ನಾಳೆ ಕಿಚ್ಚನ ಮಾತುಕತೆ ಗಲ್ಫ್ ಕನ್ನಡಿಗರ ಜೊತೆ

ವಿಶ್ವದಾದ್ಯಂತ ಕೋರೊನಾ ಮಹಾಮಾರಿ, ಕೋವಿಡ್ – 19 ನಿಂದಾಗಿ, ಗಲ್ಫ್ ರಾಷ್ಟ್ರಗಳಲ್ಲಿ ಆದಂತಹ ಲಾಕ್ಡೌನ್, ಸೀಲ್ಡೌನ್, ಕರ್ಪ್ಯೂವಿನ ದೆಸೆಯಿಂದ ಮನೆಯಲ್ಲೆ ಕುಳಿತು ಬೇಸರದಿಂದಿದ್ದ ಗಲ್ಫ್ ರಾಷ್ಟ್ರಗಳ ಕನ್ನಡಿಗರಿಗಾಗಿ ಕಿಚ್ಚ ಸುದೀಪ್ ಜತೆ ಸಂವಹನದ ವಿಶೇಷ ಅವಕಾಶ ಕಲ್ಪಿಸಲಾಗಿದೆ.

 

ನಾಳೆ ಓವರ್‌ಸೀಸ್ ಕನ್ನಡ ಮೂವೀಸ್ ವತಿಯಿಂದ ಆಯೋಜಿಸಲ್ಪಡುತ್ತಿರುವ ರಾಷ್ಟ್ರಗಳ ಕನ್ನಡಿಗರ ಅತಿ ದೊಡ್ಡ ನೇರ ಸಂವಹನವು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರ ಜೊತೆ ನಡೆಯಲಿದೆ.

 

ಈ ಕಾರ್ಯಕ್ರಮದಲ್ಲಿ ದುಬೈ, ಕುವೈತ್, ಯು.ಎ.ಇ, ಕತಾರ್, ಬಹರೈನ್, ಒಮಾನ್ ಮತ್ತು ಸೌದಿ ಅರೇಬಿಯಾ ರಾಷ್ಟ್ರಗಳ ಕನ್ನಡಿಗರು, ಕಿಚ್ಚ ಸುದೀಪ್ ಅಭಿಮಾನಿಗಳಲ್ಲದೆ, ಗಲ್ಫ್ ರಾಷ್ಟ್ರಗಳಲ್ಲಿರುವ ಕನ್ನಡಿಗರೇತರರು, ತೆಲುಗು, ಬಾಂಗ್ಲಾ ದೇಶಿ, ಪಾಕಿಸ್ತಾನಿ ಅಭಿಮಾನಿಗಳು ಹಾಗೂ ವಿಶೇಷ ಅತಿಥಿಯಾಗಿ ಕುವೈಟ್ ನ ಪ್ರಖ್ಯಾತ ಗಾಯಕ ಮುಬಾರಕ್ ಅಲ್ ರಾಶಿದ್ ಭಾಗವಹಿಸಲಿದ್ದಾರೆ. ಇವರು ಈಗಾಗಲೆ ಅರಬಿ, ಇಂಗ್ಲೀಷ್, ಹಿಂದಿ, ತುಳು, ಕೊಂಕಣಿ ಹಾಡುಗಳನ್ನು ಹಾಡಿದ್ದು,

 

ಕುವೈಟ್ ನಲ್ಲಿರುವ ಭಾರತೀಯ ರಾಯಭಾರಿಯಿಂದ ’ಕುವೈಟ್ ಕಾ ಕಿಶೋರ್ ಕುಮಾರ್’ ಬಿರುದು ಮತ್ತು ಸ್ಮರಣಿಕೆ ಪಡೆದವರು, ಭಾರತದ ಪ್ರೇಮಿ, ಕಿಚ್ಚ ಸುದೀಪ್ ಅಭಿಮಾನಿ, ಕನ್ನಡ ಕಲಿತು ಮಾತನಾಡಿ, ಸುದೀಪ್ ಜೊತೆ ಮಾತನಾಡಲು ಕಾಯುತ್ತಿದ್ದೇನೆ ಎಂದು ಹಾಡುತ್ತಾ ಹೇಳಿದ್ದಾರೆ. ಸುದೀಪ್ ಜೊತೆ ಸಂವಾದದಲ್ಲಿ ಸುದೀಪ್ ಚಿತ್ರದ ಕನ್ನಡ ಹಾಡೊಂದನ್ನು ಹಾಡುತ್ತೇನೆ ಎಂದು ಕೂಡಾ ಹೇಳಿದ್ದಾರೆ. ಕೊಲ್ಲಿ ರಾಷ್ಟ್ರಗಳ ಕನ್ನಡಿಗರ ಅತಿ ದೊಡ್ಡ ನೇರ ಸಂವಹನ “ಕಿಚ್ಚನ ಮಾತುಕತೆ ಗಲ್ಫ್ ಕನ್ನಡಿಗರ ಜೊತೆ” ನೂರಾರು ಜನರು ನೇರ ಸಂವಹನ ನೆಡೆಸುವ, ಸಾವಿರಾರು ಜನರು ಭಾಗವಹಿಸುವ, ಯೂ ಟ್ಯೂಬ್, ಟಿವಿ ಛಾನೆಲ್ ಗಳ ಮೂಲಕ ನೇರ ಪ್ರಸಾರವಾಗುವ ಲಕ್ಷಾಂತರ ಜನರು ವೀಕ್ಷಿಸುವ ಈ ಕಾರ್ಯಕ್ರಮದಲ್ಲಿ ಗಲ್ಫ್ ಕನ್ನಡಿಗರಾಗಿದ್ದು ನೀವು ಭಾಗವಹಿಸಲು ಇಚ್ಛಿಸುವುದಾದರೆ ದಯವಿಟ್ಟು www.overseaskannadamovies.com ನಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕೆಂದು ಓವರ್‌ಸೀಸ್ ಕನ್ನಡ ಮೂವೀಸ್ ನ ಪರವಾಗಿ ವಿನಂತಿಸಿಕೊಳ್ಳುತ್ತಿದ್ದೇವೆ.

