Ad

ಬಾದಾಮ್​ ನೆನೆಯಿಟ್ಟು ತಿನ್ನುವುದರಿಂದ ಆಗುವ ಲಾಭಗಳೇನು?

ಬಾದಾಮ್ ಪೋಷಕಾಂಶಗಳ ಶಕ್ತಿ ಕೇಂದ್ರ. ನಿತ್ಯ ಬಾದಾಮ್ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಸಹಕಾರಿಯಾಗಿದೆ. ದಿನಕ್ಕೆ 23 ಬಾದಾಮ್ ತಿನ್ನುವುದರಿಂದ ದೇಹಕ್ಕೆ ಉತ್ತಮ ಪೋಷಕಾಂಶವನ್ನು ನೀಡಿದಂತಾಗುತ್ತದೆ.

ಬಾದಾಮ್ ಪೋಷಕಾಂಶಗಳ ಶಕ್ತಿ ಕೇಂದ್ರ. ನಿತ್ಯ ಬಾದಾಮ್ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಸಹಕಾರಿಯಾಗಿದೆ. ದಿನಕ್ಕೆ 23 ಬಾದಾಮ್ ತಿನ್ನುವುದರಿಂದ ದೇಹಕ್ಕೆ ಉತ್ತಮ ಪೋಷಕಾಂಶವನ್ನು ನೀಡಿದಂತಾಗುತ್ತದೆ.

ನಮ್ಮ ದೇಹಕ್ಕೆ ಬೇಕಾಗುಷ್ಟು ಮಾತ್ರ ನಾವು ಆರೋಗ್ಯಕರ ಆಹಾರವನ್ನು ಸೇವನೆ ಮಾಡಬೇಕು. ಅತಿಯಾದರೆ ಅಮೃತವೂ ವಿಷ ಅಂತಾರೆ ಹೀಗಾಗಿ ನಮ್ಮ ದೇಹಕ್ಕೆ ಸರಿಯಾದ ಪ್ರಮಾಣದ ಆಹಾರ ಸರಿಯಾದ ಸಮಯದಲ್ಲಿ ನೀಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ.

ಭಾರತದಲ್ಲಿ ಸಾಮಾನ್ಯವಾಗಿ ಬಾದಾಮ್​ಗಳನ್ನು ಹಿಂದಿನ ದಿನ ರಾತ್ರಿ ನೀರಿನಲ್ಲಿ ಇಲ್ಲವೇ ಹಾಲಿನಲ್ಲಿ ನೆನೆಯಿಟ್ಟು ಬೆಳಗ್ಗೆಯೆದ್ದು ತಿನ್ನುವುದು ವಾಡಿಕೆ ಇದೆ. ಬಾದಾಮ್​ ದೇಹಕ್ಕೆ ತುಂಬಾ ಹೀಟ್ ಅನ್ನುವುದನ್ನ ಆಯುರ್ವೇದ ಹೇಳುತ್ತದೆ. ಬಾದಾಮ್​ನ್ನು ನೇರವಾಗಿ ಸೇವಿಸುವುದರಿಂದ ದೇಹಕ್ಕೆ ಹೀಟ್ ಜಾಸ್ತಿ ಆಗಿ ಅದಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುತ್ತವೆ ಎಂಬ ವಾದವಿದೆ.

ಬಾದಾಮ್ ನೇರವಾಗಿ ಸೇವಿಸುವುದರಿಂದ ಅಜೀರ್ಣ, ಊರಿಯೂತದಂತಹ ಸಮಸ್ಯೆಗಳು ಕಾಣುತ್ತವೆ ಎಂದು ಆಯುರ್ವೇದ ಹೇಳುತ್ತದೆ. ಹೀಗಾಗಿ ದಿನಕ್ಕೆ 23 ಬಾದಾಮ್ ನೀರಿನಲ್ಲಿ ನೆನೆಯಿಟ್ಟು ಬೆಳಗ್ಗೆ ಸೇವಿಸುವುದರಿಂದ ದೇಹಕ್ಕೆ ಒಳ್ಳೆಯ ಪೋಷಕಾಂಶಗಳು ದೊರೆಯುತ್ತವೆ.

ನೆನೆಯಿಟ್ಟು ತಿನ್ನುವ ಬದಲು ನೇರವಾಗಿ ಸೇವಿಸುವುದರಿಂದಲೂ ಸಾಕಷ್ಟು ಲಾಭ ಇದೆ. ನೇರವಾಗಿ ಬಾದಾಮ್ ಸೇವನೆ ಮಾಡುವುದರಿಂದ ನ್ಯೂಟ್ರಿಷನ್ ಇನ್ನೂ ಹೆಚ್ಚು ನಮಗೆ ಸಿಗುತ್ತದೆ. ಅದರಲ್ಲೂ ಅದರ ರುಚಿ ಇನ್ನೂ ಹೆಚ್ಚು ಬೇಕೆನೆಸಿದಲ್ಲಿ ಹುರಿದು ತಿನ್ನುವುದಿಂದ ಹೆಚ್ಚು ಆರೋಗ್ಯಕರ ಎಂದು ಕೂಡ ಹೇಳಲಾಗುತ್ತದೆ.

ಭಾರತದಲ್ಲಿ ಅತಿ ಹೆಚ್ಚು ಪ್ರಚಲಿತದಲ್ಲಿರೋದು ನೆನೆಯಿಟ್ಟು ತಿನ್ನುವ ಪದ್ಧತಿ. ಹೀಗಾಗಿ ಹೇಗೆ ತಿಂದರೂ ಬಾದಾಮ್ ಆರೋಗ್ಯದ ವಿಷಯದಲ್ಲಿ ಹೆಚ್ಚು ಲಾಭಕರ ಹೀಗಾಗಿ ತಪ್ಪದೇ ದಿನಕ್ಕೆ 23 ಬಾದಾಮ್​ಗಳನ್ನು ತಿನ್ನುವ ರೂಢಿ. ಇದು ನಿಮ್ಮನ್ನು ಅನೇಕ ರೋಗ ರುಜಿನೆಗಳಿಂದ ರಕ್ಷಿಸಬಲ್ಲ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

Ad
Ad
Nk Channel Final 21 09 2023