ಬಾಳೆಹಣ್ಣಿನಲ್ಲಿ ಪೋಟ್ಯಾಶಿಯಂ ಸೇರಿದಂತೆ ಮೆಗ್ನೆಶಿಯಂ, ವಿಟಮಿನ್ ಬಿ6 ಸೇರಿದಂತೆ ಹಲವು ಪೋಷಕಾಂಶಗಳನ್ನು ಹೊಂದಿದೆ. ಬಾಳೆಹಣ್ಣು ಈಗ ಮಾರುಕಟ್ಟೆಯಲ್ಲಿ ಕ್ಯಾನ್ಸರ್ ತರುವಂತಹ ಮಾರಕ ವಸ್ತುವಾಗಿ ಬಿಕರಿಯಾಗುತ್ತಿದೆ.
ಚೋಟುದ್ದ ಬಾಳೆಹಣ್ಣನ್ನು ಕೆಮಿಕಲ್ಗಳನ್ನು ಬಳಸಿ ಇಷ್ಟೂದ್ದ ಮಾಡಿಡಲಾಗುತ್ತದೆ. ಗ್ರಾಹಕರನ್ನು ಸೆಳೆಯಲು ಅಂತ ಬಾಳೆಹಣ್ಣಿನ ಗಾತ್ರವನ್ನು ದೊಡ್ಡದಾಗಿ ಮಾಡಿಟ್ಟು ಮಾಡಲಾಗುತ್ತಿದೆ. ಕಾಯಿ ತಾನಾಗಿಯೇ ಹಣ್ಣಾಗಬೇಕು, ತಾನಾಗಿಯೇ ಮಾಗಬೇಕು.
ಈಗ ಬಾಳೆಹಣ್ಣನ್ನು ಅದು ಹಣ್ಣಾಗುವ ಅವಧಿಪೂರ್ವವೇ ರಾಸಾಯನಿಕ ಪದಾರ್ಥಗಳನ್ನು ಬಳಸಿ ಹಣ್ಣು ಮಾಡಲಾಗುತ್ತಿದೆ. ಈ ಮೂಲಕ ಜನರಲ್ಲಿ ಒಂದು ಸ್ಲೋ ಪಾಯ್ಸನ್ನ್ನು ಉಣಿಸುತ್ತಿದ್ದಾರೆ ವ್ಯಾಪಾರಿಗಳು. ಕಾರ್ಬೈಡ್, ಅದರಲ್ಲೂ ವಿಶೇಷವಾಗಿ ಕ್ಯಾಲ್ಸಿಯಂ ಕಾರ್ಬೈಡ್ ಕೆಮಿಕಲ್ ಮೂಲಕ ಬಾಳೆ ಕಾಯಿಗಳನ್ನು ಅವಧಿ ಪೂರ್ಣವೇ ಹಣ್ಣುಗಳನ್ನಾಗಿ ಮಾಡಿ ಮಾರುಕಟ್ಟೆಗೆ ಬಿಡಲಾಗುತ್ತಿದೆ.
ಕ್ಯಾಲ್ಸಿಯಂ ಕಾರ್ಬೈಡ್ ಕೆಮಿಕಲ್ ಮೂಲಕವೇ ಬಾಳೆ ಕಾಯಿಗಳು ಈಗ ಹಣ್ಣಾಗುತ್ತಿವೆ.ಕ್ಯಾಲ್ಸಿಯಂ ಕಾರ್ಬೈಡ್ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಬ್ಯಾನ್ ಆಗಿರುವ ಕೆಮಿಕಲ್. ಇದು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ಕೆಮಿಕಲ್ ಎಂದೇ ಗುರುತಿಸಲಾಗುತ್ತೆ. ಇದು ದೇಹದೊಳಗೆ ಹೋಗುವುದರಿಂದ ಕ್ಯಾನ್ಸರ್ ಮತ್ತು ಹಲವು ಅಪಾಯಕಾರಿ ರೋಗಗಳಿಗೆ ತುತ್ತಾಗುವ ಸಂಭವವಿದೆ.