Desk

Recent Posts

ಆನ್‌ಲೈನ್ ಟ್ರೇಡಿಂಗ್: 17.35 ಲಕ್ಷ ರೂ. ವಂಚನೆ

ಆನ್‌ಲೈನ್ ಪಾರ್ಟ್‌ಟೈಮ್ ಕೆಲಸ ಹಾಗೂ ಆನ್‌ಲೈನ್ ಟ್ರೇಡಿಂಗ್ ಮೇಸೆಜ್ ನ‌ ಬಲೆಗೆ ಬಿದ್ದ ವ್ಯಕ್ತಿಯೊಬ್ಬರು ಬರೋಬ್ಬರಿ 17.35 ಲಕ್ಷ ರೂ.…

17 mins ago

ಬಿಸಿಲಿನ ತಾಪ, ಮೇವಿನ ಕೊರತೆಯಿಂದ ಸಾವಿಗೀಡಾಗುತ್ತಿವೆ ಸಾಕುಪ್ರಾಣಿಗಳು

ಹೆಚ್ಚುತ್ತಿರುವ ಬಿಸಿಲಿನ ತಾಪ ಹಾಗೂ ಸಮರ್ಪಕ ಮೇವು ದೊರಕದೆ ಕಾಡಂಚಿನ ಗ್ರಾಮಗಳ ಜಾನುವಾರು, ಸಾಕುಪ್ರಾಣಿಗಳು ಸಾವಿಗೀಡಾಗುತ್ತಿವೆ.

38 mins ago

ದೊಡ್ಡಬಳ್ಳಾಪುರ: ಹಳೇ ದ್ವೇಷಕ್ಕೆ ಯುವಕನ ಕತ್ತು ಕುಯ್ದು ಕೊಲೆ

ಹಳೇ ದ್ವೇಷಕ್ಕೆ ನಡುರಸ್ತೆಯಲ್ಲಿ ಯುವಕನ ಕತ್ತು ಕುಯ್ದು ಕೊಲೆ ಮಾಡಿದ ಘಟನೆ ದೊಡ್ಡಬಳ್ಳಾಪುರ ಹೊರವಲಯ ನವೋದಯ ಶಾಲೆಯ ಮುಂಭಾಗದಲ್ಲಿ ನಡೆದಿದೆ.

52 mins ago

ಕೇಂದ್ರ ಸೂಚನೆ ನೀಡಿದ ಕೂಡಲೇ ರಾಜ್ಯದಲ್ಲಿ ಸಿಎಎ ಅನುಷ್ಠಾನ: ಮೋಹನ್‌ ಯಾದವ್‌

ದೇಶಾದ್ಯಂತ ಚುನಾವಣೆಗ ಅಂತ್ಯಗೊಳುವುದಕ್ಕೂ ಮುನ್ನ ವಿವಿಧ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪ್ರಕ್ರಿಯೆ ಆರಂಭಿಸಬೇಕೆಂದು ಕೇಂದ್ರ ನಿರ್ಧರಿಸಿದೆ.

1 hour ago

ತಾಯಿ, ಹೆಂಡತಿ ಮತ್ತು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ ಮಾನಸಿಕ ಅಸ್ವಸ್ಥ

ವ್ಯಕ್ತಿಯೊಬ್ಬ ತನ್ನ ತಾಯಿ, ಹೆಂಡತಿ ಮತ್ತು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ  ಸೀತಾಪುರದಲ್ಲಿ ನಡೆದಿದೆ.

1 hour ago

ಕಲಬುರಗಿ: ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿ ಆತ್ಮಹತ್ಯೆ

ಮದುವೆಗೆ ನಿರಾಕರಿಸಿದ್ದಕ್ಕೆ  ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ನಗರ ಹೊರವಲಯದ ಯಲ್ಲಾಲಿಂಗ್ ಕಾಲೋನಿಯಲ್ಲಿ ನಡೆದಿದೆ.

2 hours ago