News Karnataka Kannada
Wednesday, April 17 2024
Cricket
ಸಾಂಡಲ್ ವುಡ್

ಇಂದು 61ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಡಾ.ಶಿವರಾಜ್​ಕುಮಾರ್

shivarajkumar
Photo Credit : Twitter

ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ಅವರು ಇಂದು (ಜುಲೈ 12) 61ನೇ ವರ್ಷದ ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಸೋಶಿಯಲ್ ಮೀಡಿಯಾ ಮೂಲಕ ಹುಟ್ಟುಹಬ್ಬದ ವಿಶ್​ ಬರುತ್ತಿದೆ. ಸೆಲೆಬ್ರಿಟಿಗಳು, ಆಪ್ತರು, ಕುಟುಂಬದವರು ಶಿವರಾಜ್​ಕುಮಾರ್ ಅವರಿಗೆ ಶುಭಾಶಯ ಕೋರುತ್ತಿದ್ದಾರೆ. ಅವರ ನಟನೆಯ ಸಿನಿಮಾ ತಂಡದಿಂದ ಪೋಸ್ಟರ್, ಟೀಸರ್ ರಿಲೀಸ್ ಮಾಡೋಕೆ ಸಿದ್ಧತೆ ನಡೆದಿದೆ. ಜುಲೈ11ರ ಮಧ್ಯರಾತ್ರಿ ಶಿವರಾಜ್​ಕುಮಾರ್ ಅವರ ಮನೆಯ ಮುಂದೆ ಸಂಭ್ರಮ ಮುಗಿಲುಮುಟ್ಟಿತ್ತು.

 ಶಿವರಾಜ್​ಕುಮಾರ್ ಅವರು 1962ರ ಜುಲೈ 12ರಂದು ಡಾ.ರಾಜ್​ಕುಮಾರ್ ಹಾಗೂ ಪಾರ್ವತಮ್ಮ ಅವರ ಮೊದಲ ಪುತ್ರನಾಗಿ ಮದ್ರಾಸ್​ನಲ್ಲಿ ಜನಿಸಿದರು. ಇಬ್ಬರು ತಮ್ಮ(ರಾಘವೇಂದ್ರ ರಾಜ್​ಕುಮಾರ್ ಹಾಗೂ ದಿ.ಪುನೀತ್ ರಾಜ್​ಕುಮಾರ್) ಹಾಗೂ ಇಬ್ಬರು ತಂಗಿಯರಿಗೆ ಪ್ರೀತಿಯ ಅಣ್ಣನಾಗಿದ್ದಾರೆ ಶಿವರಾಜ್​ಕುಮಾರ್. ತಮ್ಮ ಮೊದಲ ಚಿತ್ರ ‘ಆನಂದ್’ ಮೂಲಕ 1986ರಲ್ಲಿ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು. ನಂತರ ರಥಸಪ್ತಮಿ ಹಾಗೂ ಮನಮೆಚ್ಚಿದ ಹುಡುಗಿ ಚಿತ್ರದಲ್ಲಿ ಅಭಿನಯಿಸಿದರು. ಈ ಮೂರೂ ಚಿತ್ರಗಳೂ ಶತದಿನೋತ್ಸವ ಪೂರೈಸುವುದರೊಂದಿಗೆ ಹ್ಯಾಟ್ರಿಕ್ ಹೀರೋ ಎಂದು ಅಭಿಮಾನಿಗಳಿಂದ ಬಿರುದಾಂಕಿತರಾದರು.

ಇನ್ನು ಶಿವರಾಜ್​ಕುಮಾರ್ ಅವರು ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಬ್ಯುಸಿ ಆಗಿದ್ದಾರೆ. ‘ಕ್ಯಾಪ್ಟನ್ ಮಿಲ್ಲರ್’ ಹಾಗೂ ‘ಜೈಲರ್’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಚಿತ್ರದಿಂದ ಪೋಸ್ಟರ್ ರಿಲೀಸ್ ಆಗುವ ನಿರೀಕ್ಷೆ ಇದೆ. ಇಂದು ಬೆಳಗ್ಗೆ 11:45ಕ್ಕೆ ‘ಘೋಸ್ಟ್​’ ಸಿನಿಮಾ ತಂಡದಿಂದ ‘ಬಿಗ್ ಡ್ಯಾಡಿ’ ವಿಡಿಯೋ ರಿಲೀಸ್​ ಆಗಲಿದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಬೆಂಗಳೂರಿನ ಸಂತೋಷ್ ಚಿತ್ರಮಂದಿರಕ್ಕೆ ಶಿವರಾಜ್​ಕುಮಾರ್ ಭೇಟಿ ನೀಡಲಿದ್ದಾರೆ. ಅಲ್ಲಿ ‘ಘೋಸ್ಟ್’ ಚಿತ್ರದ ಟೀಸರ್ ರಿಲೀಸ್ ಆಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು