News Karnataka Kannada
Monday, April 29 2024
ಸಾಂಡಲ್ ವುಡ್

‘ಸಪ್ತ ಸಾಗರದಚೆ ಎಲ್ಲೋ’ ಸಿನೆಮಾದ ಪೋಸ್ಟರ್ ರಿಲೀಸ್

Rakshith Shetty
Photo Credit :

ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಹೊಸ ಪೋಸ್ಟರ್​ ಬಿಡುಗಡೆ ಆಗಿದೆ.  ನಿರ್ದೇಶಕ ಹೇಮಂತ್​ ಎಂ. ರಾವ್​ ಆ್ಯಕ್ಷನ್​-ಕಟ್​ ಹೇಳುತ್ತಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ರಕ್ಷಿತ್​ ಶೆಟ್ಟಿ ಅವರು ಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಈಗ ಹೊಸ ಪೋಸ್ಟರ್​ ರಿಲೀಸ್​ ಮಾಡಲಾಗಿದೆ. ಈ ಪೋಸ್ಟರ್​ನಲ್ಲಿ ಅವರು ತುಂಬ ರಗಡ್​ ಆಗಿ ಕಾಣಿಸಿಕೊಂಡಿದ್ದಾರೆ.

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ರಕ್ಷಿತ್​ ಶೆಟ್ಟಿ ಅವರು ಬೇರೆ ಬೇರೆ ಗೆಟಪ್​ ಧರಿಸಲಿದ್ದಾರೆ. ಈ ಮೊದಲು ಬಿಡುಗಡೆ ಆಗಿದ್ದ ಪೋಸ್ಟರ್​ಗಳಲ್ಲಿ ಅವರು ಲವರ್ ಬಾಯ್​ ರೀತಿ ಕಾಣಿಸಿಕೊಂಡಿದ್ದರು. ಚಿತ್ರದ ದ್ವಿತೀಯಾರ್ಧದಲ್ಲಿ ರಕ್ಷಿತ್​ ಶೆಟ್ಟಿ ಲುಕ್​ ಹೇಗಿರಲಿದೆ ಎಂಬುದಕ್ಕೆ ಈಗ ಹೊಸ ಪೋಸ್ಟರ್​ ಮೂಲಕ ಉತ್ತರ ಸಿಕ್ಕಿದೆ.

ಮೂಲಕ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಮೇಲೆ ಕೌತುಕ ಮೂಡುವಂತಾಗಿದೆ. ಈ ಚಿತ್ರದಲ್ಲಿ ರಕ್ಷಿತ್​ ಶೆಟ್ಟಿ ಅವರಿಗೆ ಜೋಡಿಯಾಗಿ ರುಕ್ಮಿಣಿ ವಸಂತ್​ ಅವರ ನಟಿಸುತ್ತಿದ್ದಾರೆ. ಇಬ್ಬರ ಕಾಂಬಿನೇಷನ್​ ಬಗ್ಗೆ ಅಭಿಮಾನಿಗಳಿಗೆ ತುಂಬ ನಿರೀಕ್ಷೆ ಇದೆ. ಈಗ ರಕ್ಷಿತ್​ ಶೆಟ್ಟಿ ಅವರ ಈ ಹೊಸ ಪೋಸ್ಟರ್​ ವೈರಲ್​ ಆಗುತ್ತಿದೆ. ಇದನ್ನು ನೋಡಿ ಅನೇಕ ಸೆಲೆಬ್ರಿಟಿಗಳು ಕೂಡ ಫಿದಾ ಆಗಿದ್ದಾರೆ.

‘ನಿಮ್ಮ ಮನು ಹತ್ತು ವರ್ಷಗಳ ನಂತರ’ ಎಂದು ಅವರು ಕ್ಯಾಪ್ಷನ್​ ನೀಡಿದ್ದಾರೆ. ಅವರ ಮುಖದ ಮೇಲೆ ಹಳೇ ಗಾಯದ ಗುರುತುಗಳು ಕಾಣಿಸಿಕೊಂಡಿವೆ. ಅಂದರೆ ಕಥೆಯಲ್ಲಿ ಸಾಕಷ್ಟು ಘಟನೆಗಳು ನಡೆದ ಬಳಿಕ ಹೀರೋ ಈ ರೀತಿಯಾಗಿ ಬದಲಾಗುತ್ತಾನೆ ಎಂಬ ಸುಳಿವು ನೀಡಲಾಗಿದೆ. ಈ ಗೆಟಪ್​ಗಾಗಿ ರಕ್ಷಿತ್​ ಶೆಟ್ಟಿ ಸಂಪೂರ್ಣ ಬದಲಾಗಿದ್ದಾರೆ, ಸಾಲ್ಟ್​ ಆ್ಯಂಡ್​ ಪೆಪ್ಪರ್​ ಗಡ್ಡದಲ್ಲಿ ಪೋಸ್​ ನೀಡಿದ್ದಾರೆ ಎಂದು ನಿರ್ದೇಶಕ ಹೇಮಂತ್ ಎಸ್ ರಾವ್ ತಿಳಿಸಿದ್ದಾರೆ.

ರಕ್ಷಿತ್ ಶೆಟ್ಟಿ ಹಿಂದಿನ ಗೆಟಪ್ ಮತ್ತು ಈಗಿನ ಅವತಾರಕ್ಕೂ ಬಹಳ ಬದಲಾವಣೆಯಾಗಿದೆ. ಚಿತ್ರದ ಮೊದಲಾರ್ಧದ ಚಿತ್ರೀಕರಣ ಕಳೆದ ಜನವರಿಯಲ್ಲಿ ಪೂರ್ಣಗೊಂಡಿತ್ತು. ಇದಾದ ಬಳಿಕ ಎರಡನೇ ಹಂತದ ಚಿತ್ರೀಕರಣಕ್ಕೆ ಸುಮಾರು ಎರಡು ತಿಂಗಳ ಅಂತರ ಇಟ್ಟುಕೊಳ್ಳಲಾಗಿತ್ತು. ಈ ಅವಧಿಯಲ್ಲಿ ರಕ್ಷಿತ್‌ ಶೆಟ್ಟಿ ತೂಕ ಹೆಚ್ಚಿಸಿಕೊಂಡು, ಮತ್ತೆ ಸೆಟ್‌ಗೆ ಮರಳಿದ್ದಾರೆ. ಹೊಸ ಶೇಡ್‌ನಲ್ಲಿ ರಕ್ಷಿತ್‌ ಅವರ ಮುಖಚಹರೆಯೂ ಬದಲಾಗಿದ್ದು, ಲವರ್‌ಬಾಯ್‌ ಲುಕ್‌ನಿಂದ ರಗಡ್‌ ಲುಕ್‌ಗೆ ಬದಲಾಗಿದ್ದಾರೆ. ಚಿತ್ರದಲ್ಲಿ ‘ಮನು’ ಎಂಬ ಪಾತ್ರದಲ್ಲಿ ರಕ್ಷಿತ್‌ ಶೆಟ್ಟಿ ಕಾಣಿಸಿಕೊಂಡಿದ್ದು, ಜೋಡಿಯಾಗಿ ನಟಿ ರುಕ್ಮಿಣಿ ವಸಂತ್‌ ‘ಪ್ರಿಯಾ’ ಎಂಬ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ.

ಪಾತ್ರಕ್ಕಾಗಿ ರಕ್ಷಿತ್​ ಶೆಟ್ಟಿ ಅವರು ಸಖತ್​ ತಯಾರಿ ಮಾಡಿಕೊಂಡು ನಟಿಸಿದ್ದಾರೆ. ಅವರ ಬದ್ಧತೆ ಕಂಡು ನಿರ್ದೇಶಕ ಹೇಮಂತ್ ಎಂ.​ ರಾವ್​ ಮತ್ತು ಅವರ ತಂಡಕ್ಕೆ ಖುಷಿ ಆಗಿದೆ. ಈ ಸಿನಿಮಾ ರಕ್ಷಿತ್​ ಶೆಟ್ಟಿ ಅವರ ‘ಪರಂವಾ ಪಿಕ್ಚರ್ಸ್​​’ ಬ್ಯಾನರ್​ ಮೂಲಕ ಮೂಡಿಬರುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು