ರಕ್ಷಿತ್ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಮೊದಲ ಭಾಗ ವೀಕ್ಷಕರ ಮನ ಗೆದ್ದ ಸಿನಿಮಾ.ಥೀಯೆಟರ್ ನಲ್ಲಿ ರಿಲೀಸ್ ಆದ ಸ್ವಲ್ಪ ಸಮಯದಲ್ಲೇ ಒಟಿಟಿ ಗೆ ಬಂದಿದೆ. ಹಾಗೂ ಈ ಚಿತ್ರ 5 ಭಾಷೆಗಳಲ್ಲಿ ಕೂಡ ಈಗಾಗಲೇ ಬಿಡುಗೆಡ ಆಗಿದೆ. ಈ ಚಿತ್ರದ ಇನ್ನೊಂದು ಭಾಗ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ದಕ್ಷಿಣದ ಭಾಷೆಗಳಲ್ಲಿ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಣೆಗೆ ಲಭ್ಯವಿದೆ. ಆದರೆ ಇನ್ನು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಿಲ್ಲ ಇದೀಗ ಹಿಂದಿ ವರ್ಷನ್ ಸಿದ್ದತೆ ನಡೆದಿದೆ ಎಂದು ತಿಳಿದು ಬಂದಿದ್ದು ಹಿಂದಿ ಭಾಷಿಗರಿಗೆ ಕುತೂಹಲ ಹೆಚ್ಚಿದೆ.
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಚಿತ್ರ ಥಿಯೇಟರ್ ರಿಲೀಸ್ ಆದ ಬಹಳ ಸಮಯದ ನಂತರ ಒಟಿಟಿಯಲ್ಲಿ ಬಿಡುಗಡೆ ಆಗಿತ್ತು.. ಸದ್ಯ ಈ ಚಿತ್ರ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ. ಹಿಂದಿ ಭಾಷೆಯಲ್ಲೂ ಸಿದ್ದ ಗೊಳ್ಳುತ್ತಿರುವ ಸಿನಿಮಾ ಈಗಾಗಲೇ ಸೆನ್ಸಾರ್ ಪ್ರಕ್ರಿಯೆ ಮುಗಿದಿದೆಯಂತೆ. ಶೀಘ್ರವೇ ಈ ಚಿತ್ರ ಒಟಿಟಿಗೆ ಬರಲಿದ್ದು ಆ ಬಗ್ಗೆ ಅಮೇಜಾನ್ ಪ್ರೈಮ್ ವಿಡಿಯೋ ಕಡೆಯಿಂದ ಘೋಷಣೆ ಆಗೋ ಸಾಧ್ಯತೆ ಇದೆ ಎನ್ನಲಾಗಿದೆ ಇದು ಹಿಂದಿ ಭಾಷಿಗರಿಗೆ ಸಂತಸ ತಂದಿದೆ.