News Karnataka Kannada
Monday, April 29 2024
ಸಾಂಡಲ್ ವುಡ್

ರಿಲೀಸ್ ಆಯ್ತು ಝೈದ್ ಖಾನ್ ನಟನೆಯ ‘ಬನಾರಸ್’ ಫಸ್ಟ್ ಲುಕ್ ಮೋಷನ್ ಪೋಸ್ಟರ್

Banaras Poster
Photo Credit :

ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ಕಥಾ ಹಂದರಗಳ ಸಿನೆಮಾಗಳ ನಡುವೆ ಭರವಸೆ ಹೆಚ್ಚು ಮಾಡ್ತಿರೋ ಪ್ಯಾನ್ ಇಂಡಿಯಾ ಸಿನೆಮಾವೇ ಬನಾರಸ್. ಬೆಲ್ ಬಾಟಂ ಸೂಪರ್ ಸಕ್ಸಸ್ ನಂತರ ನಿರ್ದೇಶಕ ಜಯತೀರ್ಥ ಹೊಸ ಪ್ರೇಮ ಕಥೆಯ ಮೂಲಕ ಮತ್ತೊಮ್ಮೆ ದಾಖಲೆ ಬರೆಯಲು ಸಜ್ಜಾಗ್ತಿದ್ದಾರೆ. ನವೀರಾದ ಪ್ರೇಮ ಕಥೆಯನ್ನು ತೆರೆ ಮೇಲೆ ಉಣಬಡಿಸಲೆಂದೇ ಸಜ್ಜಾಗ್ತಿರೋ ಪ್ಯಾನ್ ಇಂಡಿಯಾ ಸಿನಿಮಾ ಬನಾರಸ್ ಚಿತ್ರದ ಪ್ರಚಾರ ಕಾರ್ಯ ಈಗಾಗಲೇ ಶುರುವಾಗಿದೆ. ಈ ಮೊದಲು ಟೈಟಲ್ ನಿಂದ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದ್ದ ಬನಾರಸ್ ಈಗ ಫಸ್ಟ್ ಲುಕ್ ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ.

ಬನಾರಸ್ ಚಿತ್ರದ ಪೋಸ್ಟರ್ ಲಾಂಚ್ ಮಾಡಲು ಪುನೀತ್ ರಾಜ್ ಕುಮಾರ್ ಈ ಹಿಂದೆ ಒಪ್ಪಿಕೊಂಡಿದ್ದರಂತೆ. ಆದ್ರೆ ಅಪ್ಪು ಅಕಾಲಿಕ‌ ನಿಧನದಿಂದ ಅದು ಸಾಧ್ಯವಾಗಲಿಲ್ಲ, ಆದ್ರಿಂದ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿ ಬಳಿಯೇ ಚಿತ್ರತಂಡ ತೆರೆಳಿ, ಪುಷ್ಪ ನಮನ ಸಲ್ಲಿಸಿ, ಒಂದು ನಿಮಿಷ ಮೌನಾಚರಣೆ ಮಾಡಿದ ಬಳಿಕ ಫಸ್ಟ್ ಲುಕ್ ಅಂಡ್ ಮೋಷನ್ ಪೋಸ್ಟರ್ ಚಿತ್ರತಂಡ ಬಿಡುಗಡೆ ಮಾಡಿದೆ.

ಸಖತ್ ಪ್ರಾಮಿಸಿಂಗ್ ಅಂಡ್ ಇಂಟ್ರಸ್ಟಿಂಗ್ ವಿಚಾರಗಳೊಂದಿಗೆ ವಿನೂತನವಾಗಿ ಪ್ರೇಮಿಗಳ ಪರಿಚಯವನ್ನ ಮೋಷನ್ ಪೋಸ್ಟರ್ ನಲ್ಲಿ ತೋರಿಸುವ ಪ್ರಯತ್ನವಾಗಿದೆ. ಮೋಷನ್ ಪೋಸ್ಟರ್ ನಲ್ಲಿ ಅಜನೀಶ್ ಲೋಕನಾಥ್ ಸಂಗೀತದ ಸಣ್ಣ ಝಲಕ್ ಹಾಡುಗಳ ಮೇಲೂ ಭರವಸೆ ಮೂಡಿಸಿದೆ.

ಪ್ರೇಮ ಕಥೆ ಹೇಳುವಲ್ಲಿ ಫೇಮಸ್ ಆಗಿರೋ ನಿರ್ದೇಶಕ ಜಯತೀರ್ಥ ನಿರ್ದೇಶನದಲ್ಲಿ ಈ ನವೀರಾದ ಪ್ರೇಮ ಕಥೆ ಮೂಡಿಬರಲಿದ್ದು, ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ಹೊಸ ನಾಯಕನ ಎಂಟ್ರಿಯೂ ಆಗಲಿದೆ. ಹೌದು, ಲವರ್ ಬಾಯ್ ಹಾಗೂ ಚಾಕೋಲೇಟ್ ಹೀರೋ ಆಗಿ ಶಾಸಕ ಜಮೀರ್ ಅಹಮ್ಮದ್ ಪುತ್ರ ಝೈದ್ ಖಾನ್ ಚಂದನವನಕ್ಕೆ ಈ ಮೂಲಕ ನಾಯಕರಾಗಿ ಎಂಟ್ರಿ ಕೊಡಲಿದ್ದಾರೆ. ಝೈದ್ ಖಾನ್ ಗೆ ಜೋಡಿಯಾಗಿ ಕರಾವಳಿ ಬೆಡಗಿ ಸೊನಲ್ ಮೊಂಥೆರೋ ತೆರೆ ಹಂಚಿಕೊಂಡಿದ್ದಾರೆ. ತಾರಾಗಣದಲ್ಲಿ ದೇವರಾಜ್ ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರಿ, ಸಪ್ನ ರಾಜ್, ಬರ್ಕತ್ ಅಲಿ ಒಳಗೊಂಡಂತೆ ಹಲವು ಕಲಾವಿದರ ಬಳಗವಿದೆ.

ಶುರುವಿನಿಂದಲೂ ಗಾಂಧಿನಗರದಲ್ಲಿ ಹೊಸ ಟಾಕ್ ಕ್ರಿಯೇಟ್ ಮಾಡಿದ್ದ ಬನಾರಸ್ ಪ್ರೇಮ ಕಥೆಯಾಗಿರುವುದರಿಂದ ಚಿತ್ರದ ಹಾಡುಗಳ ಮೇಲೂ ಅಷ್ಟೇ ಕುತೂಹಲವಿದೆ. ಬಿ ಅಜನೀಜ್ ಲೋಕನಾಥ್
ಸಂಗೀತ ನಿರ್ದೇಶನದ ಆಡಿಯೋ ರೈಟ್ಸ್ ಈಗಾಗಲೇ ದಾಖಲೆ ಮೊತ್ತಕ್ಕೆ ಸೇಲ್ ಆಗಿ ಇತಿಹಾಸ ಸೃಷ್ಟಿಸಿದ್ದಾಗಿದೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಎ. ವಿಜಯ್, ಡಿಫ್ರೆಂಟ್ ಡ್ಯಾನಿ ಸಾಹಸ ನಿರ್ದೇಶನ, ರಘು ನಿಡುವಳ್ಳಿ ಸಂಭಾಷಣೆ, ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ಎ.ಹರ್ಷ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಎನ್.ಕೆ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ತಿಲಕ್ ರಾಜ್ ಬಲ್ಲಾಳ್ ನಿರ್ಮಾಪಕರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
6528

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು