Bengaluru 20°C
Ad

ಮೊಡವೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಏಲಕ್ಕಿ ಪ್ರಯೋಜನಕಾರಿ!

ಏಲಕ್ಕಿಯನ್ನು ಭಾರತದಲ್ಲಿ ಅನೇಕ ರೂಪದಲ್ಲಿ ಬಳಕೆ ಮಾಡಲಾಗುತ್ತದೆ. ಏಲಕ್ಕಿ ಆಹಾರದ ಸುಹಾಸನೆಯನ್ನು ಹೆಚ್ಚಿಸುತ್ತದೆ.

ಏಲಕ್ಕಿಯನ್ನು ಭಾರತದಲ್ಲಿ ಅನೇಕ ರೂಪದಲ್ಲಿ ಬಳಕೆ ಮಾಡಲಾಗುತ್ತದೆ. ಏಲಕ್ಕಿ ಆಹಾರದ ಸುಹಾಸನೆಯನ್ನು ಹೆಚ್ಚಿಸುತ್ತದೆ. ಸಿಹಿಯಾಗಿರುವ ಮಸಾಲೆಯುಕ್ತ ಆಹಾರದ ರುಚಿಯನ್ನು ಹೆಚ್ಚಿಸಲು ನಾವು ಹೆಚ್ಚಾಗಿ ಏಲಕ್ಕಿಯನ್ನು ಬಳಸುತ್ತೇವೆ. ಮೊಡವೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಏಲಕ್ಕಿ ತುಂಬಾ ಪ್ರಯೋಜನಕಾರಿ ಎಂದು ತಿಳಿದರೆ ನೀವು ಆಶ್ಚರ್ಯಚಕಿತರಾಗುವಿರಿ.

ಚರ್ಮದ ತುರಿಕೆ ಅಥವಾ ಗಾಯಗಳಿಗೂ ಈ ಏಲಕ್ಕಿ ತುಂಬಾ ಪರಿಣಾಮಕಾರಿ. ಈ ಸಣ್ಣ ಏಲಕ್ಕಿಯನ್ನು ಸೇವಿಸುವುದರಿಂದ ಚರ್ಮದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ. ಏಲಕ್ಕಿಯಲ್ಲಿ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಇದೆ. ಏಲಕ್ಕಿ ಮಲಬದ್ಧತೆ, ಗ್ಯಾಸ್, ಅಸಿಡಿಟಿ, ಅಸ್ತಮಾದಂತಹ ಸಮಸ್ಯೆಗೆ ಪರಿಹಾರ ನೀಡುತ್ತದೆ.

ನೆಗಡಿ – ಶೀತದಿಂದ ಬಳಲುವ ಜನರು ಏಲಕ್ಕಿಯನ್ನು ನಿತ್ಯ ಬಳಸಬೇಕು. ಇದು ನೆಗಡಿ ಜೊತೆ ಕಾಡುವ ಗಂಟಲು ನೋವನ್ನು ಕಡಿಮೆ ಮಾಡುತ್ತದೆ. ಏಲಕ್ಕಿಯನ್ನು ಹಾಲಿನಲ್ಲಿ ಕುದಿಸಿ ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ರಾತ್ರಿ ಮಲಗುವ ಮೊದಲು ಕುಡಿಯುವುದರಿಂದ ನಿಮ್ಮ ದೇಹವು ಒಳಗಿನಿಂದ ಬಲಗೊಳ್ಳುತ್ತದೆ.

ಇದು ಕ್ಯಾನ್ಸರ್ ವಿರೋಧಿ ಸಂಯುಕ್ತಗಳನ್ನು ಹೊಂದಿದೆ. ಏಲಕ್ಕಿಯಲ್ಲಿರುವ ಅಂಶಗಳು ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ. ಆದ್ದರಿಂದ ಪ್ರತಿದಿನ ಏಲಕ್ಕಿ ಸೇವಿಸುವುದು ಅಥವಾ ಅಡುಗೆಯಲ್ಲಿ ಏಲಕ್ಕಿ ಬಳಸುವುದು ಪ್ರಯೋಜನಕಾರಿ. ಏಲಕ್ಕಿ ಸೇವನೆ ಮಾಡುವುದ್ರಿಂದ ಅದ್ರಲ್ಲಿರುವ ಉರಿಯೂತದ ಅಂಶಗಳು ಬಾಯಿ ಮತ್ತು ಚರ್ಮದ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆಗೆ ತುಂಬಾ ಸಹಾಯ ಮಾಡುತ್ತದೆ. ಅಜೀರ್ಣ ಅಥವಾ ಎದೆಯುರಿ ಇದ್ದರೆ ಏಲಕ್ಕಿ ಸೇವಿಸಬಹುದು. ದೇಹದ ರಕ್ತ ಪರಿಚಲನೆ ಸಾಮಾನ್ಯಗೊಳಿಸುವ ಕೆಲಸವನ್ನು ಏಲಕ್ಕಿ ಮಾಡುತ್ತದೆ. ನೀವು ಏಲಕ್ಕಿಯನ್ನು ತಿನ್ನುವುದ್ರಿಂದ ನಿಮ್ಮ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

ಉಸಿರಾಟದ ತೊಂದರೆ ಇರುವವರಿಗೂ ಏಲಕ್ಕಿ ಪ್ರಯೋಜನಕಾರಿ. ಇದಲ್ಲದೆ, ಹಲ್ಲು ನೋವು ನಿವಾರಿಸಲು ಸಹಾಯ ಮಾಡುತ್ತದೆ. ಊಟದ ನಂತ್ರ ಏಲಕ್ಕಿ ತಿನ್ನುವುದ್ರಿಂದ ಮುಖ್ಯವಾಗಿ ಆಹಾರ ಜೀರ್ಣವಾಗುತ್ತದೆ. ಏಲಕ್ಕಿ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದ್ರಿಂದಾಗಿ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ.

 

Ad
Ad
Nk Channel Final 21 09 2023