ಜನರಿಗೆ ತಮ್ಮ ಜವಾಬ್ದಾರಿಯ ಅರಿವಿದೆ: ಸೂಪರ್‌ ಸ್ಟಾರ್‌ ಯಶ್‌

ಬೆಂಗಳೂರು: ಮತದಾನ ಮಾಡುವ ಕುರಿತು ಜನರಿಗೆ ಸಂದೇಶ ನೀಡುವ ಅಗತ್ಯವಿಲ್ಲ. ಅವರಿಗೆ ತಮ್ಮ ಜವಾಬ್ದಾರಿಯ ಅರಿವಿದೆ ಎಂದು ಸೂಪರ್‌ ಸ್ಟಾರ್‌ ಯಶ್‌ ಹೇಳಿದ್ದಾರೆ. ಬುಧವಾರ ಮತಚಲಾವಣೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

“ನಾನು ನನ್ನ ಕರ್ತವ್ಯ ಮಾಡಿದ್ದೇನೆ, ಪ್ರತಿಯೊಬ್ಬ ಮತದಾರರು ಮತ ಚಲಾಯಿಸಬೇಕು ಎಂದು ಅವರು ಹೇಳಿದರು. ಪ್ರಚಾರದಲ್ಲಿ ಏಕೆ ಭಾಗವಹಿಸಲಿಲ್ಲ ಎಂಬ ಪ್ರಶ್ನೆಗೆ, ನನಗೆ ಆಸಕ್ತಿಯಿಲ್ಲ, ಆ ಕಾರಣಕ್ಕಾಗಿ ಈ ಬಾರಿ ರಾಜಕೀಯ ಪಕ್ಷಗಳ ಪ್ರಚಾರಕ್ಕೆ ಮುಂದಾಗಿಲ್ಲ ಎಂದು ಯಶ್ ಹೇಳಿದರು.

“ಕಳೆದ ಬಾರಿ ಕೆಲ ಕಾರಣಕ್ಕೆ ಪ್ರಚಾರದಲ್ಲಿ ಪಾಲ್ಗೊಂಡಿದ್ದೆ. ಅಲ್ಲದೆ ನಾನು ‘ಯಶೋಮಾರ್ಗ’ ಸಂಘಟನೆಯ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಮತದಾನ ಮೂಲಭೂತ ಹಕ್ಕು ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಆರೋಗ್ಯ, ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳನ್ನು ಜನರಿಗೆ ರಾಜಕೀಯ ಪಕ್ಷಗಳು ಒದಗಿಸಿಕೊಡಬೇಕು ಎಂದು ಯಶ್‌ ಹೇಳಿದರು. 2019ರ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಪರ ಯಶ್ ಪ್ರಚಾರ ಮಾಡಿದ್ದರು.

Sneha Gowda

Recent Posts

ಪ್ರಜ್ವಲ್ ರೇವಣ್ಣ ಪ್ರಕರಣದ ನಂತರ ಬಿಜೆಪಿ ಮೈತ್ರಿ ಬಿಡಬೇಕಿತ್ತು: ಸಲೀಂ ಅಹಮ್ಮದ್‌

'ಹಾಸನದ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣನವರ ಪೆನ್‌ಡ್ರೈವ್‌ ಘಟನೆ ನಂತರ ಬಿಜೆಪಿ, ಜೆಡಿಎಸ್‌ ಪಕ್ಷದೊಂದಿಗಿನ ಮೈತ್ರಿ ಬಿಡಬೇಕಿತ್ತು' ಎಂದು ಸರ್ಕಾರದ…

8 mins ago

ಲೈಂಗಿಕ ದೌರ್ಜನ್ಯ ಕೇಸ್; ಜಾಮೀನು ಕೋರಿ ಕೋರ್ಟ್​ ಮೆಟ್ಟಿಲೇರಿದ ರೇವಣ್ಣ

ಪ್ರಜ್ವಲ್ ರೇವಣ್ಣ ಮತ್ತು ಎಚ್​ಡಿ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಎಸ್ಐಟಿಯ ತನಿಖೆ ವೇಗಪಡೆದುಕೊಂಡಿದೆ.

15 mins ago

ಮೇ ತಿಂಗಳಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆ

ಮೇ ತಿಂಗಳಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಗುಡ್​​ನ್ಯೂಸ್​ವೊಂದನ್ನು ನೀಡಿದೆ.

33 mins ago

ಪ್ರತ್ಯೇಕ ಭಾಗಗಳಲ್ಲಿ ಹುಲಿ ದರ್ಶನ: ನೀರಿನಲ್ಲಿ ವಿಶ್ರಮಿಸುತ್ತಿದ್ದ ಹುಲಿಯನ್ನ ಅಟ್ಟಾಡಿಸಿದ ಆನೆ

ತಾಲೂಕಿನ ಪ್ರತಿಷ್ಠಿತ ಹುಲಿ ಸಂರಕ್ಷಿತಾರಣ್ಯ ಬಂಡೀಪುರದ ಪ್ರತ್ಯೇಕ ಕಡೆಯಲ್ಲಿ ಹುಲಿ ದರ್ಶನವಾಗಿದೆ, ಇದರಲ್ಲಿ ಆನೆ ಹುಲಿಯನ್ನ ಹಿಮ್ಮೆಟ್ಟಿಸುವ ದೃಶ್ಯ ರೋಚಕವಾಗಿದೆ.

47 mins ago

ಮಾಸ್ ರೇಪಿಸ್ಟ್ ಪರ ಪ್ರಧಾನಿ ನರೇಂದ್ರ ಮೋದಿ ಮತಯಾಚಿಸಿದ್ದಾರೆ; ರಾಗಾ ಕಿಡಿ

ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.

54 mins ago

ಕಾಂಗ್ರೆಸ್‌‌ಗೆ ಬೆಂಬಲ ಸೂಚಿಸಿ ಬೃಹತ್ ಬಂಜಾರಾ ಸ್ವಾಭಿಮಾನಿ ಸಮಾವೇಶ

ಬಂಜಾರಾ ಸಮುದಾಯದ ಒಗ್ಗಟ್ಟು ನೋಡಿ ಸಂತೋಷವಾಗಿದ್ದು, ನಿಮ್ಮ ಬದುಕನ್ನು ಕಟ್ಟಿಕೊಡುವ ಕೆಲಸ ನಾವು ಮಾಡಿದ್ದೇವೆ ಎಂದು ಬೃಹತ್ ಕೈಗಾರಿಕೆ ಹಾಗೂ…

1 hour ago