ನಾಲ್ಕು ಭಾಷೆಗಳಲ್ಲಿ ಏಕಕಾಲದಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ-2’ ರಿಲೀಸ್

ಸಿಂಪಲ್‌ ಸ್ಟಾರ್ ರಕ್ಷಿತ್‌ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಎರಡನೇ ಭಾಗ ರಿಲೀಸ್‌ಗೆ ಸಜ್ಜಾಗುತ್ತಿದೆ. ನ.17ರಂದು ಸಿನಿಮಾದ ಸೈಡ್‌-ಬಿ ಬಿಡುಗಡೆಯಾಗುತ್ತಿದ್ದು, ತೆಲುಗು ಪ್ರಾಂತ್ಯಗಳಿಂದ ಸಿನಿಮಾಗೆ ಭಾರಿ ಬೇಡಿಕೆ ಬಂದಿದೆ.

ಹೇಮಂತ್‌ ಎಂ.ರಾವ್‌ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಮೊದಲ ಭಾಗ(ಸೈಡ್‌-ಎ) ಸೆಪ್ಟೆಂಬರ್‌ 1ರಂದು ತೆರೆಕಂಡಿತ್ತು. ಈ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು.‌ ಇದೀಗ ಸಿನಿಮಾದ ಎರಡನೇ ಭಾಗವನ್ನು ಏಕಕಾಲದಲ್ಲಿ ನಾಲ್ಕು ಭಾಷೆಗಳಲ್ಲಿ ರಿಲೀಸ್‌ ಮಾಡಲು ತಂಡ ಸಜ್ಜಾಗಿದೆ. ಹೀಗಾಗಿಯೇ ಎರಡನೇ ಭಾಗದ ಟೀಸರ್‌ನಲ್ಲಿ ಹೊಸ ಪ್ರಯೋಗವೊಂದನ್ನು ಮಾಡಲಾಗಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಸಂಭಾಷಣೆಗಳನ್ನು ಟೀಸರ್‌ನಲ್ಲಿ ಬಳಸಿಕೊಳ್ಳಲಾಗಿದೆ. ತೆಲುಗಿನಲ್ಲಿ ಸೈಡ್‌-ಬಿ 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ತಮಿಳು ಮತ್ತು ಮಲಯಾಳಂನಲ್ಲಿ ಸಿನಿಮಾ ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂದಿದ್ದಾರೆ ನಿರ್ದೇಶಕರು.

Gayathri SG

Recent Posts

ಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್ ವಾರೆಂಟ್

ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ತಲೆಮರೆಸಿಕೊಂಡಿದ್ದಾರೆ. ಅವರ ವಿರುದ್ಧ ಶನಿವಾರ ಅರೆಸ್ಟ್ ವಾರಂಟ್…

7 mins ago

ಸರಣಿ ಅಪಘಾತ: ಎರ್ಟಿಗಾ ಕಾರು ಸಂಪೂರ್ಣ ‌ನಜ್ಜುಗುಜ್ಜು

ಭೀಕರ ಸರಣಿ ಅಪಘಾತವು ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ಬಳಿ ನಡೆದಿದೆ.

10 mins ago

ಆರ್​ಸಿಬಿ ಪ್ಲೇ ಆಫ್​ಗೆ ಎಂಟ್ರಿ : ಅದೃಷ್ಟ ತಂದ ಅಶ್ವಿನಿ ಪುನೀತ್ ರಾಜ್​ಕುಮಾರ್ ಎಂಬ ಪೋಸ್ಟ್ ವೈರಲ್‌

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಸೋಲು ಕಂಡಾಗ ಸ್ಯಾಂಡಲ್​ವುಡ್​ ನಟ ದಿವಂಗತ ಪುನೀತ್ ರಾಜ್​ಕುಮಾರ್​ ಅವರ ಪತ್ನಿ ಅಶ್ವಿನಿಯವರನ್ನು…

40 mins ago

ಮೋದಿ ಪಾತ್ರದಲ್ಲಿ ‘ಬಾಹುಬಲಿ’ ಖ್ಯಾತಿಯ ನಟ ಸತ್ಯರಾಜ್

ಸಿನಿ, ರಾಜಕೀಯ, ಕ್ರೀಡಾ ಕ್ಷೇತ್ರದ ದಿಗ್ಗಜರ ಬದುಕಿನ ಮೇಲೆ ಸಿನಿಮಾ ಮಾಡುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಆದರೆ ಇತ್ತೀಚೆಗೆ…

47 mins ago

ಭಾರತೀಯ ಸಿಮ್ ಬಳಸಿ ವಿದೇಶದಲ್ಲಿ ಸೈಬರ್ ವಂಚನೆ: ಓರ್ವ ವಶಕ್ಕೆ

ಭಾರತೀಯ ಸಿಮ್ ಬಳಸಿ ವಿದೇಶದಲ್ಲಿ ಕೂತು ಸೈಬರ್ ವಂಚನೆ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರ…

59 mins ago

ಯಾರನ್ನು ಬಂಧಿಸಬೇಕೋ ಅವರನೆಲ್ಲಾ ಬಂಧಿಸಿ ಜೈಲಿಗೆ ತಳ್ಳಿ ಎಂದು ಮೋದಿಗೆ ಚಾಲೆಂಜ್‌ ಹಾಕಿದ ಕೇಜ್ರಿವಾಲ್

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧನವಾಗಿ ಜಾಮೀನಿನ ಮೇಲೆ ಹೊರ ಬಂದಿರುವ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಮುಖ್ಯಮಂತ್ರಿ…

1 hour ago