News Karnataka Kannada
Monday, April 29 2024
ಸಾಂಡಲ್ ವುಡ್

ಬೆಂಗಳೂರು ಫಿಲ್ಮ್ ಫೆಸ್ಟಿವಲ್: ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ ಪಡೆದ ಬಾರಿಸು ಕನ್ನಡ ಡಿಂಡಿಮ

Dimdiva
Photo Credit : By Author

ಬೆಂಗಳೂರು: ಬಾರಿಸು ಕನ್ನಡ ಡಿಂಡಿಮವ ಚಲನಚಿತ್ರ ಹೋದ ಕಡೆಯಲ್ಲ ಪ್ರಶಸ್ತಿ ಗಳನ್ನು ತನ್ನದ್ದಾಗಿಸಿ ಕೊಂಡು ಬರುತ್ತಿದೆ. ಮೈಸೂರು, ಹುಬ್ಬಳ್ಳಿ ನಂತರ ಇತ್ತೀಚಿಗೆ ನಡೆದ ಅಂತರರಾಷ್ಟ್ರೀಯ ಪನೋರಮಾ ಚಲನಚಿತ್ರೋತ್ಸವದ ಬೆಂಗಳೂರು ಫಿಲ್ಮ್ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ ಹಾಗೂ ಅತ್ಯುತ್ತಮ ನೃತ್ಯ ಸಂಯೋಜನೆ ಎರಡು ಪ್ರಶಸ್ತಿ ಗಳನ್ನು ಪಡೆದುಕೊಂಡಿದೆ.

ಬೇರೆ ಬೇರೆ ದೇಶ ವಿದೇಶಗಳಲ್ಲಿ ನಡೆಯುತ್ತಿರುವ ಫಿಲ್ಮ್ ಫೆಸ್ಟಿವಲ್ ನಲ್ಲಿಯೂ ಸಹಾ ಬಾರಿ ಸದ್ದು ಮಾಡುತ್ತಿದೆ ಈ ಮಕ್ಕಳ ಚಲನಚಿತ್ರ ನೈಜ ಯೋಗ ಕಥೆಯ ಎಳೆಯನ್ನು ಇಟ್ಟುಕೊಂಡು ಮಾಡಲಾದ ಸಿನಿಮಾ ಇದು ಈ ಚಿತ್ರದಲ್ಲಿ ಬಹುಪಾಲು ಮಕ್ಕಳೇ ಇದ್ದು ಪ್ರೋ ಪದ್ಮಶ್ರೀ ಪುರಸ್ಕೃತ ದೊಡ್ಡರಂಗೇಗೌಡರು, ಗಿರಿಜಾ ಲೋಕೇಶ್, ರಮಣ ಕಣಗಾಲ್, ಅಂತರರಾಷ್ಟ್ರೀಯ ಯೋಗ ಪಟು ಖುಷಿ ಹೆಚ್, ಆರ್ ಜೆ ಅವಿನಾಶ್, ಲೇಖನ ಚಿಕ್ಕ ಹಳ್ಳಿ, ವರ್ಷ, ನಿಯತಿ, ಪ್ರತೀಕ್ಷಾ, ದಕ್ಷ,ರಿಷಿರಾಜ್, ಮಣಿಕಂಠ, ನಿರಂತ್ ಸೂರ್ಯ, ಹರಿಣಿ ನಟರಾಜ್, ಗೀತಾ, ಸುಮಾ ಪ್ರಶಾಂತ್, ಶರತ್ ಗೌಡ, ಮನೋಜ್, ಅಶ್ವಿನಿ, ಹೆಚ್ ಎನ್ ಸ್ವಾಮಿ, ಸಂದೀಪ್ ಮಾಲನಿ, ಶೋಭ, ಇನ್ನೂ ಅನೇಕರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದರೆ, ನವಿಲುಗರಿ ಸಿನಿಮಾಸ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿದೆ, ಎಂದು ನಿರ್ದೇಶಕರಾದ ನವಿಲುಗರಿ ನವೀನ್ ಪಿ ಬಿ ಯವರು ತಿಳಿಸಿದರು.

ಈ ಚಿತ್ರಕ್ಕೆ ಸಹ ನಿರ್ಮಾಪಕರಾಗಿ ಅಶ್ವಿಕ ಮೈಸೂರು, ಶ್ರೀಮತಿ ರಾಜೇಶ್ವರಿ ಸುಂದರಮೂರ್ತಿ ರವರು ಕಾರ್ಯಕಾರಿ ನಿರ್ಮಾಪಕರು, ಸಂಗೀತವನ್ನು ಮನರಾಜ್ ನೀಡಿದರೆ, ಜೋಗಿ ಸುನೀತಾ, ಮುರಳಿ ಮೋಹನ್, ಸುನೀಲ್ ರಾವ್, ಶಾಲಿನಿ , ದೀಪಿಕಾ ಹಾಡುಗಳನ್ನೂ ಸುಮಧುರವಾಗಿ ಹಾಡಿದ್ದಾರೆ ಈಗಾಗಲೇ ಸಾಕಷ್ಟು ಸುದ್ದಿಯಲ್ಲಿ ಇರುವ ಬಾರಿಸು ಕನ್ನಡ ಡಿಂಡಿಮವ ಸಿನಿಮಾ ಅತೀ ಶೀಘ್ರದಲ್ಲಿ ಬೆಳ್ಳಿ ಪರದೆ ಮೇಲೆ ಬರಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು