ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಹಿರಿಯ ನಟಿ ತಾರಾ ಅವರ ತಾಯಿ ಪುಷ್ಪಾ (76) ಚಿಕಿತ್ಸೆ ಫಲಕಾರಿಯಾದೇ ವಿಧಿವಶರಾಗಿದ್ದಾರೆ.
ಮೈಸೂರಿಗೆ ಇಬ್ಬರೂ ಶೂಟಿಂಗ್ಗಾಗಿ ಹೋಗಿದ್ದರು. ಈ ಸಂದರ್ಭದಲ್ಲಿ ಪುಷ್ಪ ಅಸ್ವಸ್ಥರಾಗಿದ್ದು ವಾಂತಿಯಾಗಿದೆ. ತಕ್ಷಣ ಮೈಸೂರು ಜೆಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಮೈಸೂರಿನಿಂದ ಪಾರ್ಥಿವ ಶರೀರವನ್ನು ಬೆಂಗಳೂರಿನ ಜೆ.ಪಿ.ನಗರದ ನಿವಾಸಕ್ಕೆ ತರುವ ವ್ಯವಸ್ಥೆ ಮಾಡಲಾಗಿದೆ ಎಂದು ಅಳಿಯ ವೇಣು ತಿಳಿಸಿದರು.