ತೆಂಗಿನಕಾಯಿಯ ಸೇವನೆಯಿಂದ ಆರೋಗ್ಯದಲ್ಲಿ ಹಲವಾರು ರೀತಿಯ ಪ್ರಯೋಜನಗಳನ್ನು ಕಾಣಬಹುದು. ತೆಂಗಿನಕಾಯಿಯಲ್ಲಿ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್, ಹಲವಾರು ಪ್ರಮುಖ ಖನಿಜಗಳು ಮತ್ತು ಸಣ್ಣ ಪ್ರಮಾಣದ ಬಿ ಜೀವಸತ್ವಗಳು ಇವೆ. ತೆಂಗಿನಕಾಯಿಯಲ್ಲಿ ಮ್ಯಾಂಗನೀಸ್ ಅಧಿಕವಾಗಿದ್ದು, ಇದು ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ. ಅದಲ್ಲದೇ ಇದರಲ್ಲಿರುವ ನಾರಿನಾಂಶವು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.
ಒಣ ಕೊಬ್ಬರಿಯಿಂದ ತಯಾರಿಸಿದ ಶುದ್ಧ ತೆಂಗಿನ ಎಣ್ಣೆಯನ್ನು ಸೇವಿಸುವುದರಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ. ಈ ತೆಂಗಿನೆಣ್ಣೆಯ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಿ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ತೆಂಗಿನಕಾಯಿಯಲ್ಲಿ ಕಡಿಮೆ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳು ಹಾಗೂ ಫೈಬರ್ ಮತ್ತು ಕೊಬ್ಬಿನ ಅಂಶಗಳು ಅಧಿಕವಾಗಿದೆ. ಇದು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸಿ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ.
ತೆಂಗಿನಕಾಯಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಸ್ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಅದಲ್ಲದೇ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣವನ್ನು ಹೊಂದಿದ್ದು, ಕೋಶಗಳನ್ನು ಹಾನಿಯಿಂದ ರಕ್ಷಿಸಿ ಆರೋಗ್ಯ ಸಮಸ್ಯೆ ಬಾರದಂತೆ ತಡೆಯುತ್ತದೆ. ನಿಯಮಿತವಾದ ತೆಂಗಿನ ಕಾಯಿ ಸೇವನೆಯು ಒಣ ಚರ್ಮ ಮತ್ತು ಕೂದಲು ಉದುರುವುದು ಹೀಗೆ ಇನ್ನಿತ್ತರ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ. ಚರ್ಮದಲ್ಲಿನ ತೇವಾಂಶ ಹೆಚ್ಚಿಸುವುದಲ್ಲದೆ ಚರ್ಮದ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ.