Bengaluru 23°C
Ad

ನೆನೆಹಾಕಿದ ಒಂದೆರಡು ವಾಲ್ನಟ್ ದಿನಾ ತಿಂದರೆ,ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತೆ

ಉತ್ತಮ ಜೀವನದಲ್ಲಿ ಆರೋಗ್ಯ ಮುಖ್ಯ ಪಾತ್ರ ವಹಿಸುತ್ತದೆ. ಆರೋಗ್ಯ ಸರಿ ಇದ್ದರೆ ಎಲ್ಲವೂ ಸರಿ. ಆಗಿನ ಕಾಲಕ್ಕೂ ಈಗಿನ ಕಾಲಕ್ಕೂ ಬಹಳ ವತ್ಯಾಸವಿದೆ. ಈಗಿನ ಲಾಕದಲ್ಲಿ ಎಲ್ಲದರಲ್ಲೂ ಕೆಮಿಕಲ್‌ ಅಂಶ ಇರುತ್ತದೆ. ಹಾಗಾಗಿ ನಾವೂ ಜಾಗೃತವಾಗಿ ಇರಬೇಕು ಪ್ರೋಟೀನ್‌ ಆಹಾರ ಪಡೆಯಬೇಕು.

ಉತ್ತಮ ಜೀವನದಲ್ಲಿ ಆರೋಗ್ಯ ಮುಖ್ಯ ಪಾತ್ರ ವಹಿಸುತ್ತದೆ. ಆರೋಗ್ಯ ಸರಿ ಇದ್ದರೆ ಎಲ್ಲವೂ ಸರಿ. ಆಗಿನ ಕಾಲಕ್ಕೂ ಈಗಿನ ಕಾಲಕ್ಕೂ ಬಹಳ ವತ್ಯಾಸವಿದೆ. ಈಗಿನ ಲಾಕದಲ್ಲಿ ಎಲ್ಲದರಲ್ಲೂ ಕೆಮಿಕಲ್‌ ಅಂಶ ಇರುತ್ತದೆ. ಹಾಗಾಗಿ ನಾವೂ ಜಾಗೃತವಾಗಿ ಇರಬೇಕು ಪ್ರೋಟೀನ್‌ ಆಹಾರ ಪಡೆಯಬೇಕು.ಆರೋಗ್ಯ ತಜ್ಞರು ಹೇಳುವ ಹಾಗೆ ಕೇವಲ ಒಂದು ವಾಲ್ನಟ್ ಬೀಜವನ್ನು ಇಡೀ ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ನಮಗೆ ಅನೇಕ ಪ್ರಯೋಜನಗಳು ಸಿಗುತ್ತವೆ.

ಹಾಗಾದ್ರೆ ಇದರಿಂದ ಸಿಗುವ ಪ್ರಯೋಜನಗಳೇನೆಂದು ತಿಳಿಯೋಣ ಬನ್ನಿ.

ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು,
ವಾಲ್ನಟ್ ಬೀಜಗಳು ನಮ್ಮ ಮೆದುಳಿನ ಆರೋಗ್ಯದ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತವೆ. ಏಕೆಂದರೆ ಇವುಗಳಲ್ಲಿ ಒಮೆಗಾ 3 ಫ್ಯಾಟಿ ಆಮ್ಲಗಳ ಪ್ರಮಾಣ ಹೇರಳವಾಗಿ ಕಂಡುಬಂದಿದ್ದು, ಮೆದುಳಿನ ಕಾರ್ಯ ಚಟುವಟಿಕೆಯನ್ನು ಅಭಿವೃದ್ಧಿಪಡಿಸುತ್ತದೆ.
ಪ್ರತಿದಿನ ಒಂದೊಂದು ವಾಲ್ನಟ್ ಬೀಜವನ್ನು ನೆನೆಸಿ ತಿನ್ನುವುದರಿಂದ ನಮ್ಮ ಮಾನಸಿಕ ಅರಿವು, ನೆನಪಿನ ಶಕ್ತಿ ಮತ್ತು ಬುದ್ಧಿವಂತಿಕೆ ಹೆಚ್ಚಾ ಗುತ್ತದೆ.​

ಹೃದಯದ ಆರೋಗ್ಯಕ್ಕೆ ಒಳ್ಳೆಯದು,
ವಾಲ್ನಟ್ ಬೀಜಗಳು ತಮ್ಮಲ್ಲಿ ಆರೋಗ್ಯಕರವಾದ ಕೊಬ್ಬು ಹಾಗೂ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿದ್ದು, ಇದು ನಮ್ಮ ದೇಹದ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ.
ನಮ್ಮ ರಕ್ತದ ಒತ್ತಡವನ್ನು ಆರೋಗ್ಯಕರವಾಗಿ ನಿರ್ವಹಿಸುವುದರ ಜೊತೆಗೆ ನಮ್ಮ ಹೃದಯ ರಕ್ತನಾಳದ ಕಾಯಿಲೆಯನ್ನು ದೂರ ಮಾಡಿ ಹೃದಯಕ್ಕೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳುತ್ತದೆ.​​

ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು
ನೆನೆಸಿದ ವಾಲ್ನಟ್ ಬೀಜಗಳು ತಮ್ಮಲ್ಲಿ ಫೈಟಿಕ್ ಆಮ್ಲ ಕಡಿಮೆ ಮಾಡುವ ಗುಣವನ್ನು ಹೊಂದಿವೆ. ಹೀಗಾಗಿ ನಾವು ಸೇವಿಸಿದ ಆಹಾರ ನಮ್ಮ ದೇಹದಲ್ಲಿ ಚೆನ್ನಾಗಿ ಜೀರ್ಣವಾಗುತ್ತದೆ ಜೊತೆಗೆ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಪಟ್ಟಂತೆ ಮಲಬದ್ಧತೆ, ಅಜೀರ್ಣತೆ ಹಾಗೂ ಹೊಟ್ಟೆ ಉಬ್ಬರ ಸಮಸ್ಯೆ ಇರುವುದಿಲ್ಲ. ಕರುಳಿನ ಆರೋಗ್ಯವನ್ನು ಸಹ ಇದು ಉತ್ತಮಪಡಿಸುತ್ತದೆ.

ತೂಕ ನಿರ್ವಹಣೆ ಮಾಡುತ್ತದೆ
ನಮ್ಮ ದೇಹದ ತೂಕವನ್ನು ನಿರ್ವಹಣೆ ಮಾಡುವಲ್ಲಿ ವಾಲ್ನಟ್ ಬೀಜಗಳು ಸಹಾಯಕ ಎಂದು ಹೇಳಬಹುದು. ಏಕೆಂದರೆ ಇವುಗಳು ತಮ್ಮಲ್ಲಿ ಹೆಚ್ಚಿನ ಪ್ರಮಾಣದ ನಾರಿನ ಹಾಗೂ ಪ್ರೋಟಿನ್ ಅಂಶವನ್ನು ಒಳಗೊಂಡಿದ್ದು, ನಮ್ಮ ಹೊಟ್ಟೆ ತುಂಬಿದ ಅನುಭವ ಉಂಟು ಮಾಡುತ್ತದೆ ಜೊತೆಗೆ ಕ್ಯಾಲೋರಿಗಳನ್ನು ಕಡಿಮೆ ಮಾಡುತ್ತವೆ. ಇದರಿಂದ ನಮ್ಮ ದೇಹದ ತೂಕ ಹೆಚ್ಚಾಗಲು ಬಿಡುವುದಿಲ್ಲ.

ಚರ್ಮದ ಆರೋಗ್ಯಕ್ಕೆ ಒಳ್ಳೆಯದು
ನಮ್ಮ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಕೂಡ ವಾಲ್ನಟ್ ಬೀಜಗಳು ಪ್ರಮುಖ ಪಾತ್ರ ವಹಿಸುತ್ತವೆ. ಏಕೆಂದರೆ ಇವುಗಳಲ್ಲಿ ವಿಟಮಿನ್ ಬಿ5 ಮತ್ತು ವಿಟಮಿನ್ ಇ ಪ್ರಮಾಣ ಜೋರಾಗಿದ್ದು, ಆರೋಗ್ಯಕರವಾದ ತ್ವಚೆಗೆ ಇವುಗಳು ಅಗತ್ಯ.
ಈ ಪೌಷ್ಟಿಕ ಸತ್ವಗಳು ನಮ್ಮ ದೇಹದ ಉರಿಯುತವನ್ನು ಕಡಿಮೆ ಮಾಡು ವುದರ ಜೊತೆಗೆ ಚರ್ಮದ ಒಣಗುವಿಕೆ ತೊಂದರೆಯನ್ನು ದೂರ ಮಾಡುತ್ತದೆ. ವಯಸ್ಸಾಗುವಿಕೆ ಪ್ರಕ್ರಿಯೆಯಿಂದ ನಮ್ಮನ್ನು ಕಾಪಾಡುತ್ತದೆ ಮತ್ತು ಕಾಂತಿಯುತವಾದ ಚರ್ಮ ನಮ್ಮದಾ ಗುತ್ತದೆ.​

ಕೂದಲು ಬಲಗೊಳ್ಳುತ್ತದೆ
ವಾಲ್ನಟ್ ಬೀಜಗಳಲ್ಲಿ ವಿಟಮಿನ್ ಬಿ7 ಬಯೋಟಿನ್ ರೂಪದಲ್ಲಿ ಲಭ್ಯವಿದ್ದು, ನಮ್ಮ ತಲೆ ಕೂದಲಿನ ಕಿರು ಚೀಲಗಳನ್ನು ಅಭಿವೃದ್ಧಿ ಪಡಿಸುವಲ್ಲಿ ನೆರವಾಗುತ್ತದೆ. ಇದರಿಂದ ತಲೆ ಕೂದಲು ಉದುರುವುದು ಕಡಿಮೆಯಾಗುತ್ತದೆ ಜೊತೆಗೆ ತಲೆ ಕೂದಲಿನ ಬೆಳವಣಿಗೆ ಉತ್ತಮ ಗೊಳ್ಳುತ್ತದೆ. ತಲೆಕೂದಲು ಬೆಳೆಯಲು ಹಾಗೂ ಸೊಂಪಾಗಿ ಕಾಣಲು ವಾಲ್ನಟ್ ಬೀಜಗಳು ಸಹಾಯ ಮಾಡುತ್ತವೆ.

ನಿದ್ರೆ ಚೆನ್ನಾಗಿ ಬರುತ್ತದೆ
ನೆನೆ ಹಾಕಿದ ವಾಲ್ನಟ್ ಬೀಜಗಳು ನಮ್ಮ ನಿದ್ರೆಯ ಗುಣಮಟ್ಟ ವನ್ನು ಹೆಚ್ಚುವಂತೆ ಮಾಡುತ್ತವೆ ಮತ್ತು ನಿದ್ರಾಹೀನತೆ ಸಮಸ್ಯೆಯನ್ನು ದೂರ ಮಾಡುತ್ತವೆ.
ವಾಲ್ನಟ್ ಬೀಜಗಳಲ್ಲಿ ಮೆಲಟೋನಿನ್ ಎಂಬ ಹಾರ್ಮೋನ್ ಇರಲಿದ್ದು, ರಾತ್ರಿ ಹೊತ್ತು ನೆಮ್ಮದಿಯಾಗಿ ನಿದ್ರೆ ಮಾಡುವಂತ ಮಾಡುತ್ತದೆ. ವಾಲ್ನಟ್ ಬೀಜಗಳನ್ನು ನೆನೆ ಹಾಕಿ ಸೇವಿಸುವುದ ರಿಂದ ನಮ್ಮ ಸಂಪೂರ್ಣ ಆರೋಗ್ಯ ಉತ್ತಮಗೊಳ್ಳುತ್ತದೆ.​

ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು
ವಾಲ್ನಟ್ ಬೀಜಗಳಲ್ಲಿ ಮೆಗ್ನೀಷಿಯಮ್, ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಪ್ರಮಾಣ ಹೇರಳವಾಗಿದ್ದು, ಆರೋಗ್ಯಕರವಾದ ಮೂಳೆಗಳು ನಮ್ಮ ದಾಗುವ ಹಾಗೆ ಮಾಡುತ್ತದೆ. ಮೂಳೆಗಳಿಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆಗಳು ಇದ್ದರೂ ಸಹ ದೂರವಾಗುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ವಿಟಮಿನ್ ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳು ಇರುವಂತಹ ವಾಲ್ನಟ್ ಬೀಜಗಳನ್ನು ಸೇವಿಸುವುದರಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಏಕೆಂದರೆ ವಾಲ್ನಟ್ ಬೀಜಗಳು ತಮ್ಮಲ್ಲಿ ಜಿಂಕ್ ಮತ್ತು ವಿಟಮಿನ್ ಇ ಪ್ರಮಾಣವನ್ನು ಹೆಚ್ಚಾಗಿ ಒಳಗೊಂಡಿದ್ದು, ಆರೋಗ್ಯಕರವಾದ ರೋಗ ನಿರೋಧಕ ವ್ಯವಸ್ಥೆ ನಮ್ಮದಾಗುತ್ತದೆ ಮತ್ತು ಸೋಂಕುಗಳು ಹಾಗೂ ಅಸ್ವಸ್ಥತೆ ಪರಿಣಾಮಕಾರಿಯಾಗಿ ದೂರವಾಗುತ್ತದೆ.​

Ad
Ad
Nk Channel Final 21 09 2023
Ad