಯಂತ ಅಗತ್ಯವಾದ ಪೋಷಕಾಂಶ.

ಲಿಚಿಯಲ್ಲಿ ಪೊಟಾಶಿಯಂ ಅಂಶ ಇರುವುದರಿಂದ ಇದು ರಕ್ತದೊತ್ತಡವನ್ನು ಸಮತೋಲನಗೊಳಿಸಲು ನೆರವಾಗುತ್ತದೆ. ರಕ್ತದೊತ್ತಡ ಕಡಿಮೆ ಮಾಡಿ ಸಮತೋಲನಕ್ಕೆ ತರಲು ಇದು ಒಳ್ಳೆಯದು.

ಲಿಚಿಯಲ್ಲಿ ನಾರಿನಂಶ ಹೇರಳವಾಗಿ ಇರುವುದರಿಂದ ಇದು ಜೀರ್ಣಕ್ರಿಯೆಗೂ ಒಳ್ಳೆಯದು. ಮಲಬದ್ಧತೆಯಂತ ಸಮಸ್ಯೆ ಇರುವ ಮಂದಿಗೆ ಲಿಚಿ ಒಳ್ಳೆಯದು. ದೇಹದಲ್ಲಿ ಜೀರ್ಣಕ್ರಿಯೆ ಸರಿಯಾಗಿ ಆಗಿ ಬೇಡದ ಅಂಶಗಳು ಸುಲಭವಾಗಿ ದೇಹದಿಂದ ಹೊರಹೋಗಲು ಇದು ಸಹಾಯ ಮಾಡುತ್ತದೆ.

ಲಿಚಿಯ ಬಗ್ಗೆ ಸಾಕಷ್ಟ ತಪ್ಪುತಿಳುವಳಿಕೆಗಳೂ ಇವೆ. ಲಿಚಿ ಸಿಹಿಯಾಗಿರುವುದರಿಂದ ಇದನ್ನು ಹೆಚ್ಚು ತಿನ್ನುವುದು ಒಳ್ಳೆಯದಲ್ಲ ಎಂಬ ಭಾವನೆಯೂ ಇದೆ. ಆದರೆ, ಈ ಜ್ಯೂಸಿಯಾದ ಹಣ್ಣಿನಲ್ಲಿ ಹೆಚ್ಚು ಸಕ್ಕರೆ ಇರುವುದಾದರೂ, ಇದನ್ನು ಬೇಡವೇ ಬೇಡ ಎಂಬಷ್ಟು ದೂರ ತಳ್ಳುವ ಅಗತ್ಯವಿಲ್ಲ ಎನ್ನುತ್ತಾರೆ ತಜ್ಞರು. ಯಾಕೆಂದರೆ, ಇದರಿಂದ ಸಿಗುವ ಅಪರೂಪದ ಪೋ಼ಷಕಾಂಶಗಳಿಗೆ ಇದನ್ನು ಹಿತಮಿತವಾಗಿಯಾದರೂ ಸೇವಿಸುವುದು ಒಳ್ಳೆಯದು.

 

Ad
Ad
Nk Channel Final 21 09 2023
Ad