ಕ್ಯಾನ್ಸರ್‌ ಪೀಡಿತರೊಂದಿಗೆ ರ‍್ಯಾಂಪ್‌ ವಾಕ್‌ ನಡೆಸಿದ ನಟಿ ಪ್ರೇಮಾ

ಬೆಂಗಳೂರು: ಕನ್ನಡದ ನಟಿ ಪ್ರೇಮಾ ಅವರು ರಾಷ್ಟ್ರೀಯ ಕ್ಯಾನ್ಸರ್ ಸರ್ವೈವರ್ಸ್ ದಿನದಂದು ಬೆಂಗಳೂರಿನಲ್ಲಿ ಕ್ಯಾನ್ಸರ್‌ ಕಾಯಿಲೆ ಗೆದ್ದವರೊಂದಿಗೆ ರ್ಯಾಂಪ್‌ ವಾಕ್‌ ನಡೆಸಿ ಸಕಾರಾತ್ಮಕತೆಯ ಸಂದೇಶ ಹರಡಿದರು. ಪ್ರೇಮಾ ಅವರು ಪ್ರತಿ ವಯೋಮಾನದ 15 ಕ್ಯಾನ್ಸರ್ ಪೀಡಿತರೊಂದಿಗೆ ರ್ಯಾಂಪ್‌ ವಾಕ್ ಮಾಡಿ ಕ್ಯಾನ್ಸರ್ ವಾಸಿಯಾಗುತ್ತದೆ ಎಂಬ ಭರವಸೆಯ ಸಂದೇಶ ಸಾರಿದರು.

ಈ ಕಾರ್ಯಕ್ರಮವನ್ನು ಮಣಿಪಾಲ್ ಹಾಸ್ಪಿಟಲ್ಸ್ ಆಯೋಜಿಸಿತ್ತು. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಗೆದ್ದವರು. ಕ್ಯಾನ್ಸರ್‌ ಗೆದ್ದ ಸೆಲೆಬ್ರಿಟಿಗಳು, ಆರೈಕೆ ಮಾಡುವವರು, ವೈದ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

15 ಕ್ಯಾನ್ಸರ್ ಯೋಧರೊಂದಿಗೆ ಸಮಯ ಕಳೆಯಲು ನನಗೆ ಈ ಅವಕಾಶ ನೀಡಿದ ಮಣಿಪಾಲ್ ಆಸ್ಪತ್ರೆಗಳಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಪ್ರೇಮಾ ಹೇಳಿದರು. ಕ್ಯಾನ್ಸರ್ ವಿರುದ್ಧ ಹೋರಾಡಲು ಮಾನಸಿಕ ಮತ್ತು ದೈಹಿಕ ಎರಡರಲ್ಲೂ ಅಪಾರ ಶಕ್ತಿ ಬೇಕು ಎಂದರು.

ಕ್ಯಾನ್ಸರ್ ನಿಂದ ಬದುಕುಳಿದವರ ಜೊತೆಗೆ ಅವರ ಆರೈಕೆದಾರರ ವಿಶೇಷ ರಾಂಪ್ ವಾಕ್‌ನೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕ್ಯಾನ್ಸರ್‌ನಿಂದ ಬದುಕುಳಿದ ಅತ್ಯಂತ ಕಿರಿಯ ವಯಸ್ಸಿನ ಮೂರು ವರ್ಷದ ಬಾಲಕನೊಂದಿಗೆ ರಾಂಪ್ ವಾಕ್ ಪ್ರಾರಂಭವಾಯಿತು. 102 ವರ್ಷ ವಯಸ್ಸಿನ ನಂಜುಂಡಸ್ವಾಮಿಯೊಂದಿಗೆ ಮುಕ್ತಾಯವಾಯಿತು.

ಕ್ಯಾನ್ಸರ್ ಬದುಕುಳಿದ ಲಕ್ಷ್ಮೀಕಾಂತ್ (52), ಅಮುದಾ (42), ಸುಗುಣ (50), ರಾಜ್‌ಕುಮಾರ್ (67), ದಯಾನಂದ (44), ಇರ್ಫಾನ್ (19), ಸಂಧ್ಯಾ (45), ಎಸ್.ಮಹೇಶ್ (60) ಪಾಲ್ಗೊಂಡರು. ಪ್ರಸ್ತುತ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿರುವ ಸುಸಾನ್ (67), ಭಾಸ್ಕರ (44), ಎಚ್.ಎನ್.ಕೃಷ್ಣಮೂರ್ತಿ (75), ನಂಜುಂಡಸ್ವಾಮಿ (102), ಯೋಗಿತಾ (29), ವಿಶಾಲ್ (27) ಮತ್ತು ರಿಷಬ್ ಪಾಲ್ಗೊಂಡರು.

Sneha Gowda

Recent Posts

ರಾಯ್‌ಬರೇಲಿಗೆ ಬಘೇಲ್‌, ಅಮೇಠಿಗೆ ಅಶೋಕ್‌ ಗೆಹಲೋತ್‌ ವೀಕ್ಷಕರಾಗಿ ನೇಮಕ

ರಾಯ್‌ಬರೇಲಿಗೆ ಬಘೇಲ್‌, ಅಮೇಠಿಗೆ ಅಶೋಕ್‌ ಗೆಹಲೋತ್‌ ವೀಕ್ಷಕರಾಗಿ ನೇಮಕ ನವದೆಹಲಿ: ಉತ್ತರ ಪ್ರದೇಶದ ಪ್ರತಿಷ್ಠಿತ ಲೋಕಸಭಾ ಕೇತ್ರಗಳಾದ ರಾಯ್‌ಬರೇಲಿ ಮತ್ತು…

4 mins ago

ಬಿಲ್ಲವ Vs ಬಂಟ; ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬೆಟ್ಟಿಂಗ್ ದಂಧೆ

ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಮತದಾನ ಈಗಾಲೇ ಪೂರ್ಣಗೊಂಡಿದೆ. ಇತ್ತ ಗೆಲುವಿನ ಲೆಕ್ಕಾಚಾರದಲ್ಲಿ ರಾಜಕೀಯ ಪಕ್ಷಗಳು ನಿರತವಾಗಿದೆ. ಮತ್ತೊಂದು ಕಡೆ ಐಪಿಎಲ್…

2 mins ago

ಸಿಟ್ಟಿನಲ್ಲಿ ಕಪಾಳ ಮೋಕ್ಷ: ವ್ಯಕ್ತಿ ಮೃತ್ಯು

ಗಲಾಟೆಯಲ್ಲಿ ವ್ಯಕ್ತಿಯೊಬ್ಬ ಸಿಟ್ಟಾಗಿ ಕಪಾಳಕ್ಕೆ ಹೊಡೆದಿದ್ದರಿಂದ ಮೃತಪಟ್ಟ ಘಟನೆ ಬೆಂಗಳೂರಿನ ಕಾಡುಗೋಡಿ ಠಾಣಾ ವ್ಯಾಪ್ತಿಯ ಬೆಳ್ತೂರು ಕಾಲೋನಿಯಲ್ಲಿ ನಡೆದಿದೆ.

8 mins ago

ಸರ್ಕಾರಿ ವಸತಿ ಗೃಹದಲ್ಲೇ ಭ್ರೂಣ ಹತ್ಯೆ: ನಾಲ್ಕು ಜನರ ಬಂಧನ

ಮಂಡ್ಯ ಜಿಲ್ಲೆಯ ಸರ್ಕಾರಿ ವಸತಿ ಗೃಹದಲ್ಲೇ ಭ್ರೂಣ ಹತ್ಯೆ ನಡೆಯುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಹಿತಿ ತಿಳಿದು…

8 mins ago

ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ

ಕಾರ್ಕಳದಲ್ಲಿ ಕಳೆದ ವರ್ಷದಿಂದ ವಿವಾದದ ಕೇಂದ್ರ ಬಿಂದುವಾಗಿದ್ದ ಪರಶುರಾಮ ಮೂರ್ತಿ ಮತ್ತೆ ಹಲವಾರು ಊಹಾಪೋಹಗಳಿಗೆ ಕಾರಣವಾಗುತ್ತಿದೆ.  ನಿನ್ನೆಯಿಂದ ಮೂರ್ತಿಯ ಉಳಿದ…

15 mins ago

ಮಂಗಳೂರಿಗೆ ನೀರೊದಗಿಸುವ ತುಂಬೆ ಡ್ಯಾಂ ನಲ್ಲಿ ನೀರಿನ ಮಟ್ಟ ಇಳಿಕೆ

ಕರಾವಳಿಯಲ್ಲಿ ಹೆಚ್ಚಾದ ಬಿಸಿಲ‌ ದಗೆ ಹೆಚ್ಚಾಗುತ್ತಿದೆ. ಪರಿಣಾಮ ತಾಫಮಾಣ ಏರಿದಂತೆ ಮಂಗಳೂರಿನಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ.

18 mins ago