News Karnataka Kannada
Monday, April 29 2024
ಸಾಂಡಲ್ ವುಡ್

ಡಾಲಿ ಪಿಕ್ಚರ್ಸ್​​ನಿಂದ ಮತ್ತೊಂದು ಸಿನಿಮಾ: ಇವರೇ ನೋಡಿ‌ ನಾಯಕ

ಸ್ಯಾಂಡಲ್‌ವುಡ್‌ನ ಡಾಲಿ ಧನಂಜಯ ಅವರ ‘ಡಾಲಿ ಪಿಕ್ಚರ್ಸ್’ನಿಂದ 5ನೇ ಸಿನಿಮಾ ಸೆಟ್ಟೇರಿದೆ. ಸೂಪರ್ ಸಕ್ಸಸ್ ನೀಡಿದ ಡಾಲಿ ಪಿಕ್ಚರ್ಸ್ ಇದೀಗ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ. ಈ ಬಾರಿ ಡಾಲಿ ಪಿಕ್ಚರ್ಸ್​ನಿಂದ ನಡುವೆ ಅಂತರವಿರಲಿ ಖ್ಯಾತಿಯ ನಟ ಪ್ರಖ್ಯಾತ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಸಿನಿಮಾಗೆ "ಜೆಸಿ" ಎಂದು ಟೈಟಲ್ ಇಡಲಾಗಿದೆ. ಜೆಸಿ ಎಂದರೆ ಜುಡಿಸಿಯಲ್ ಕಸ್ಟಡಿ. ಜೈಲಿಂದ ಹೊರ ಬಂದ ಯುವಕನ ಕಥೆಯೇ ಜೆಸಿ.
Photo Credit : News Kannada

ಬೆಂಗಳೂರು:  ಸ್ಯಾಂಡಲ್‌ವುಡ್‌ನ ಡಾಲಿ ಧನಂಜಯ ಅವರ ‘ಡಾಲಿ ಪಿಕ್ಚರ್ಸ್’ನಿಂದ 5ನೇ ಸಿನಿಮಾ ಸೆಟ್ಟೇರಿದೆ. ಸೂಪರ್ ಸಕ್ಸಸ್ ನೀಡಿದ ಡಾಲಿ ಪಿಕ್ಚರ್ಸ್ ಇದೀಗ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ. ಈ ಬಾರಿ ಡಾಲಿ ಪಿಕ್ಚರ್ಸ್​ನಿಂದ ನಡುವೆ ಅಂತರವಿರಲಿ ಖ್ಯಾತಿಯ ನಟ ಪ್ರಖ್ಯಾತ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಸಿನಿಮಾಗೆ “ಜೆಸಿ” ಎಂದು ಟೈಟಲ್ ಇಡಲಾಗಿದೆ. ಜೆಸಿ ಎಂದರೆ ಜುಡಿಸಿಯಲ್ ಕಸ್ಟಡಿ. ಜೈಲಿಂದ ಹೊರ ಬಂದ ಯುವಕನ ಕಥೆಯೇ ಜೆಸಿ.

“ಜೆಸಿ” ಸಿನಿಮಾದ ಮುಹೂರ್ತ ನೆರವೇರಿತು. ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಪೂಜೆ ಮಾಡುವ ಮೂಲಕ ಜೆಸಿ ಚಿತ್ರಕ್ಕೆ ಚಾಲನೆ ನೀಡಲಾಯಿತು. ಮುಹೂರ್ತದ ಸಮಯದಲ್ಲಿ ಇಡೀ ಸಿನಿಮಾತಂಡ ಹಾಜರಿತ್ತು. ಡಾಲಿ ಧನಂಜಯ ತಮ್ಮದೇ ನಿರ್ಮಾಣದ 5ನೇ ಸಿನಿಮಾದ ಮುಹೂರ್ತದಲ್ಲಿ ಭಾಗಿಯಾಗಿ ತಂಡಕ್ಕೆ ಶುಭಹಾರೈಸಿದರು.

ಜೆಸಿ ಫಸ್ಟ್ ಲುಕ್​​ನಲ್ಲಿ ಬೆಂಗಳೂರು ಕಾರಾಗೃಹ, ಜೈಲು ಕಂಬಿಗಳನ್ನು ನೋಡಬಹುದು. ಸದ್ಯ ಟೈಟಲ್ ಪೋಸ್ಟರ್ ರಿಲೀಸ್ ಮಾಡಿರುವ ಸಿನಿಮಾತಂಡ ಸದ್ಯದಲ್ಲೇ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಇನ್ನು 2018ರಲ್ಲಿ ರಿಲೀಸ್ ಆದ ನಡುವೆ ಅಂತವಿರಲಿ ಸಿನಿಮಾ ಮೂಲಕ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಪ್ರಖ್ಯಾತ್ ಅವರ 2ನೇ ಸಿನಿಮಾ ಇದಾಗಿದೆ. ಸುಮಾರು 5 ವರ್ಷಗಳ ಬಳಿಕ ಪ್ರಖ್ಯಾತ್ ಹೀರೋ ಆಗಿ ಮತ್ತೆ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು