ಮಾರ್ಚ್ 4 ರಂದು ತೆರೆಯ ಮೇಲೆ ಬರಲಿದೆ ವಾಸುದೇವ ರೆಡ್ಡಿ ನಿರ್ದೇಶನದ ‘ಮೈಸೂರು’

ಸ್ಯಾಂಡಲ್‌ವುಡ್‌: ‘ಮೈಸೂರು’… ಇಂತಹ ಕ್ಯಾಚಿಯಾಗಿರೋ ಟ್ರೈಟಲ್ ಇಟ್ಕೊಂಡು, ಲಿರಿಕಲ್ ಸಾಂಗ್, ಟ್ರೈಲರ್, ಟೀಸರ್ ಮೂಲಕ ಭರವಸೆ ಹುಟ್ಟಿಸಿರುವ ಮೈಸೂರು ಸಿನೆಮಾ ಇದೇ ತಿಂಗಳ ೪ ರಂದು ರಿಲೀಸ್ ಗೆ ಸಿದ್ದವಾಗಿದೆ. ಮೈಸೂರು ಅಂದಾಕ್ಷಣ ನೆನಪಾಗೋದೇ ಅಲ್ಲಿನ ಜಗತ್ಪ್ರಸಿದ್ಧ ಅರಮನೆ, ದಸರಾ , ಚಾಮುಂಡಿ ಬೆಟ್ಟ, ಸುತ್ತ ಮುತ್ತಲಿನ ಒಂದಷ್ಟು ಪ್ರವಾಸಿ ತಾಣ. ಆದ್ರೆ ಈ ಸ್ಥಳದ ಹೆಸರನ್ನೇ ಸಿನೆಮಾ ಶೀರ್ಷಿಕೆಯಾಗಿಟ್ಟು ಸುದ್ದಿ ಮಾಡ್ತಿರೋದು ಮೈಸೂರು ಚಿತ್ರತಂಡ.

ಹೌದು,,ವಾಸುದೇವ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಅನಿವಾಸಿ ಕನ್ನಡಿಗನೊಬ್ಬನ ಪ್ರೇಮ್ ಕಹಾನಿಯನ್ನೊಳಗೊಂಡಿರುವ ಚಿತ್ರ. ಇದೊಂದು ಬ್ಯೂಟಿಫುಲ್ ಮ್ಯೂಸಿಕಲ್ ಲವ್ ಸ್ಟೋರಿ. ಮೂಲತಃ ಮೈಸೂರಿನವರೇ ಆದ ನಿರ್ದೇಶಕ ವಾಸುದೇವ ರೆಡ್ಡಿ ಈ ಕಥೆಗೆ ರುವಾರಿ. ಚಿತ್ರದಲ್ಲಿ ಮೈಸೂರಿನ ಸುಂದರ ತಾಣಗಳನ್ನು ಸುಂದರವಾಗಿ ಸೆರೆಹಿಡಿಯಲಾಗಿದ್ದು, ಸಿನೆಮಾವನ್ನ ನೋಡುವ ಪ್ರೇಕ್ಷನಿಗೆ ತಾನೇ ಮೈಸೂರನ್ನ ಸುತ್ತಿದಷ್ಟು
ಮನೋಜ್ಞ ವೆನಿಸುತ್ತದೆಯಂತೆ.

ಈಗಾಗಲೇ ರಿಲೀಸ್ ಆಗಿದ್ದ ಚಿತ್ರದ ಟ್ರೈಲರ್ ನಲ್ಲಿ ಮೈಸೂರು ಮತ್ತು ಒಡಿಶಾ ರಾಜ್ಯಗಳ ನಡುವೆ ಚಲಿಸುವ ಈ ಕಥೆ ಯಲ್ಲಿ ಪ್ರೇಮಕಥೆಯೊಂದಿಗೆ ಮಾಸ್ ಎಳೆಯೂ ಇರಲಿದೆ ಎಂಬ ಸುಳಿವು ಸಿಕ್ಕಿದೆ. ಪ್ರೇಮ ಕಥೆ ಅಂದಾಕ್ಷಣ ಒಂದಷ್ಟು ರೆಡಿ ಸೂತ್ರಗಳ ಊಹೆಗೆ ನಿಲುಕದ ಕಥೆ ಈ ಚಿತ್ರದಲ್ಲಿದ್ದು, ಪ್ರೇಮದೊಂದಿಗೆ ಭಾವನೆಗಳ ತೊಳಲಾಟವನ್ನೂ ಪೋಣಿಸಿ, ಇಂಟ್ರಸ್ಟಿಂಗ್ ಎನಿಸೋ ಟ್ವಿಸ್ಟ್, ಮೈ ನವಿರೇಳಿಸೋ ಸಾಹಸ ಸನ್ನಿವೇಷಗಳಿರೋದು
ಗಮನಕ್ಕೆ ಬರುತ್ತೆ.

ಈ ಕಥೆಗೆ ನಾಯಕನಾಗಿ ಬಣ್ಣಹಚ್ಚಿದ್ದು ಒಡಿಶಾ ಮೂಲದ ಸಂಹಿತ್ ಎನ್ನುವುದು ಮತ್ತೊಂದು ವಿಶೇಷ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಒಡಿಶಾದ ನಂಟು ಸೇರಿಕೊಂಡಂತಾಗಿದೆ. ಕಥೆಗೆ ಅನುಗುಣವಾಗಿ ನಾಯಕನ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಈಗಾಗಲೇ ಇವರು ಒಡಿಯಾ ಭಾಷೆಯಲ್ಲಿ ಇಪ್ಪತೈದಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರೋ ಅನುಭವವಿದೆಯಂತೆ. ಇವರಿಗೆ ನಾಯಕಿಯಾಗಿ ಪೂಜಾ ಬಣ್ಣ ಹಚ್ಚಿದ್ದಾರೆ.

ಮ್ಯೂಸಿಕಲ್ ಲವ್ ಸ್ಟೋರಿ ಯಾಗಿರೋ ಚಿತ್ರದಲ್ಲಿ ಒಟ್ಟು ೫ ಹಾಡುಗಳಿದ್ದು ಒಂದಕ್ಕಿಂತ ಒಂದು ಸುಂದರವಾಗಿ ಮೂಡಿಬಂದಿವೆ. ಒಬ್ಬರಲ್ಲ ಇಬ್ಬರಲ್ಲ ಮೂವರು ಸಂಗೀತ ನಿರ್ದೇಶಕರು ಈ ಚಿತ್ರಕ್ಕಾಗಿ ಶ್ರಮಿಸಿದ್ದಾರೆ. ರಮಣಿ ಸುಂದರೇಶನ್, ಅನಿಲ್ ಮತ್ತು ವಿಜಯ್ ರಾಜ್ ಐದು ಹಾಡುಗಳನ್ನು ಮೈಸೂರಿಗಾಗಿಯೇ ರೂಪಿಸಿದ್ದಾರೆ. ರನ್ ಆಂಟನಿ ಖ್ಯಾತಿಯ ನಿರ್ದೇಶಕ ರಘು ಶಾಸ್ತ್ರಿ, ರವಿಶಂಕರ್ ನಾಗ್ ಮತ್ತು ಅನಿಲ್ ಕೃಷ್ಣ ಸಾಹಿತ್ಯ ರಚಿಸಿರೋ ಈ ಹಾಡುಗಳಿಗೆ ರಾಜೇಶ್ ಕೃಷ್ಣನ್, ಉಷಾ ಪ್ರಕಾಶ್, ಇಶಾ ಸುಚಿ, ಪಂಚಮ್, ಚೇತನ್ ನಾಯಕ್, ಪವನ್ ಪಾರ್ಥ ಮುಂತಾದವರು ಧ್ವನಿಯಾಗಿದ್ದಾರೆ.

ಇನ್ನುಳಿದಂತೆ ತಾರಾಗಣದಲ್ಲಿ ಇತ್ತೀಚಿಗಷ್ಟೇ ಅನಾರೋಗ್ಯದಿಂದ ಮರೆಯಾಗಿರುವ ಖ್ಯಾತ ಖಳನಟ ಸತ್ಯಜಿತ್, ಕುರಿ ಪ್ರತಾಪ್, ಭಾಸ್ಕರ್ ಸೂರ್ಯ, ಗಟ್ಟಿಮೇಳ ಖ್ಯಾತಿಯ ರವಿಶಂಕರ್, ಜ್ಯೂನಿಯರ್ ನರಸಿಂಹರಾಜು, ಬಿಗ್ ಬಾಸ್ ಖ್ಯಾತಿಯ ಜಯಶ್ರೀ, ಒಡಿಶಾದ ಖ್ಯಾತ ನೃತ್ಯ ಕಲಾವಿದೆ ಪ್ರತಿಭಾ ಫಂಡಾ ಮುಂತಾದವರ ತಾರಾಗಣವಿದೆ.

ಈ ಮೊದಲೇ ಹೇಳಿದಂತೆ ಟ್ರೈಲರ್ ತುಣುಕಲ್ಲಿ ಒಂದು ಬಗೆಯ ಕ್ರಾಂತಿಯ ಎಳೆ ಕಾಣತ್ತೆ. ಆದ್ರೆ ಅದು ಪ್ರೀತಿಗಾಗಿ ನಡೆಯೋದ ಅಥವಾ ಸಾಮಾಜಿಕ ಮೌಲ್ಯಗಳಿಗಾಗಿ ತುಡಿಯುವ ಮನಸಿನಿಂದಾಗಿ ನಡೆಯೋದ ಎಂಬ ಗುಟ್ಟನ್ನು ಚಿತ್ರತಂಡ ರಟ್ಟು ಮಾಡದೇ ಗೌಪ್ಯತೆ ಕಾಪಾಡಿಕೊಂಡಿದೆ . ಆದ್ರೆ ಇದೆಲ್ಲಕ್ಕೂ ಮಾರ್ಚ್ ೪ ರಂದು ಸಿನಿಮಾ ರಿಲೀಸ್ ಬಳಿಕವೇ ಉತ್ತರ ದೊರೆಯಲಿದೆ. ಎಸ್‌ಆರ್ ಕಂಬೈನ್ಸ್ ಹುಣಸೂರು ಬ್ಯಾನರ್ ನಡಿ ವಾಸುದೇವ್
ರೆಡ್ಡಿ ಬಂಡವಾಳ ಹೂಡಿದ್ದಾರೆ.

ಛಾಯಾಗ್ರಹಣ- ಭಾಸ್ಕರ್ ರೆಡ್ಡಿ, ಸಂಕಲನ- ಸಿದ್ದು ಭಗತ್, ನೃತ್ಯ ನಿರ್ದೇಶನ-ಮೈಸೂರ್ ರಾಜು, ಸ್ಟಾರ್ ನಾಗಿ, ಸುಧಾಕರ್ ವಸಂತ್, ಸಾಹಸ- ಶ್ರೀಕಾಂತ್ ಹೈದ್ರಾಬಾದ್ ತಾಂತ್ರಿಕ ವರ್ಗವಾಗಿ ಸಹಕಾರ ಮೈಸೂರು ಚಿತ್ರಕ್ಕಿದ್ದು, ಮಾರ್ಚ್ ೪ ರಂದು ತೆರೆಯ ಮೇಲೆ ಮೈಸೂರು ಸಿನೆಮಾ ಅನಾವರಣಗೊಳ್ಳಲಿದೆ.

Swathi MG

Recent Posts

ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟ; ಇಲ್ಲಿ ಫಲಿತಾಂಶ ವೀಕ್ಷಿಸಿ

2023-24ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶವು ಇಂದು ಪ್ರಕಟಗೊಂಡಿದೆ. ಕರ್ನಾಟಕದ ಒಟ್ಟು 2,750 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಈ ಸಲದ…

48 seconds ago

ಪ್ರಸಕ್ತ ಸಾಲಿನಿಂದ 3 ವರ್ಷ ಪದವಿ : ಉನ್ನತ ಶಿಕ್ಷಣ ಇಲಾಖೆ

ರಾಜ್ಯ ಶಿಕ್ಷಣ ಆಯೋಗದ ಮಧ್ಯಂತರ ವರದಿ ಅನುಷ್ಠಾನಕ್ಕೆ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಆಯೋಗದ ಶಿಫಾರಿಸಿನಂತೆ 2024-25ನೇ ಸಾಲಿನ…

18 mins ago

ಹುಟ್ಟೂರಿಗೆ ಆಗಮಿಸಿದ ಮಾಜಿ ಶಾಸಕ ಕೆ.ವಸಂತ ಬಂಗೇರ ಪಾರ್ಥಿವ ಶರೀರ

ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ ಬಂಗೇರ (79)…

45 mins ago

ಮಲಯಾಳಂ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಖ್ಯಾತಿ ಪಡೆದ ನಿರ್ದೇಶಕ ಸಂಗೀತ್ ಶಿವನ್ ಮೇ 8 ರಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ…

2 hours ago

ಮುಸ್ಲಿಂ ಯುವತಿಯೊಂದಿಗೆ ಮದುವೆ : ಖಾಕಿ ವಿರುದ್ಧ ಹಿಂದೂ ಸಂಘಟನೆ ಪ್ರತಿಭಟನೆ

ಬಾದಾಮಿ ಮೂಲದ ರುಬಿನಾ ಮತ್ತು ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿ ರಕ್ಷಣೆ ಕೋರಿ ಲ ಬಾಗಲಕೋಟೆ ಎಸ್​ಪಿ ಕಚೇರಿಗೆ ಬಂದಿದ್ದು,…

2 hours ago

ಹಾಸ್ಟೆಲ್‌ ಯುವತಿಯರ ಬೆತ್ತಲೆ ವಿಡಿಯೊಗಳನ್ನು ಬಾಯ್‌ಫ್ರೆಂಡ್‌ಗೆ ಕಳುಹಿಸಿದ ಯುವತಿ!

ಮಹಾರಾಷ್ಟ್ರದ ಪುಣೆಯಲ್ಲಿರುವ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಪುಣೆಯ (COEP) ಹಾಸ್ಟೆಲ್‌ನಲ್ಲಿ ಯುವತಿಯೊಬ್ಬಳು ಮಾಡಿದ ಭಾನಗಡಿ ಈಗ ಹಾಸ್ಟೆಲ್‌ನ ಎಲ್ಲ ವಿದ್ಯಾರ್ಥಿನಿಯರು…

2 hours ago