ಮೈಸೂರಿನಿಂದ ಅಪ್ಪು ಸಮಾಧಿ ಸ್ಥಳದವರರೆಗೆ ಸೈಕಲ್ ಯಾತ್ರೆ ನಡೆಸಿದ ಅಭಿಮಾನಿಗಳು

ಕನ್ನಡ ಚಿತ್ರರಂಗದ ಮೇರು ನಟ ಪುನೀತ್ ರಾಜ್ ಕುಮಾರ್ ನಮ್ಮಗಲಿ ತಿಂಗಳುಗಳೇ ಕಳೆದಿದ್ದರು ಅಪ್ಪು ನೆನಪಿನಲ್ಲಿ ಅಭಿಮಾನಿಗಳು‌ ಅಪ್ಪು ಸ್ಮರಣೆಯನ್ನು ವಿಭಿನ್ನವಾಗಿ ಮಾಡುತ್ತಲೇ ಇದ್ದಾರೆ. ಇದೀಗ ಮೈಸೂರಿನ ಅಪ್ಪು ಅಭಿಮಾನಿಗಳು ಮೈಸೂರಿನಿಂದ ಅಪ್ಪು ಸಮಾಧಿ ಸ್ಥಳದವರರೆಗೆ ಸೈಕಲ್ ಯಾತ್ರೆ ನಡೆಸಿದ್ದಾರೆ.

ಮೈಸೂರಿನಿಂದ ಬೆಂಗಳೂರಿನ ಅಪ್ಪು ಸಮಾಧಿ ಸ್ಥಳದವರೆಗೆ ಸುಮಾರು 160 ಕಿ.ಮೀ ಸೈಕಲ್ ಯಾತ್ರೆಯನ್ನು ನಿನ್ನೆ ಮುಗಿಸಿದ್ದಾರೆ ಅಭಿಮಾನಿಗಳು. ಅಪ್ಪು ಸ್ಮರಣೆಗಾಗಿ ಬೆಂಗಳೂರಿಗೆ ಸೈಕಲ್ ಯಾತ್ರೆ ಕೈಗೊಂಡಿರುವ ನವೀನ್ ಕುಮಾರ್, ಶಿವು, ಸುರೇಶ್, ರಾಘವ್, ಭೀಮರಾಜ್, ಸುನಿಲ್, ಯುವರಾಜ್, ನವೀನ್ ಅಪ್ಪು ಸ್ಮರಣೆಗೆ ಸೈಕಲ್ ಯಾತ್ರೆ ಕೈಗೊಂಡ ಪುನೀತ್ ಅಭಿಮಾನಿಗಳು ಬೊಂಬೆ ನಾಡು ಚನ್ನಪಟ್ಟಣ ನಗರಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಹಾಗೂ ಅಪ್ಪು ಅಭಿಮಾನಿಗಳು ಸ್ವಾಗತಿಸಿ ಸನ್ಮಾನಿಸಿದರು.

ಚನ್ನಪಟ್ಟಣ ಮಾರ್ಗವಾಗಿ ರಾಮನಗರ, ಬಿಡದಿ ಮೂಲಕ ಬೆಂಗಳೂರು ತಲುಪಿದೆ. ನಿನ್ನೆ ಚನ್ನಪಟ್ಟಣದಲ್ಲಿ ಮಾತನಾಡಿದ ಮೈಸೂರಿನ ಅಪ್ಪು ಅಭಿಮಾನಿ ನವೀನ್ ಕುಮರ್ ಮಾತನಾಡಿ, ”ಪುನೀತ್ ಮೃತಪಟ್ಟಾಗ ಅವರ ಅಂತ್ಯಕ್ರಿಯೆಗೆ ಹೋಗಲು ಆಗಲಿಲ್ಲ. ಅದಕ್ಕಾಗಿ ಸೈಕಲ್ ಮೂಲಕ ಹೋಗಿ ಸಮಾಧಿಗೆ ಭೇಟಿ ನೀಡಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವುದಾಗಿ” ತಿಳಿಸಿದ್ದರು.

ಸೈಕಲ್ ಯಾತ್ರೆಯ ಮುಖಾಂತರ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸೈಕಲ್ ಯಾತ್ರಿಗಳನ್ನು ಸ್ವಾಗತಿಸಿ ಮಾತನಾಡಿದ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ, ”ಪುನೀತ್ ರಾಜ್‌ಕುಮಾರ್ ತಮ್ಮ ಬಾಲ್ಯದಲ್ಲಿ 6 ವರ್ಷದ ಹುಡುಗನಾಗಿದ್ದಾಗ ಬಣ್ಣ ಹಚ್ಚಿ ತಮ್ಮ ತಂದೆಯ ಜೊತೆ ಚಲನಚಿತ್ರ ಜಗತ್ತಿಗೆ ಪಾದಾರ್ಪಣೆ ಮಾಡಿ, ತಮ್ಮ 40 ವರ್ಷಗಳ ಕಾಲ ಸುದೀರ್ಘವಾಗಿ ಚಲನಚಿತ್ರ ರಂಗದಲ್ಲಿ ಪಯಣಿಸಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದು ಖ್ಯಾತಿ ಪಡೆದಿದ್ದರು.

”ಎಲೆ ಮರೆಯ ಕಾಯಿಯಂತೆ ಪ್ರಚಾರ ಬಯಸದೆ, 1800ಕ್ಕೂ ಹೆಚ್ಚಿನ ಬಡ ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊತ್ತಿದ್ದರು. ಅಲ್ಲದೆ ವೃದ್ಧಾಶ್ರಮ, ಗೋಶಾಲೆ, ಅನಾಥಾಶ್ರಮ ಸೇರಿದಂತೆ ಹಲವಾರು ಸಮಾಜಿಕ ಸೇವೆಯನ್ನು ಸಲ್ಲಿಸುವ ಮೂಲಕ ಅಭಿಮಾನಿಗಳ ಅಂತರಳದಲ್ಲಿ ಪುನೀತ್ ಚಿರಸ್ಥಾಯಿಯಾಗಿದ್ದಾರೆ” ಎಂದು ರಮೇಶ್ ಗೌಡ ಸ್ಮರಿಸಿದರು.

ಮೈಸೂರಿನಿಂದ ಕೆಲವು ಸಾಫ್ಟ್‌ವೇರ್ ಉದ್ಯೋಗಿಗಳು, ಹವ್ಯಾಸಿ ಸೈಕ್ಲಿಸ್ಟ್‌ಗಳು ಡಿಸೆಂಬರ್ 04ರಂದು ಮೈಸೂರಿನಿಂದ ಬೆಂಗಳೂರಿಗೆ ಸೈಕ್ಲಿಂಗ್ ಮಾಡಿ ಅಪ್ಪುವಿನ ಸಮಾಧಿಗೆ ಭೇಟಿ ನೀಡಿದ್ದರು. ಅಷ್ಟೇ ಅಲ್ಲದೆ ನಿರ್ದಿಷ್ಟ ಮೊತ್ತವನ್ನು ಪುನೀತ್ ರಾಜ್‌ಕುಮಾರ್ ಸಹೋದರ ರಾಘವೇಂದ್ರ ರಾಜ್‌ಕುಮಾರ್‌ಗೆ ನೀಡಿದ ಈ ತಂಡ ಹಣವನ್ನು ಪುನೀತ್ ಅವರ ಸಾಮಾಜಿಕ ಕಾರ್ಯಕ್ಕೆ ಬಳಸಿಕೊಳ್ಳುವಂತೆ ಮನವಿ ಮಾಡಿದೆ.

ಇದರ ಹೊರತಾಗಿ ಪುನೀತ್ ಅಭಿಮಾನಿ, ಸಾಹಸ ಯಾತ್ರಿ ಗುರುಪ್ರಕಾಶ್ ಎಂಬಾತ ಹಿಮಾಚಲ ಪ್ರದೇಶದಿಂದ ಬೆಂಗಳೂರಿನ ಪುನೀತ್ ರಾಜ್‌ಕುಮಾರ್ ಸಮಾಧಿ ವರೆಗೆ ಒಟ್ಟು 2700 ಕಿ.ಮೀ ಸೈಕ್ಲಿಂಗ್ ಮಾಡಲಿದ್ದಾರೆ. ಈ ಅದ್ಭುತ ಸಾಹಸಯಾತ್ರೆ ಡಿಸೆಂಬರ್ 10 ಕ್ಕೆ ಆರಂಭವಾಗಲಿದೆ. ಪುನೀತ್ ರಾಜ್‌ಕುಮಾರ್ ಸಮಾಧಿಗೆ ತಲುಪಿದ ಬಳಿಕ ಗುರುಪ್ರಕಾಶ್ ನೇತ್ರದಾನಕ್ಕೆ ಸಹಿ ಮಾಡಲಿದ್ದಾರೆ. ತಮ್ಮ ಈ ಸಾಹಸಮಯ ಪ್ರಯಾಣಕ್ಕೆ ಶುಭ ಹಾರೈಸಿ ಎಂದು ಗುರುಪ್ರಕಾಶ್ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ.

ಪುನೀತ್ ಸ್ಮರಣಾರ್ಥ ಈ ರೀತಿಯ ಸಾಹಸಗಳನ್ನು ಹಲವು ಅಭಿಮಾನಿಗಳು ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಧಾರಾವಾಡದ ಮನಗುಂಡಿ ಗ್ರಾಮದ ಮಹಿಳೆ ದಾಕ್ಷಾಯಿಣಿ, ತನ್ನ ಗ್ರಾಮದಿಂದ ಬೆಂಗಳೂರಿನ ಅಪ್ಪು ಸಮಾಧಿವರೆಗೆ 500 ಕಿ.ಮೀ ಓಡಿ ಗುರಿ ತಲುಪಲಿದ್ದಾರೆ. ದಾಕ್ಷಾಯಿಣಿ ತಮ್ಮ ಓಟವನ್ನು ನವೆಂಬರ್ 30ರಂದು ಪ್ರಾರಂಭ ಮಾಡಿದ್ದಾರೆ. ಎರಡು ಮಕ್ಕಳ ತಾಯಿಯಾಗಿದ್ದರೂ ಈ ಸಾಹಸಕ್ಕೆ ಮುಂದಾಗಿರುವುದು ವಿಶೇಷ.

ಇದರ ಹೊರತಾಗಿ ಪುನೀತ್ ನೆನಪಿನಲ್ಲಿ ಪೊಲೀಸ್ ಇಲಾಖೆ ವಿಶೇಷ ಸೈಕಲ್ ಜಾಥಾ ಹಮ್ಮಿಕೊಂಡಿತ್ತು. ಪುನೀತ್ ನೆನಪಿನಲ್ಲಿ ಮ್ಯಾರಾಥಾನ್ ಹಮ್ಮಿಕೊಳ್ಳುವ ಬಗ್ಗೆಯೂ ಯೋಜನೆ ಸಿದ್ಧವಾಗುತ್ತಿದೆ.

Gayathri SG

Recent Posts

ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ : ಶೋಭಾ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಕೇಂದ್ರ ಸಚಿವೆ ಕುಮಾರಿ…

12 mins ago

ಕೋವಿಶೀಲ್ಡ್ ಲಸಿಕೆಯ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ: ದಿನೇಶ್ ಗುಂಡೂರಾವ್

ಕೋವಿಶೀಲ್ಡ್ ಲಸಿಕೆಯಿಂದ ಅಡ್ಡಪರಿಣಾಮಗಳು ಉಂಟಾಗುತ್ತಿದೆ ಎಂಬ ಕುರಿತು ಜನರು ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

16 mins ago

ಪ್ರಜ್ವಲ್ ರೇವಣ್ಣ ಅಂತಹ ಸ್ವಭಾವದ ಹುಡುಗ ಅಲ್ಲ ಎಂದ ಸಂಸದ ಜಿ.ಎಸ್ ಬಸವರಾಜ್

ಪ್ರಜ್ವಲ್ ರೇವಣ್ಣ ನನ್ನ ಆತ್ಮೀಯ ಸ್ನೇಹಿತ. ಅಂತಹ ಸ್ವಭಾವದ ಹುಡುಗ ಅಲ್ಲ. ಪ್ರಜ್ವಲ್ ಅವರ ಮೇಲಿನ ಪ್ರಕರಣ ಸತ್ಯನೋ ಸುಳ್ಳೋ…

34 mins ago

ಕಾಂಗ್ರೆಸ್ ಕೊಲೆಗಡಕರನ್ನು ಬಂಧನ ಮಾಡಬೇಕಾದ್ರೆ ನೂರು ಬಾರಿ ಯೋಚಿಸುತ್ತದೆ: ವಿಜಯೇಂದ್ರ

ಕಾಂಗ್ರೆಸ್ ಸರ್ಕಾರ ಕೊಲೆಗಡಕರನ್ನು ಬಂಧನ ಮಾಡಬೇಕು ಅಂದ್ರೆ ನೂರು ಬಾರಿ ಯೋಚನೆ ಮಾಡುತ್ತಾರೆ. ಲವ್ ಜಿಹಾದ್ ನಲ್ಲಿ ತಪಿತಸ್ಥರನ್ನು ಒಳಗೆ…

35 mins ago

ಬಿಜೆಪಿ ಸೋಲಿಸಿ ಕಾಂಗ್ರೆಸ್ ಗೆಲ್ಲಿಸಿ : ಧನರಾಜ ತಾಳಂಪಲ್ಲಿ

'ಸಂವಿಧಾನ ಬದಲಿಸಲು ನಿರ್ಧರಿಸಿದ ಬಿಜೆಪಿಯನ್ನು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋಲಿಸಿ, ಜನಪರವಾಗಿ ಕೆಲಸ ಮಾಡುವ ಇಚ್ಛೆ ಹೊಂದಿರುವ ಕಾಂಗ್ರೆಸ್‌…

47 mins ago

ಅಪರಿಚಿತ ವಾಹನ ಡಿಕ್ಕಿ : ಸ್ಥಳದಲ್ಲಿಯೇ ಬೈಕ್ ಸವಾರ ಸಾವು

ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದ ಬಳಿ…

57 mins ago