ಬೆಂಗಳೂರು: ಸ್ಯಾಂಡಲ್ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇಂದು (ಅ.6 ) ತಮ್ಮ ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದಾರೆ. ಮೂರು ವರ್ಷದ ಬಳಿಕ ಈಗ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಹೀಗಾಗಿ ಅಭಿಮಾನಿಗಳು ಕಾತುರರಾಗಿದ್ದಾರೆ.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬರ್ತ್ ಡೇ ಗೆ ಈಗಾಗಲೇ ಭರ್ಜರಿ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಧ್ರುವ ಸರ್ಜಾ ಬರ್ತ್ ಡೇ ಹಿನ್ನೆಲೆ ಧ್ರುವ ಸರ್ಜಾ ಮನೆ ಬಳಿ ಸಕಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಧ್ರುವ ಸರ್ಜಾ ತಮ್ಮ ಜನ್ಮ ದಿನವನ್ನ ಸ್ಪೆಷಲ್ ಆಗಿಯೇ ಆಚರಿಸುತ್ತಿದ್ದಾರೆ. ತಮ್ಮ ಜನ್ಮ ದಿನದಂದು ಅಣ್ಣ ಚಿರು ಅಭಿನಯದ ರಾಜಮಾರ್ತಾಂಡ ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾದ ನೋಡೋ ಮೂಲಕ ಹುಟ್ಟುಹಬ್ಬವನ್ನ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ. ಜನ್ಮ ದಿನಕ್ಕೆ ನಾನು ಅಣ್ಣನ ಸಿನಿಮಾ ನೋಡ್ತಾ ಇದ್ದೇನೆ. ನೀವು ಕೂಡ ಬನ್ನಿ ಒಟ್ಟಿಗೆ ಸಿನಿಮಾ ನೋಡೋಣ ಅಂತಲೇ ಫ್ಯಾನ್ಸ್ಗೆ ಕರೆ ಕೂಡ ಕೊಟ್ಟಿದ್ದಾರೆ.
ಸದ್ಯ ಧ್ರುವ ಸರ್ಜಾ ಅವರು ‘ಮಾರ್ಟಿನ್’ ಹಾಗೂ ‘ಕೆಡಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಕಡೆಯಿಂದ ಹೊಸ ಅಪ್ಡೇಟ್ ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.