ಬಾಳೆಹಣ್ಣು ರುಚಿ ಜೊತೆಗೆ ಪೌಷ್ಟಿಕಾಂಶ ಭರಿತವಾಗಿರುತ್ತದೆ. ಬಾಳೆಹಣ್ಣು ಮಾತ್ರವಲ್ಲ ಬಾಳೆ ಗಿಡದ ಪ್ರತಿಯೊಂದು ಭಾಗವೂ ಒಂದೊಂದು ರೀತಿಯಲ್ಲಿ ಉಪಯೋಗಕ್ಕೆ ಬರುತ್ತವೆ. ಬಾಳೆಹಣ್ಣಿನ ಮೊದಲು ಬರುವ ಬಾಳೆ ಹೂವು ಸಹ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಬಾಳೆ ಹೂವಿನಲ್ಲಿ ವಿಟಮಿನ್ ಸಿ, ಎ, ಇ, ಪೊಟ್ಯಾಸಿಯಮ್ ಮತ್ತು ಫೈಬರ್ ನಂತಹ ವಿವಿಧ ಪೋಷಕಾಂಶಗಳಿವೆ, ಇದು ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು ವಿವಿಧ ದೈಹಿಕ ಸಮಸ್ಯೆಗಳನ್ನು ಪರಿಹರಿಸುವ ವರೆಗೆ, ಇವು ಅನೇಕ ರೀತಿಯಲ್ಲಿ ಆರೋಗ್ಯವನ್ನು ಕಾಪಾಡುತ್ತದೆ.
ಬಾಳೆ ಹೂವಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದರಿಂದಾಗಿ ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೊತೆಗೆ ಹೃದಯದ ಸಮಸ್ಯೆಗಳನ್ನು ಕೂಡ ನಿವಾರಣೆ ಮಾಡುತ್ತದೆ. ಬಾಳೆ ಹೂವಿನಲ್ಲಿ ಕಬ್ಬಿಣದ ಅಂಶ ಹೇರಳವಾಗಿದೆ. ಈ ಬಾಳೆ ಹೂವು ಹಿಮೋಗ್ಲೋಬಿನ್ ಹೆಚ್ಚಾಗಲು ಸಹಾಯ ಮಾಡುತ್ತದೆ. ನೀವು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮ ದೈನಂದಿನ ಆಹಾರದಲ್ಲಿ ಬಾಳೆ ಹೂವನ್ನು ಸೇರಿಸಿಕೊಳ್ಳಬಹುದು.
ಬೇರೆ ಸಮಯಕ್ಕಿಂತ ಮಳೆಗಾಲದಲ್ಲಿ ಶೀತ ಮತ್ತು ಜ್ವರದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ. ಈ ಎಲ್ಲಾ ಸಮಸ್ಯೆಗಳನ್ನು ತಪ್ಪಿಸಲು ಪ್ರತಿದಿನ ಬಾಳೆ ಹೂವನ್ನು ನಿಮ್ಮ ಪದಾರ್ಥಗಳಲ್ಲಿ ಸೇರಿಸುವುದರಿಂದ ಈ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ಮಳೆಗಾಲದಲ್ಲಿ ವಿವಿಧ ದೈಹಿಕ ಸಮಸ್ಯೆಗಳನ್ನು ತಡೆಗಟ್ಟಲು ಸಹ ಬಾಳೆ ಹೂವಿನ ಸೇವನೆ ಮಾಡುವುದು ಒಳ್ಳೆಯದು.